ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಯ ಮಗಳು ಐರಾ ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಅವಳ ಬಗ್ಗೆ ಹೊಸಹೊಸ ವಿಚಾರ ತಿಳಿದುಕೊಳ್ಳಬೇಕು ಎಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ರಾಧಿಕಾ ಪಂಡಿತ್ ಕೂಡ ಐರಾ ಹಾಗೂ ಯಥರ್ವ್​ ಬಗ್ಗೆ ಅಪ್​ಡೇಟ್​ ನೀಡುತ್ತಲೇ ಇರುತ್ತಾರೆ. ವಿವಿಧ ಫೋಟೋ ಹಾಗೂ ವಿಡಿಯೋ ಪೋಸ್ಟ್​ ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ. ಈಗ ಐರಾಳ ಹೊಸ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದಾರೆ ಹಾಗೂ ಐರಾ ಮನೆಯಲ್ಲಿ ಯಾವೆಲ್ಲ ಭಾಷೆ ಮಾತನಾಡುತ್ತಾಳೆ ಎನ್ನುವುದರ ಕುರಿತಾಗಿ ರಾಧಿಕಾ ಪಂಡಿತ್ ವಿಡಿಯೋ ಹಂಚಿಕೊಂಡಿದ್ದಾರೆ.

ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿದೆ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರ ವಿಚಾರದಲ್ಲೂ ಈ ಮಾತು ಸತ್ಯ. ಅದಕ್ಕೆ ‘ರಾಕಿಂಗ್​ ಸ್ಟಾರ್​’ ಯಶ್​ ಫ್ಯಾಮಿಲಿ ಕೂಡ ಹೊರತಲ್ಲ. ರಾಧಿಕಾ ಪಂಡಿತ್​-ಯಶ್​ ದಂಪತಿಯ ಮಗಳು ಆಯ್ರಾ ಈಗ ಮೂರು ವರ್ಷದ ಕಂದ. ನಿಧಾನವಾಗಿ ಆಕೆ ಅಕ್ಷರಾಭ್ಯಾಸ ಮಾಡುತ್ತಿದ್ದಾಳೆ. ಮನೆಯಲ್ಲಿ ಆಕೆಗೆ ಕನ್ನಡ ವರ್ಣಮಾಲೆಯನ್ನು ಹೇಳಿಕೊಡಲಾಗಿದೆ. ವೀಕೆಂಡ್​ನಲ್ಲಿ ಸಿನಿಮಾದ ಯಾವುದೇ ಕೆಲಸದಲ್ಲೂ ಯಶ್​ ಭಾಗಿ ಆಗಿಲ್ಲ. ಮಗಳಿಗೆ ಅಆಇಈ ಹೇಳಿಕೊಡುವುದರಲ್ಲಿ ಅವರು ತನ್ಮಯರಾಗಿದ್ದಾರೆ.

ಆ ವಿಡಿಯೋವನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್​ ಅವರು ‘ವೀಕೆಂಡ್​ ಸ್ಪೆಷಲ್​ ಕ್ಲಾಸ್​’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ವರ್ಣಮಾಲೆಯ ಸ್ವರಗಳನ್ನು ಆಯ್ರಾ ಈಗಾಗಲೇ ಕಲಿತಿದ್ದಾಳೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಇನ್ನೇನಿದ್ದರು ಆಕೆ ವ್ಯಂಜನಗಳನ್ನು ಕಲಿಯುವುದು ಮಾತ್ರ ಬಾಕಿ. ಅದನ್ನು ಕಲಿಸಲು ಯಶ್​ ಪ್ರಯತ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ರಾಕಿಂಗ್​ ದಂಪತಿಯ ಮುದ್ದು ಮಗಳಿಗೆ ಆಟದ ಜೊತೆ ಪಾಠ ನಡೆಯುತ್ತಿದೆ.

ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿರುವ ರಾಧಿಕಾ ಪಂಡಿತ್, ಮಕ್ಕಳ ಲಾಲನೆ-ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ರಾಧಿಕಾ ಮುದ್ದು ಮಕ್ಕಳ ಕ್ಯೂಟ್ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ತಿಂಗಳ ಹಿಂದೆ ಐರಾ ಎದುರು ತಂದೆ ತಾಯಿಯ ಫೋಟೋ ಇಟ್ಟು ಅದರಲ್ಲಿ ತಂದೆ ಎಲ್ಲಿ ಎಂದು ರಾಧಿಕಾ ಪಂಡಿತ್ ಕೊಂಕಣಿ ಭಾಷೆಯಲ್ಲಿ ಕೇಳಿದ ವಿಡಿಯೋ ಒಂದು ವೈರಲ್ ಆಗಿತ್ತು ಅದಕ್ಕೆ ಸಾಕಷ್ಟು ನೆಟ್ಟಿಗರು ಕನ್ನಡ ಕಲಿಸಿ ಎಂದು ಕಾಮೆಂಟ್ ಮಾಡಿದ್ದರು.

ಇಲ್ಲಿ ತಂದೆ ಯಶ್ ಅವರ ಮಾತೃ ಭಾಷೆ ಕನ್ನಡ ಮತ್ತು ರಾಧಿಕಾ ಪಂಡಿತ್ ಅವರ ಮಾತೃ ಭಾಷೆ ಕೊಂಕಣಿ. ಆದರೆ ಈಗ ಐರಾ ತಂದೆ ತಾಯಿ ಇಬ್ಬರೂ ಮಾತೃ ಭಾಷೆ ಯಾದ ಕನ್ನಡ, ಕೊಂಕಣಿ ಜೊತೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಮಾತನಾಡಲು ಕಲಿತಿದ್ದು ರಾಧಿಕಾ ಪಂಡಿತ್ ಅವರು ಕಲಿಸಿದ್ದಾರೆ. ಈ ನಾಲ್ಕೂ ಭಾಷೆಗಳನ್ನು ಐರ ಈಗ ಮಾತನಾಡುತ್ತಾಳೆ. ಇನ್ನೂ ಮಗಳು ಐರ ಹಾಗೂ ಮಗ ಯಥರ್ವ್​ ಯಶ್​ ಆರೈಕೆಯಲ್ಲಿ ​ರಾಧಿಕಾ ಪಂಡಿತ್ ಬ್ಯುಸಿ ಆಗಿದ್ದಾರೆ.

ಸದ್ಯ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಸಂಸಾರದ ಕಡೆಗೆ ರಾಧಿಕಾ ಹೆಚ್ಚು ಗಮನ ನೀಡುತ್ತಿದ್ದಾರೆ. ಆದಷ್ಟು ಬೇಗ ಅವರು ನಟನೆಗೆ ಮರಳಲಿ ಎಂದು ಫ್ಯಾನ್ಸ್​ ಅಪೇಕ್ಷಿಸುತ್ತಿದ್ದಾರೆ. ಒಳ್ಳೆಯ ಕಥೆ ಮತ್ತು ಪಾತ್ರ ಸಿಕ್ಕರೆ ರಾಧಿಕಾ ಶೀಘ್ರವೇ ಖಂಡಿತ ಕಮ್​ಬ್ಯಾಕ್​ ಮಾಡಲಿದ್ದಾರೆ.

Leave a Reply

Your email address will not be published. Required fields are marked *