ಸಿಲಿಕಾನ್ ಸಿಟಿ ಅಲ್ಲಿ ವರುಣ ರಾಯನ ಆರ್ಭಟ ಜಾಸ್ತಿ ಆಗಿದ್ದು ಇದರಿಂದ ಹಲವಾರು ಜನರ ಜೀವನ ಅಸ್ತವ್ಯಸ್ತವಾಗಿ ಹಲವಾರು ನಷ್ಟ ಅನುಭವಿಸಿದ್ದಾರೆ ಮೊನ್ನೆ ಬಿದ್ದ ಮಳೆಯಿಂದ ಕಾಮಕ್ಯ ಲೇಔಟ್ ಅಲ್ಲಿ ನಡೆದ ಘಟನೆ ಎಲ್ಲರ ಮನಕಲುಕುವಂತೆ ಮಾಡಿದೆ ಜನರು ತಮ್ಮ ಬಿಡುವಿಲ್ಲದ ಜೀವನದಲ್ಲಿ ಬೆಳಿಗ್ಗೆಯಿಂದ ಕಷ್ಟ ಪಟ್ಟು ಸಂಜೆ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಾರೆ
ಆದರೆ ಈ ನಡುವೆ ವರುಣನ ಆರ್ಭಟದಿಂದ ಜನರ ಜೀವನ ಕಷ್ಟವಾಗಿದೆ ಕೆಜಿಎಫ್ ಸಿನಿಮಾ ನೋಡಿಕೊಂಡು ಮನೆಗೆ ಹೊರಡುವ ಸಮಯದಲ್ಲಿ ಒಳ ಚರಂಡಿ ಹರಿವು ಜಾಸ್ತಿ ಆದ ಪರಿಣಾಮ ಸಿನಿಮಾ ನೋಡಲು ಬಂದವರ ಕಾರು ಒಂದು ಪೂರ್ತಿ ಜಖಂ ಆಗಿದ್ದು ಬೈಕ್ ಮೇಲೆ ಬಿದ್ದಿದೆ ಕಾರಿನ ಮಾಲೀಕನ ಅಕ್ಕ ಮಾದ್ಯಮ ಒಂದರಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ
ತಾವು ಬಡ ಕುಟುಂಬದಿಂದ ಬಂದಿದ್ದು ನನ್ನ ತಮ್ಮನು ದಿನ ದುಡಿದರೆ ಮಾತ್ರ ದಿನ ಊಟ ಮಾಡಲು ಸಾದ್ಯ ಹಾಗೂ ತಿಂಗಳ ಇ ಎಂ ಐ ಕಟ್ಟಲು ಸಾದ್ಯ ಇವಾಗ ಈ ಪರಿಸ್ಥಿತಿಗೆ ಯಾರು ಹೊಣೆ ಯಾರು ನಮ್ಮ ಕಷ್ಟಕ್ಕೆ ಸಹಾಯ ಮಾಡುತ್ತಾರೆ ಎಂದು ಅಳುತಿದ್ದರು ತನ್ನ ತಂದೆಯು ದುಡಿಯುತ್ತಾ ಇಲ್ಲ ಹೇಗೆ ಜೀವನ ನಿರ್ವಣೆ ಎಂದು ಪ್ರಶ್ನಿಸಿದ್ದಾರೆ ಯಾಕಾದ್ರೂ ನಾನು ಬಲವಂತ ಮಾಡಿ ಅಮ್ಮನ ಹುಟ್ಟು ಹಬ್ಬ ಅಂತ ಸಿನಿಮಾ ತೋರಿಸಲು ಬಂದೆ ಎಂದು ನೋವನ್ನು ಹೇಳಿಕೊಂಡಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಇದು ಸಾಮಾನ್ಯ ಘಟನೆ ಹೆಚ್ಚಿನ ಜನರು ತಗ್ಗಾದ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿದ್ದು ಇದರಿಂದ ಒಳ ಚರಂಡಿ ಹರಿವು ಜಾಸ್ತಿ ಹಾಗೆಯೇ ರಸ್ತೆಯಲ್ಲಿ ಬಿದ್ದ ನೀರು ಬೇರೆಲ್ಲೂ ಹೋಗಲು ಜಾಗವಿಲ್ಲದೆ ಮನೆಗಳಿಗೆ ನುಗ್ಗುತ್ತದೆ ಸದ್ಯ ಇದರ ಬಗ್ಗೆ ನಮ್ಮ ಬಿಬಿಎಂಪಿ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ಅವರ ಕಷ್ಟಕ್ಕೆ ಪರಿಹಾರ ನೀಡಬೇಕು