ನಮಗೆ ಜೀವನ ಮತ್ತು ಬೆಳವಣಿಗೆಯ ಸಾರವನ್ನು ಒದಗಿಸುವುದು ಹೊಕ್ಕಳು. ಅದು ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ, ರಕ್ತ ಮತ್ತು ಆಮ್ಲಜನಕವನ್ನು ಪೂರೈಸುತ್ತದೆ. ನೀವು ವಯಸ್ಕರಾದರೂ ಹೊಕ್ಕಳನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರ ಅದು ನಿಮ್ಮ ದೇಹದ ಮೂಲ ದೃಢತೆ ಹಾಗೂ ಬೆಳವಣಿಗೆಗೆ ಪೂರಕವಾದ ಅಂಶಗಳಲ್ಲಿ ಒಂದಾಗಿದೆ. ಹಾಗಾದರೆ ದೇಹದ ಇತರ ಭಾಗಗಳಿಗೆ ಎಣ್ಣೆ ಹಚ್ಚುವುದರಿಂದ ಲಾಭವಾದಂತೆ, ಹೊಕ್ಕಳಿಗೂ ಎಣ್ಣೆ ಹಚ್ಚುವುದರಿಂದ ಲಾಭವಿದೆಯೇ? ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ಕೇವಲ ಆ ಭಾಗಕ್ಕೆ ಮಾತ್ರವಲ್ಲ, ಇಡೀ ದೇಹಕ್ಕೆ ಅದರಿಂದ ಪ್ರಯೋಜನವಾಗುತ್ತದೆ.

ಇದು ವೇದಗಳಲ್ಲಿ ಮತ್ತು ಆಯುರ್ವೇದದಲ್ಲಿ ವಿವರಿಸಲಾದ ಪ್ರಾಚೀನ ಪದ್ಧತಿಯಾಗಿದ್ದು, ಅದರ ಪ್ರಕಾರ ಹೆಂಗಸರು ಮತ್ತು ಗಂಡಸರು ಇಡೀ ದೇಹವನ್ನು ಪೋಷಿಸಲು ತಮ್ಮ ಹೊಕ್ಕಳಿಗೆ ಎಣ್ಣೆಯನ್ನು ಹಾಕುತ್ತಿದ್ದರು. ನಿಮ್ಮ ಹೊಕ್ಕಳಿಗೂ ದೇಹದಾದ್ಯಂತ ಇರುವ ರಕ್ತನಾಳಗಳಿಗೂ ಸಂಬಂಧವಿದೆ. ಹಾಗಾಗಿ ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ವಿವಿಧ ಕಾಯಿಲೆಗಳು ಗುಣವಾಗಬಹುದು.

ಸಾಮಾನ್ಯವಾಗಿ ನಾವು ದೇಹದ ಪ್ರಕಟಗೊಳ್ಳುವ ಭಾಗಗಳಿಗೆ ಹೆಚ್ಚು ಆರ್ದ್ರತೆ ನೀಡಲು ಕಾಳಜೆ ವಹಿಸುತ್ತೇವೆಯೇ ವಿನಃ ಇತರ ಭಾಗಗಳಿಗಲ್ಲ. ಅಂತೆಯೇ ಹೊಟ್ಟೆಯ ಭಾಗಕ್ಕೆ ತೇವಕಾರಕವನ್ನು ಹಚ್ಚುವುದನ್ನು ನಾವು ಧಾರಾಳವಾಗಿ ಮರೆತುಬಿಡುತ್ತೇವೆ. ಆದರೆ ಈ ಕೊರತೆಯನ್ನು ಅವಶ್ಯಕ ತೈಲಗಳು ಸಮರ್ಥವಾಗಿ ನಿಭಾಯಿಸುತ್ತವೆ. ಇದಕ್ಕಾಗಿ ನೈಸರ್ಗಿಕ ತೈಲಗಳಾದ ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆ ಅತಿ ಸೂಕ್ತವಾಗಿವೆ. ನಿತ್ಯವೂ ಕೆಲವು ತೊಟ್ಟು ಎಣ್ಣೆಯನ್ನು ಹಚ್ಚಿಕೊಂಡು ಸವರಿಕೊಳ್ಳುವ ಮೂಲಕ್ ಅಗತ್ಯವಿರುವ ಆರ್ದ್ರತೆ ಲಭಿಸುತ್ತದೆ ಹಾಗೂ ಚರ್ಮವೂ ಮೃದು ಮತ್ತು ಕಾಂತಿಯುಕ್ತವಾಗಿರುತ್ತದೆ.

