ಎಲ್ಲರಿಗೂ ಇತ್ತೀಚಿಗೆ ತಿಳಿದಿರುವಂತೆ ಹೊಸತೊಡುಕಿಗೆ ಚಿಕನ್ ಮಾಡುವ ಹಾಗೇ ಇಲ್ಲ. ಹಕ್ಕಿ ಜ್ವರ, ಕೊರೊನ ವೈರಸ್ ನಿಂದಾಗಿ ಯಾವುದೇ ಹಬ್ಬವನ್ನೂ ಆಚರಿಸಲು ಆಗಲ್ಲ ನಿಬಂಧನೆಗಳು ಆಗಿವೆ. 21 ದಿನ ನಾವು ಮನೆಯ ಒಳಗಡೆಯೇ ಇರುವ ಪರಿಸ್ಥಿತಿ ಬಂದಿದೆ. ಇಂತಹ ಸಮಯದಲ್ಲಿ ಚಿಕನ್ ಬಳಸದೆ ಬರೀ ಮೊಟ್ಟೆಯಿಂದ ಹೇಗೆ ಕಬಾಬ್ ಮಾಡೋದು ಅನ್ನೊದನ್ನ ನೋಡಿ.
ಮೊದಲು ಒಂದು ಪ್ಲೇಟ್ ಗೆ ಎಣ್ಣೆ ಅಥವಾ ತುಪ್ಪ ಹಾಕಿ ಸವರಿಕೊಳ್ಳಬೇಕು. ನಂತರ ಅದೇ ಪ್ಲೇಟ್ ಗೆ 5 ಮೊಟ್ಟೆಗಳನ್ನ ಒಡೆದು ಹಾಕಿಕೊಳ್ಳಬೇಕು. ಇದಕ್ಕೆ ಅರ್ಧ ಟೀ ಸ್ಪೂನ್ ಅಷ್ಟು ಕಾಳು ಮೆಣಸಿನ ಪುಡಿ ಹಾಗೂ ಅರ್ಧ ಟೀ ಸ್ಪೂನ್ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು, ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಒಂಡಿ ಸ್ಟ್ಯಾಂಡ್ ಇಟ್ಟು ಅದರ ಮೇಲೆ ಮೊಟ್ಟೆ ಹಾಕಿರುವ ಪ್ಲೇಟ್ ಇಟ್ಟು ಅದರ ಮೇಲೆ ಒಂದು ಮುಚ್ಚಳ ಮುಚ್ಚಿ, ಸಣ್ಣ ಉರಿಯಲ್ಲಿ 10 – 15 ನಿಮಿಷ ಬೇಯಿಸಿಕೊಳ್ಳಬೇಕು. ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ನಂತರ ಒಂದು ಚಾಕುವಿನ ಸಹಾಯದಿಂದ ಅಂಚು ಬಿಡಿಸಿಕೊಂಡು, ಬೇಕಾದ ಆಕಾರಕ್ಕೆ ಕಟ್ ಮಾಡಿಕೊಳ್ಳಬೇಕು ಹಾಗೆ ಅದನ್ನ ಇನ್ನೊಂದು ತಟ್ಟೆಗೆ ತೆಗೆದಿಟ್ಟುಕೊಳ್ಳಬೇಕು.
ನಂತರ ಪೇಸ್ಟ್ ಮಾಡಿಕೊಳ್ಳಲು ಒಂದು ಬೌಲ್ ಗೆ ಒಂದು ಮೊಟ್ಟೆಯನ್ನ ಒಡೆದು ಹಾಕಿಕೊಂಡು, ಅದಕ್ಕೆ ಸುಮಾರು ಒಂದೂವರೆ ಸ್ಪೂನ್ ಅಷ್ಟು ಕಬಾಬ್ ಪೌಡರ್ ಹಾಕಿ ಗಂಟು ಆಗದಂತೆ ಹದವಾಗಿ ಕಳಸಿಕೊಳ್ಳಬೇಕು. ಎಣ್ಣೆ ಕಾಯೋಕೆ ಇಟ್ಟು, ಮೊಟ್ಟೆ ಪೀಸ್ ಗಳನ್ನ ಈ ಪೇಸ್ಟ್ ನಲ್ಲಿ ಅದ್ದಿ ಒಂದೆರಡು ನಿಮಿಷ ಎಣ್ಣೆಯಲ್ಲಿ ಕರಿಯಬೇಕು. ರುಚಿಯಾದ ಹಾಗೂ ಇವತ್ತಿನ ಕಾಲಕ್ಕೆ ಅನುಕೂಲವಾದ ಎಗ್ಗ್ ಕಬಾಬ್ ರೆಡಿ.