ನಮ್ಮ ಜೀವನದ ಬೆನ್ನೆಲುಬು ರೈತರು ಎಂದರೆ ತಪ್ಪಿಲ್ಲ ಒಬ್ಬ ರೈತ ತನ್ನ ವರ್ಷವಿಡೀ ಬೆವರು ಸುರಿಸಿ ಬೆಳಿಸಿದ ಬೆಳೆಯನ್ನು ಮಾರುಕಟ್ಟೆಗೆ ಮಾರಾಟ ಮಾಡುವ ಮೂಲಕ ಇಂದು ನಾವೆಲ್ಲಾ ಆರಾಮ ಆಗಿ ಕುಳಿತು ತಿನ್ನುತಿದ್ದೇವೆ . ಯಾವುದೇ ಉದ್ಯಮ ಅಲ್ಲಿದ್ದು ಎಷ್ಟೊಂದು ಸಂಬಳವನ್ನು ಪಡೆದರು ಕೂಡ ಒಬ್ಬ ರೈತನ ಬೆವರಿನ ಮುಂದೆ ಅದು ನಗಣ್ಯ. ಆದರೆ ಇಂದು ಪ್ರಕೃತಿಯು ಕೂಡ ಯಾಕೋ ರೈತನ ಮೇಲೆ ಕೋಪಿಸಿಕೊಂಡಂತಿದೆ ಅತಿಯಾದ ಮಳೆ ಬಿಸಿಲು ಇದರಿಂದ ರೈತನ ಬೆಳೆಯ ಮೇಲೆ ಅತ್ಯಂತ ಪರಿಣಾಮ ಬೀರಿದ್ದು ಬೆಳೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ರೈತನ ಜೀವನ ಚಿಂತಾಜನಕ ಸ್ಥಿತಿಯಲ್ಲಿದ್ದೆ ಹಾಗಾಗಿ ಕೃಷಿಯನ್ನು ನಂಬಿಕೊಳ್ಳದೆ ಹಲವಾರು ಅಡ್ಡ ವ್ಯಾಪಾರ ಮೊರೆ ಹೋದರೆ ಉತ್ತಮ ಸಾಮಾನ್ಯವಾಗಿ ಹೈನುಗಾರಿಕೆ ಕುರಿ ಹಾಗೂ ಮೇಕೆ ಸಾಕಾಣಿಕೆ ರೇಶಿಮೆ ಹುಳು ಸಾಕಾಣಿಕೆ ಹೀಗೆ ಹಲವಾರು ಉದ್ದುಮೆ ಇದ್ದು ಅದರಲ್ಲಿ ಕುಕ್ಕುಟೋದ್ಯಮ ಕೂಡ ಒಂದು ಅಂದರೆ ಕೋಳಿ ಸಾಕಾಣಿಕೆ ನಿಜ ಕಡಿಮೆ ಹೂಡಿಕೆ ಹಾಗೂ ಕಡಿಮೆ ಜಾಗ ಅಲ್ಲಿ ಮಾಡಬಹುದಾದ ಒಂದು ಉದ್ಯಮ
ರೈತರು ಅಲ್ಲದೆ ಸಾಮಾನ್ಯ ವರ್ಗದ ಜನರು ಕೂಡ ಈ ಉದ್ಯಮ ಮಾಡಬಹುದು ಇನ್ನು ಕೋಳಿ ಅಲ್ಲಿ ಅಧಿಕ ಪ್ರೊಟೀನ್ ಹಾಗೂ ಕಡಿಮೆ ಕೊಬ್ಬು ಇರುವುದರಿಂದ ವೈದ್ಯರ ಪ್ರಕಾರ ಕೋಳಿ ಮಾಂಸದ ನಿಯಮಿತ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದ್ದಾರೆ ಇನ್ನು ಕೊಳಿಯಲ್ಲಿ ಮೊಟ್ಟೆ ಕೋಳಿ ಹಾಗೂ ಮಾಂಸ ಕೋಳಿ ಹೀಗೆ ಹಲವಾರು ತಳಿಗಳಿವೆ ಎರಡರಲ್ಲೂ ಕೂಡ ಹಣವನ್ನು ಗಳಿಸಬಹುದು ಕೋಳಿ ರೋಗಗಳು ಹೇಗೆ ತಡೆಗಟ್ಟಬೇಕು ಎನ್ನುವುದರ ಬಗ್ಗೆ ತಿಳಿಯಲು ಉತ್ತಮ ತರಬೇತಿ ಅವಶ್ಯಕ.
