ಬಿಜಾಪುರದಲ್ಲಿ ನಡೆದಿರುವ ಒಂದು ಘಟನೆ ಈಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು 20 ವರ್ಷದ ಮಲ್ಲಿಕಾರ್ಜುನ ಹಾಗೂ 18 ವರ್ಷದ ಗಾಯತ್ರಿ ಎನ್ನುವ ಹುಡುಗಿಯ ನಡುವೆ ನಡೆದಿರುವಂತಹ ಪ್ರೀತಿ ಎನ್ನುವುದು ಈಗ ಸುದ್ದಿಗೆ ಕಾರಣವಾಗಿದೆ. ಇವರಿಬ್ಬರ ಪ್ರೀತಿ ಪ್ರೇಮ ಪ್ರಕರಣ ಇಬ್ಬರ ಮನೆಯವರಿಗೆ ತಿಳಿದು ಇಬ್ಬರಿಗೂ ಕೂಡ ನೀವಿನ್ನು ಚಿಕ್ಕವರು ಜೀವನದಲ್ಲಿ ಸಾಧಿಸಬೇಕಾಗಿರುವುದು ಸಾಕಷ್ಟು ಇದೆ ಈಗ ಪ್ರೀತಿ ಮದುವೆ ಎಲ್ಲ ಬೇಡ ಎಂಬುದಾಗಿ ಹೇಳಿ ಬುದ್ದಿ ಹೇಳಿದರಂತೆ. ಆದರೆ ಮನೆಯವರ ಮಾತನ್ನು ಕೇಳದೆ ಇದೇ ಸಪ್ಟಂಬರ್ 23ರಂದು ಹುಡುಗಿ ಇರುವ ಊರಿಗೆ ಹುಡುಗ ಹೋಗಿದ್ದನಂತೆ.
ಇಬ್ಬರೂ ಕೂಡ ತೋಟದಲ್ಲಿರುವ ಶೆಡ್ಡಿನ ಒಳಗೆ ಹೋಗಿ ಏಕಾಂತವನ್ನು ಕಳೆಯಲು ಪ್ರಾರಂಭಿಸಿದ್ದಾರೆ. ಈ ವಿಚಾರವನ್ನು ತಿಳಿದ ಹುಡುಗಿ ಅಪ್ಪ ಶೆಡ್ಡಿನ ಬಾಗಿಲನ್ನು ಹಾಕಿ ಹುಡುಗನಿಗೆ ನಿಮ್ಮ ಅಪ್ಪನನ್ನು ಹಾಗೂ ಊರಿನವರನ್ನು ಕರೆಸಿ ಈ ವಿಚಾರವನ್ನು ತಿಳಿಸುತ್ತೇನೆ ಎಂಬುದಾಗಿ ಹೇಳಿ ಬಾಗಿಲು ಹಾಕಿ ಹೋಗುತ್ತಾನೆ. ಇದೇ ಸಂದರ್ಭದಲ್ಲಿ ಹುಡುಗಿ ನನ್ನ ಮರ್ಯಾದೆ ಹೋಗುತ್ತದೆ ಎಂಬುದಾಗಿ ಭಾವಿಸಿ ಅಲ್ಲೇ ಇದ್ದ ಕೀಟನಾಶಕವನ್ನು ಕುಡಿದು ತನ್ನ ಪ್ರಾಣವನ್ನು ಬಿಡುತ್ತಾಳೆ. ತನ್ನ ಮಗಳು ಪ್ರಾಣವನ್ನು ಕಳೆದುಕೊಂಡಿದ್ದನ್ನು ನೋಡಿದ ತಂದೆ ಆ ಹುಡುಗನಿಗೂ ಕೂಡ ಬಲವಂತವಾಗಿ ಕೀಟನಾಶಕವನ್ನು ಕುಡಿಸಿ ನೀನೇ ನನ್ನ ಮಗಳನ್ನು ಮುಗಿಸಿದ್ದು ಎಂಬುದಾಗಿ ಮುಗಿಸಿಬಿಡುತ್ತಾರೆ.
