ಐಸ್ ಕ್ರೀಮ್ ಯಾರಿಗೆ ಇಷ್ಟವಾಗಲ್ಲ ಹೇಳಿ? ಇಷ್ಟವಾದ ರುಚಿಯ ಐಸ್ ಕ್ರೀಮ್ ಬಾಯಿಗಿಟ್ಟ ತಕ್ಷಣ ಒಂದು ಕ್ಷಣ ನಮ್ಮನ್ನೇ ಮರೆತು ಬಿಡುತ್ತೇವೆ. ಆದರೆ ಐಸ್ ಕ್ರೀಮ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಹಿಂದೆ ಮುಂದೆ ನೋಡುತ್ತೇವೆ. ತೆಳ್ಳಗಿನ ಮೈಕಟ್ಟು ಬಯಸುವವರಂತೂ ಅದನ್ನು ತಿನ್ನಬೇಕೆಂದು ಅನಿಸುತ್ತಿದ್ದರೂ ಐಸ್ ಕ್ರೀಮ್ ತಿನ್ನುವುದರಿಂದ ದೂರ ಇರಲು ಪ್ರಯತ್ನಿಸುತ್ತಾರೆ. ಚಿಕ್ಕ ಮಕ್ಕಳಂತೂ ಐಸ್ ಕ್ರೀಮ್ ಅಂಗಡಿ ಅಥವಾ ಗಾಡಿ ಕಂಡರೆ ಸಾಕು ಪೋಷಕರೂ ಕೊಡಿಸ್ದಿದ್ದರೆ ಅತ್ತು ಕರೆದು ರಂಪ ಮಾಡಿ ಬಿಡುತ್ತಾರೆ. ಇತ್ತ ಪೋಷಕರಿಗೆ ಇದನ್ನು ತಿಂದರೆ ಎಲ್ಲಿ ಕಾಯಿಲೆ ಬೀಳುತ್ತಾರೋ ಎಂಬ ಭಯ.

ವಾಸ್ತವವಾಗಿ ವಿವಿಧ ಸ್ವಾದಗಳಲ್ಲಿ ಬರುವ ಐಸ್ ಕ್ರೀಂ ನಿಮ್ಮ ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಐಸ್ ಕ್ರೀಂ ಒಂದು ಡೈರಿ ಉತ್ಪನ್ನವಾದ್ದರಿಂದ ಇದರಲ್ಲಿ ಅನೇಕ ಪೋಷಕಾಂಶಗಳಿರುತ್ತವೆ. ಐಸ್ ಕ್ರೀಂ ಸೇವಿಸುವ ಮೂಲಕ ನಿಮ್ಮ ದೇಹವು ಆರೋಗ್ಯಕರವಾಗುತ್ತದೆ. ಸಾಕಷ್ಟು ವಿಟಮಿನ್ಗಳು ಮತ್ತು ಪ್ರೋಟೀನ್ಗಳು ಸಹ ಇವೆ.

ಐಸ್ ಕ್ರೀಂ ಸೇವನೆ ನಿಮಗೆ ಪ್ರಯೋಜನವನ್ನು ಮಾತ್ರ ನೀಡುವುದಿಲ್ಲ, ಅದು ನಿಮ್ಮ ದೇಹಕ್ಕೆ ಹಲವು ರೀತಿಯ ತೊಂದರೆಯನ್ನು ಕೂಡಾ ಉಂಟುಮಾಡುತ್ತದೆ. ಐಸ್ ಕ್ರೀಂ ನಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಅಂತಹ ಸಂದರ್ಭದಲ್ಲಿ, ನೀವು ಅದನ್ನು ಹೆಚ್ಚು ಸೇವಿಸಿದರೆ ಸ್ಥೂಲಕಾಯತೆಯ ಅಪಾಯ ಉಂಟಾಗುತ್ತದೆ.

ಬೆಣ್ಣೆ ಮತ್ತು ಚಾಕೋಲೇಟ್ನಿಂದ ಮಾಡಿದ ಐಸ್ ಕ್ರೀಂ ನಲ್ಲಿ ಸಹ ಕ್ಯಾಲೋರಿ ಹೆಚ್ಚಾಗಿದೆ ಇದು ದೇಹಕ್ಕೆ ಹಾನಿಕಾರಕವಾಗಿದೆ. ಹೆಚ್ಚು ಐಸ್ ಕ್ರೀಂ ಸೇವನೆ ತಲೆನೋವು, ಆಹಾರ ವಿಷಕಾರಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಅದನ್ನು ತಿನ್ನುವ ಮೊದಲು ಐಸ್ ಕ್ರೀಂನ ಗುಣಮಟ್ಟವನ್ನು ಪರೀಕ್ಷಿಸಬೇಕು.ಅತಿಯಾದರೆ ಅಮೃತವೂ ವಿಷ ಎಂಬಂತೆ ಯಾವುದನ್ನೇ ಆದರೂ ಹಿತ-ಮಿತವಾಗಿ ಬಳಸಿದರೆ ಮಾತ್ರ ಅದರಿಂದ ಪ್ರಯೋಜನ ಪಡೆಯಬಹುದು.

ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ ಉಂಟಾದಾಗ ನಾಲಿಗೆಯಲ್ಲಿ ಮತ್ತು ತುಟಿಗಳಲ್ಲಿ ಸಣ್ಣ ಸಣ್ಣ ಬಿಳಿ ಬಣ್ಣದ ಗುಳ್ಳೆಗಳು ಮೂಡಿಬರುತ್ತವೆ. ಇಂತಹ ಸಮಯದಲ್ಲಿ ಐಸ್ ಕ್ರೀಮ್ ತಿಂದರೆ ಅವುಗಳ ನೋವಿನಿಂದ ಸ್ವಲ್ಪ ಮುಕ್ತಿ ಪಡೆಯಬಹುದು ಎನ್ನುವ ಭಾವನೆ ಹಲವರದ್ದು.ಆದರೆ ಇದೊಂದು ತಾತ್ಕಾಲಿಕ ಪರಿಹಾರ ಮಾತ್ರ. ಅತ್ಯಂತ ಪರಿಣಾಮಕಾರಿಯಾಗಿ ಈ ಸಮಸ್ಯೆಯಿಂದ ಪಾರಾಗಲು ಮತ್ತು ಮುಂಬರುವ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಗಂಭೀರವಾದ ಆರೋಗ್ಯ ಸಮಸ್ಯೆಯನ್ನು ಎದುರಿಸಲು ತಪ್ಪಿಸಿಕೊಳ್ಳಲು ವೈದ್ಯಕೀಯ ನೆರವು ಅಗತ್ಯವಾಗುತ್ತದೆ.

ನಿಮಗೆ ಚಿಕ್ಕವಯಸ್ಸಿನಿಂದ ಆಗಾಗ ಐಸ್ ಕ್ರೀಂ ತಿನ್ನುವ ಅಭ್ಯಾಸ ಬೆಳೆದುಬಂದು ಅದು ಈಗಲೂ ಸಹ ಮುಂದುವರೆದುಕೊಂಡು ಬಂದಿದ್ದರೆ, ನಿಮಗೆ ಬಹುಶಃ ವೈದ್ಯರ ನೆರವು ಅಗತ್ಯ ಎಂದು ತೋರುತ್ತದೆ. ಏಕೆಂದರೆ ಐಸ್ ಕ್ರೀಮ್ ನಲ್ಲಿ ಸಕ್ಕರೆ ಅಂಶ ಅಧಿಕವಾಗಿರುತ್ತದೆ. ಇದು ನಿಮ್ಮ ದೇಹದಲ್ಲಿ ಮಧುಮೇಹ ಸಮಸ್ಯೆ ಹೆಚ್ಚಾಗಲು ಕಾರಣ ಆಗಬಹುದು. ಮಧುಮೇಹ ಇಲ್ಲದವರಿಗೂ ಸಹ ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಕಂಡುಬರಬಹುದು. ಹಾಗಾಗಿ ಆರೋಗ್ಯ ತಜ್ಞರ ನೆರವು ನಿಮಗೆ ಈ ಸಮಯದಲ್ಲಿ ಅತ್ಯಂತ ಅವಶ್ಯಕವಾಗಿ ಬೇಕಾಗಿರುತ್ತದೆ.

ಅತಿಯಾದ ಐಸ್ ಕ್ರೀಮ್ ಸೇವನೆಯಿಂದ ನಮ್ಮ ದೇಹದ ಮುಖ್ಯ ಭಾಗಗಳಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ. ಮೆದುಳು, ಶ್ವಾಸಕೋಶ, ಹೃದಯ, ಕಿಡ್ನಿ ಮುಂತಾದ ಭಾಗಗಳಿಗೆ ಹಾನಿ ಉಂಟಾಗುತ್ತದೆ. ಹಾಗಾಗಿ ನಾವು ಬೇಸಿಗೆಯಲ್ಲಿ ತಂಪಿಗಾಗಿ ತಿನ್ನುವ ಐಸ್ ಕ್ರೀಮ್, ತಂಪು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಿದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಐಸ್ ಕ್ರೀಮ್ ಸೇವನೆಯ ಬದಲಾಗಿ ನಾವು ನೈಸರ್ಗಿಕವಾಗಿ ದೊರೆಯುವ ಮತ್ತು ನಮ್ಮ ದೇಹಕ್ಕೆ ಅವಶ್ಯ ಪೋಷಕಾಂಶಗಳನ್ನು ನೀಡುವ ಎಳನೀರು, ಕಲ್ಲಂಗಡಿ ಅಂತಹವುಗಳನ್ನು ತಿನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!