ರೈತನ ಕಷ್ಟ ಪಟ್ಟು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಇದ್ದು ನಷ್ಟ ಅನುಭವಿಸುತ್ತಿದ್ದಾರೆ ಇನ್ನೂ ರೈತನು ಆರು ತಿಂಗಳಿನ ಬೆಳೆ ಮೂರು ತಿಂಗಳಿನ ಬೆಳೆ ಹೀಗೆ ಆಯಾ ಕಾಲಕ್ಕೆ ಅನುಗುಣವಾಗಿ ಬೆಳೆಯನ್ನು ಬೆಳೆಸುತ್ತಾರೆ ಮತ್ತು ಆದಾಯವನ್ನು ಗಳಿಸುತ್ತಾರೆ ಆದರೆ ತಿಂಗಳಿಗೆ ಆದಾಯ ಗಳಿಸುವ ಉದ್ಯಮ ಬಗ್ಗೆ ತಿಳಿಯಲು ಹೋದರೆ ಸಿಗುವ ಉದ್ಯಮ ಕುಕ್ಕುಟೋದ್ಯಮ ಇಂದಿನ ಈ ಅಂಕಣದಲ್ಲಿ ಕೋಳಿ ತಳಿಗಳು ಹಾಗೂ ವಾರ್ಷಿಕ ಆದಾಯ ಬಗ್ಗೆ ವಿವರ ನೋಡೋಣ.
ಕೋಳಿಯನ್ನು ಎಲ್ಲ ಹವಾಮಾನ ಅಲ್ಲಿ ಸಾಕಬಹುದು ಇನ್ನೂ ತಿಂಗಳ ಆದಾಯ ಬೇಕಾದಲ್ಲಿ ಮೊಟ್ಟೆಯನ್ನು ಮಾರಿ ಹಣ ಗಳಿಸಬಹುದು ಹಾಗೂ ಮಾಂಸವನ್ನು ಸಹ ಮಾರಾಟ ಮಾಡಬಹುದು ಇನ್ನೂ ನಮ್ಮ ದೇಶದಲ್ಲಿ ಸುಮಾರು 75 ಸಾವಿರ ಕೋಟಿಯಷ್ಟು ಕೋಳಿಯ ಮಾಂಸದ ಗಾತ್ರವನ್ನು ಮಾರುಕಟ್ಟೆ ಇದ್ದು ಕೇವಲ 140 ಕೋಟಿಯಷ್ಟು ರಪ್ತು ಮಾಡಲಾಗುವುದು ಇನ್ನೂ ಭಾರತೀಯರು ಜಾಸ್ತಿ ಕೋಳಿ ಮಾಂಸವನ್ನು ತಿನ್ನುವುದರಿಂದ ಕೋಳಿ ಸಾಕಾಣಿಕೆ ಉದ್ಯಮದಲ್ಲಿ ಯಾವುದೇ ನಷ್ಟ ಇಲ್ಲ ಭಾರತದಲ್ಲಿ ಸುಮಾರು 36% ಜನರು ಕೋಳಿ ಮಾಂಸವನ್ನು ತಿನ್ನುತಲಿದ್ದು ಸುಮಾರು ಎಮ್ಮೆ ಮಾಂಸ 22% ಮೇಕೆ ಮಾಂಸ18% ಹಂದಿಮಾಂಸ 9% ಹಾಗೂ ಕುರಿ ಮಾಂಸವನ್ನು 8% ಇತರೆ ಮಾಂಸವನ್ನು ಸೇವೇನೆ ಮಾಡಲಿದು ಇವೆಲ್ಲ ಗಣನೆ ಮಾಡಿದಾಗ ಕೋಳಿ ಮಾಂಸ ತಿನ್ನುವರ ಸಂಖ್ಯೆ ಜಾಸ್ತಿ ಹಾಗಾಗಿ ಕೋಳಿ ಸಾಕಾಣಿಕೆ ಅಲ್ಲಿ ಯಾವುದೇ ನಷ್ಟ ಇಲ್ಲ ಹಾಗೂ ಮಾರುಕಟ್ಟೆಯಲ್ಲಿ ಕೂಡ ಸಂಘ ಸಂಸ್ಥೆಗಳು ಇದ್ದು ಯಾವುದಾದರೂ ಒಂದು ಸಂಸ್ಥೆ ಜೊತೆಗೆ ಒಡಂಬಡಿಕೆ ಇಲ್ಲವೆ ಒಪ್ಪಂದ ಮಾಡಿಕೊಂಡರೆ ಅವರು ಕೋಳಿ ಮರಿಯನ್ನು ಕೊಡುವುದರಿಂದ ಹಿಡಿದು ವಾಪಸ್ಸು ತೆಗೆದುಕೊಳ್ಳುವ ತನಕ ಅವರು ಸಹಾಯ ಮಾಡುತ್ತಾರೆ
ನೀವು ಅದರ ಪೋಷಣೆ ಹಾಗೂ ಆಹಾರವನ್ನು ನೋಡಿಕೊಳ್ಳುವುದು ಒಂದು ಕೆಲಸ ಹಾಗೂ ಅದುಕ್ಕೆ ಸುಸಜ್ಜಿತ ಕೊಠಡಿ ವ್ಯವಸ್ಥೆ ಮಾಡಬೇಕು ಇನ್ನೂ ಮೊಟ್ಟೆಯಾಗಳಿ ಅಥವಾ ಮಾಂಸವನ್ನು ಕೂಡ ಕೆಜಿ ಲೆಕ್ಕ ಹಾಕಿ ಅವರೇ ಖರೀದಿ ಮಾಡುತ್ತಾರೆ ಇನ್ನೂ ಕೋಳಿ ಸಾಕಾಣಿಕೆ ಒಂದು ಕಡಿಮೆ ಬಂಡವಾಳ ಅಲ್ಲಿ ಅಧಿಕ ಲಾಭ ಗಳಿಸುವ ಉದ್ಯಮ ಉತ್ತಮ ನಿರ್ವಹಣೆ ಅಗತ್ಯ ಇಂದು ಅನೇಕರು ಈ ಕೋಳಿ ಸಾಕಾಣಿಕೆ ಮೂಲಕ ತಮ್ಮ ಜೀವನ ಹಸನು ಮಾಡಿಕೊಂಡಿದ್ದಾರೆ
ಇನ್ನೂ ಈ ಕೋಳಿಯ ಐದು ತಳಿಯ ಬಗ್ಗೆ ನೋಡೋಣ ಬನ್ನಿ ಮೊದಲನೆಯದು ಕಡಕನಾಥ ಕೋಳಿ ಇದು ಸಾಮಾನ್ಯವಾಗಿ ಈ ಕೋಳಿ ಮಧ್ಯಪ್ರದೇಶದ ಜಬುವನಾತ ಜಿಲ್ಲೆಯ ಬುಡಕಟ್ಟು ಜನಾಂಗ ಅವರು ಈ ಕೋಳಿಯನ್ನು ಸಾಕಾಣಿಕೆ ಮಾಡುತ್ತಿದ್ದು ಸುಮಾರು ಕಾಲದವರೆಗೂ ಇದರ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ಒಮ್ಮೆ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರು ತಮ್ಮ ಆಹಾರ ಪದ್ಧತಿ ಅಲ್ಲಿ ಅಳವಡಿಸಿ ಕೊಂದಿದರು ಏಕೆಂದರೆ ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಹಾಗೂ ಪ್ರೊಟೀನ್ ಜಾಸ್ತಿ ಇದ್ದು ಇದರಿಂದ ದೇಹಕ್ಕೆ ಒಳ್ಳೆಯ ಆಹಾರ ಹಾಗಾಗಿ ಭಾರತದೆಲ್ಲೆಡೆ ಇದಕ್ಕೆ ಬಹು ಬೇಡಿಕೆ ಇದೆ ಒಂದು ಕೆಜಿ ಗೆ 800 ರಿಂದ900 ರೂಪಾಯಿ ಹಾಗೂ ಸಾವಿರ ಕೋಳಿಯನ್ನು ಸಾಕಿದಲ್ಲಿ ಆರು ತಿಂಗಳಿಗೆ ಸುಮಾರು ಎಂಟು ಲಕ್ಷ ರೂಪಾಯಿ ಲಾಭ ಸಾಧ್ಯತೆ ಇದೆ ಇನ್ನೂ ನೋಡಲು ಕಪ್ಪು ಬಂಗಾರ ಎಂದರೆ ಕಣ್ಣು ಕಪ್ಪು ಮಾಂಸ ಕಪ್ಪು ಪೂರ್ತಿ ದೇಹ ಕಪ್ಪು ಮೊಟ್ಟೆಯೊಂದೆ ಬಿಳಿ ಬಣ್ಣ ಆಗಿದೆ ಹಾಗಾಗಿ ಇದು ಅತಿ ಬೇಡಿಕೆ ಇರುವ ಕೋಳಿ ಅಲ್ಲಿ ಒಂದು ಹೆಣ್ಣು ಕೋಳಿ ತನ್ನ ಜೀವಿತಾವಧಿಯಲ್ಲಿ 90 ಮೊಟ್ಟೆ ಇಡುತ್ತದೆ
ಒಂದು ಮೊಟ್ಟೆಗೆ ಸುಮಾರು 30 ರಿಂದ 50 ರೂಪಾಯಿ ಇದೆ ಇನ್ನೂ ಒಂದು ಹೆಣ್ಣು ಅಥವ ಗಂಡು ಕೋಳಿ ಸುಮಾರು 1.5 ಇಂದ 1.8 ಅಷ್ಟು ತೂಕವನ್ನು ಹೊಂದಿದ್ದು ಒಪ್ಪಂದ ಮೂಲಕ ಮಾರಾಟ ಮಾಡಿದರೆ ಸುಮಾರು 350 ರೂಪಾಯಿ ಇದ್ದು ಇನ್ನೂ ನೇರ ಮಾರುಕಟ್ಟೆ ವ್ಯಾಪಾರ ಮಾಡುತಿವಿ ಎಂದರೆ 800 ರೂಪಾಯಿ ಅಷ್ಟು ದರ ಇದೆ ಇನ್ನೂ ನಮ್ಮ ರಾಜ್ಯದಲ್ಲಿ ಚಿಂತಾಮಣಿಯ ವಿಜಯ ಕುಮಾರ್ ಅವರು ಈ ಕೋಳಿಯ ಸಾಕಾಣಿಕೆಯಲ್ಲಿ ಯಶಸ್ಸು ಗಳಿಸಿದ್ದಾರೆ
ಎರಡನೆಯ ತಳಿ ಬಿ ವಿ 380 ಕೋಳಿ . ಭಾರತದಲ್ಲಿ ಸುಮಾರು 25 ಮಿಲಿಯನ್ ಈ ಕೋಳಿಯ ಸಾಕಾಣಿಕೆ ಮೂಲಕ ತನ್ನ ಜೀವನ ಸಾಗಿಸುತ್ತಿದ್ದಾರೆ ಈ ಕೋಳಿಯನ್ನು ಮೊಟ್ಟೆಗೋಸ್ಕರ ಸಾಕಾಣಿಕೆ ಮಾಡಿದರೆ ಉತ್ತಮ ವೈದ್ಯರೇ ಹೇಳಿದಂತೆ ದಿನಕ್ಕೊಂದು ಮೊಟ್ಟೆ ಸೇವೇನೆ ಇಂದ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ಸಿಗಲಿವೆ ಇನ್ನೂ ಈ ಕೋಳಿ ವರ್ಷಕ್ಕೆ 320 ಮೊಟ್ಟೆ ಇಡುತ್ತದೆ ಇನ್ನೂ ಸಾಕಲು ಕೂಡ ತುಂಬಾ ಸುಲಭ ಇನ್ನೂ ಯಾವುದೇ ಕಾರ್ಮಿಕರ ಅಗತ್ಯ ಇಲ್ಲ ಇನ್ನು ಇದನ್ನು ಸಾಕಿದವರ ಕೊಟ್ಟ ಮಾಹಿತಿ ನೋಡೋಣ ಒಂದು ಕೋಳಿ ನಾಲ್ಕು ರೂಪಾಯಿ ಅಷ್ಟು ಆಹಾರ ಸೇವನೆ ಮಾಡುವುದು ಇನ್ನೂ 500 ಕೋಳಿ ಸಾಕಿದಲ್ಲಿ ತಿಂಗಳಿಗೆ 60000 ರೂಪಾಯಿ ಇನ್ನೂ ತಿಂಗಳಿಗೆ 12500 ಮೊಟ್ಟೆ. 500 ಕೋಳಿ ನೀಡಿದಲ್ಲಿ ಒಂದು ಮೊಟ್ಟೆಗೆ 8 ರೂಪಾಯಿ ಅಂತ ಮಾರಿದರು ಕೂಡ ಒಂದು ಲಕ್ಷ ಆದಾಯ ನಿಮ್ಮದು ಇದರಲ್ಲಿ ಖರ್ಚು ವೆಚ್ಚ ತಗೆದರು ಒಂದು ತಿಂಗಳಿಗೆ 40000 ಲಾಭ ಗಳಿಸಬಹುದು ಇನ್ನೂ ಮೊಟ್ಟೆಯ ನಂತರ ಇದರ ಮಾಂಸ ಕೂಡ ಲಾಭ ಇದೆ ವಿಷ್ಣುವರ್ಧನ್ ಮತ್ತು ದರ್ಶನ್ ಎನ್ನುವರು ಇಬ್ಬರು ಎಂಜಿನಿಯರ್ ಹಾಗೂ ಹೋಟೆಲ್ ನಿರ್ವಹಣೆ ಮಾಡಿದವರು ಇವರಾಗಿದ್ದು ಯಶಸ್ಸು ಗಳಿಸಿದ್ದಾರೆ
ಮೂರನೆಯದು ನಾಟಿ ಕೋಳಿ ಇದರ ಬಗ್ಗೆ ಎಲ್ಲರಿಗೂ ಗೊತ್ತು ಈ ಕೋಳಿಯ ಮಾಂಸವನ್ನು ಒಂದು ಬಾರಿ ಆದರೂ ತಿಂದಿದ್ದಾರೆ ಇನ್ನೂ ಕಸ ಹುಳ ಹುಪ್ಪಟೆ ಅನ್ನು ತಿಂದು ದಷ್ಟ ಪುಷ್ಟವಾಗಿ ಬೆಳೆದು ಬದುಕುವ ಕೋಳಿ ಇನ್ನೂ ಫಾರ್ಮಾ ಅಲ್ಲಿ ಬೇಳಿತಿವಿ ಅನ್ನುವುದಾದರೆ ಅದುಕೆ ಬೇಕಾದ ಆಹಾರ ವ್ಯವಸ್ಥೆ ಪೂರೈಸಿ ಹಾಗೂ ಓಡಾಡಲು ಜಾಗವನ್ನು ನೀಡಬೇಕು ಇನ್ನೂ ನಟಿ ಕೋಳಿಯ ಹಿಕ್ಕೆಗು ಕೂಡ ಬೇಡಿಕೆ ಇದ್ದು ಬೂತರಧನೆ ಹಾಗೂ ಹಲವಾರು ಹರಕೆ ಇನ್ನೂ ದಾರ್ಮಿಕ ಕಾರ್ಯಗಳಿಗೆ ನಾಟಿ ಕೋಳಿ ಅಗತ್ಯತೆ ಇದೆ ಒಂದು ನಟಿ ಮರಿ 35 ರೂಪಾಯಿ ಸಿಗುವುದು ಇನ್ನೂ 120 ದಿನ ಸಾಕಾಣಿಕೆ ಮಾಡಿ ಮಾರಾಟ ಮಾಡಬಹುದು ಇನ್ನೂ 500 ಕೋಳಿಗೆ ಸರಿಯಾದ ಆಹಾರ ಹಾಗೂ ಜಾಗವನ್ನು ನೀಡಿ ಸುಮಾರು 15000-20000 