ದುಷ್ಟ ಶಕ್ತಿಗಳ ಎದುರು ದೈವಿಕ ಶಕ್ತಿಯು ಹೋರಾಟ ಮಾಡಿದ ದಿನಗಳನ್ನೇ ನಾವು ನವರಾತ್ರಿ ಎಂಬುದಾಗಿ ಆಚರಿಸುತ್ತೇವೆ. ತಾಯಿ ದುರ್ಗೇಯನ್ನು 9 ದಿನಗಳಂದು ನಾವು ಶ್ರದ್ಧೆ ಭಕ್ತಿಗಳಿಂದ ಪೂಜಿಸುತ್ತೇವೆ. ಇನ್ನು 9 ದಿನಗಳಲ್ಲಿ ಯಾವ್ಯಾವ ದಿನ ಯಾವ ಯಾವ ಬಟ್ಟೆಗಳನ್ನು ಧರಿಸಬೇಕು ಎನ್ನುವ ಕುರಿತಂತೆ ಕೂಡ ಶಾಸ್ತ್ರಗಳಲ್ಲಿ ಈಗಾಗಲೇ ಉಲ್ಲೇಖಿತವಾಗಿದ್ದು ಅವುಗಳ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಸೆಪ್ಟೆಂಬರ್ 26 ನವರಾತ್ರಿ ಮೊದಲ ದಿನ ಈ ದಿನ ದೇವಿಯ ಮೊದಲ ಅವತಾರವಾಗಿರುವ ಶೈಲ ಪುತ್ರಿಯನ್ನು ಪೂಜಿಸಲಾಗುತ್ತದೆ. ಅಂದಿನ ದಿನ ಬಿಳಿ ಬಟ್ಟೆಯನ್ನು ಧರಿಸಬೇಕು. ಎರಡನೇ ದಿನ ಬ್ರಹ್ಮಚಾರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬೇಕು. ಮೂರನೇ ದಿನ ಚಂದ್ರಘಂಟ ದೇವಿಯನ್ನು ಆರಾಧಿಸಲಾಗುತ್ತದೆ. ಈ ದಿನ ನೀವು ಗಾಢನೀಲಿ ಬಣ್ಣದ ಬಟ್ಟೆಯನ್ನು ಧರಿಸಬೇಕಾಗುತ್ತದೆ.
ನಾಲ್ಕನೇ ದಿನದಂದು ದುರ್ಗೆಯ ಕೂಷ್ಮಾಂಡ ಅವತಾರವನ್ನು ಪೂಜಿಸಲಾಗುತ್ತದೆ. ಈ ದಿನ ಉಜ್ವಲತೆಗೆ ಸಾಕ್ಷಿ ಆಗಿರುವ ಹಳದಿ ಬಣ್ಣದ ಬಟ್ಟೆಯನ್ನು ಧರಿಸಬೇಕಾಗುತ್ತದೆ. 5ನೇ ದಿನ ದೇವಿಯ ಸ್ಕಂದಮಾತ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ಸಮೃದ್ಧಿಯ ಪ್ರತೀಕ ಆಗಿರುವ ಹಸಿರು ಬಣ್ಣದ ಬಟ್ಟೆಯನ್ನು ಧರಿಸಬೇಕಾಗುತ್ತದೆ. 6ನೇ ದಿನದಂದು ದೇವಿಯ ಮತ್ತೊಂದು ರೂಪವಾಗಿರುವ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನದ ಶುಭ ಬಣ್ಣ ಬೂದು ಬಣ್ಣವಾಗಿದೆ.
ನವರಾತ್ರಿಯ ಏಳನೇ ದಿನದಂದು ದೇವಿಯ ಶಕ್ತಿಶಾಲಿ ರೂಪವಾಗಿರುವ ಕಾಳಿ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನದ ಶುಭ ಬಣ್ಣ ಕಿತ್ತಳೆ ಬಣ್ಣ ಅಥವಾ ಕೇಸರಿ ಬಣ್ಣ. ನವರಾತ್ರಿಯ ಎಂಟನೇ ದಿನದ ಸಂದರ್ಭದಲ್ಲಿ ಮಹಾ ಗೌರಿಯನ್ನು ಪೂಜಿಸಲಾಗುತ್ತದೆ. ಈ ದಿನದ ಶುಭ ಬಣ್ಣ ನವಿಲು ಹಸಿರು ಬಣ್ಣ. ಇನ್ನು ಕೊನೆಯ ದಿನ ಅಂದರೆ ನವರಾತ್ರಿಯ ದಿನದಂದು ಶ್ರೀ ಸಿದ್ಧಿದಾತೆಯನ್ನು ಪೂಜಿಸಲಾಗುತ್ತದೆ. ಈ ದಿನದ ಶುಭ ಬಣ್ಣ ಗುಲಾಬಿ ಬಣ್ಣವಾಗಿದೆ.
ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