ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ, ವ್ಯಕ್ತಿತ್ವ ಹಾಗೂ ಹೋರಾಟಗಳಿಂದ ಭಿನ್ನವಾದ ವರ್ಚಸ್ಸನ್ನು ಹೊಂದಿರುವವರು ನಟ ಶಿವರಾಜ್​ಕುಮಾರ್ ಅವರು ತಮ್ಮ ಮೊದಲ ಚಿತ್ರ ‘ಆನಂದ್’ ಮೂಲಕ 1986ರಲ್ಲಿ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ನಂತರ ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಚಿತ್ರದಲ್ಲಿ ಅಭಿನಯಿಸಿದರು. ಈ ಮೂರೂ ಚಿತ್ರಗಳೂ ಶತದಿನೋತ್ಸವ ಪೂರೈಸುವುದರೊಂದಿಗೆ ಹ್ಯಾಟ್ರಿಕ್ ಹೀರೋ ಎಂದು ಅಭಿಮಾನಿಗಳಿಂದ ಬಿರುದಾಂಕಿತರಾದರು. ಈ ಮೂಲಕ ಸತತ ಮೂರು ಸಿನಿಮಾವು ಕೂಡ 100 ದಿನ ಪೂರೈಸಿದ ಹೆಗ್ಗಳಿಕೆ ಇವರಿಗೆ ಇದೆ.

ಶಿವರಾಜ್ ಕುಮಾರ್ ಅವರು ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ತುಂಬಾನೇ ಯಂಗ್ ಮತ್ತು ಎನರ್ಜಿಟಿಕ್ ನಟ ಎಂದೇ ಹೇಳಬಹುದು. ಇಲ್ಲಿಯವರೆಗೂ ಸುಮಾರು 130ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ವಯಸ್ಸು 60ರ ಸಮೀಪವಾದರೂ ಕೂಡ ಇಷ್ಟು ಯಂಗಾಗಿ ಮತ್ತು ಎನರ್ಜಿಟಿಕ್ ಆಗಿ ಅಭಿನಯ ಮಾಡುವುದನ್ನು ನೋಡಿದಂತಹ ಈಗಿನ ಯುವಪೀಳಿಗೆ ನಿಜಕ್ಕೂ ಕೂಡ ಇವರನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಇನ್ನು ಇವರ ಡ್ಯಾನ್ಸ್ ಅನ್ನು ನೋಡುತ್ತಿದ್ದರೆ ನಿಜಕ್ಕೂ ಕೂಡ ಇವರಿಗೆ 60 ವರ್ಷ ಆಗಿದೆ ಅಂತ ಹೇಳುವುದಕ್ಕೆ ಅಸಾಧ್ಯ ಅಂತಾನೆ ಹೇಳಬಹುದು ಇಪ್ಪತ್ತರ ಯುವಕರಂತೆ ಕುಣಿದು ಕುಪ್ಪಳಿಸುತ್ತಾರೆ.

