ಸಾಮಾನ್ಯವಾಗಿ ನೀವುಗಳು ಹಳ್ಳಿಯಲ್ಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದಿದ್ರೆ ಖಂಡಿತ ಇದರ ಬಗ್ಗೆ ನಿಮಗೆ ಗೊತ್ತಿರುತ್ತದೆ, ನೀವು ಕೇಳಿರುತ್ತೀರಾ ಅಥವಾ ನೋಡಿರುತ್ತೀರಾ ಊಟದಲ್ಲಿ ಯಾರೋ ಕೈ ಮದ್ದು ಹಾಕಿದ್ದಾರೆ ಅದ್ರಿಂದ ಹೀಗಾಗಿದೆ ಎಂಬುದಾಗಿ ಹೇಳುತ್ತಿರುತ್ತಾರೆ ಹಾಗಾಗಿ ಈ ರೀತಿಯ ಕೈ ಮಾಡು ಯಾರಾದ್ರೂ ನಿಮಗೆ ಹಾಕಿದ್ದಾರೆ ಅನಿಸಿದರೆ ಈ ಕೆಳಗೆ ತಿಳಿಸಿರುವಂತ ವಿಧಾನದ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಹೌದು ಬೆಳಗ್ಗೆ ಎದ್ದ ತಕ್ಷಣ ನೀರು ಮುಟ್ಟದೆ ನುಗ್ಗೆ ಸೊಪ್ಪನ್ನು ಚನ್ನಗಿ ಕೈನಲ್ಲಿ ತಿಕ್ಕಿ ಅದರ ರಸವನ್ನು ನಿಮ್ಮ ಅಂಗೈನಲ್ಲಿ ಹಾಕಿಕೊಳ್ಳಿ ಅದು ಸ್ವಲ್ಪ ಸಮಯಾದ ನಂತರ ಆ ನುಗ್ಗೆ ಸೊಪ್ಪಿನ ರಸ ಗಟ್ಟಿಯಾದರೆ ನಿಮಗೆ ಮದ್ದು ಇಟ್ಟಿರುವುದು ಸತ್ಯ ಎಂದು ತಿಳಿದುಕೊಳ್ಳಿ. ಇದಕ್ಕೆ ಏನು ಪರಿಹಾರ ಅನ್ನೋದು ಇಲ್ಲಿದೆ ನೋಡಿ.
ಗ್ರಾಮೀಣ ಬಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವಂತ ನುಗ್ಗೆ ಇದರ ಕಾಯಿ ಎಲೆ ಎಲ್ಲವು ಕೂಡ ಔಷಧಿ ಗುಣಗಳನ್ನು ಹೊಂದಿದೆ. ಈ ನುಗ್ಗೆ ಸೊಪ್ಪು ಅನ್ನೋದು ಉಠಾಲ್ಲಿ ಕೈ ಮದ್ದು ಹಾಕಿದ್ರೆ ಪರಿಹಾರ ನೀಡುವಂತ ಕೆಲಸ ಮಾಡುತ್ತದೆ. ಮೊದಲನೆಯದಾಗಿ ನೀವು ಊಟಕ್ಕೆ ಬೇರೆಯವರ ಮನೆಗೆ ಹೋಗುವಾಗ ಅಲ್ಲಿ ಊಟ ಮಡಿದ ತಕ್ಷಣ ಬಾಯಲ್ಲಿ ಒಂದು ಏಲಕ್ಕಿಯನ್ನು ಚನ್ನಾಗಿ ಅಗಿದು ಅದರ ರಸ ಮತ್ತುಸಿಪ್ಪೆಯನ್ನು ನುಂಗಬೇಕು ಹೀಗೆ ಮಾಡಿದ್ರೆ ನಿಮಗೆ ಇಟ್ಟಿರುವಂತ ಕೈ ಮದ್ದು ಅಲ್ಲೇ ನಿವಾರಣೆಯಾಗುತ್ತದೆ.
ಮತ್ತೊಂದು ವಿಧಾನ ಏನು ಅನ್ನೋದನ್ನ ನೋಡುವುದಾದರೆ ಗ್ರಾಮೀಣ ಭಾಗಗಳಲ್ಲಿ ಹಾಲಿನ ಜೊತೆಗೆ ಕೆಲವೊಂದು ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಕೊಡುತ್ತಾರೆ ಇದರಿಂದ ಸಹ ನಿಮಗೆ ಇಟ್ಟಿರುವ ಮದ್ದು ವಾಸಿಯಾಗುತ್ತದೆ. ಇನ್ನು ಸಾಸಿವೆ ಕಾಳಿನ ಪುಡಿಯನ್ನು ಬಿಸಿ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಸುವುದರಿಂದ ವಾಂತಿಯಾಗಿ ವಾಸಿಯಾಗುತ್ತದೆ.