ದೈಹಿಕ ಆರೋಗ್ಯದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇವೆ ಹಾಗೇ ಮಾನಸಿಕ ಆರೋಗ್ಯದ ಬಗ್ಗೆ ಈ ಲೇಖನದ ಮೂಲಕ ಓದಿ ತಿಳಿದುಕೊಳ್ಳೋಣ. ಮಾನಸಿಕ ಆರೋಗ್ಯದಲ್ಲಿ ಬಹಳ ಮುಖ್ಯವಾಗಿ ಯೋಚನೆ / thought ಚಿಂತೆ. ವಿಚಾರ ಹೇಗೆ ಮಾಡುತ್ತೇವೆ? ಅನ್ನೋದರ ಮೇಲೆ ವಿಚಾರಗಳು ಸೃಷ್ಟಿ ಆಗುತ್ತವೆ. ವಿಜ್ಞಾನಿಗಳು ವಿಮಾನವನ್ನು ತಯಾರಿ ಮಾಡುವಾಗ ಮೊದಲು ವಿಮಾನ ಆಕಾಶದಲ್ಲಿ ಹೇಗೆ ಹಾರಾಡುತ್ತದೆ ಅದು ಪಕ್ಷಿಗಳ ಹಾಗೆಯೇ ಹಾರಡಬೇಕು ಎಂದು ಮೊದಲು ಯೋಚನೆ ಮಾಡಿರುತ್ತಾರೆ. ನಂತರ ವಿಮಾನವಾಗಿ ಮಾರಪಾಡು ಹೊಂದುತ್ತದೆ ಆ ನಿಟ್ಟಿನಲ್ಲಿ ವಿಜ್ಞಾನಿಗಳು ಯೋಚನೆ ಮಾಡಿ ಕೆಲ್ಸ ಮಾಡ್ತಾರೆ. ಇದೇ ರೀತಿ ವಿಚಾರ ಮಾಡಿ ಅದನ್ನ ಕಾರ್ಯ ರೂಪಕ್ಕೆ ತಂದಾಗ ಮಾತ್ರ ಗೆಲುವು ಕಾಣಬಹುದು. ಹಾಗಾಗಿ “thought becomes thinks” ಇದು ನಮ್ಮ ಆರೋಗ್ಯಕ್ಕೆ ಹೇಗೆ ಅನ್ವಯ ಆಗುತ್ತದೆ?
ನಾನು ಆರೋಗ್ಯವಾಗಿ ಇದ್ದೇನೆ ಎಂದುಕೊಂಡರೆ ಆರೋಗ್ಯವಾಗಿ ಇರುತ್ತೇವೆ. ಇಲ್ಲ ನನಗೆ ಏನೋ ಸಮಸ್ಯೆ ಇದೆ ಎನೋ ಸರಿ ಇಲ್ಲ ಏನೋ ತೊಂದರೆ ಇದೆ ಎಂದು ಆ ನಿಟ್ಟಿನಲ್ಲಿ ಯೋಚನೆ ಮಾಡಿದರೆ ಹಾಗೆ ಆಗುತ್ತದೆ. ಇಂಗ್ಲಿಷ್ ನಲ್ಲಿ ಒಂದು ವಾಕ್ಯ ಇದೆ “think before you think” ಅಂದ್ರೆ ಯೋಚನೆಯನ್ನ ಮಾಡುವ ಮೊದಲು ಒಮ್ಮೆ ಯೋಚನೆ ಮಾಡು. ಏನನ್ನ ಯೋಚನೆ ಮಾಡುತ್ತ ಇದ್ದೇನೆ ಎನ್ನುವುದನ್ನು ಮೊದಲು ಯೋಚನೆ ಮಾಡಿ ನಿರ್ಧಾರ ಮಾಡಬೇಕು.
