ಕೆಲಸ ಅಂತ ದಿನಾಲೂ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡವರು ಭಾನುವಾರ ಯಾವಾಗ ಬರುತೇ ಎಂದು ಕಾಯುತ್ತಾ ಇರುತ್ತೇವೆ ಅಲ್ವಾ ಒಂದು ತಿಂಗಳಿಗೆ ನಾಲ್ಕು ವಾರ ಇದ್ದು ನಾಲ್ಕು ಭಾನುವಾರ ಬರುವುದು ಸಾಮಾನ್ಯ ಇಂದಿನ ಯುವಕ ಯುವತಿಯರು ತನ್ನ ರಜಾ ದಿನವನ್ನು ಹೇಗೆಗೆ ಕಳಿಯಬೇಕು ಎಂದು ಶನಿವಾರ ಆಲೋಚನೆ ಮಾಡಲು ತೊಡಗಿದರೆ ಇನ್ನೂ ಕುಟುಂಬಸ್ಥರು ಎಲ್ಲಿ ಪ್ರಯಾಣ ಮಾಡುವುದು ಎಂದು ಯೋಚಿಸುತ್ತಾರೆ ಇನ್ನೂ ಸಣ್ಣ ಮಕ್ಕಳು ಭಾನುವಾರ ಬಂತೆಂದರೆ ಸಾಕು ಕುಣಿದು ಕುಪ್ಪಳಿಸುತ್ತಾ ತಮ್ಮ ಗೆಳೆಯರೊಂದಿಗೆ ಆಟ ಆಡುತ್ತಾರೆ ಆದರೆ ಈ ಭಾನುವಾರ ರಜಾ ದಿನವೆಂದು ಘೋಷಿಸಲು ಇದರ ಹಿಂದೆ ಸಹಸ್ರ ಕಾರ್ಮಿಕರ ಶ್ರಮ ಇದೆ ಹೇಗೆ ನಮಗೆ ಭಾನುವಾರ ರಜಾದಿನ ಘೋಷಣೆ ಮಾಡಿದರು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳೋಣ
ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರ ಆಳ್ವಿಕೆ ನಮ್ಮಲ್ಲಿ ಇತ್ತು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ ಹಾಗೆ ನೋಡಿದರೆ ಮೊದಲು ಬ್ರಿಟಿಷರು ವ್ಯಾಪಾರಕ್ಕೆ ಎಂದು ನಮ್ಮಲ್ಲಿಗೆ ಬಂದು ಕಾಲ ಕ್ರಮೇಣ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ಬ್ರಿಟಿಷ್ ಸಾಮ್ರಾಜ್ಯವನ್ನು ಕಟ್ಟಿ ಭಾರತೀಯರ ಮೇಲೆ ಆಳ್ವಿಕೆ ನಡೆಸಲು ಆರಂಭಿಸಿದರು ಇನ್ನೂ ನಮ್ಮಲ್ಲಿನ ಕಾರ್ಮಿಕರನ್ನು ದಿನಗೂಲಿ ಹಾಗೆ ದುಡಿಸಿಕೊಂಡು ಅವರು ಲಾಭ ಪಡೆಯುತ್ತ ಇದ್ದರು ಇನ್ನು ವಾರದ ಒಂದು ದಿನವೂ ರಜೆಯನ್ನು ನೀಡಲೇ ಇಲ್ಲ ಒಳ್ಳೆ ಕತ್ತೆ ತರಹ ದುಡಿಸಿಕೊಂಡು ಅವರು ನೆಮ್ಮದಿ ಜೀವನ ಸಾಗಿಸುತ್ತಿದ್ದರು
ಒಂದು ವೇಳೆ ಕೆಲಸ ಮಾಡದಿದ್ದರೆ ಶಿಕ್ಷೆಯನ್ನು ನೀಡಿ ಹಿಂಸಾತ್ಮಕವಾಗಿ ಭಾರತೀಯರನ್ನು ನಡೆಸಿಕೊಳ್ಳುವ ಕಾಯಕ ಮಾಡುತ್ತ ಇದ್ದರು ಭಾರತೀಯರೇ ನೀವು ನಾವು ಹೇಳಿದಂತೆ ಕೆಲಸ ಮಾಡಿ ನೀವು ನಮ್ಮ ಅಡಿಯಾಳು ಎಂದು ಘೋಷಿಸಿ ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುತ್ತ ಇದ್ದರು ಹಾಗೂ ಬ್ರಿಟಿಷ್ ಕಾರ್ಮಿಕರು ಭಾನುವಾರ ರಜೆ ತಗೊಂಡು ಚರ್ಚ್ ಪೂಜೆ ಮಾಡಲು ಹೋಗುತಿದ್ದರು ಆದರೆ ಭಾರತೀಯ ಕಾರ್ಮಿಕರಿಗೆ ಯಾವುದೇ ರಜೆ ಇಲ್ಲದೆ 12 ಗಂಟೆ ದುಡಿಸ್ತ ಇದ್ದರು.
