ರಾಮ ಚಂದ್ರ ಕನ್ನಡ ಸಿನಿಮಾವನ್ನು ಯಾರು ನೋಡಿಲ್ಲ ಹೇಳಿ ರವಿಚಂದ್ರನ್ ಅವರ ಜೊತೆ ನಾಯಕಿ ಯಾಗಿ ಅಭಿನಯಿಸಿದ ನಟಿ ಮೋಹಿನಿ ಅವರ ಅಭಿನಯವನ್ನು ಮರೆಯಲು ಸಾಧ್ಯವಿಲ್ಲ. ಇವರು ಚೆನ್ನೈ ಅಲ್ಲಿ 1976 ರಲ್ಲಿ ಜನಿಸಿದರು ಇವರ ಮೂಲ ಹೆಸರು ಮಹಾಲಕ್ಷ್ಮೀ ಇವರು ಅಪ್ಪಟ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು ಶಾಸ್ತ್ರ ಪೂಜೆ ಅನುಸರಿಸಿ ಬೆಳೆದ ಹುಡುಗಿ ಇನ್ನೂ ಚಿಕ್ಕಂದಿನಿಂದಲೇ ಶಾಸ್ತ್ರೀಯ ಸಂಗೀತ ಹಾಗೂ ಶಾಸ್ತ್ರೀಯ ನೃತ್ಯದಲ್ಲಿ ಒಲವು ಮೂಡಿಸಿಕೊಂಡಿದರು ಹಾಗೂ ತಮ್ಮ 14 ವಯಸ್ಸಿನಲ್ಲೇ ಚಿತ್ರರಂಗಕ್ಕೆ 1991 ಏರೆಮನೆ ರೋಜವೆ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ
ಆಮೇಲೆ ಮಲಯಾಳಂ ಚಿತ್ರರಂಗ ಅಲ್ಲು ಅಭಿನಯಿಸಿದ್ದಾರೆ ಆಮೇಲೆ 1992 ರಾಘವೇಂದ್ರ ರಾಜಕುಮಾರ್ ಅವರ ಜೊತೆ ಕಲ್ಯಾಣ ಮಂಟಪ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಕೊನೆಗೆ ಶ್ರಿ ರಾಮ ಚಂದ್ರ ಗಡಿಬಿಡಿ ಅಳಿಯ ಲಾಲಿ ರೌಡಿ ಮುಂತಾದ ಹಲವರು ಚಿತ್ರ ಅಭಿನಯಿಸಿದ್ದಾರೆ ಹೀಗೆ ಸುಮಾರು ನೂರು ಸಿನಿಮಾದಲ್ಲಿ ನಟನೇ ಮಾಡಿದ್ದಾರೆ ಹಾಗೂ ಕನ್ನಡ ತೆಲುಗು ಹಿಂದಿ ಹಾಗೂ ಮಲಯಾಳಂ ಚಿತ್ರ ನಟನೆ ಮಾಡಿದ ಹೆಗ್ಗಳಿಕೆ ಇವರದ್ದು.
ಭರತ್ ಅವರ ಜೊತೆ 1999 ರಲ್ಲಿ ವಿವಾಹ ಆಗಿ ಅಮೆರಿಕ ವಾಷಿಂಗ್ಟನ್ ನ ಸಿಯಾಟಲ್ ಅಲ್ಲಿ ನೆಲೆಸಿದ್ದರು ಮದುವೆಯ ನಂತರ ಸಿನಿಮಾ ಜೀವನ ಕ್ಕೆ ಹಿಂತಿರುಗಿ ನೋಡಲೇ ಇಲ್ಲ ತನ್ನ ಸಾಂಸಾರಿಕ ಜೀವನದಲ್ಲಿ ಉತ್ತಮ ಗೃಹಿಣಿ ಆಗಿ ಇಬ್ಬರು ಮುದ್ದಾದ ಗಂಡು ಮಕ್ಕಳ ತಾಯಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದರು ಅನಿರುದ್ಧ ಹಾಗೂ ಅದ್ವಿಕ್ ಎನ್ನುವ ಇಬ್ಬರು ಗಂಡು ಮಕ್ಕಳು ಇದ್ದಾರೆ ಮದುವೆಯ ಹೊಸತರಲ್ಲಿ ಎಲ್ಲವೂ ಚೆಂದ ಅನ್ನುವ ಹಾಗೆ ಮೊದಲನೇ ಹೆರಿಗೆ ಸುಸೂತ್ರವಾಗಿ ನಡೆಯಿತು ಆದರೆ ಎರಡನೇ ಹೆರಿಗೆ ಅದ ಮೇಲೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡು ಯೆದ್ದೆಳಲು ಸಾಧ್ಯವಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸತ್ಯ ಅಲ್ವಾ ಪ್ರತಿಯೊಬ್ಬರ ಜೀವನದಲ್ಲು ಮರೆಯಲು ಸಾಧ್ಯವೇ ಇಲ್ಲದ ಘಟನೆ ಇರುತ್ತದೆ ಹಾಗೆಯೇ ಮೋಹಿನಿ ಅವರ ಜೀವನದಲ್ಲಿ ನಡೆದ ಸತ್ಯ ಸಂಗತಿ ಹೆರಿಗೆಯ ನಂತರ ಬೆನ್ನು ನೋವಿನ ಸಮಸ್ಯೆಯಿಂದ ಬಲುತಿದ್ದ ಎಲ್ಲ ಪೂಜೆ ಪುನಸ್ಕಾರ ಹಾಗೂ ಎಲ್ಲ ರೀತಿಯ ವ್ಯೆದ್ಯಕಿಯ ಚಿಕಿತ್ಸೆಗೆ ಸ್ಪಂದಿಸಿಲ್ಲ ಕೊನೆಗೆ ಮಲಗಿದಲ್ಲೇ ಜೀವನ ನಡೆಸುವ ಹಂತಕ್ಕೆ ಬಂದಾಗ ಕ್ರಮೇಣ ಗಂಡ ಹಾಗೂ ಅತ್ತೆಯ ಮನೆಯವರಿಂದ ನಿಂದನೆ ಅವಮಾನ ಹಾಗೂ ತುಚ್ಯ ಮಾತುಗಳಿಗೆ ಕಿವಿಯಾಗುತ್ತರೆ. ಕೊನೆಗೆ ಅವರ ಅತ್ತೆ ಇವಳು ಏನಕ್ಕೆ ಇಂದಿಗೂ ಜೊತೆ ಇರಿಸಿಕೊಂಡಿದ್ಯ ಯಾವುದಕ್ಕೂ ಪ್ರಯೋಜನ ಇಲ್ಲ ಡೈವೋರ್ಸ್ ಕೊಟ್ಟು ಇನ್ನೊಂದು ಮದುವೆ ಆಗು ಎಂದು ಹೇಳುತ್ತಾರೆ ಇದೆಲ್ಲದರಿಂದ ಬೇಸತ್ತು ಮೋಹಿನಿ ಅವರು ದ್ಯಾನದ ಮೊರೆ ಹೋಗುತ್ತಾರೆ
ಯಾರು ಒಬ್ಬರು ಕ್ರೈಸ್ತ ಸಮುದಾಯದ ಬಗ್ಗೆ ಹೇಳಿ ಅವರು ಹೇಳಿದ ಹಾಗೆ ದ್ಯಾನ ಮಾಡಿ ನಿಮ್ಮ ಕಷ್ಟ ನೋವು ನಿವಾರಣೆ ಆಗುವುದು ಎಂದು ಹೇಳಿದರು ಅದರಂತೆ ಯೇಸುವಿನ ನಾಮದಲ್ಲಿ ದ್ಯಾನ ಮಾಡಿ ಅತ್ಯಾಶ್ಚರ್ಯ ವಂತೆ ಅವರ ಬೆನ್ನು ನೋವು ಶಮನವಾಗುವುದು ಕೊನೆಗೆ 2006 ರಲ್ಲಿ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆದರೂ ಹಾಗೂ ಸೈಂಟ್ ಮೈಕೇಲ್ ಅಲ್ಲಿ ಕೌನ್ಸೆಲಿಂಗ್ನಲ್ಲಿ ಡಿಗ್ರಿ ಮಾಡಿದ್ದಾರೆ ಇನ್ನೂ ಅದೇ ಚರ್ಚ್ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಇನ್ನೂ ಚರ್ಚಿಗೆ ಬರುವ ನೊಂದ ಹಾಗೂ ಹಲವಾರು ಸಮಸ್ಯೆ ಹೊತ್ತು ತರುವ ಭಕ್ತರಿಗೆ ಸಮಾಧಾನ ಮಾಡಿ ಪರಿಹಾರ ಮಾರ್ಗ ಸೂಚಿಸುವ ಕಾರ್ಯ ಮಾಡುತ್ತಿದ್ದಾರೆ ಇನ್ನೂ ಈ ಕಾರ್ಯದಲ್ಲಿ ನಂಗೆ ತೃಪ್ತಿ ಇದೆ ಎಂದು ಹೇಳಿದ್ದು ತಮ್ಮ ಪತಿ ಭರತ್ ಕೂಡ ಅವರ ತಪ್ಪನ್ನು ಒಪ್ಪಿ ಕ್ಷಮೆ ಕೇಳಿ ಸುಂದರ ಜೀವನ್ ನಡೆಸುತ್ತಿದ್ದಾರೆ.
ಪ್ರತಿಯೊಬ್ಬ ಜೀವಿಯ ಕಷ್ಟ ಸುಖ ಎರಡನ್ನೂ ಸಮಾನವಾಗಿ ಕಂಡರೆ ಜೀವನ ಸುಖಮಯ ಬರೀ ಸುಖವೇ ತುಂಬಿದರೆ ಏನು ಲಾಭ ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಜೀವನ ನಡೆಸಿದರೆ ಸುಂದರ ಅಲ್ಲವೇ ನೋಡಲು ನಟ ನಟಿಯರು ಅವರ ಜೀವನ ಕಷ್ಟವೇ ಇಲ್ಲ ಎಂದು ಎಷ್ಟು ಜನರು ಅಂದುಕೊಂಡ ಅವರು ಜಾಸ್ತಿ ಜನ ಆದರೆ ಇಂಥವರ ಜೀವನ ಕಥೆ ಕೇಳಿದರೆ ಅವರು ಕಷ್ಟಕ್ಕೆ ಕುಗ್ಗದೆ ದೈರ್ಯದಿಂದ ಹಾಗೂ ಮನೋಸ್ಥೈರ್ಯ ಇತರರಿಗೆ ಮಾದರಿಯಾಗಿದೆ
