ಗಂಟಲು ನೋವು ಹಾಗೂ ಕೆಮ್ಮು ಬಂದಾಗ ಮನೆಮದ್ದು ಹೇಗೆ ಮಾಡೋದು ಅನ್ನೋದರ ಬಗ್ಗೆ ಈ ಲೇಖನದಲ್ಲಿ ನೋಡಿ ತಿಳಿದುಕೊಳ್ಳಿ. ಮನೆ ಮದ್ದು ಮಾಡುವ ಮೊದಲು ಈ ಎರಡು ಸಲಹೆಗಳನ್ನು ಅನುಸರಿಸಬೇಕು. ಒಂದು, ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು ಹಾಗೂ ಇನ್ನೊಂದು ಬಾಯಿ ಮುಕ್ಕಳಿಸಿದ ನಂತರ ಜೇನುತುಪ್ಪಕ್ಕೆ ಚಿಟಿಕೆ ಕಾಳು ಮೆಣಸಿನ ಪುಡಿ ಸೇರಿಸಿ ತಿನ್ನಬೇಕು. ಮೊದಲು ಶೀತಕ್ಕೆ ಮನೆಮದ್ದು ಏನು ಅಂತ ನೋಡೋಣ. ಇದಕ್ಕೆ ಎರಡು ವೀಳ್ಯದ ಎಲೆ ( ಮಕ್ಕಳಿಗೆ ಆದರೆ 1), ಕಾಳು ಮೆಣಸು2, ಇದನ್ನೂ ಸಹ ಮಕ್ಕಳಿಗೆ ಆದರೆ ಪುಡಿ ಮಾಡಿ ಕೊಡಬೇಕು. ಬೆಳ್ಳುಳ್ಳಿ 2 ಎಸಳು, ಬೆಲ್ಲ ಸ್ವಲ್ಪ, ಶುಂಠಿ ಸ್ವಲ್ಪ, ಸಣ್ಣಗೆ ಹೆಚ್ಚಿದ ಈರುಳ್ಳಿ ಸ್ವಲ್ಪ ಹಾಗೆ ಉಪ್ಪು ಕಾಲು ಟಿ ಸ್ಪೂನ್ ಅಷ್ಟು ಇವೆಲ್ಲವನ್ನು ಸೇರಿಸಿ ವೀಳ್ಯದೆಲೆಯಲ್ಲಿ ಸೇರಿಸಿ ಅದನ್ನು ಹಾಗೆ ಮಡಿಚಿ ಬಾಯಲ್ಲಿ ಇಟ್ಟುಕೊಂಡು ಅದರ ರಸವನ್ನು ನುಂಗಬೇಕು. ಹೀಗೆ ಮಾಡುವುದರಿಂದ ಗಂಟಲು ನೋವು ಹಾಗೂ ಕೆಮ್ಮಿಗೆ ಉತ್ತಮ ಪರಿಹಾರ. ಇದನ್ನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ 3 ಹೊತ್ತು ಕೂಡಾ ಮಾಡಬಹುದು.
ಇನ್ನು ಎರಡನೇ ಮನೆಮದ್ದು ಏನು ಅಂತಾ ನೋಡೋಣ. ಬಿಳಿ ಈರುಳ್ಳಿ ಅಥವಾ ಸಣ್ಣ ಈರುಳ್ಳಿಯನ್ನು ತೆಗೆದುಕೊಂಡು ಅದನ್ನ ತುರಿದುಕೊಳ್ಳಬೇಕು. ನಂತರ ಎರಡು ಎಸಳು ಬೆಳ್ಳುಳ್ಳಿ ಹಾಗೂ ಶುಂಠಿಯನ್ನು ಸಹ ತುರಿದುಕೊಳ್ಳಬೇಕು. ಅದನ್ನ ಒಂದು ಪಾತ್ರೆಗೆ ಹಾಕಿಕೊಂಡು ಸ್ವಲ್ಪ ನೀರನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚಿಟಿಕೆ ಕಾಳು ಮೆಣಸಿನ ಪುಡಿ ಸೇರಿಸಿ ಬೆಲ್ಲ ಹಾಕಿ ಸ್ವಲ್ಪ ಬಿಸಿ ಮಾಡಬೇಕು ನಂತರ ಅದಕ್ಕೆ ಸ್ವಲ್ಪ ಬೆಲ್ಲ ಸೇರಿಸಿ ಕುದಿಸಬೇಕು. ಕುದಿ ಬಂದ ನಂತರ ಅದನ್ನು ಸೋಸಿಕೊಂಡು ಅದಕ್ಕೆ ಕಾಲು ಟಿ ಚಮಚ ಅರಿಶಿನ ಪುಡಿ ಸೇರಿಸಿ ಸ್ವಲ್ಲ ಸಮಯ ಬಿಟ್ಟು ಬೆಚ್ಚಗೆ ಇದ್ದಾಗ ಈ ಕಷಾಯವನ್ನು ಸೇವಿಸಬೇಕು. ಇದರಿಂದ ಗಂಟಲು ನೋವು, ಕೆಮ್ಮು ಕಡಿಮೆ ಆಗುತ್ತದೆ. ಈ ಮದ್ದನ್ನು 3 ದಿನಗಳ ಕಾಲ ಮಾಡಬೇಕು.
ಸೂಚನೆ :- ಈ ಎರಡೂ ಮನೆ ಮದ್ದುಗಳನ್ನು ಮಾಡುವಾಗ ಮೊದಲು ಬೆಚ್ಚಗಿನ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ನಂತರ ಜೇನುತುಪ್ಪಕ್ಕೆ ಚಿಟಿಕೆ ಕಾಳು ಮೆಣಸಿನ ಪುಡಿ ಸೇರಿಸಿ ತಿನ್ನಬೇಕು.