ನಮ್ಮ ಭಾರತದಲ್ಲಿ ಪ್ರತಿಭೆ ಹಾಗೂ ಕಲೆಗಳಿಗೆ ಏನು ಕಡಿಮೆ ಇಲ್ಲ ಕಸದಲ್ಲೂ ರಸ ತಗೆಯುವ ಪ್ರತಿಭೆಗಳಿದ್ದಾರೆ. ಅಂದರೆ ಕೆಲಸಕ್ಕೆ ಬಾರದೆ ಇರುವಂತ ವಸ್ತುಗಳನ್ನು ಕೆಲ್ಸಕ್ಕೆ ಬರುವ ಹಾಗೆ ಮಾಡುವವರು ಇದ್ದಾರೆ. ಅದೇ ನಿಟ್ಟಿನಲ್ಲಿ ಇಲ್ಲೊಬ್ಬರು ಮಾಡಿರುವಂತ ಸಾಧನೆ ಏನು ಅನ್ನೋದನ್ನ ಒಮ್ಮೆ ಗಮನಿಸುವುದಾದರೆ, ತೆಂಗಿನ ಗರಿಗಳನ್ನು ಬಳಸಿ ಸ್ಟ್ರಾ ತಯಾರಿಸಿದ್ದಾರೆ ಇದು ಪರಿಸರ ಸ್ನೇಹಿ ಎಂಬುದಾಗಿ ಹೇಳಲಾಗುತ್ತದೆ.
ಹೀಗಾಗಲೇ ದೇಶಾದ್ಯಂತ ಪ್ಲಾಸ್ಟಿಕ್ ನಿಷೇದ ಮಾಡುವ ನಿಟ್ಟಿನಲ್ಲಿದ್ದು ಇದು ಪರಿಸರ ಸ್ಟ್ರಾ ಆಗಿರುವುದರಿಂದ ದೇಶ ವಿದೇಶಗಳಲ್ಲಿ ಇದರ ಬೇಡಿಕೆ ಹೆಚ್ಚಾಗಿದೆ ಅನ್ನೋದನ್ನ ತಿಳಿಯಲಾಗಿದೆ. ಇನ್ನು ಇವರ ಬಗ್ಗೆ ತಿಳಿಯುವುದಾದರೆ ಇವರ ಹೆಸರು ಪ್ರೊ.ಸಜಿ ವರ್ಗೀಸ್ ಎಂಬುದಾಗಿ ವೃತ್ತಿಕ್ರೈಸ್ಟ್ ವಿವಿಯ ಇಂಗ್ಲಿಷ್ ಪ್ರೊಫೆಸರ್ ಒಮ್ಮೆ ಹೀಗೆ ತಮ್ಮ ಕಾಲೇಜ್ ಕ್ಯಾಂಪಸ್ ನಲ್ಲಿ ಇದ್ದಂತ ತೆಂಗಿನ ಗರಿಗಳು ಕೆಳಗೆ ಉದುರುತ್ತಿದ್ದಾಗ ಇದನ್ನು ಗಮನಿಸಿದ ಇವರು ಇದರಲ್ಲಿ ಸ್ಟ್ರಾ ತಯಾರಿಸುವ ಬಗ್ಗೆ ಗಮನ ಹರಿಸುತ್ತಾರೆ.
ವಿಶೇಷತೆ ಏನು ಅಂದ್ರೆ ಒಂದು ತೆಂಗಿನ ಗರಿಯ ಎಲೆಗಳಿಂದ ಸುಮಾರು 600 ಸ್ಟ್ರಾ ಗಳನ್ನೂ ತಯಾರಿಸಬಹುದು ಅಷ್ಟೇ ಅಲ್ಲದೆ ಇದನ್ನು 6 ತಿಂಗಳುಗಳ ಕಾಲ ಬಳಕೆ ಮಾಡಬಹುದು ಅನ್ನೋದನ್ನ ಹೇಳಲಾಗುತ್ತದೆ. ಇನ್ನು 3-13 ಎಂಎಂ ಡಯಾಮೀಟರ್ ಹೊಂದಿರುವ ಸ್ಟ್ರಾಗಳ ಬೆಲೆಯನ್ನು 3-10 ರೂಪಾಯಿವರೆಗೆ ನಿಗದಿಪಡಿಸಲಾಗುತ್ತದೆ.
ಇವರ ಕಾರ್ಯ ವೈಖರಿಗೆ ಮೆಚ್ಚಿ ಕ್ರೈಸ್ಟ್ ಕಾಲೇಜು ಈ ತೆಂಗಿನ ಎಲೆಗಳ ಸ್ಟ್ರಾ ತಯಾರಿಕೆಯ ಯೋಜನೆಯನ್ನು ರೂಪುಗೊಳಿಸಿದ್ದು, ಸ್ಟ್ರಾ ತಯಾರಿಕೆಗಾಗಿ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ, ಇನ್ನು ಅಮೇರಿಕ ಮಲೇಷ್ಯಾ, ಕೆನಡಾ, ಆಸ್ಟ್ರೇಲಿಯಾ, ಫಿಲಿಪೇನ್ಸ್, ಸ್ಪೇನ್, ಜರ್ಮನಿ ಸೇರಿದಂತೆ ಹಲವು ದೇಶಗಳಿಂದ ಬೇಡಿಕೆ ಬಂದಿದೆ. ಇವರು ಮಾಡಿರುವಂತ ಕೆಲಸಕ್ಕೆ ಹಲವು ಮಹಿಳೆಯರಿಗೆ ಉದ್ಯೋಗ ಸಿಕ್ಕಿದೆ ಮದುರೈ, ಕಾಸರಗೋಡು ಹಾಗೂ ಟ್ಯುಟಿಕೋರಿನ್ ಗಳ ಗ್ರಾಮಗಳಲ್ಲಿ ತೆಂಗಿನ ಎಲೆ ಸ್ಟ್ರಾ ತಯಾರಿಸುವ ಮೂರು ಯುನಿಟ್ ಗಳನ್ನು ವರ್ಗೀಸ್ ಸ್ಥಾಪಿಸಿದ್ದು ಮುಂದಿನ ದಿನಗಳಲ್ಲಿ ೫೦೦ ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ನೀಡುವ ಗುರಿಯನ್ನು ವರ್ಗಿಸ್ ಅವರು ಹೊಂದಿದ್ದಾರೆ. ಅದೇನೇ ಇರಲಿ ತೆಂಗಿನ ಗರಿಗಳ ಎಳೆಯಲ್ಲಿ ಈ ರೀತಿಯ ಸಾಧನೆ ಅಂದಿರುವಂತ ಇವರಿಗೆ ಹಾಗೂ ನಮ್ಮ ದೇಶೀಯ ವಸ್ತುವನ್ನು ವಿದೇಶದಲ್ಲಿ ಬೇಡಿಕೆ ಬರುವಂತೆ ಮಾಡಿದ ಇವರ ಕಾರ್ಯ ವೈಖರಿಗೆ ನಿಜಕ್ಕೂ ಮೆಚ್ಚಲೇ ಬೇಕು ಅಲ್ಲವೇ.