ಈ ಜ್ಯೂಸ್ ಸೇವನೆಯಿಂದ ಮತ್ತೆ ಯಾವತ್ತೂ ಕಿಡ್ನಿ ಸಮಸ್ಯೆ ಬರೋಲ್ಲ

0 11

ನಮ್ಮ ದೇಹದ ಆಂತರಿಕ ಭಾಗಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ದೇಹದ ಭಾಗವಾದ ಕಿಡ್ನಿ ಒಂದು ಪ್ರಮುಖ ಭಾಗವಾಗಿದೆ. ಕಿಡ್ನಿಯ ಆರೋಗ್ಯವನ್ನು ಕಾಪಾಡಲು, ಕಿಡ್ನಿಯ ಶುದ್ಧಮಾಡಲು ಒಂದು ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಆರೋಗ್ಯಕರ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗಾದರೆ ಜ್ಯೂಸ್ ಹೇಗೆ ತಯಾರಿಸಲಾಗುತ್ತದೆ ಹಾಗೂ ಅದರ ಪ್ರಯೋಜನದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಕೆಲವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗೆ ಮನೆಯ ಅಡುಗೆಮನೆಯಲ್ಲಿಯೆ ಪರಿಹಾರವಿದೆ ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಮ್ಮ ದೇಹದ ಪ್ರಮುಖ ಅಂಗವಾದ ಕಿಡ್ನಿಯ ಶುದ್ಧೀಕರಣ ಮಾಡಲು ಒಂದು ಜ್ಯೂಸ್ ಅನ್ನು ತಯಾರಿಸಿ ಕುಡಿಯುವುದರಿಂದ ಕಿಡ್ನಿಯ ಯಾವುದೆ ಸಮಸ್ಯೆ ನಿವಾರಣೆಯಾಗುತ್ತದೆ. ಈ ಜ್ಯೂಸ್ ಕುಡಿಯುವುದರಿಂದ ನಮ್ಮ ಕಿಡ್ನಿಯನ್ನು ಶುದ್ಧಿ ಮಾಡುತ್ತದೆ. ಮೂತ್ರಪಿಂಡದ ಶುದ್ಧಿಗೊಳಿಸಲು ಕುಡಿಯುವ ಜ್ಯೂಸ್ ತಯಾರಿಸಲು ಮನೆಯಲ್ಲಿಯೆ ಸಿಗುವ ಕೆಲವು ಸಾಮಗ್ರಿಗಳು ಅವಶ್ಯಕ. ಅವುಗಳೆಂದರೆ ನಿಂಬೆಹಣ್ಣು, ಕೊತ್ತಂಬರಿ ಸೊಪ್ಪು, ನೀರು ಹಾಗೂ ಜೇನುತುಪ್ಪ.

ಮಾಡುವ ವಿಧಾನ ಮೊದಲಿಗೆ ಒಂದು ನಿಂಬೆ ಹಣ್ಣನ್ನು ಕಟ್ ಮಾಡಿ ರಸವನ್ನು ತೆಗೆದಿಟ್ಟುಕೊಳ್ಳಬೇಕು. ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸೋಸಿ ಕಟ್ ಮಾಡಿಕೊಳ್ಳಬೇಕು. ಕೊತ್ತಂಬರಿ ಸೊಪ್ಪು ಕಿಡ್ನಿ ತನ್ನ ಕಾರ್ಯವನ್ನು ಸುಗಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಅಲ್ಲದೆ ಮೂತ್ರಪಿಂಡದಲ್ಲಿ ಸೋಂಕು ಕಾಣಿಸಿಕೊಂಡರೆ ಅದಕ್ಕೂ ಕೊತ್ತಂಬರಿ ಸೊಪ್ಪು ಸಹಾಯ ಮಾಡುತ್ತದೆ. ಕಿಡ್ನಿಯಲ್ಲಿ ವಿಷ ಪದಾರ್ಥ ಶೇಖರಣೆ ಆಗಿದ್ದರೆ ಅದನ್ನು ಹೊರಹಾಕಲು ಕೊತ್ತಂಬರಿ ಸೊಪ್ಪು ಸಹಾಯಕಾರಿಯಾಗಿದೆ. ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಮ್ಲ ಹೆಚ್ಚಾಗಿ ಇದೆ ಇದರಿಂದ ಕಿಡ್ನಿಯಲ್ಲಿ ಕಲ್ಲಿನ ರಚನೆ ಉಂಟಾಗುವುದನ್ನು ಕಡಿಮೆ ಮಾಡುತ್ತದೆ.

ಕಟ್ ಮಾಡಿಕೊಂಡ ಕೊತ್ತಂಬರಿ ಸೊಪ್ಪು, ನಿಂಬೆ ರಸ ಹಾಕಿ ಅದಕ್ಕೆ ಅರ್ಧ ಲೋಟ ನೀರನ್ನು ಹಾಕಿ ಮಿಕ್ಸಿ ಮಾಡಿಕೊಂಡು ಒಂದು ಬೌಲ್ ಗೆ ಸೋಸಿಕೊಳ್ಳಬೇಕು. ನಂತರ ಅದಕ್ಕೆ ಎರಡು ಸ್ಪೂನ್ ಜೇನುತುಪ್ಪ ಹಾಕಿ ಮಿಕ್ಸ್ ಮಾಡಬೇಕು. ಜೇನುತುಪ್ಪ ಸೇವಿಸುವುದರಿಂದ ಕಿಡ್ನಿಯಲ್ಲಿ ಗಾಯಗಳಾಗಿದ್ದರೆ ಅಥವಾ ಹಾನಿಯಾದರೆ ಅದನ್ನು ಗುಣಪಡಿಸಲು ಜೇನುತುಪ್ಪ ಸಹಾಯ ಮಾಡುತ್ತದೆ ಅಲ್ಲದೆ ಜೇನುತುಪ್ಪ ಒತ್ತಡವನ್ನು ಕಡಿಮೆ ಮಾಡುತ್ತದೆ.

ಹೀಗೆ ಮಾಡುವುದರಿಂದ ಮೂತ್ರಪಿಂಡದ ಶುದ್ಧೀಕರಣಕ್ಕೆ ಕುಡಿಯುವ ಜ್ಯೂಸ್ ರೆಡಿಯಾಗುತ್ತದೆ. ಈ ಜ್ಯೂಸ್ ಅನ್ನು ವಾರಕ್ಕೆ ಒಂದು ಬಾರಿ ಕುಡಿಯಬೇಕು. ಈ ಜ್ಯೂಸ್ ಕುಡಿಯುವುದರಿಂದ ಯಾವುದೆ ಅಡ್ಡ ಪರಿಣಾಮ ಆಗುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ

Leave A Reply

Your email address will not be published.