ಹೀಗೆ ಒಂದು ಪ್ರಶ್ನೆ ಬರಬಹುದು. ವಿಚಾರ ಮಾಡಿದ ಮಾತ್ರಕ್ಕೆ ಕೆಲಸ ಮಾಡಬೇಕು ಎಂದು ಇದೆಯಾ ಎಂದು. ಇದಕ್ಕೆ ಉತ್ತರವಾಗಿ ಒಮ್ಮೆ ಒಂದು ನಿಮಿಷ ಕಣ್ಣು ಮುಚ್ಚಿಕೊಂಡು ನಿಮ್ಮ ಮನೆಯ ಸುತ್ತಲೂ ಮನೆಯ ಒಳಗೆ ಅಡುಗೆ ಮನೆ ಅಲ್ಲಿ ಫ್ರಿಡ್ಜ್, ಫ್ರಿಡ್ಜ್ ಒಳಗೆ ಇರುವ ನಿಂಬೆ ಹಣ್ಣು ಅದನ್ನ ಹೊರಗೆ ತೆಗೆದು ಚಾಕು ತೆಗೆದುಕೊಂಡು ಕಟ್ ಮಾಡಿ. ಆ ನಿಂಬೆ ಹಣ್ಣನ್ನು ತೆಗೆದು ನಾಲಿಗೆಯ ಮೇಲೆ ಹಿಂಡಿಕೊಳ್ಳಬೇಕು. ಬಾಯಲ್ಲಿ ನೀರು ಬರುತ್ತಾ ಆಗ?? ನೀವು ನಿಜವಾಗಲೂ ಆ ನಿಟ್ಟಿನಲ್ಲಿ ವಿಚಾರ ಮಾಡಿದ್ರೆ ಬಾಯಲ್ಲಿ ನೀರು ಬರುತ್ತೆ. ಕಣ್ಣು ಬಿಟ್ಟು ನೋಡಿ ನೀವು ನಿಜವಾಗಲೂ ನಿ ಬೆ ಹಣ್ಣನ್ನ ಕಟ್ ಮಾಡಿದ್ರ? ಬಾಯಲ್ಲಿ ಇಟ್ಟುಕೊಂಡಿದ್ದರ? ಇಲ್ಲ. ಇದು ಬರಿಯ ಯೋಚನೆ ಅಷ್ಟೇ. ಯೋಚನೆ ಮಾಡಿದ ಮಾತ್ರಕ್ಕೆ ಬಾಯಲ್ಲಿ ನೀರು ಬಂತು.
ಅದೇ ರೀತಿ ನಾನು ಆರೋಗ್ಯವಾಗಿ ಇದ್ದೇನೆ, ನಾನು ಸಂತೋಷವಾಗಿ ಇದ್ದೇನೆ, ಸಮೃದ್ಧವಾಗಿ, ಪ್ರಫುಲ್ಲವಾಗಿ ಹಾಗೂ ನಿರಾಳವಾಗಿ ಇದ್ದೇನೆ ಎಂದು ಅಂದುಕೊಂಡಾಗ ನಮ್ಮ ದೇಹದಲ್ಲಿ ಒಂದು ಕಲ್ಪನೆ ವಿಚಾರ ಉಂಟಾಗುತ್ತದೆ. ಹೀಗೆ ಮಾಡುವುದರಿಂದ ನಮ್ಮಲ್ಲಿ ಸಕಾರಾತ್ಮಕ ಚಿಂತನೆಗಳು ಉಂಟಾಗುತ್ತವೆ. ಉತ್ತಮ ಹಾರ್ಮೋನ್ ಗಳು ಉತ್ಪತ್ತಿ ಆಗುತ್ತವೆ. ಕೆಟ್ಟದ್ದನ್ನು ಯೋಚನೆ ಮಾಡಿದರೆ ಕೆಟ್ಟ ಹಾರ್ಮೋನುಗಳು, ಕೆಟ್ಟ ಪರಿಣಾಮಗಳೇ ಉಂಟಾಗುತ್ತವೆ ಒಳ್ಳೆಯದನ್ನ ಯೋಚನೆ ಮಾಡಿದ್ರೆ ಒಳ್ಳೆಯ ಹಾರ್ಮೋನುಗಳು ಹಾಗೂ ಒಳ್ಳೆಯ ಪರಿಣಾಮವನ್ನು ಪಡೆಯಬಹುದು.. ಹಾಗಾಗಿ think before you think. ದೇಹಕ್ಕೆ ಒಳ್ಳೆಯ ಪ್ರೊಟೀನ್ ಯುಕ್ತ ಆಹಾರ ಎಷ್ಟು ಒಳ್ಳೆಯದೋ ಹಾಗೇ ಮನಸ್ಸಿಗೆ ಒಳ್ಳೆಯ ಆಲೋಚನೆಗಳು ಅಷ್ಟೇ ಒಳ್ಳೆಯದು. ನಾವು ಮಾನಸಿಕವಾಗಿ ಆರೋಗ್ಯದಿಂದ ಇರಲು ಒಳ್ಳೆಯ ವಿಚಾರಗಳನ್ನು ಮಾಡಬೇಕು. So “think before you think”.