Ultimate magazine theme for WordPress.

ಕನ್ಯಾರಾಶಿ: ಈ ತಿಂಗಳಲ್ಲಿ ನಿಮಗೆ ಹಣಕಾಸಿನ ತೊಂದರೆಯಿಲ್ಲ ಆದ್ರೆ ಶನಿಯಿಂದ ಈ ಒಂದು ವಿಚಾರದಲ್ಲಿ ಎಚ್ಚರವಾಗಿರಿ

0 2

ನವೆಂಬರ್ ತಿಂಗಳಿನಲ್ಲಿ ಕನ್ಯಾರಾಶಿ ಅವರ ಮೇಲೆ ಗುರುವಿನ ದೃಷ್ಟಿ ಒಳಿತಾಗಿದೆ. ರಾಹುಗ್ರಸ್ತ ಚಂದ್ರಗ್ರಹಣದ ಸಂದರ್ಭದಲ್ಲಿ ತಂದೆ ತಾಯಿಯರ ಜೊತೆಗೆ ಕೊಂಚಮಟ್ಟಿಗೆ ಕ್ಲೇಶ ಉಂಟಾಗುವ ಸಾಧ್ಯತೆ ಇದೆ. ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಧನ್ವಂತರಿಯ ಮಂತ್ರವನ್ನು ಜಪ ಮಾಡುವುದು ಒಳ್ಳೆಯದು. ಇಷ್ಟಪಡುವಂತಹ ಸಂಗಾತಿಯನ್ನು ಗಂಡ ಅಥವಾ ಹೆಂಡತಿಯನ್ನಾಗಿ ಈ ಸಂದರ್ಭದಲ್ಲಿ ನೀವು ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಈ ಸಂದರ್ಭದಲ್ಲಿ ದೀರ್ಘಾಯುಷ್ಯ ಹಾಗೂ ಸಂಪತ್ತಿನ ವೃದ್ಧಿ ಕೂಡ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಲವಾರು ಸಮಯಗಳಿಂದ ಸಂತಾನ ಪ್ರಾಪ್ತಿಗಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿ ಸಿಗಲಿದೆ. ನಿಮ್ಮ ಮಕ್ಕಳಿಂದ ಮುಂದಿನ ದಿನಗಳಲ್ಲಿ ಕೊಂಚಮಟ್ಟಿಗೆ ದುಃಖ ಸಿಗುವಂತಹ ಸಾಧ್ಯತೆ ಇರುತ್ತದೆ ಹೀಗಾಗಿ ಆಸ್ತಿ ಹಂಚಿಕೆ ವಿಚಾರದಲ್ಲಿ ಕೊಂಚಮಟ್ಟಿಗೆ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ. ಕೊಂಚಮಟ್ಟಿಗೆ ಶನಿಯ ಪ್ರಭಾವ ಇರುವ ಕಾರಣದಿಂದಾಗಿ ವಾಹನಗಳಲ್ಲಿ ಓಡಾಟ ಮಾಡುವಾಗ ಕೊಂಚಮಟ್ಟಿಗೆ ಜಾಗ್ರತೆಯನ್ನು ವಹಿಸಿ.

ವೈದ್ಯಕೀಯ ಕ್ಷೇತ್ರದ ವೃತ್ತಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಇರುವವರು ಎಲ್ಲರೂ ಕೂಡ ಈ ಸಂದರ್ಭದಲ್ಲಿ ಲಾಭವನ್ನು ಹಾಗೂ ಜೀವನದಲ್ಲಿ ಯಶಸ್ಸನ್ನು ಸಂಪಾದಿಸಲಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ಕನ್ಯಾ ರಾಶಿಯವರು ಕೆಟ್ಟ ಫಲಿತಾಂಶವನ್ನು ಕಾಣುವುದು ಅತ್ಯಂತ ವಿರಳ ಎಂದು ಹೇಳಬಹುದಾಗಿದೆ. ಕುಜನ ಕಾರಣದಿಂದಾಗಿ ನೀವು ಕೆಲವೊಂದು ಕೆಟ್ಟ ಅನುಭವವನ್ನು ಹೊಂದುವ ಸಾಧ್ಯತೆ ಇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಾಗಿ ಇರುತ್ತದೆ. ಆರ್ಥಿಕವಾಗಿ ನಿಮ್ಮ ಬಲ ಅಭಿವೃದ್ಧಿಯಾಗುತ್ತದೆ.

ಇನ್ನು ನಿಮ್ಮ ಮಾತಿಗೆ ಸಮಾಜದಲ್ಲಿ ಜನರಲ್ಲಿ ಮನ್ನಣೆ ಇರುತ್ತದೆ. ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುವವರಿಗೆ ಸಾಕಷ್ಟು ಯಶಸ್ವಿ ಫಲಿತಾಂಶ ದೊರಕುತ್ತದೆ. 17ನೇ ತಾರೀಖಿನವರೆಗೆ ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಕೊಂಚಮಟ್ಟಿಗೆ ಜಾಗೃತೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕಣ್ಣು ಹಾಗೂ ಜೀರ್ಣಕ್ರಿಯ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕೂಡ ಕಂಡು ಬರಬಹುದು. ಒಡಹುಟ್ಟಿದವರು ನಡುವೆ ಮನಸ್ತಾಪ ಬರುವ ಸಾಧ್ಯತೆಗಳು ಇರುತ್ತವೆ ಹೀಗಾಗಿ ಕೊಂಚಮಟ್ಟಿಗೆ ನೋಡಿಕೊಂಡು ಮುಂದುವರೆಯುವುದು ಉತ್ತಮ. ಕುಜನ ದೋಷ ಇರುವ ಕಾರಣದಿಂದಾಗಿ ಆತನ ಸ್ತೋತ್ರವನ್ನು ದಿನಕ್ಕೆ ಒಮ್ಮೆಯಾದರೂ ಪಠಿಸುವುದು ಉತ್ತಮ.

Leave A Reply

Your email address will not be published.