ಚಿತ್ರದುರ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿ ಗ್ರಂಥಾಲಯದಲ್ಲಿ ಖಾಲಿ ಇರುವ ಹುದ್ದೆಯ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ವಯೋಮಾನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.
ಹುದ್ದೆ : ಗ್ರಂಥಾಲಯ ಮೇಲ್ವಿಚಾರಕರು
ಕರ್ತವ್ಯ ಸ್ಥಳ : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬಿ-ದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಣಿಗೆಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಹುದ್ದೆ ಖಾಲಿ ಇದೆ.
ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಯು ಎಸ್.ಎಸ್.ಎಲ್.ಸಿಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಾನ : ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯೋಮಾನ ಪೂರೈಸಿರಬೇಕು ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ವೇತನ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಗೌರವಧನ ರೂ. 12,000 ನೀಡಲಾಗುತ್ತದೆ. ಗ್ರಾಮ ಪಂಚಾಯ್ತಿ ಗ್ರಂಥಾಲಯದಲ್ಲಿ ಖಾಲಿಯಿರುವ ಹುದ್ದೆಗೆ ಅರ್ಜಿ ಸಲ್ಲಿಕೆಯ ವಿಧಾನ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕಛೇರಿಗೆ ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಸಲ್ಲಿಸಬೇಕು.
ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಪಡೆದು, ನಂತರ ಅರ್ಜಿ ನಮೂನೆಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ವಿಳಾಸ ಇತ್ಯಾದಿ) ಅಗತ್ಯ ದಾಖಲೆಗಳೊಂದಿಗೆ ಕಛೇರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ : ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಹುದ್ದೆ ಖಾಲಿಯಿರುವ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಥವಾ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು : ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಟಿ.ಸಿ., ಮೀಸಲಾತಿ ಪ್ರಮಾಣ ಪತ್ರ, ಸ್ಥಳೀಯ ವಾಸಸ್ಥಳ ದೃಢೀಕರಣ ಪತ್ರ, ಅಂಗವಿಕಲತೆ (ಇದ್ದಲ್ಲಿ ದೃಢೀಕರಣ ಪತ್ರ)
ಅರ್ಜಿ ಶುಲ್ಕ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಇತರೆ ಮಾಹಿತಿ : ಈ ಮೇಲ್ವಿಚಾರಕ ಹುದ್ದೆಯು ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿರುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಸ್ಥಳೀಯ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರಬೇಕು.
ನಿಗದಿಪಡಿಸಿದ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಅಕ್ಟೋಬರ್ 03, 2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 31, 2022