ಚಾಕಲೇಟ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಮಕ್ಕಳಿಗೆ ಚಾಕಲೇಟ್ ಅಂದ್ರೆ ಅಚ್ಚುಮೆಚ್ಚು, ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಮನೆಯಲ್ಲೇ ಚಾಕಲೇಟ್ ಹೇಗೆ ಮಾಡೋದು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ. ನಿಮ ಈ ಅಡುಗೆಯ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ ಇದರ ಉಪಯೋಗ ಪಡೆದುಕೊಳ್ಳಲಿ.
ಬೇಕಾಗುವ ಸಾಮಗ್ರಿಗಳು: ಮೊದಲನೆಯಾಗಿ ಅಮುಲ್ ಹಾಲಿನಪುಡಿ ೩ ಕಪ್ ನಷ್ಟು ಬೇಕಾಗುತ್ತದೆ, ಇನ್ನು ಇದರ ಜೊತೆಗೆ ಕೊಕೊ ಪುಡಿ ೧ ಕಪ್, ಸಕ್ಕರೆ ೨ ಕಪ್ ಬೆಣ್ಣೆ ಅರ್ಧ ಕಪ್. ಇಷ್ಟು ಪದಾರ್ಥಗಳನ್ನು ಬಳಸಿ ತಯಾರಿಸಬಹುದಾಗಿದೆ.
ಇನ್ನು ಚಾಕಲೇಟ್ ತಯಾರಿಸೋದು ಹೇಗೆ ಅನ್ನೋದನ್ನ ನೋಡುವುದಾರೆ ಮೊದಲನೆಯದಾಗಿ ಒಂದು ಪಾತ್ರೆಯಲ್ಲಿ ಹಾಲಿನ ಪುಡಿ ಹಾಗೂ ಚಾಕಲೇಟ್ ಪುಡಿಯನ್ನು ಬೆರೆಸಿ ನಂತರ ಒಂದು ದಪ್ಪದ ಕಡಾಯಿಯನ್ನು ಒಲೆಯ ಮೇಲಿಟ್ಟು ಸ್ವಲ್ಪ ಅದಕ್ಕೆ ನೀರು ಹಾಕಿ ಆ ನೀರು ಬಿಸಿಯಾದಾಗ ಸಕ್ಕರೆ ಹಾಕು ಚನ್ನಾಗಿ ಕಲಕಿ, ಇಷ್ಟು ಮಾಡಿದ ಮೇಲೆ ಪಾಕ ಸ್ವಲ್ಪ ಮಂದವಾಗುತ್ತಾ ಬಂದಾಗ ಬೆಣ್ಣೆ ಹಾಕಿ ನಂತರ ಚಾಕೋಲೆಟ್ ಪುಡಿ ಹಾಗೂ ಹಾಲಿನ ಪುಡಿಯ ಮಿಶ್ರಣವನ್ನು ಸೇರಿಸಿ ಕಲಸಿ ಗಟ್ಟಿಯಾಗುತ್ತಾ ಬಂದಾಗ ಕೆಳಗಿಳಿಸಿ. ಇನ್ನು ಈ ಮಿಶ್ರಣವನ್ನು ಸವರಿದ ಪಾತ್ರೆಯಲ್ಲಿ ಹಾಕಿ ಸ್ವಲ್ಪ ಸಮಯ ತಣ್ಣಗಾಗಲು ಬಿಡಿ ನಂತರ ಚಾಕುವಿನಿಂದ ಕತ್ತರಿಸಿ.