ಸಾಮಾನ್ಯವಾಗಿ ಸ್ನೇಹಿತರೆ ನೀವು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳನ್ನು ನೋಡಿರುತ್ತೀರಿ. ಕೆಲವೊಂದು ವಿಶೇಷ ರೀತಿಯ ವಿಚಾರಗಳು ಹಾಗೂ ಪಾಯಿಂಟ್ ಗಳಿಂದಾಗಿ ನೋಡುಗರನ್ನು ವಿಶೇಷವಾಗಿ ಗಮನ ಸೆಳೆಯುತ್ತವೆ. ಅಂತದ್ದೇ ಒಂದು ವಿಚಾರ ಹಾಗೂ ವಿಡಿಯೋದ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ.
ಬಹುತೇಕ ಎಲ್ಲಾ ಕಡೆ ಈಗ ನಿಮಗಿಲ್ಲರಿಗೂ ಗೊತ್ತಿರುವ ಹಾಗೆ ಅಕಾಲಿಕವಾಗಿ ಮಳೆ ಆಗುತ್ತಿರುವುದು ನಿಜಕ್ಕೂ ಕೂಡ ಕೆಲವು ರೈತರಿಗೆ ತಲೆನೋ’ವಿನ ಪರಿಸ್ಥಿತಿಯನ್ನು ಮಾಡಿಕೊಟ್ಟಿದೆ ಎಂದು ಹೇಳಬಹುದಾಗಿದೆ. ತಮಿಳುನಾಡಿನ ತಂಜಾವೂರಿನ ಕುಲಮಂಗಲಮ್ ಎನ್ನುವ ಗ್ರಾಮದ 70 ವರ್ಷದ ಗಣೇಶ ಎನ್ನುವ ವ್ಯಕ್ತಿ ಈಗ ಮಾಡಿರುವ ಒಂದು ಕೆಲಸ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ.
ಗಣೇಶನ ಅವರಿಗೆ ತಮ್ಮ ಸಾಕುಪ್ರಾಣಿಗಳೇ ಪಂಚಪ್ರಾಣ ಎನ್ನಬಹುದು. ಅವರು ತಮ್ಮ ಜಮೀನಿನಲ್ಲಿ ಹಸು ಕುರಿ ಕೋಳಿಗಳನ್ನು ಸಾಕುತ್ತಿದ್ದಾರೆ. ಅಕಾಲಿಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನನ್ನ ಸಾಕು ಪ್ರಾಣಿಗಳು ಮಳೆಯಲಿ ನೆನೆದುಕೊಂಡೆ ಆಹಾರವನ್ನು ಮೇಯುವ ಪರಿಸ್ಥಿತಿ ಬಂದಿದೆ ಹಾಗೂ ಅವುಗಳಿಗೆ ಚಳಿ ಆಗುತ್ತಿದೆ ಎಂಬುದು ಅವರ ಮನಸ್ಸಿಗೆ ಸಾಕಷ್ಟು ಕಾಡುವ ವಿಚಾರವಾಗಿತ್ತು. ಅದರಲ್ಲಿಯೂ ವಿಶೇಷವಾಗಿ ಅವರು ಸಾಗುತ್ತಿದ್ದ ಮೇಕೆಗಳು ಚಳಿಯಿಂದ ನಡುಗುತ್ತಿದ್ದದ್ದು ಅವರ ಕಣ್ಣಿಗೆ ಕಂಡು ಬಂದಿತ್ತು.
ಇದಕ್ಕಾಗಿ ತಮ್ಮ ಬಳಿ ಇದ್ದಂತಹ ಅಕ್ಕಿ ಚೀಲಗಳನ್ನು ರೈನ್ ಕೋಟ್ ಮಾದರಿಯಲ್ಲಿ ಸಿದ್ದಪಡಿಸಿ ಅವುಗಳನ್ನು ತಮ್ಮ ಮೇಕೆಗಳಿಗೆ ಮಳೆಯಲ್ಲಿ ನೆನೆದು ಚಳಿಯಾಗದಂತೆ ಹಾಕುತ್ತಾರೆ. ಮೊದಮೊದಲಿಗೆ ಗಣೇಶನ್ ಅವರು ತಮ್ಮ ಮೇಕೆಗಳಿಗೆ ಮಾಡಿರುವ ಈ ರೈನ್ ಕೋಟ್ ಅನ್ನು ನೋಡಿರುವ ಗ್ರಾಮಸ್ಥರು ಹಾಸ್ಯಸ್ಪದವಾಗಿ ಆಡಿಕೊಂಡಿದ್ದಾರೆ. ನಂತರ ಪ್ರಾಣಿಗಳ ಮೇಲಿನ ಗಣೇಶನ್ ಅವರ ಪ್ರೀತಿಯನ್ನು ನೆನೆದು ಅವರನ್ನು ಮನಃಸ್ಪೂರ್ತಿಯಾಗಿ ಹೊಗಳಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.