ನಟ ವಿ ರವಿಚಂದ್ರನ್​ ಅವರು ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. 80ರ ದಶಕ ಮುಗಿಯುವ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸತನದ ಅಲೆ ಎದ್ದಿತ್ತು. ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದವು. ಪ್ರೇಮಲೋಕ ಸಿನಿಮಾ ಮೂಲಕ ವಿ ರವಿಚಂದ್ರನ್ ವುವಕರಲ್ಲಿ ಹೊಸ ಕ್ರೇಜ್ ಸೃಷ್ಟಿಸಿದ್ದರು. ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ವೀರಾಸ್ವಾಮಿ ಅವರ ಮಗ ವಿ.ರವಿಚಂದ್ರನ್ ಅವರು.

ರವಿಚಂದ್ರನ್​ ಅವರು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಲು ಆರಂಭಿಸಿ 4 ದಶಕ ಕಳೆದಿದೆ. ಈ ಅವಧಿಯಲ್ಲಿ ಅವರು ಹಲವು ಉತ್ತಮ ಸಿನಿಮಾಗಳನ್ನು ನೀಡಿದ್ದಾರೆ. ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಸಂಪೂರ್ಣವಾಗಿ ಅವರು ನಟನೆಯಲ್ಲೇ ತೊಡಗಿಕೊಂಡಿದ್ದಾರೆ. ಕಳೆದ ವರ್ಷಾಂತ್ಯಕ್ಕೆ ತೆರೆಗೆ ಬಂದ ಅವರ ಅಭಿನಯದ ‘ದೃಶ್ಯ 2’ ಸಿನಿಮಾ ಗಮನ ಸೆಳೆಯಿತು. ಇತ್ತೀಚೆಗೆ ಅವರಿಗೆ ಗೌರವ ಡಾಕ್ಟರೇಟ್​ ಕೊಡುವ ಬಗ್ಗೆ ಘೋಷಣೆ ಆದಾಗ ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು.

ಎಲ್ಲಾ ಟಾಪ್ ಹೀರೋಯಿನ್ ಗಳನ್ನು ಕರೆತಂದು, ಸಿನಿಮಾ ಮಾಡುತ್ತಿದ್ದರು ರವಿಚಂದ್ರನ್ ಅವರು, ಕನ್ನಡ ಚಿತ್ರರಂಗದ ಶೋ ಮ್ಯಾನ್ ಎಂದೇ ಇವರನ್ನು ಕರೆಯಲಾಗುತ್ತಿತ್ತು. ಆಗಿನ ಕಾಲದಲ್ಲಿ ರವಿಚಂದ್ರನ್ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕರೆ ಸಾಕು ಎಂದು ಎಲ್ಲಾ ನಟಿಯರು ಅಂದುಕೊಳ್ಳುತ್ತಿದ್ದರು. ಒಬ್ಬ ತಂತ್ರಜ್ಞನಾಗಿ ಸಹ ಒಳ್ಳೆಯ ಹೆಸರು ಗಳಿಸಿದ್ದರು ಕ್ರೇಜಿಸ್ಟಾರ್. ಈಗಲೂ ಸಹ ರವಿಚಂದ್ರನ್ ಅವರು ನಟಿಸಿ ನಿರ್ದೇಶನ ಮಾಡುವ ಸಿನಿಮಾಗಳಿಗಾಗಿ ಸಿನಿಪ್ರಿಯರು ಕಾಯುತ್ತಾರೆ. ಈಗ ರವಿಚಂದ್ರನ್ ಅವರ ಮಕ್ಕಳು ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಮನೋರಂಜನ್ ಅವರು ಎರಡು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದು, ಮೂರನೇ ಸಿನಿಮಾ ಮುಗಿಲ್ ಪೇಟೆ ಈಗಷ್ಟೇ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ.

ನಾವೆಲ್ಲ ನೋಡಿರುವ ಹಾಗೆ ರವಿಚಂದ್ರನ್ ಅವರಲ್ಲಿ ತಮ್ಮದೆ ಆದ ಒಂದು ಸ್ಟೈಲ್ ಇದೆ, ಅವರು ಯಾವಾಗಲು ಶರ್ಟ್ ನ ಕೆಲವು ಬಟನ್ ಗಳನ್ನು ಹಾಕುವುದಿಲ್ಲ, ಇದಕ್ಕೆ ಕಾರಣ ಏನು ಎಂದು ಯಾರಿಗೂ ಗೊತ್ತಿಲ್ಲ. ಅಷ್ಟಕ್ಕೂ ಇದರ ಬಗ್ಗೆ ಸ್ವತಃ ರವಿಚಂದ್ರನ್ ಅವರೇ ಮಾತನಾಡಿದ್ದಾರೆ. ರವಿಚಂದ್ರನ್ ಅವರ ಎರಡನೇ ಮಗ ವಿಕ್ರಂ ಅವರು ತ್ರಿವಿಕ್ರಮ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಮಗನ ಸಿನಿಮಾ ವೀಕ್ಷಿಸಿದ ನಂತರ ರವಿಚಂದ್ರನ್ ಅವರು ಮೀಡಿಯಾ ಮುಂದೆ ಮಾತನಾಡಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಗಿಲ್ ಪೇಟೆ ಸಿನಿಮಾದಲ್ಲಿ ತಮ್ಮನ್ನು ಬಳಸಿಕೊಂಡಿರುವ ಬಗ್ಗೆ ರವಿಚಂದ್ರನ್ ಅವರು ಮಾತನಾಡಿದ್ದಾರೆ.

