ದೇಶದಲ್ಲಿ ಹೀಗಾಗಲೇ ಕರೋನ ವೈರಸ್ ಮಹಾಮಾರಿ ದೇಶದ ಜನರು ತೀವ್ರ ಸಂಕಷ್ಟಕ್ಕೆ ಹಿಡಗುವಂತೆ ಮಾಡಿದೆ. ಕೆಲವರು ಹೊಟ್ಟೆಗೆ ಊಟವಿಲ್ಲದೆ ಇನ್ನು ಕೆಲವರು ಔಷಧಿ ಹಾಗೂ ಅಗತ್ಯವಾದ ವಸ್ತುಗಳು ಆಹಾರ ಪದಾರ್ಥಗಳು ಸಿಗದೇ ಕಷ್ಟ ಪಡುತ್ತಿದ್ದಾರೆ. ಹೀಗಿರುವಾಗ ಕೆಲವರು ಬಡವರಿಗೆ ಸಹಾಯ ಮಾಡುತ್ತಿದಾರೆ ಇನ್ನು ಕೆಲವರು ತಮಗೆ ಯಾವುದೂ ಸಹಾಯ ಆಗತ್ತೋ ಅದನ್ನು ಬೇರೆಯವರಿಗೆ ಅನುಕೂಲವಾಗುವಂತೆ ಮಾಡಿಕೊಡುತ್ತಿದ್ದಾರೆ.
ವಿಷ್ಯಕ್ಕೆ ಬರೋಣ ಇಲ್ಲೊಬ್ಬ ಯುವಕ ತನ್ನ ಸ್ವಂತ ಗಾಡಿಯನ್ನು ಆಂಬುಲೆನ್ಸ್ ಮಾಡಿದ್ದಾನೆ, ಆಗಂತ ಈ ಯುವಕ ಏನು ಶ್ರೀಮಂತ ವ್ಯಕ್ತಿ ಅಲ್ಲ ಆದ್ರೆ ಹೃದಯ ಶ್ರೀಮಂತಿಕೆಯಲ್ಲಿ ಬಡವರ ಪಾಲಿಗೆ ದೇವರಾಗಿದ್ದಾನೆ ಅಂದ್ರೆ ನಿಜಕ್ಕೂ ತಪ್ಪಾಗಲಾರದು. ಅಷ್ಟಕ್ಕೂ ಈ ಯುವಕ ಯಾರು ಅನ್ನೋದನ್ನ ಈ ಮೂಲಕ ತಿಳಿಯೋಣ.
ಹೆಸರು ಮಣಿಕಂದನ್ ಎಂಬುದಾಗಿ ರಾಮನಾಥಪುರಂ ಗ್ರಾಮದ 34 ವರ್ಷದ ಯುವಕ ಈತ ಗ್ರಾಮೀಣ ಪ್ರದೇಶದ ಜನರು ಅನಾರೋಗ್ಯಕ್ಕೆ ಬಳಲುತ್ತಿದ್ದರೆ ಅವರನ್ನು ಹತ್ತಿರದ ಆರೈಕೆಯ ಆಸ್ಪತ್ರೆಗೆ ಉಚಿತವಾಗಿ ತಮ್ಮ ಆಂಬುಲನ್ಸ್ ನಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವಂತ ಕೆಲಸ ಮಾಡುತ್ತಾರೆ. ಅದರಲ್ಲೂ ಗರ್ಭಿಣಿ, ವೃದ್ದರು, ಎಮರ್ಜನ್ಸ್ ಇದ್ರೆ ಮಣಿಕಂದನ್ ಎಲ್ಲೇ ಇದ್ರೂ ಆಂಬುಲನ್ಸ್ ಹಾಜರಿರುತ್ತದೆ.
ಮಣಿಕಂದನ್ ಅವರು ಮಾಡಿರುವಂತ ಸೇವೆ ಎಂತದ್ದು ಅಂದ್ರೆ ಲಾಕ್ ಡೌನ್ ಅವಧಿಯಲ್ಲಿ ಸುಲ್ತಾನ್ ಪೇಟೆ, ವಿಲೈನೂರು, ಅರಸೂರ್, ಕೊಡಪಾಕ್ಕಂ, ಮತ್ತಿತರ ಗ್ರಾಮೀಣ ಪ್ರದೇಶಗಳಿಂದ ಆರು ಗರ್ಭಿಣಿಯರು ಸೇರಿದಂತೆ 20 ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಣಿಕಂದನ್ ಅವರು ಹೇಳುವ ಮಾತು ಏನು ಅಂದ್ರೆ ಅನೇಕ ಸಮಯದಲ್ಲಿ ೧೦೮ ಆಂಬುಲೆನ್ಸ್ ಬರಲು ಆಗದೆ ಇರಬಹುದು ಇನ್ನು ಖಾಸಗಿ ಅಂಬ್ಯುಲನ್ಸಗಳು ಹೆಚ್ಚಿನ ಹಣವನ್ನು ಕೇಳುತ್ತಾರೆ ಆದ್ದರಿಂದ ಬಡವರಿಗೆ ಅಷ್ಟೊಂದು ಹಣ ಕೊಡಲಿಕ್ಕೆ ಆಗದೆ ಇರಬಹುದು ಆದ್ದರಿಂದ ನಮ್ಮ ಆಂಬುಲೆನ್ಸ್ ಸೇವೆ ಅಗತ್ಯವಾಗಿ ಬೇಕಾಗುತ್ತದೆ ಅನ್ನೋದನ್ನ ಹೇಳುತ್ತಾರೆ .
