ಹಿಂದೂ ಸಂಸ್ಕೃತಿಯಲ್ಲಿ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಎನ್ನುವುದು ನಮಗೆಲ್ಲಾ ತಿಳಿದಿರುವ ವಿಷಯ. ತುಳಸಿಯನ್ನು ಹಿಂದೂ ಧರ್ಮದಲ್ಲಿ ತಾಯಿ ಎಂದು ಕರೆಯಲಾಗುತ್ತದೆ. ಮತ್ತು ಇದನ್ನು ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ನೆಡುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎನ್ನುವುದರ ಬಗ್ಗೆ ನಮಗೆಲ್ಲ ಈಗಾಗಲೇ ಸಾಮಾನ್ಯವಾಗಿ ತಿಳಿದೇ ಇದೆ. ಮತ್ತು ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು.
ತುಳಸಿ ಎಲೆಗಳ ಜೊತೆಗೆ, ತುಳಸಿಯ ಕಾಂಡದಿಂದ, ಅಂದರೆ ತುಳಸಿ ಕೊಂಬೆಗಳಿಂದ ಹಾರವನ್ನು ಸಹ ತಯಾರಿಸಲಾಗುತ್ತದೆ. ಇದನ್ನು ತುಳಸಿ ಜಪಮಾಲೆಯೆಂದು ಅಥವಾ ತುಳಸಿ ಹಾರವೆಂದು ಕರೆಯಲಾಗುತ್ತದೆ. ತುಳಸಿ ಹಾರವನ್ನು ಧರಿಸುವಾಗ ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು..? ತುಳಸಿ ಹಾರ ಧರಿಸುವುದರ ಪ್ರಯೋಜನವೇನು? ಎನ್ನುವುದರ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಹಿಂದೂ ಧರ್ಮದಲ್ಲಿ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪ್ರತಿದಿನ ತುಳಸಿಗೆ ನೀರು ಅರ್ಪಿಸುವುದು, ಸಂಜೆ ತುಳಸಿ ಗಿಡದ ಕೆಳಗೆ ದೀಪಗಳನ್ನು ಬೆಳಗಿಸುವುದು, ತುಳಸಿ ತಿನ್ನುವುದು ಮತ್ತು ಅದರ ಮಾಲೆ ಧರಿಸುವುದು ಮುಂತಾದ ಅನೇಕ ವಿಷಯಗಳು ಭಾರತೀಯ ಸಂಪ್ರದಾಯದ ಪ್ರಮುಖ ಭಾಗವಾಗಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ತುಳಸಿಗೆ ಅನೇಕ ಪ್ರಯೋಜನಗಳಿವೆ. ಇಂದು, ತುಳಸಿಗೆ ಸಂಬಂಧಿಸಿದ ಅಂತಹ ಒಂದು ಪ್ರಯೋಜನದ ಬಗ್ಗೆ ತಿಳಿಯೋಣ. ತುಳಸಿಗೆ ದೇವರ ಸ್ಥಾನ ನೀಡಲಾಗಿದೆ ಅದಕ್ಕೆ ತುಳಸಿಯನ್ನು ದೇವತೆ, ಮಾತೇ ಎಂದೂ ಕರೆಯುತ್ತೇವೆ.
ತುಳಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ. ತುಳಸಿಯ ಎಲೆ ಬೇರು ಬೀಜವನ್ನು ಅನೇಕ ಔಷಧಿಗಳಲ್ಲಿ ಉಪಯೋಗಿಸಲಾಗುತ್ತದೆ. ತುಳಸಿ ಮಾಲೆಗೂ ನಮ್ಮ ಧರ್ಮದಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿದೆ. ತುಳಸಿ ಹಾರವನ್ನು ತುಂಬಾ ಪ್ರಯೋಜನಕಾರಿ ಎಂದೇ ಪರಿಗಣಿಸಲಾಗುತ್ತದೆ. ತುಳಸಿಯ ಹಾರವನ್ನು ಧರಿಸುವುದರಿಂದ ದೇಹ ಮಾತ್ರವಲ್ಲ ಮನಸ್ಸು ಮತ್ತು ಆತ್ಮ ಎರಡು ಪರಿಶುದ್ಧಗೊಳಿಸುತ್ತದೆ ಎಂದು ಹಿರಿಯರು ಹೇಳುತ್ತಾರೆ. ತುಳಸಿ ಹಾರವನ್ನು ಧರಿಸುವುದರಿಂದ ದೇಹಕ್ಕೆ ಔಷಧೀಯ ಗುಣಗಳು ಲಭಿಸುತ್ತವೆ. ತುಳಸಿ ಜಪಮಾಲೆಯನ್ನು ಧರಿಸುವುದರಿಂದ ಅನೇಕ ಕಾಯಿಲೆಗಳಿಂದ ನಿವಾರಣೆ ಹೊಂದಬಹುದು.