“ಅಲ್ಲಲ್ಲಿ ನನ್ನನ್ನು ಬಳಸಿಕೊಂಡಿದ್ದಾರೆ, ನನ್ನ ಪಿಕ್ಚರ್ ಮ್ಯೂಸಿಕ್ ಬಳಸಿಕೊಂಡಿದ್ದಾರೆ, ನನ್ನ ಹೆಸರು ಬಳಸಿಕೊಂಡಿದ್ದಾರೆ, ನಾನು ಶರ್ಟ್ ಬಿಚ್ಚಿಕೊಂಡಿರೋದನ್ನ ಬಳಸಿಕೊಂಡಿದ್ದಾರೆ. ಏನ್ ಮಾಡೋದು? ನನ್ನ ಮಗ ಅಲ್ವಾ, ಅದಕ್ಕೆ ಎಕ್ಸ್ಕ್ಯೂಸ್ ಅವನಿಗೆ. ಇದು ಶರ್ಟ್ ಬಿಚ್ಚಿರೋದು ಸಖತಾಗಿ ಕಾಣಸ್ಲಿ ಅಂತ ಎಲ್ಲರೂ ಅಂದುಕೊಂಡಿದ್ದಾರೆ, ಖಂಡಿತ ಅಲ್ಲ. ನನಗೆ ಅದು ಅಭ್ಯಾಸ ಅಷ್ಟೇ.” ಎಂದಿದ್ದಾರೆ ಕ್ರೇಜಿಸ್ಟಾರ್.

ಕೊನೆಯದಾಗಿ ಸಿನಿಮಾ ನೋಡಿ ಕೊನೆಗೆ ನನಗೆ ಅನ್ನಿಸಿದ್ದು ಏನಂದ್ರೆ, ಮನು ತುಂಬಾ ಇಂಪ್ರೂವ್ ಆಗಿದ್ದಾನೆ. ತುಂಬಾ ಚನ್ನಾಗಿ ಮಾಡಿದ್ದಾನೆ. ಫ್ಯುಚರ್ ನಲ್ಲಿ ಇಂಡಸ್ಟ್ರಿಯಲ್ಲಿ ನನ್ನ ಸ್ಥಾನ ತುಂಬುತ್ತಾನೆ. ಅವನು ಒಳ್ಳೆಯ ಹೀರೋ ಆಗ್ತಾನ ಸ್ಟಾರ್ ಆಗ್ತಾನ ಗೊತ್ತಿಲ್ಲ, ಒಳ್ಳೆ ನಟ ಅಂತೂ ಆಗ್ತಾನೆ. ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಜಾಗ ಅಂತೂ ಅವನಿಗೆ ಕಾಯ್ತಿದೆ ಎನ್ನುತ್ತಾರೆ ಕ್ರೇಜಿಸ್ಟಾರ್. ಮೊದಲಿಗಿಂತ ಈಗ ನೋಡಿದ್ರೆ, ಮನು ಆಕ್ಟಿಂಗ್ ಗೆ 75% ಮಾರ್ಕ್ಸ್ ಕೊಡಬಹುದು, ಆಕ್ಷನ್ ಗೆ 90% ಮಾರ್ಕ್ಸ್ ಕೊಡಬಹುದು ಎನ್ನುತ್ತಾರೆ ಕ್ರೇಜಿಸ್ಟಾರ್.

ಹೊಸಬರಿಗೆ ಕಾಮಿಡಿ ಟೈಮಿಂಗ್ ಬರೋದು ಕಷ್ಟ. ನಮಗೆ ಇದು ಗೊತ್ತಿಲ್ಲ ಅದು ಗೊತ್ತು ಅಂತ ಅನ್ನೋದಕ್ಕಿಂತ, ಎಲ್ಲಾದನ್ನು ಪ್ರಯತ್ನ ಮಾಡಬೇಕು. ಸೋಲೊದು ಗೆಲ್ಲೋದು ಆಮೇಲೆ. ನಮಗೆ ಗೊತ್ತಿಲ್ಲ ಅಂದ್ರೆ ಪ್ರಯತ್ನ ಮಾಡಬೇಕು. ಜನರು ಕಾಮಿಡಿಗೆ ಮಾತ್ರ ಅಲ್ಲ, ನಾವು ಮಾಡೋ ಸಣ್ಣ ಪುಟ್ಟ ರಿಯಾಕ್ಷನ್ ಗಳಿಗೂ ಜನ ನಗುತ್ತಾರೆ. ಸಿನಿಮಾದಲ್ಲಿ ಕಥೆ ಚೆನ್ನಾಗಿದೆ, ಮ್ಯೂಸಿಕ್ ತುಂಬಾ ಚೆನ್ನಾಗಿದೆ, ಸಿನಿಮಾಟೋಗ್ರಾಫಿ ಕಲರ್ ಫುಲ್ ಆಗಿದೆ. ಹೀರೋಯಿನ್ ಸಹ ತುಂಬಾ ಚೆನ್ನಾಗಿ ಮಾಡಿದ್ದಾಳೆ. ಎಂದು ಹೇಳಿದ್ದಾರೆ ನಟ ರವಿಚಂದ್ರನ್.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!