ಇದಕ್ಕೆಲ್ಲ ಕೊನೆ ಯಾವಾಗ ಎಂದು ಯೋಚಿಸುತ್ತಿರುವಾಗ ನಾರಾಯಣ ಮೇಘಜಿ ಲೋಖಂಡೆ ಎನ್ನವ ಮಹಾತ್ಮರು ಮಹಾರಾಷ್ಟ್ರದ ಥನೆಯಲ್ಲಿ ಜನಿಸಿದವರು ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿ ಬಾಂಬೆಯಲ್ಲಿ ಬ್ರಿಟಿಷರು ನಡೆಸುತ್ತಿದ್ದ ಟೆಕ್ಸ್ಟೈಲ್ ಮಿಲ್ಸ್ ಅಲ್ಲಿ ಸ್ಟೋರ್ ಕೀಪರ್ ಆಗಿ ನೇಮಕಗೊಂಡರು ಇಲ್ಲಿ ಭಾರತೀಯ ಕಾರ್ಮಿಕರನ್ನು ಯಾವುದೇ ಮುಲಾಜಿಲ್ಲದೆ ದಿನ 12 ಗಂಟೆಗಳ ಕಾಲ ಯಾವುದೇ ವಿರಾಮ ನೀಡದೆ ಕೆಲಸ ಮಾಡಿಸಿಕೊಳ್ಳುವ ರೀತಿಯನ್ನು ನೋಡಿದ ಲೋಖಂದೆ ಅವರು ಬಾಂಬೆಯಲ್ಲಿ ಪ್ರಕಟವಾಗುವ ದಿನಭಂದು ಎಂಬಂತಹ ದಿನಪತ್ರಿಕೆಯಲ್ಲಿ ಕಾರ್ಮಿಕರ ಸಂಕಟದ ಬಗ್ಗೆ ಬರೆದು ಅದರ ಮೂಲಕ ಕಾರ್ಮಿಕರ ಸಂಕಟ ಬ್ರಿಟಿಷರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು ಆದರೆ ಇದರಿಂದ ಯಾವುದೇ ಪರಿಣಾಮ ಬ್ರಿಟಿಷರ ಮೇಲೆ ಬೀಳಲಿಲ್ಲ
ಕೊನೆಗೆ ಬ್ರಿಟಿಷರ ಹತ್ತಿರ ನೇರವಾಗಿ ಮಾತು ಆಡುತ್ತಾರೆ ವಾರಪೂರ್ತಿ ನೀವು ಕೆಲಸ ಮಾಡಿ ಭಾನುವಾರ ನೀವು ಚರ್ಚ್ ಪ್ರಾರ್ಥನೆ ಮಾಡಲು ಹೋಗುತಿರೋ ಹಾಗೆ ನಮಗೂ ಭಾನುವಾರ ನಮಗೆ ಖಂಡೋದ ದೇವರ ದಿನ ಹಾಗಾಗಿ ನಮ್ಗೂ ಭಾನುವಾರ ರಜೆ ನೀಡಿ ಹಾಗೂ ಪ್ರತಿ ಹದಿನೈದು ದಿನಕ್ಕೊಮ್ಮೆ ಸಂಬಳವನ್ನು ನೀಡಿಎಂದು ವಿನಂತಿಸಿ ಕೊಳ್ಳುತ್ತಾರೆ
ಇಷ್ಟೆಲ್ಲಾ ವಿನಂತಿಸಿ ಕೊಂಡರು ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ಅರಿತ ಲೋಖಂದೇ ಅವರು ಸ್ವತಃ ಒಂದು ಬೊಂಬೆ ಮಿಲ್ಸ್ ಹ್ಯಾಂಡ್ ಅಸೋಸಿಯೇಶನ್ ಎಂಬ ಚಳುವಳಿ ಸಂಘ ಹುಟ್ಟು ಹಾಕ್ತಾರೆ ಇದು ಭಾರತದ ಮೊಟ್ಟ ಮೊದಲ ಕಾರ್ಮಿಕರ ಹೋರಾಟದ ಬಗ್ಗೆ ಹುಟ್ಟಿಕೊಂಡ ಸಂಘ ಎಂಬ ಹೆಗ್ಗಳಿಕೆ ಇದೆ. ಇನ್ನು ಸುಮಾರು ಏಳು ವರ್ಷಗಳ ಕಾಲ ಕಾರ್ಮಿಕರ ಜೊತೆ ಕೊಡಿ ಹೋರಾಟವನ್ನು ಮಾಡಿ ಕೊನೆಗೆ ಬ್ರಿಟಿಷರು ಇವರ ಮನವಿಗೆ ಮಣಿದು 1890 ಜೂನ್ 10 ರಂದು ಭಾನುವಾರ ರಜಾದಿನ ಆಗಿ ಘೋಷಣೆ ಮಾಡುತ್ತಾರೆ ಆದರೆ ಇಂದು ನಾವು ಭಾನುವಾರ ಆರಾಮ ಆಗಿ ಕಾಲ ಕಳೆಯುತ್ತಿದ್ದೇವೆ ಆದರೆ ಇದರ ಹಿಂದೆ ನಡೆದ ಹೋರಾಟದ ಬಗ್ಗೆ ನೆನೆಸಿಕೊಂಡರೆ ಲೋಖಾಂದೆ ಅವರ ಹೋರಾಟಕ್ಕೆ ನಮ್ಮ ಕಡೆಯಿಂದ ದೊಡ್ಡ ಸಲಾಂ . ಹಾಗಾಗಿ ಇವರನ್ನು ಭಾರತೀಯ ಕಾರ್ಮಿಕರ ಹೋರಾಟ ಸಂಘದ ಪಿತಾಮಹ ಎಂದೇ ಕರೆಯುತ್ತಾರೆ ಇನ್ನು ಇವರನ್ನು ಗೌರವ ನೀಡುವ ಸಲುವಾಗಿ 2005 ಮೇ 3 ಭಾರತ ಸರಕಾರವು ಅಂಚೆಚೀಟಿ ಅನ್ನು ಬಿಡುಗಡೆ ಮಾಡಿದೆ.