ಖರ್ಚು ಮಾಡಿದ್ದಲ್ಲಿ ಒಂದು ಕೋಳಿಗೆ 350 ಇದ್ದರೂ ಕೂಡ 1.5 ಪಕ್ಷದಿಂದ-2 ಲಕ್ಷದ ವರಿಗು ಆದಾಯ ಇದೆ ಇನ್ನೂ ವರ್ಷಕ್ಕೆ 70 ಮೊಟ್ಟೆ ನೀಡುವುದು ಒಂದು ಮೊಟ್ಟೆಗೆ 25 ರೂಪಾಯಿ ಇದೆ ಇದರ ಸಾಕಣೆಯನ್ನು ಮೈಸೂರಿನ ಎಂಬಿ ಏ ಪದವೀಧರ ಅದ ಸಾಗರ್ ಅರಸ್ ಅವರು ಸುಮಾರು ಹತ್ತು ವರುಷದಿಂದ ಈ ನಾಟಿ ಕೋಳಿಯ ಸಾಕಾಣಿಕೆಯಲ್ಲಿ ಯಶಸ್ಸು ಗಳಿಸಿದ್ದಾರೆ ಹಾಗೂ ವರ್ಷಕ್ಕೆ ಒಂದು ವರೆ ಕೋಟಿಯಷ್ಟು ವಹಿವಾಟು ಮಾಡುತ್ತಾರೆ ಹಾಗೂ ಮೂರುವರೆ ಲಕ್ಷ ಮರಿಗಳನ್ನು ಮಾರಾಟ ಮಾಡುತ್ತಾರೆ
ನಾಲ್ಕನೆಯದು ಸ್ವರ್ಣದರ ಕೋಳಿ ಇದರ ಎಲ್ಲ ತಳಿಯ ಹಾಗೆ ಸಾಕಾಣಿಕೆ ಮಾಡಬಹುದು ಬೆಂಗಳೂರಿನ ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯ 1989 ರಲಿ ಗಿರಿರಾಜ ಕೋಳಿ ತಳಿಯ ಬಗ್ಗೆ ಅಭಿವೃದ್ದಿ ಪಡಿಸಿತು ಹಾಗೆ 2005 ಅಲ್ಲಿ ಈ ಸ್ವರ್ಣಧರ ತಳಿಯನ್ನು ಅಭಿವೃದ್ದಿ ಪಡಿಸಿ ನೋಡಲು ನಾಟಿ ಕೋಳಿಯ ಅನುರೂಪ ಆಗಿದ್ದು ಹಾಗೂ ವರ್ಷಕ್ಕೆ 200 ಮೊಟ್ಟೆಯನ್ನು ನೀಡುತ್ತದೆ ಇದರ ಮಾಂಸವನ್ನು ಕೂಡ ಮಾರಾಟ ಮಾಡಿ ಲಾಭ ಗಳಿಸಬಹುದು ಇನ್ನೂ ಒಂದು ಮರಿ 20 ರೂಪಾಯಿ ಇನು ಮೊಟ್ಟೆ ಒಂದಕ್ಕೆ 8 ರೂಪಾಯಿ ಹಾಗೂ ಮಾಂಸವನ್ನು ಮಾರಾಟ ಮಾಡಿದರೆ ಕೆಜಿಗೆ ಸುಮಾರು 150 ರೂಪಾಯಿ ಮತ್ತು ಒಂದು ಕೋಳಿ ನಾಲ್ಕು ಕೆಜಿ ಅಷ್ಟು ತೂಕವಿರುವ ಕೋಳಿ ಇದಾಗಿದೆ ಈ ಕೋಳಿಯ ಮೊಟ್ಟೆ ಇಲ್ಲ ಮಾಂಸ ಅಲ್ಲಿ ಕೂಡ ಲಾಭ ಇನ್ನೂ ಕೋಳಿಯ ಹಿಕ್ಕೆಯ ಗೊಬ್ಬರ ರೂಪವಾಗಿ ಮಾರಾಟ ಮಾಡಬಹುದು ಇನ್ನು ತೀರ್ಥಹಳ್ಳಿಯ ಕೋಣಂದೂರು ಸಚಿನ್ ಎನ್ನವ ಯುವ ರೈತ ಹೆಚ್ಚು ಮೊಟ್ಟೆ ಇಡುವ ಯಶಸ್ಸು ಗಳಿಸಿದ್ದಾರೆ
