ದೇವರ ಸೃಷ್ಟಿ ಅದ್ಭುತವಾಗಿರುತ್ತದೆ ಆಶ್ಚರ್ಯವಾಗಿರುತ್ತದೆ. ಸೃಷ್ಟಿಯಲ್ಲಿರುವ ಗಿಡ, ಮರ, ಬಳ್ಳಿ ಹಾಗೂ ಅವುಗಳಿಂದ ಇರುವ ಉಪಯೋಗವನ್ನು ಕೇಳಿದರೆ ಅದ್ಭುತವೆನಿಸುತ್ತದೆ. ನಮ್ಮ ಖಾಯಿಲೆಗಳಿಗೆ ನಮ್ಮ ಸುತ್ತಮುತ್ತಲಿನ ಗಿಡಗಳಲ್ಲಿ ಪರಿಹಾರವಿದೆ. ಸಾಮಾನ್ಯವಾಗಿ ಎಲ್ಲರೂ ಕೇಳಿರಬಹುದು ಶಿವಪ್ರಿಯವಾದ ಬಿಲ್ವಪತ್ರೆಯನ್ನು ಶಿವನ ಆರಾಧನೆಗೆ ಬಳಸುವುದರೊಂದಿಗೆ ಆರೋಗ್ಯಕರ ಉಪಯೋಗದ ಬಗ್ಗೆಯೂ ಈ ಲೇಖನದಲ್ಲಿ ನೋಡೋಣ.
ಶಿವನ ಆರಾಧನೆಗೆ ಬಿಲ್ವಪತ್ರೆ ಒಳ್ಳೆಯದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಬಿಲ್ವಪತ್ರೆಯಲ್ಲಿ ವಿಶೇಷ ಶಕ್ತಿ ಇದೆ. ಮೂರು ದಳದ ಬಿಲ್ವಪತ್ರೆಯಿಂದ ಶಿವನ ಆರಾಧನೆ ಮಾಡಬೇಕು. ಮನೆಯಲ್ಲಿ ಅನಾರೋಗ್ಯ, ಮೃತ್ಯುವಿನ ಭಯ, ಆತಂಕ ಹೆಚ್ಚಾದಾಗ ಒಂದು ಪುಟ್ಟ ಶಿವಲಿಂಗವನ್ನು ಮನೆಗೆ ತಂದು ಪ್ರಾತಃ ಕಾಲ, ಶಿವ ನಮ್ಮ ಪ್ರೀತಿಗೆ ಒಲಿಯುವುದರಿಂದ ಪ್ರದೂಷ ಕಾಲದಲ್ಲಿ ಮಾಡುವ ಪೂಜೆ ಬಹಳ ವಿಶೇಷ. ಪ್ರದೂಷ ಕಾಲ ಎಂದರೆ ಸಂದ್ಯಾಕಾಲ ಪ್ರತಿದಿನ ಆ ಸಮಯದಲ್ಲಿ 178,180 ದಿನಗಳ ಕಾಲ ಮೂರು ದಳಗಳುಳ್ಳ ಬಿಲ್ವಪತ್ರೆಗಳನ್ನು 108 ಬಾರಿ ಓಂ ನಮಃ ಶಿವಾಯ ಎಂದು ಹೇಳುತ್ತಾ ಜಪ ಮಾಡಬೇಕು.