ಸ್ಟೇಜ್ ಮೇಲೆ ಇವರು ಡ್ಯಾನ್ಸ್ ಮಾಡಲು ಪ್ರಾರಂಭ ಮಾಡಿದರೆ ಅಲ್ಲಿ ಇರುವಂತಹ ಎಲ್ಲರೂ ಕೂಡ ನಿಬ್ಬೆರಗಾಗಿ ಇವರನ್ನೇ ನೋಡುತ್ತಿರುತ್ತಾರೆ. ಸದ್ಯಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ಕಾರ್ಯಕ್ರಮದಲ್ಲೂ ಕೂಡ ಇವರು ಇದೀಗ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಅವರು ತಮ್ಮ ಎರಡನೇ ಮಗಳ ಕುರಿತಾಗಿ ಒಂದು ಶುಭ ಸಮಾಚಾರವನ್ನು ಹಂಚಿಕೊಂಡಿದ್ದು ಅವರು ಏನು ಹೇಳಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಎಲ್ಲರಿಂದಲೂ ಅಪ್ಪು ಎಂದೇ ಕರೆಯಲ್ಪಡುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆ ಶಿವರಾಜ್ ಕುಮಾರ್ ಅವರನ್ನು ಬಹಳನೇ ಕಾಡತೊಡಗಿದೆ. ಸಾಕಷ್ಟು ದಿನದವರೆಗೂ ಅಪ್ಪು ಅವರ ನೋವಿನಲ್ಲೇ ದಿನ ಕಳೆದರು. ಇದೀಗ ಎಲ್ಲವನ್ನೂ ಮರೆತು ಸಹಜ ಜೀವನಕ್ಕೆ ಒಗ್ಗಿಕೊಳ್ಳುತ್ತಾ ಇದ್ದಾರೆ. ಇವರ ಕುಟುಂಬದಲ್ಲಿ ಈಗಾಗಲೇ ಸಾಕಷ್ಟು ಸಾವು ನೋವುಗಳು ಕಂಡುಬಂದಿದೆ ಇವೆಲ್ಲವನ್ನೂ ಕೂಡ ಶಿವರಾಜ್ ಕುಮಾರ್ ಅವರು ಕುಟುಂಬದ ಹಿರಿಯರಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಆದರೆ ಸುಮಾರು 7 ತಿಂಗಳ ನಂತರ ಇದೀಗ ಅವರ ಕುಟುಂಬದಲ್ಲಿ ಸಂತಸದ ಸುದ್ದಿ ಹೊರ ಬಂದಿದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಿವರಾಜ್ ಕುಮಾರ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಅವರಲ್ಲಿ ಮೊದಲ ಮಗಳು ನಿರುಪಮಾ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಕಳೆದ ಐದು ವರ್ಷಗಳ ಹಿಂದೆಯಷ್ಟೇ ಅವರಿಗೆ ವಿವಾಹ ಮಾಡಲಾಯಿತು. ತದನಂತರ ಇವರ ಎರಡನೇ ಪುತ್ರಿ ನಿವೇದಿತ ಸಾಮಾನ್ಯವಾಗಿ ನೀವು ನಾವೆಲ್ಲ ಇವರನ್ನು ಚಿಕ್ಕವರಾಗಿದ್ದಾಗ ನೋಡಿರುತ್ತೇವೆ. ಶಿವರಾಜಕುಮಾರ್ ಅವರ ಅಂಡಮಾನ್ ಸಿನಿಮಾದಲ್ಲಿ ನಿವೇದಿತಾ ಅವರು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಚುಮ್ಮಿ ಎಂಬ ಹೆಸರಿನ ಮುಖಾಂತರ ತುಂಬಾನೇ ಪ್ರಸಿದ್ಧಿಯನ್ನು ಪಡೆದಿದ್ದರು. ಈ ಸಿನಿಮಾದಲ್ಲಿ ಇವರ ನಟನೆ ಮಾಡಿದ ನಂತರ ಬೇರೆ ಯಾವ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಳ್ಳಲಿಲ್ಲ ಆದರೆ ಇದೀಗ ಸಂತೋಷ ಸುದ್ದಿಯನ್ನು ನೀಡುವುದರ ಮೂಲಕ ಮತ್ತೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಶಿವರಾಜ್ ಕುಮಾರ್ ಅವರ ಎರಡನೇ ಪುತ್ರಿ ಇದೀಗ ಸಿನಿಮಾ ರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆದರೆ ಇವರು ನಾಯಕ ನಟಿಯಾಗಿ ಗುರುತಿಸಿಕೊಳ್ಳುವುದಿಲ್ಲ ಬದಲಾಗಿ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿವೇದಿತಾ ಅವರು ನಿರ್ದೇಶನದಲ್ಲಿ ಬಹಳನೇ ಆಸಕ್ತಿಯನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಹಲವಾರು ವೆಬ್ ಸಿರೀಸ್ ಗಳನ್ನು ಪ್ರಾರಂಭ ಮಾಡಿದ್ದಾರೆ. ಸದ್ಯಕ್ಕೆ ನಿವೇದಿತಾ ಅವರು e-series ಗಳನ್ನು ತೆಗೆಯುವುದರಲ್ಲಿ ತುಂಬಾನೇ ನಿರತರಾಗಿದ್ದಾರೆ.