ಕೊನೆಯ ಹಾಗೂ ಐದನೆಯ ಕೋಳಿ ಗಿರಿರಾಜ ಕೋಳಿ 1989 ರ ಅಭಿವೃದ್ದಿ ಪಡಿಸಿದ ತಳಿ ಇದಾಗಿದ್ದು ಕರ್ನಾಟಕ ಪಶುವೈದ್ಯ ವಿದ್ಯಾಲಯ ಹಾಗೂ ಮೀನುಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯ ಇದರ ಅಭಿವೃದ್ಧಿಗೆ ಆದ್ಯತೆ ಇದ್ದು ವರ್ಷಕ್ಕೆ 120 ಮೊಟ್ಟೆ ಇಡುವುದು ಹಾಗೂ ಮಾಂಸಕ್ಕೆ ಬಹುಬೇಡಿಕೆ ಇರುವ ಕೋಳಿ ಇದಾಗಿದೆ ಕಡಿಮೆ ಅವಧಿಯಲ್ಲಿ ಜಾಸ್ತಿ ಮಾಂಸವನ್ನು ನೀಡುವ ತಳಿ ಆಗಿದ್ದು ನಾಟಿ ಕೋಳಿ ಹೋಲಿಕೆ ಸ್ವಲ್ಪ ಇದ್ದು ಎಲ್ಲ ವಾತಾವರಣ ಹಾಗೂ ಯಾವುದೇ ರೋಗಕ್ಕೆ ತುತ್ತಾಗುವ ಸಾಧ್ಯತೆ ಕಡಿಮೆ ಇದೆ ಇನ್ನೂ ಕಡಿಮೆ ನಿರ್ವಹಣೆ ಅಲ್ಲಿ ಉತ್ತಮ ಇಳುವರಿ ಇನ್ನೂ ಮೂರು ತಿಂಗಳ ಅಲ್ಲಿ ನಾಲ್ಕು ಕೆಜಿ ತೂಕ ಹೊಂದಿದ್ದು ನಾಟಿ ಕೋಳಿ ಹೋಲಿಸಿದಲ್ಲಿ ಅಧಿಕ ಲಾಭ 500 ಕೊಳಿಗೆ 50000 ಖರ್ಚು ಮಾಡಿದಲ್ಲಿ ವಾಪಸ್ಸು ನಿಮಗೆ ಎರಡು ಲಕ್ಷ ಅಷ್ಟು ಆದಾಯ ನಿಮ್ಮದು ಆಗುವ ಅವಕಾಶ ಕೊಡಗಿನ ಭುವನ್ ಗೌಡ ಅವರು ಈ ತಳಿಯ ಕೋಳಿಯನ್ನು ಸಾಕಾಣಿಕೆ ಅಲ್ಲಿ ಯಶಸ್ಸು ಗಳಿಸಿದ್ದಾರೆ
ರೈತರು ಕೃಷಿ ಒಂದನ್ನೇ ನಂಬಿಕೊಂಡು ಇರಾದೆ ಹೀಗೆ ಬೇರೆ ಕಡೆ ತಿಂಗಳಿಗೆ ಆದಾಯ ಗಳಿಸುವ ಉದ್ಯಮ ಬಗ್ಗೆ ಒಲವು ತೋರಿದರೆ ಉತ್ತಮ ಮುಖ್ಯವಾಗಿ ಕೋಳಿ ಸಾಕಣೆಯಲ್ಲಿ ತಾವು ಮೊಟ್ಟೆಗೆ ಇಲ್ಲ ಮಾಂಸ ಸಾಕಾಣಿಕೆ ಮಾಡುವ ಬಗ್ಗೆ ಉತ್ತಮ ನಿರ್ಧಾರ ಹೊಂದಿ ಒಳ್ಳೆಯ ಮಾರ್ಗದರ್ಶನ ಪಡೆದಲ್ಲಿ ಉದ್ಯಮ ಅಲ್ಲಿ ಯಶಸ್ಸು ಖಂಡಿತ.