ನಂತರ ಇವರಿಬ್ಬರ ದೇಹವನ್ನು ಕೂಡ ಪ್ಲಾಸ್ಟಿಕ್ ನಲ್ಲಿ ಕಟ್ಟಿ ಹಾಕಿ ಹಿನ್ನಿರಿನ ಕಾಲುವೆ ಬಳಿ ಎಸೆದು ಹಾಕಿದ್ದರು. ನಂತರ ನಮ್ಮ ಮಗಳು ಕಾಣೆಯಾಗಿದ್ದಾಳೆ ಕಿಡ್ನ್ಯಾಪ್ ಆಗಿದ್ದಾಳೆ ಎಂಬುದಾಗಿ ಪೊಲೀಸ್ ದೂರನ್ನು ನೀಡುತ್ತಾರೆ ಹಾಗೂ ಆ ಕಡೆ ಹುಡುಗನ ಕಡೆಯವರು ಕೂಡ ಇದೇ ರೀತಿಯ ದೂರನ್ನು ನೀಡುತ್ತಾರೆ. ಕೊನೆಗೆ ಅಕ್ಟೋಬರ್ 20ರಂದು ಪೊಲೀಸರಿಗೆ ಸೇತುವೆ ಬಳಿ ಮಲ್ಲಿಕಾರ್ಜುನ ದೇಹ ಸಿಗುತ್ತದೆ ಆತ ಹಾಕಿಕೊಂಡಿದ್ದ ಟೀ ಶರ್ಟ್ ಮೂಲಕ ಇದು ಆತನೇ ಎಂಬುದಾಗಿ ತಿಳಿದು ಬರುತ್ತದೆ.
ಈ ಕುರಿತಂತೆ ಹಿನ್ನೆಲೆಯನ್ನು ತಿಳಿದು ಸಂಪೂರ್ಣ ವಿವರವಾಗಿ ಹಾಗೂ ಆಳವಾಗಿ ತನಿಖೆ ನಡೆಸಿದ ನಂತರ ಪೊಲೀಸರಿಗೆ ಹುಡುಗ ಹಾಗೂ ಹುಡುಗಿಯ ನಡುವಿನ ಪ್ರೀತಿ ಹಾಗೂ ಅದಕ್ಕೆ ಮನೆಯವರ ವಿರೋಧ ಇದ್ದಿದ್ದು ತಿಳಿದು ಬಂದಿದೆ. ಇದರ ಕುರಿತಂತೆ ಹುಡುಗಿಯ ಮನೆಯವರಿಗೆ ಸ್ವಲ್ಪ ಬಿಸಿ ಮುಟ್ಟಿಸಿದಾಗ ಇರುವ ವಿಚಾರವನ್ನು ಸಂಪೂರ್ಣವಾಗಿ ಕಕ್ಕಿದ್ದಾರೆ. ನಮ್ಮ ಮಗಳನ್ನು ಕಳೆದುಕೊಂಡ ಸಿಟ್ಟಿಗೆ ಹಾಗೂ ಬೇಸರಕ್ಕೆ ಹುಡುಗನನ್ನು ಕೂಡ ನಾವೇ ಮುಗಿಸಿದ್ದೇವೆ ಎಂಬುದಾಗಿ ಕೂಡ ಸತ್ಯವನ್ನು ಒಪ್ಪಿಕೊಂಡಿದ್ದು ಇನ್ನೇನು ಕಾನೂನಾತ್ಮಕ ಶಿಕ್ಷೆಯನ್ನು ಅನುಭವಿಸುವುದ್ದಕ್ಕೆ ಸಿದ್ದರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಸಮಾಜ ಪ್ರೀತಿಯನ್ನು ಕೇವಲ ಸಿನಿಮಾದಲ್ಲಿ ಮಾತ್ರ ಒಪ್ಪಿಕೊಳ್ಳುತ್ತದೆ ನಿಜ ಜೀವನದಲ್ಲಿ ಒಪ್ಪಿಕೊಳ್ಳುವುದಿಲ್ಲ ಯಾಕೆ ಎಂಬುದು ನಿಜಕ್ಕೂ ಇಂದಿನ ಯುವ ಜನತೆಯ ಪ್ರಶ್ನೆಯಾಗಿದ್ದು ಇದು ಮತ್ತೊಮ್ಮೆ ಈ ಘಟನೆಯ ಮೂಲಕ ಪ್ರತಿಧ್ವನಿಸುತ್ತಿದೆ.