ನಾಭಿ ಶರೀರದ ಕೇಂದ್ರ ಬಿಂದು. ಪ್ರತಿದಿನ ರಾತ್ರಿ ಮಲಗೋ ಎರಡು ಹನಿ ಎಣ್ಣೆಯನ್ನು ನಾಭಿಗೆ ಹಚ್ಚಿ ಮಲಗಿ. ಇದರಿಂದ ಆರೋಗ್ಯದ ಮೇಲೆ ಆಶ್ಚರ್ಯ ರೀತಿ ಪರಿಣಾಮ ಬೀರುತ್ತದೆ. ಇದರಿಂದ ತ್ವಚೆ, ಕಣ್ಣು, ಮಸ್ತಿಷ್ಕ ತಂಪಾಗುತ್ತದೆ. ಇನ್ನೇನು ಲಾಭ ಈ ಅಭ್ಯಾಸದಿಂದ ಎಂಬುದನ್ನು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಹೇಳುವುದಾದರೆ, ಹೊಕ್ಕುಳಿಗೆ ಎಣ್ಣೆ ಹಾಕುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಹೆಚ್ಚಿನ ಅಮ್ಮಂದಿರು ತಮ್ಮ ಮಕ್ಕಳಿಗೆ ಹೇಳಿ ಕೊಟ್ಟಂತೆ ಹೊಕ್ಕುಳಿಗೆ ಎಣ್ಣೆ ಹಾಕುವುದರಿಂದ ದೇಹದಲ್ಲಿರುವ ನರ ಸಂಪರ್ಕಗಳ ಸರಿಪಡಿಸಲು ಮತ್ತು ಸಮತೋಲನಗೊಳಿಸಲು ಸಹಾಯವಾಗುತ್ತದೆ.

ನಾಭಿಯಲ್ಲಿ ಪ್ರತಿದಿನ ಎಣ್ಣೆ ಹಚ್ಚಿದರೆ ತುಟಿ ಮೃದುವಾಗಿರುತ್ತದೆ ಮತ್ತು ಪಿಂಕ್ ಬಣ್ಣದಿಂದ ಕೂಡಿರುತ್ತದೆ.ಕಣ್ಣುರಿ, ತುರಿಕೆ ಮತ್ತು ಒಣಗುವಿಕೆ ಕಡಿಮೆಯಾಗುತ್ತದೆ.ದೇಹದ ಯಾವುದೇ ಭಾಗದಲ್ಲಿಯೂ ನೋವು, ಊತ ಕಂಡು ಬಂದರೆ ಸಮಸ್ಯೆ ನಿವಾರಣೆಯಾಗುತ್ತದೆ.ಸಾಸಿವೆ ಎಣ್ಣೆಯನ್ನು ನಾಭಿಗೆ ಹಚ್ಚುವುದರಿಂದ ಸಂಧಿ ನೋವು ನಿವಾರಣೆಯಾಗುತ್ತದೆ.ಸಾಸಿವೆ ಎಣ್ಣೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ, ಜೊತೆಗೆ ಪಿಂಪಲ್ಸ್, ಕಲೆ ನಿವಾರಣೆಯಾಗುತ್ತದೆ.ಜೀರ್ಣ ಕ್ರಿಯೆ ಉತ್ತಮವಾಗಿರಲೂ ನಾಭಿಗೆ ಎಣ್ಣೆ ಹಚ್ಚುವುದು ಒಳ್ಳೆಯದು. ಬಾದಾಮಿ ಎಣ್ಣೆ ಹಚ್ಚುವುದರಿಂದ ತ್ವಚೆಯ ಬಣ್ಣ ಹೆಚ್ಚುತ್ತದೆ.

ಮಹಿಳೆಯರು ತಮ್ಮ ಮಾಸಿಕ ದಿನಗಳ ಸಮಯದಲ್ಲಿ ಕೆಳಹೊಟ್ಟೆಯ ನೋವು ಮತ್ತು ಸೆಡೆತವನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ಈ ನೋವು ಅತಿಯಾಗಿ ಕಾಡುತ್ತದೆ. ಈ ಸಮಯದಲ್ಲಿ ತಿಳಿಗೊಳಿಸಿದ ಅವಶ್ಯಕ ತೈಲವನ್ನು ನಾಭಿ ಹಾಗು ಸುತ್ತಲ ಹೊಟ್ಟೆಯ ಭಾಗಕ್ಕೆ ಸವರಿಕೊಳ್ಳುವ ಮೂಲಕ ಶೀಘ್ರವೇ ಶಮನ ದೊರಕುತ್ತದೆ. ಈ ಕಾರ್ಯಕ್ಕೆ ಸೂಕ್ತವಾದ ತೈಲಗಳೆಂದರೆ ಪುದಿನಾ ಎಣ್ಣೆ, ಸೇಜ್ ಮತ್ತು ಸೈಪ್ರೆಸ್ ಎಣ್ಣೆಗಳು. ನೋವಿರುವ ದಿನಗಳಲ್ಲಿ ಈ ತೈಲಗಳಲ್ಲಿ ಸೂಕ್ತವಾದುದನ್ನು ಆಯ್ದುಕೊಂಡು ನಾಭಿ ಮತ್ತು ಸುತ್ತಲ ಭಾಗಕ್ಕೆ ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಿಕೊಳ್ಳಬೇಕು. ಆದರೆ ಈ ತೈಲಗಳು ಕೊಂಚ ಪ್ರಬಲವಾಗಿರುವ ಕಾರಣ ಇದನ್ನು ಕೊಬ್ಬರಿ ಎಣ್ಣೆಯಂತಹ ಸುರಕ್ಷಿತ ತೈಲದೊಂದಿಗೆ ಬೆರೆಸಿ ಹಚ್ಚಿಕೊಳ್ಳಬೇಕು.

