ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆಯೇ ಹೇಳಿರುವಂತೆ ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ರಚನೆಯನ್ನು ಎಲ್ಲಾ ಅಂದುಕೊಂಡಂತೆ ನಡೆದರೆ ಇದೇ ದೀಪಾವಳಿ ಹಬ್ಬದಂದು ನೇಮಕ ಮಾಡಲಾಗುವುದು ಎನ್ನುವ ಭರವಸೆಯನ್ನು ಈಗಾಗಲೇ ರಾಜ್ಯದ ಸರ್ಕಾರಿ ನೌಕರರಿಗೆ ನೀಡಿದ್ದಾರೆ.
ಇತ್ತೀಚಿಗಷ್ಟೇ ಪುಣ್ಯಕೋಟಿ ದತ್ತು ಯೋಜನೆಗೆ ದೇಣಿಗೆ ನೀಡುವಂತೆ ರಾಜ್ಯದ ಸರ್ಕಾರಿ ನೌಕರರ ಸಂಘಕ್ಕೆ ಮನವಿ ಮಾಡಿದ ಮುಖ್ಯಮಂತ್ರಿಗಳಿಗೆ ರಾಜ್ಯದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆಗಿರುವ ಷಡಕ್ಷರಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈ ಕುರಿತಂತೆ ಸಮ್ಮತಿ ನೀಡುವಂತಹ ಪಾತ್ರವನ್ನು ಅವರ ಹಸ್ತಕ್ಕೆ ವರ್ಗಾಂತರ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಗಳಿಗೆ ರಾಜ್ಯದ ಸರ್ಕಾರಿ ಸಂಘದ ವತಿಯಿಂದ ವೇತನವನ್ನು ಹೆಚ್ಚು ಮಾಡುವ ಕುರಿತಂತೆ ಮತ್ತೊಮ್ಮೆ ಮನವಿ ಮಾಡಲಾಗುತ್ತದೆ.
ಇದೇ ಕೂಡಲೇ ಮುಖ್ಯಮಂತ್ರಿಗಳಾಗಿರುವ ಶ್ರೀ ಬಸವರಾಜ ಬೊಮ್ಮಾಯಿ ಅವರು ಇದೇ ತಿಂಗಳ ಅಂತ್ಯದ ಒಳಗೆ ವೇತನ ಹಾಗೂ ಭತ್ಯೆಗೆ ಸಂಬಂಧಿಸಿದ ಪರಿಷ್ಕರಣೆಯ ಆಯೋಗ ಸಮಿತಿಯನ್ನು ಅತಿ ಶೀಘ್ರದಲ್ಲೇ ನೇಮಕ ಮಾಡುವುದಾಗಿ ರಾಜ್ಯದ ಸರ್ಕಾರಿ ನೌಕರರ ಸಂಘಕ್ಕೆ ಆಶ್ವಾಸನೆಯನ್ನು ನೀಡಿದ್ದಾರೆ. ಇದು ನಿಜಕ್ಕೂ ಕೂಡ ರಾಜ್ಯದ ಸರ್ಕಾರಿ ನೌಕರರಿಗೆ ಒಂದೊಳ್ಳೆ ಸುದ್ದಿ ಎಂದು ಹೇಳಿದರೆ ತಪ್ಪಾಗಲಾರದು.
ಎಲ್ಲಾ ಅಂದುಕೊಂಡಂತೆ ನಡೆದರೆ ಬಸವರಾಜ ಬೊಮ್ಮಾಯಿ ಅವರು ಸೂಚಿಸಿರುವ ಹಾಗೆ ದೀಪಾವಳಿಯ ಹೊತ್ತಿನಲ್ಲಿ ಈ ಆಯೋಗ ರಚನೆ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಇನ್ನು ವೇತನ ಭತ್ಯೆಯ ಜೊತೆಗೆ ಇನ್ಸೆಂಟಿವ್ ಅನ್ನು ನೀಡುವ ಕುರಿತಂತೆ ಕೂಡ ರಾಜ್ಯ ಸರ್ಕಾರ ಯೋಚನೆಯ ತೊಡಗಿದೆ ಎಂಬುದಾಗಿ ಕೇಳಿ ಬಂದಿದ್ದು ಮತ್ತೊಂದು ಸಹಿ ಸುದ್ದಿಯನ್ನು ಕೂಡ ರಾಜ್ಯ ಸರ್ಕಾರಿ ನೌಕರರು ಪಡೆಯಬಹುದಾಗಿದೆ.