ತುಳಸಿ ಅದ್ಭುತ ಔಷಧ, ಇದು ರಕ್ತದೊತ್ತಡ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತುಳಸಿ ಧರಿಸುವುದರಿಂದ ದೇಹದಲ್ಲಿ ವಿದ್ಯುತ್ ಹರಿವು ಹೆಚ್ಚಾಗುತ್ತದೆ. ಕುತ್ತಿಗೆಗೆ ತುಳಸಿ ಮಾಲೆಧರಿಸುವುದರಿಂದ ವಿದ್ಯುತ್ ತರಂಗಗಳು ಹೊರಸೂಸುತ್ತವೆ, ಅದು ರಕ್ತ ಪರಿಚಲನೆಗೆ ಅಡ್ಡಿಯಾಗಲು ಬಿಡುವುದಿಲ್ಲ. ಇದಲ್ಲದೆ, ತುಳಸಿ ಮಲೇರಿಯಾ ಮತ್ತು ಅನೇಕ ರೀತಿಯ ಜ್ವರಗಳಲ್ಲಿ ಬಹಳ ಪ್ರಯೋಜನಕಾರಿ. ತುಳಸಿ ಮಾಲೆಧರಿಸುವುದರಿಂದ ಮಾನಸಿಕ ಶಾಂತಿ ಸಿಗುತ್ತದೆ.
ಕುತ್ತಿಗೆಗೆ ಧರಿಸುವುದರಿಂದ ಅಗತ್ಯವಾದ ಆಕ್ಯುಪ್ರೆಶರ್ ಪಾಯಿಂಟ್ಮೇಲೆ ಒತ್ತಡ ಹೇರುತ್ತದೆ, ಇದು ಮಾನಸಿಕ ಒತ್ತಡದಿಂದ ಮುಕ್ತಿ ದೊರಕಿಸುತ್ತದೆ. ತುಳಸಿಹಾರದಿಂದ ನಾವು ಅನೇಕ ಮಂತ್ರಗಳನ್ನು ಜಪಿಸಬಹುದು. ಧರ್ಮ ಗ್ರಂಥಗಳ ಪ್ರಕಾರ ತುಳಸಿ ಹಾರವನ್ನು ಹಿಡಿದು ಮಂತ್ರವನ್ನು ಜಪಿಸುವುದರ ಮೂಲಕ ನಾವು ನಮ್ಮ ಮನಸ್ಸು ನಮ್ಮ ಆತ್ಮ ಪರಮಾತ್ಮನಾದ ಶ್ರೀಹರಿಗೆ ಹೋಗುತ್ತದೆ ಎನ್ನುವ ನಂಬಿಕೆ ಆದ್ದರಿಂದ ತುಳಸಿ ಹಾರವನ್ನು ಧರಿಸಬೇಕು ಎಂದು ಹೇಳುತ್ತಾರೆ ತುಳಸಿ ಹಾರವನ್ನು ತಿಳಿಸಿದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಆಕರ್ಷಕವಾಗಿ ರೂಪಿಸಿಕೊಳ್ಳುತ್ತಾನೆ.
ತುಳಸಿಯಲ್ಲಿ ಎರಡು ಬಗೆಯ ತುಳಸಿ ಇರುತ್ತದೆ ಅದು ಎಲ್ಲರಿಗೂ ತಿಳಿದಿರುವಂತಹ ವಿಷಯ ಒಂದು ಶಾಮ ತುಳಸಿ ಮತ್ತೊಂದು ರಾಮ ತುಳಸಿ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶ್ಯಾಮ ತುಳಸಿಯು ನಿಮಗೆ ಮಾನಸಿಕ ಸಂತೋಷವನ್ನು ನೀಡುತ್ತದೆ. ಅದು ಯಾವಾಗಲೂ ನಿಮ್ಮ ಮನಸ್ಸಿನಲ್ಲಿ ಸಕಾರಾತ್ಮಕ ಮತ್ತು ಧನಾತ್ಮಕ ಚಿಂತನೆಗಳನ್ನು ಉತ್ತೇಜಿಸುತ್ತದೆ. ಇದನ್ನು ಧರಿಸುವುದರಿಂದ ಮನೆಯಲ್ಲಿ ಯಾವಾಗಲೂ ಸಂತೋಷ ತುಂಬಿರುತ್ತದೆ.