ಹೊಟ್ಟೆ ನೋವಿಗೂ ಪರಿಹಾರ. ಫುಡ್ ಪಾಯಿಸನಿಂಗ್, ಮೊದಲಾದ ಸಮಸ್ಯೆಗಳೂ ಗುಡ್ ಬೈ ಹೇಳುತ್ತವೆ.
ಪಿಂಪಲ್ ಇದ್ದವರು ಬೇವಿನ ಎಣ್ಣೆಯನ್ನು ಹಚ್ಚಿದರೆ ಕಲೆ ಇಲ್ಲದಂತೆ ಕಣ್ಮರೆಯಾಗುತ್ತದೆ. ನಿಂಬೆ ಎಣ್ಣೆಯೂ ಆರೋಗ್ಯಕಾರಿ. ಕೊಬ್ಬರಿ ಅಥವಾ ಆಲಿವ್ ಎಣ್ಣೆಯನ್ನು ಹಚ್ಚಿದರೆ ಮಹಿಳೆಯರ ಹಾರ್ಮೋನ್ ಸಮತೋಲನದಲ್ಲಿರುತ್ತದೆ. ಅಲ್ಲದೆ ಗರ್ಭಧಾರಣೆಯ ಚಾನ್ಸ್ ಕೂಡ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಜನರು ಹೊಕ್ಕಳಿಗೆ ಸಾಸಿವೆ ಎಣ್ಣೆ, ಹಸುವಿನ ತುಪ್ಪ ಅಥವಾ ತೆಂಗಿನ ಎಣ್ಣೆಯನ್ನು ಹಾಕುತ್ತಾರೆ.

ಆದರೆ ತಾಪನದ ಅಂಶಗಳಂತ ಆಯುರ್ವೇದಿಯ ಗುಣಗಳನ್ನು ಹೊಂದಿಲ್ಲದೆ ಇರುವುದರಿಂದ ಅದು ನಿಷ್ಪ್ರಯೋಜಕ. ಬೇವು, ಟೀ ಟ್ರೀ, ಲಿಂಬೆ, ದ್ರಾಕ್ಷಿ ಬೀಜ ಮತ್ತು ಬಾದಾಮಿ ಎಣ್ಣೆ ಮಸಾಜ್‍ಗೆ ಅತ್ಯುತ್ತಮವಾಗಿದ್ದು ಹೊಕ್ಕಳನ್ನು ಶುದ್ಧೀಕರಿಸುತ್ತದೆ. ಹೊಕ್ಕಳಿಗೆ ಎಣ್ಣೆ ಹಾಕುವುದರಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರ ಹೋಗಿ ಆರೋಗ್ಯಕರ ಚರ್ಮ ನಮ್ಮದಾಗುತ್ತದೆ. ಹೊಕ್ಕಳು ಬೇಗನೆ ಎಣ್ಣೆಯನ್ನು ಹೀರಿಕೊಳ್ಳುತ್ತದೆ ಮತ್ತು ಒಳಗಿನಿಂದ ಪೋಷಣೆ ನೀಡುತ್ತದೆ.

ಸಾಮಾನ್ಯವಾಗಿ ಅವಶ್ಯಕ ತೈಲಗಳು ಸಾಂದ್ರೀಕೃತವಾಗಿರುತ್ತವೆ ಹಾಗೂ ಇವುಗಳನ್ನು ನೇರವಾಗಿ ಹಚ್ಚಿಕೊಳ್ಳುವ ಮೂಲಕ ಅನಾವಶ್ಯಕ ತೊಂದರೆ ಎದುರಾಗಬಹುದು. ಹಾಗಾಗಿ ಗುಣಗಳನ್ನು ಬದಲಿಸದ ಇತರ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಬಳಸುವುದು ಅವಶ್ಯವಾಗಿದೆ. ಅಷ್ಟೇ ಅಲ್ಲ, ಬಳಕೆಯ ಪ್ರಮಾಣವೂ ಮಿತವಾಗಿರಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!