ಶಿವಾರ್ಚನೆ ಆಗಿರುವ ಮೂರು ದಳದ ಶುದ್ಧ ಸ್ಫಟಿಕ ರೂಪದಲ್ಲಿರುವ ಬಿಲ್ವಪತ್ರೆಗಳನ್ನು ತೆಗೆದು ಕಂಚಿನ ಪಾತ್ರೆ ಅಥವಾ ತಾಮ್ರದ ಪಾತ್ರೆಯಲ್ಲಿ ಮೂರು ಲೀಟರ್ ನೀರಿನಲ್ಲಿ ಹಾಕಬೇಕು, ಅದಕ್ಕೆ ಮೂರು, ನಾಲ್ಕು, ಐದು, ಆರು ಮುಖದ ಮೂರು ಮೂರು ರುದ್ರಾಕ್ಷಗಳನ್ನು ಹಾಕಬೇಕು ಜೊತೆಗೆ ಸಾಧ್ಯವಾದರೆ ಮಂದಾಟ ಯಂತ್ರವನ್ನು ಹಾಕಬೇಕು. ಬೆಳಗ್ಗೆ ನೀರು ಮತ್ತು ಎಲೆಗಳನ್ನು ಮಾತ್ರ ತೆಗೆದುಕೊಂಡು ಯಂತ್ರ ಮತ್ತು ರುದ್ರಾಕ್ಷವನ್ನು ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಬೇಕು. ನೀರು ಮತ್ತು ಬಿಲ್ವಪತ್ರೆಯ ಪಾತ್ರೆಯನ್ನು ಸಣ್ಣ ಉರಿಯಲ್ಲಿ ಕುದಿಸಿ ಆ ನೀರನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಬಿಪಿ, ಶುಗರ್ ಥೈರಾಯ್ಡ್, ನರ್ವಸ್, ಮೈಗ್ರೇನ್ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅಲ್ಲದೆ ಆ ನೀರಿನಿಂದ ಸ್ಟೀಮ್ ತೆಗೆದುಕೊಂಡರೆ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಕೊರೋನ ವೈರಸ್ ಭೀತಿಯಿದ್ದಾಗ ಈ ವಿಧಾನವನ್ನು ಅನುಸರಿಸಬಹುದು. 180 ದಿನಗಳ ಕಾಲ ನಿರಂತರವಾಗಿ ಮಾಡಬೇಕು. ಶಿವಾರ್ಚನೆಗೆ ಬಳಸಿದ ಬಿಲ್ವಪತ್ರೆಗಳನ್ನು ಒಂದು ತೆಳು ಬಟ್ಟೆಯ ಮೇಲೆ ಹಾಕಿ ಗಂಟುಹಾಕಿ ಸೂರ್ಯನ ಬೆಳಕು ಬೀಳುವಂತೆ ಆದರೆ ನೇರವಾಗಿ ಬೀಳದೆ, ನೆರಳಿನಲ್ಲಿ ಇರುವಂತೆ ಒಂದು ಕಿಟಕಿಗೆ ಕಟ್ಟಬೇಕು. ಹೀಗೆ 180 ದಿನಗಳ ನಂತರ ಎಲೆ ಒಣಗಿ ಹೋಗಿರುತ್ತದೆ ಎಲೆಗಳನ್ನು ಕುಟ್ಟಿ ಪುಡಿ ಮಾಡಿಟ್ಟುಕೊಳ್ಳಬೇಕು.
ಬೆಳಗ್ಗೆ ಎದ್ದ ತಕ್ಷಣ ಕಾಡು ಜೇನು ಇದ್ದರೆ ಒಳ್ಳೆಯದು ಅಂಗಡಿಗಳಲ್ಲಿ ಸಿಗುವ ಜೇನು ಕಲಬೆರಿಕೆ ಆಗಿರುತ್ತದೆ. ಒಂದು ಚಮಚ ಬಿಲ್ವಪತ್ರೆಯ ಪುಡಿಗೆ ಒಂದು ಚಿಟಿಕೆ ಜೇನುತುಪ್ಪವನ್ನು ಸೇರಿಸಿ ಸೇವಿಸಬೇಕು. ಹೀಗೆ ಪ್ರತಿದಿನ ನಾಲ್ಕು ಬಾರಿ ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಸೇವಿಸುವುದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಬಿಲ್ವಪತ್ರೆಯಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನೆನಪಿರಲಿ ಮೂರು ದಳದ ಬಿಲ್ವಪತ್ರೆಯನ್ನು ಮಾತ್ರ ಬಳಸಬೇಕು. ಉಪಯೋಗಕ್ಕೆ ಬಾರದ ವಿಷಯಗಳನ್ನು ಶೇರ್ ಮಾಡುವುದಕ್ಕಿಂತ ಆರೋಗ್ಯಕರ ಮಾಹಿತಿಯಿರುವ ಈ ಲೇಖನವನ್ನು ಹೆಚ್ಚು ಶೇರ್ ಮಾಡಿ.