ಮತ್ತೊಂದು ಕಡೆಯಿಂದ ನಾವು ರಾಮ ತುಳಸಿಯ ಬಗ್ಗೆ ಹೇಳಬೇಕು ಎಂದರೆ ಈ ತುಳಸಿಯಿಂದ ಮಾಡಿದ ಹಾರವೂ ದೇವರ ಮೇಲೆ ಮತ್ತು ನಿಮ್ಮ ಮೇಲೆ ವಿಶ್ವಾಸವನ್ನು ಮೂಡಿಸುತ್ತದೆ. ದೇವರನ್ನು ನಂಬುವ ವ್ಯಕ್ತಿಯು ಯಾವಾಗಲೂ ಆತ್ಮವಿಶ್ವಾಸದಿಂದ ಕೂಡಿರುತ್ತಾನೆ ಈ ಹಾರವನ್ನು ಹಾಕಿಕೊಳ್ಳುವುದರಿಂದ ಪ್ರತಿಯೊಂದು ಕಾರ್ಯವನ್ನು ಪೂರೈಸಲು ಅದು ಪೂರಕವಾಗುತ್ತದೆ. ತುಳಸಿ ಮಾಲೆಯನ್ನು ಧರಿಸುವುದರಿಂದ ಕೆಟ್ಟ ಕನಸು ಭಯ ಅಪಘಾತಗಳಿಂದ ರಕ್ಷಣೆ ಸಿಗುತ್ತದೆ ಮತ್ತು ಸಾವಿನಂತಹ ಭಯಾನಕ ಪೀಡೆಗಳು ಭಯ ತೊಲಗುತ್ತವೆ. ದೆವ್ವ ಮಾಟ ಮಂತ್ರ ಕೂಡ ಇದನ್ನು ಧರಿಸುವುದರಿಂದ ನಾವು ರಕ್ಷಣೆ ಪಡೆಯಬಹುದು.
ತುಳಸಿ ಆಯುರ್ವೇದ ಮತ್ತು ವೈದ್ಯಕೀಯ ಪ್ರಯೋಜನವನ್ನು ಪಡೆದಿದೆ. ಸಾಮಾನ್ಯವಾಗಿ ಕೆಮ್ಮು, ಜ್ವರ, ಅಸ್ತಮಾ, ಶೀತ, ಗಂಟಲು ನೋವು, ರಕ್ತದ ಒತ್ತಡ, ಕಿಡ್ನಿ ಸಮಸ್ಯೆ, ಜಾಯಿಂಡೀಸ್ ನಂತಹ ಹಲವು ಆರೋಗ್ಯ ಸಮಸ್ಯೆಗಳಿಗೆ ತುಳಸಿ ಅತ್ಯುತ್ತಮ ಪರಿಹಾರ ಎಂದು ಹೇಳುತ್ತಾರೆ. ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರೆ ಏಕಾಗ್ರತೆ ಶಕ್ತಿ ನೆನಪಿನ ಶಕ್ತಿ ಹೆಚ್ಚುತ್ತದೆ ಈ ತುಳಸಿಯಿಂದ ಪ್ರತಿರೋಧಕ ನೋವು ನಿರೋಧಕ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ.
ಇನ್ನೂ ಕಾಮಲೆ ಸಮಯದಲ್ಲಿ ತುಳಸಿ ಮಾಲೆಯನ್ನು ಧರಿಸುವುದು ಆರೋಗ್ಯಕ್ಕೆ ಒಳ್ಳೆಯದು. ತುಳಸಿ ಮಾಲೆಯನ್ನು ಧರಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ತುಳಸಿ ಒಂದು ಅದ್ಭುತ ಗಿಡ ಇದು ರಕ್ತದ ಒತ್ತಡವನ್ನು ನಿವಾರಿಸಿ ಇದರಿಂದ ದೇಹದಲ್ಲಿ ವಿದ್ಯುತ್ನ ಹರಿವು ಸಂಚಾರ ಆಗುತ್ತದೆ.