ಇನ್ನು ಮಣಿಕಂದನ್ ಅವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ನಲ್ಲಿ ಪದವೀಧರನಾಗಿರುವ ಮಣಿಕಂದನ್, ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ದೊರೆಯದೆ ಅಪಘಾತದಲ್ಲಿ ತನ್ನ ಸಹೋದರನ್ನು ಕಳೆದುಕೊಂಡ ನಂತರ 2016 ರಲ್ಲಿ ಉಚಿತ ಅಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದಾರೆ. ಇವರ ಬಳಿ ಎರಡು ಆಂಬುಲೆನ್ಸ್ ಇದ್ದು ಕಲಂ ಟ್ರಸ್ಟ್ ಅಂಬ್ಯುಲೆನ್ಸ್ ಎಂಬುದಾಗಿ ಹೆಸರಿಡಲಾಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಅನಾರೋಗ್ಯ ಸಮಸ್ಯೆ ಉಂಟಾದ್ರೆ ಎಮರ್ಜೆನ್ಸಿ ಇದ್ರೆ ಈ ಆಂಬುಲೆನ್ಸ್ ಹಾಜರಿರುತ್ತದೆ.
ಈ ನಡುವೆ ಅಂದ್ರೆ ಕೊರೋನಾ ಕಾರಣದಿಂದ ಆಂಬುಲೆನ್ಸ್ ಆನ್ ತನ್ನ ಮನೆಯನ್ನಾಗಿಸಿಕೊಂಡಿದ್ದಾರೆ ಈ ಮಣಿಕಂದನ್ ಯಾಕಂದ್ರೆ ಪದೇ ಆದೆ ಆಶಾಪಾತ್ರೆಗೆ ಹೋಗುವ ಕಾರಣಕ್ಕೆ ಮನೆಗೆ ಹೋದ್ರೆ ಸರಿಯಾಗೋದಿಲ್ಲ ಅನ್ನೋ ಕಾರಣಕ್ಕೆ ಆಂಬುಲೆನ್ಸ್ ನಲ್ಲೆ ವಾಸಿಸುತ್ತಿದ್ದಾರೆ, ಇವರಿಗೆ ಪೊಲೀಸರು ಉಪಹಾರ, ಊಟವನ್ನು ನೀಡುತ್ತಿದ್ದಾರೆ. ರಸ್ತೆ ಬದಿಯಲ್ಲಿನ ಕೊಳದ ಬಳಿ ಸ್ನಾನ ಮಾಡಿ ಬಟ್ಟೆ ಬದಲಾಯಿಸುವುದಾಗಿ ಹೇಳುತ್ತಾರೆ.
ನನ್ನ ತಂದೆ ತಾಯಿಗಳು ಇನ್ನು ಕೂಡ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ, ಆದ್ರೆ ನನಗೆ ತೃಪ್ತಿಯಿದೆ, ಯಾವುದೇ ಸೇವೆ ಮಾಡದ ಜೀವನಕ್ಕೆ ಅರ್ಥವಿಲ್ಲ ಎಂದು ಮಣಿಕಂದನ್ ಹೇಳುತ್ತಾರೆ. ಮಣಿಕಂದನ್ ಮೊಬೈಲ್ ನಂಬರ್ 8148263646 ಪೊಲೀಸರು, ಶಾಲೆಗಳು, ಸಮುದಾಯ ಮುಖಂಡರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರಿಚಿತವಾಗಿದ್ದು, ಅಗತ್ಯಬಿದ್ದವರು ಕರೆ ಮಾಡುತ್ತಾರೆ. ಇದುವರೆಗೂ ೬೭೦ ಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ನೀಡಿದ್ದಾರೆ.ಅದೇನೇ ಇರಲಿ ಇವರ ಈ ಸೇವೆಗೆ ನಮ್ಮ ಕಡೆಯಿಂದ ಸಲ್ಯೂಟ್.