ವಿಷಯ ಏನೆಂದರೆ ತಮ್ಮ ಮಗಳು ನಿವೇದಿತಾ ನಿರ್ಮಾಣ ಮಾಡುತ್ತಿರುವಂತಹ ವೆಬ್ ಸೀರಿಸ್ ನಲ್ಲಿ ಸ್ವತಹ ಶಿವರಾಜ್ ಕುಮಾರ್ ಸಹ ಅಭಿನಯ ಮಾಡಲಿದ್ದಾರೆ. ಕೇವಲ ಶಿವರಾಜಕುಮಾರ್ ಅವರು ಮಾತ್ರವಲ್ಲದೆ ಕನ್ನಡದ ಬಹುತೇಕ ದಿಗ್ಗಜರು ಕೂಡ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಗಳು ಮಾಡುತ್ತಿರುವಂತಹ ಈ ಹೊಸ ಪ್ರಯತ್ನಕ್ಕೆ ಶಿವರಾಜ್ ಕುಮಾರ್ ಅವರು ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ. ಈ ಮೂಲಕ ದೊಡ್ಮನೆಯಲ್ಲಿ ಇದೀಗ ಎರಡು ಸಂತಸ ಸುದ್ದಿಗಳು ಮನೆಮಾಡಿದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ವಾರವಷ್ಟೇ ರಾಘವೇಂದ್ರ ರಾಜಕುಮಾರ್ ಅವರ ದ್ವಿತೀಯ ಪುತ್ರ ಯುವರಾಜ್ ಕುಮಾರ್ ಅವರು ಹೊಂಬಾಳೆ ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಾಯಕನಟರಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಇದರ ಬೆನ್ನಲ್ಲೇ ಇದೀಗ ಶಿವಣ್ಣ ಅವರ ದ್ವಿತೀಯ ಪುತ್ರ ಕೂಡ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ದೊಡ್ಡಮನೆಯಲ್ಲಿ ಇನ್ನು ಮುಂದೆ ಸಂಭ್ರಮಗಳ ನಡೆಯುತ್ತದೆ ಅಂತ ಅನಿಸುತ್ತದೆ. ಏನೇ ಆದರೂ ಕೂಡ ನಮ್ಮ ಅಪ್ಪು ಅವರು ಈ ಸಂಭ್ರಮವನ್ನು ನೋಡಲು ನಮ್ಮ ಜೊತೆಗಿಲ್ಲ ಎಂಬುವುದೇ ಕುಟುಂಬಸ್ಥರ ಅತಿವ ನೋ’ವಾಗಿದೆ

ಅಪ್ಪು ಅವರು ನಮ್ಮ ಜೊತೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಕೂಡ ಮಾನಸಿಕವಾಗಿ ನಮ್ಮ ಜೊತೆಯಲ್ಲಿ ಇದ್ದರೆ ನಾವು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ಅವರು ನಮಗೆ ಪ್ರೋತ್ಸಾಹವನ್ನು ನೀಡುತ್ತಾರೆ ಹಾಗೂ ಅವರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಎಂದು ರಾಜ್ ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಶಿವಣ್ಣ ಅವರ ಮಗಳು ನಿರ್ದೇಶನ ಮಾಡುತ್ತಿರುವಂತಹ ವೆಬ್ ಸೀರಿಸ್ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ ಅಷ್ಟೇ. ಏನೇ ಆದರೂ ಕೂಡ ಇವರ ಹೊಸ ಪ್ರಯತ್ನಕ್ಕೆ ನಾವೆಲ್ಲರೂ ಕೂಡ ಪ್ರೋತ್ಸಾಹವನ್ನು ನೀಡೋಣ ಹಾಗೂ ಇವರ ಮಾಡುವಂತಹ ಕೆಲಸದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *