ಮೋದಿಯವರ ಜೊತೆಯಲ್ಲಿರುವ ಈ ವ್ಯಕ್ತಿಗಳ ಕೈಯಲ್ಲಿ ಯಾವಾಗಲು ಈ ಸೂಟ್ಕೇಸ್ ಇರುತ್ತೆ ಯಾಕೆ ಗೊತ್ತೇ? ಓದಿ ಇಂಟ್ರೆಸ್ಟಿಂಗ್

0 50

ಪ್ರಪಂಚದ ಭೂಪಟದಲ್ಲಿ ಭಾರತ ಎನ್ನುವ ದೇಶ ಇತ್ತು ಎನ್ನುವುದನ್ನೇ ಜನರು ಮರೆತಿರುವ ಕಾಲದಲ್ಲಿ ನಮಗೆ ವರವಾಗಿ ಸಿಕ್ಕವರೇ ನಮ್ಮ ದೇಶದ ಹೆಮ್ಮೆಯ ನೆಚ್ಚಿನ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು. ಅವರು ಪ್ರಧಾನ ಮಂತ್ರಿ ಆದ ನಂತರ ನಮ್ಮ ದೇಶದ ತಾಕತ್ತು ಬದಲಾಯಿತು ಎಂದೇ ಹೇಳಬಹುದು. ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳ ಜೀವ ರಕ್ಷಣೆಗೆ ನಿಂತವರು SPJ ಕಮಾಂಡೋಗಳು. SPJ ಅನ್ನು ಹುಟ್ಟು ಹಾಕಿದ್ದು 1988 ಜೂನ್ 2ರಲ್ಲಿ SPJ ಕಮಾಂಡೋಗಳ ಮುಖ್ಯ ಉದ್ದೇಶ ಏನು ಅಂದರೆ ನಮ್ಮ ದೇಶದ ಪ್ರಧಾನ ಮಂತ್ರಿಗಳು, ಮಾಜಿ ಪ್ರಧಾನ ಮಂತ್ರಿಗಳು ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡುವುದೇ ಇವರ ಮುಖ್ಯ ಉದ್ದೇಶ ಮತ್ತು ಗುರಿ. S P J ಗ್ರೂಪ್ ನ ಹುಟ್ಟಿಗೂ ಮೊದಲು ಈ ಕೆಲಸ ಮಾಡುತ್ತಾ ಇದ್ದವರು ಸ್ಪೆಷಲ್ ಟಾಸ್ಕ್ ಫೋರ್ಸ್ ಮತ್ತೆ S T F ಇವರು ಈ ಕೆಲಸವನ್ನ ಮಾಡುತ್ತಾ ಇದ್ದರು.

ಇವರನ್ನೆಲ್ಲ ಭಾರತ ಇಂಟಲಿಜೆನ್ಸಿ ಬ್ಯುರೋ ನೋಡಿಕೊಂಡು ನಿರ್ವಹಣೆ ಮಾಡುತ್ತಿತ್ತು. 1984 ಆಕ್ಟೊಬರ್ ನಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ ನಮ್ಮ ದೇಶದ ಪ್ರಧಾನ ಮಂತ್ರಿ ಅವರ ರಕ್ಷಣೆಗೆ ಇನ್ನು ಹೆಚ್ಚಿನ ಭದ್ರತೆ ಬೇಕು ಎಂದು ಒಂದು ಉನ್ನತ ಮಟ್ಟದ ಕಮಾಂಡೋಗಳ ಅವಶ್ಯಕತೆ ಇದೆ ಎಂದು ತಿಳಿದು ಈ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಆಗ ಇದು ಬರೀ ಪ್ರಧಾನ ಮಂತ್ರಿ ಅವರ ಜೀವ ರಕ್ಷಣೆಗೆ ಮಾತ್ರ ಸೀಮಿತವಾಗಿತ್ತು. ಆದರೆ 1999ರಲ್ಲಿ ರಾಜೀವ್ ಗಾಂಧಿ ಹತ್ಯೆ ಆದ ನಂತರ, ಭಾರತದ ಮಾಜಿ ಪ್ರಧಾನ ಮಂತ್ರಿಗಳು ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡುವುದು ಸಹ ಇವರದ್ದೇ ಜವಾಬ್ಧಾರಿ ಆಯಿತು.

ಅಂದರೆ ನಮ್ಮ ದೇಶದ ಮಾಜಿ ಪ್ರಧಾನಿಗಳಿಗೆ ಅವರು ಅಧಿಕಾರದಿಂದ ಕೆಳಗಿಳಿದು 10 ವರ್ಷಗಳವರೆಗೂ ಮಾತ್ರ ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದವರಿಗೆ ರಕ್ಷಣೆ ನೀಡುತ್ತಾರೆ. 10 ವರ್ಷಗಳ ನಂತರ ಈ ಸೌಲಭ್ಯ ಇರುವುದಿಲ್ಲ. S P J ಕಮಾಂಡೋ ಆಗಿ ಆಯ್ಕೆ ಆಗುವವರು I P S , B S F, C I S F, CRPF ನ ಕೆಲವು ಸೀನಿಯರ್ ಜೂನಿಯರ್ ಆಫೀಸರ್ ಗಳನ್ನ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. S P J ಕಮಾಂಡೋಗಳಾಗಿ ಕೇವಲ ನಮ್ಮ ದೇಶದವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿದೇಶಿಗರಿಗೆ ಅವಕಾಶ ನೀಡುವುದಿಲ್ಲ. ಮತ್ತೆ 35 ವರ್ಷ ಮೇಲ್ಪಟ್ಟವರಿಗೆ SPJ ಕಮಾಂಡೋಗಳಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ. ಇವರ ಆಯ್ಕೆ ಪ್ರಕ್ರಿಯೆ ಇಂಟರ್ವ್ಯೂ ಮೂಲಕ, ದೈಹಿಕ ತಪಾಸಣೆ ಹಾಗೂ ಸೈಕಾಲಜಿ ತಪಾಸಣೆ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇವರಿಗೆ ಒಟ್ಟು ಮೂರು ತಿಂಗಳ ಕಾಲ ಟ್ರೈನಿಂಗ್ ಕೊಡಲಾಗುತ್ತದೆ. ಆ ಟ್ರೈನಿಂಗಿನಲ್ಲಿ ಫೇಲ್ ಆದರೆ ಮತ್ತೆ ಅರ್ಜಿ ಸಲ್ಲಿಸಿ ಮತ್ತೆ ಮೂರು ತಿಂಗಳು ಕಾಲ ಟ್ರೈನಿಂಗ್ ನೀಡಲಾಗುವುದು. ಮತ್ತೆ ಅದರಲ್ಲೂ ಫೇಲ್ ಆದರೆ ಅವರ ಹಳೆಯ ಕೆಲಸಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಈ ಸಂಸ್ಥೆಯನ್ನು ಹುಟ್ಟು ಹಾಕಿದ ನಂತರ ನಮ್ಮ ದೇಶದ ಪ್ರಧಾನ ಮಂತ್ರಿಗಳಿಗೆ ಯಾವುದೇ ತೊಂದರೆ ಆಗದಂತೆ ರಕ್ಷಣೆ ನೀಡುತ್ತಾರೆ. ಅವರ ಕೈಯಲ್ಲಿ ಸೂಟ್ಕೇಸ್ ಮಾದರಿಯ ಒಂದು ಬ್ಯಾಗ್ ಸದಾಕಾಲ ಇರತ್ತೆ. ಅದನ್ನು ಏನು ಅಂತ ಕೇಳುವುದಾದರೆ ಅದು ಬ್ಯಾಗ್ ಅಥವಾ ಸೂಟ್ಕೇಸ್ ಅಲ್ಲ. ಅದನ್ನ ಅಣು ಬಟನ್ ಎಂದು ಕರೆಯುತ್ತಾರೆ. ಪ್ರಧಾನ ಮಂತ್ರಿಗಳ ಮೇಲೆ ಯಾರಾದರೂ ಆಕ್ರಮಣ ಮಾಡಿದರೆ ಆಗ ಅವರು ಪ್ರಧಾನ ಮಂತ್ರಿಗಳಿಗೆ ಅದನ್ನ ಅಡ್ಡವಾಗಿ ಹಿಡಿಯುತ್ತಾರೆ. ಅದರಿಂದ ಪ್ರಧಾನ ಮಂತ್ರಿಗಳಿಗೆ ಯಾರಾದರೂ ಗುಂಡು ಹಾರಿಸಿದರೆ ಅದು ಬುಲ್ಲೆಟ್ ಪ್ರೂಫ್ ಆಯಾಗಿರುವುದರಿಂದ ಯಾವುದೇ ರೀತಿ ಅಪಾಯ ಆಗುವುದಿಲ್ಲ ಹಾಗೆ ಬೆಂಕಿ ಕೂಡಾ ತಾಗುವುದಿಲ್ಲ.

ಇದು ನೋಡೋಕೆ ಸಾಧಾರಣ ಒಂದು ಬ್ಯಾಗ್ ತರ ಕಂಡರೂ ಸಹ ಇದರ ಕೆಲಸ ದೊಡ್ಡದೇ. ಸಡನ್ ಆಗಿ ಏನಾದರೂ ದುರ್ಘಟನೆ ನಡೆದಾಗ ಮಾತ್ರ ಈ ಒಂದು ಬ್ಯಾಗ್ ಅನ್ನು ಬಳಸುತ್ತಾರೆ. ಈ ಕಮಾಂಡೋಗಳು ತಮ್ಮ ಪ್ರಾಣವನ್ನು ಒತ್ತೆಯಾಗಿ ಇಟ್ಟು ಪ್ರಧಾನ ಮಂತ್ರಿಗಳ ಪ್ರಾಣ ರಕ್ಷಣೆ ಮಾಡಿ SPJ ಗ್ರೂಪ್ ನ ಗೌರವ ಕಾಪಾಡುವುದು ಇವರ ಜವಾಬ್ಧಾರಿ ಆಗಿರುತ್ತದೆ. SPJ ಕಮಾಂಡೋಗಳು ಎಲ್ಲೇ ಹೋದರೂ ಸಹ ಈ ಒಂದು ಬ್ಯಾಗ್ ಅನ್ನು ತೆಗೆದುಕೊಂಡು ಹೋಗುತ್ತಾರೆ. ಇವಿಷ್ಟು SPJ ಕಮಾಂಡೋಗಳ ಕುರಿತಾತ ಹಾಗೂ ನಮ್ಮ ದೇಶದ ಪ್ರಧಾನ ಮಂತ್ರಿಗಳ ರಕ್ಷಣಾ ವ್ಯವಸ್ಥೆಯ ಕುರಿತಾದ ಪುಟ್ಟ ಮಾಹಿತಿ.

Leave A Reply

Your email address will not be published.