ಹಿಂದಿನ ಕಾಲದಿಂದಲೂ ಹಿಂದೂ ಸಂಪ್ರದಾಯದಲ್ಲಿ ದೀಪಾವಳಿ ಮತ್ತು ಯುಗಾದಿ ಹಬ್ಬಗಳಲ್ಲಿ ಅಭ್ಯಂಗ ಸ್ನಾನ ಮಾಡುತ್ತಾರೆ ಮಲೆನಾಡಿನ ಭಾಗದಲ್ಲಿ ದೀಪಾವಳಿ ನರಕ ಚತುರ್ದಶಿ ಮನೆಯ ಮಂದಿಯೆಲ್ಲ ದೇಹಕ್ಕೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ ಹಚ್ಚಿ ಕೊಂಡು ಸ್ನಾನ ಮಾಡುತ್ತಾರೆ . ಶ್ರೀ ಕೃಷ್ಣ ಪರಮಾತ್ಮ ನರಕ ಅಸುರನ ಸಂಹಾರ ಮಾಡಿ ಎಣ್ಣೆ ಸ್ನಾನ ಮಾಡಿದನು ಎಂಬ ಪ್ರತೀತಿ ಇದೆ. ಈ ದಿನ ಎಣ್ಣೆ ಸ್ನಾನ ಮಾಡಿದರೆ ಶುಭಕರ ಹಾಗೂ ನಾರಾಯಣ ಸಂತೋಷವಾಗಿ ನರಕ ಭೀತಿ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ

ಇನ್ನೂ ತೈಲದಲ್ಲಿ ಶ್ರೀ ಲಕ್ಷ್ಮೀಯು ಇದ್ದು ನೀರಿನಲ್ಲಿ ಗಂಗೆಯು ಇದ್ದು ಸಕಲ ಪಾಪ ನಿವಾರಣೆ ಆಗಿ ದಾರಿದ್ರ್ಯ ದೂರವಾಗುವುದು ಎಂದು ನಂಬಿಕೆ. ಇನ್ನು ವೈಜ್ಞಾನಿಕ ರೀತಿಯಲ್ಲಿ ಎಣ್ಣೆ ಸ್ನಾನ ಆದರಿಂದ ನಮ್ಮ ದೇಹದಲ್ಲಿ ಹಲವಾರು ಉಪಯೋಗಗಳಿವೆ. ಆಯುರ್ವೇದಿಕ್ ಅಲ್ಲಿ ಅಭ್ಯಂಗ ಸ್ನಾನದಿಂದ ಆಗುವ ಲಾಭದ ಬಗ್ಗೆ ಈ ಲೇಖನದಿಂದ ತಿಳಿದುಕೊಳ್ಳಬಹುದು ಆಯುರ್ವೇದಿಕ್ ವ್ಯೆದ್ಯರಾದ ವಿನಾಯಕ ಅವರು ಅಭ್ಯಂಗ ಸ್ನಾನ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ದೀಪಾವಳಿ ಇಂದ ಸಂಕ್ರಾಂತಿ ತನಕ ಎಣ್ಣೆ ಸ್ನಾನ ಮಾಡಬೇಕು ಇನ್ನು ಚಳಿಗಾಲದಲ್ಲಿ ಎಣ್ಣೆ ಸ್ನಾನ ಮಾಡುವುದರಿಂದ ನಮ್ಮ ದೇಹದಲ್ಲಿ ಚರ್ಮ ಒಣಗುವುದಿಲ್ಲ ವಾತ ರೋಗಗಳು ಹೆಚ್ಚಾಗುವುದಿಲ್ಲ ಒಂದುವೇಳೆ ದೀಪಾವಳಿ ಹಬ್ಬದಂದು ಎಣ್ಣೆ ಸ್ನಾನ ಮಾಡಿಲ್ಲ ಅಂದ್ರೆ ದೇಹವು ಬೂದಿ ಬಣ್ಣ ತುಂಬಿರುವ ಹಾಗೆ ಕಾಣುತ್ತದೆ ಎಂದು ಹಿರಿಕರು ಹೇಳಿದಾರೆ ಅಭ್ಯಂಗ ಮಾಚನೆ ನಿತ್ಯಂ ಸ್ವಜನ ಶ್ರಮ ಮತಃ ಅಂದರೆ ಯಾರು ನಿತ್ಯವೂ ಎಣ್ಣೆ ಅಭ್ಯಂಜನವನ್ನು ಮಾಡುತ್ತಾರೋ ಅವರಿಗೆ ಮುಪ್ಪು ಬೇಗ ಬರೋಲ್ಲ ಸುಸ್ತು ಬರೋಲ್ಲ ಹಾಗೆ ವಾತ ರೋಗಗಳು ಉಪಶಮನ. ಸಾಮಾನ್ಯವಾಗಿ ಮಂಡಿ ನೋವು ಮರೆವು ಅರ್ಧಾಂಗ ವಾಯು ಬರುವುದಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ವಾತ ರೋಗವು ಸಾಮಾನ್ಯವಾಗಿದೆ

ದಿನ ಅಭ್ಯಂಗ ಸ್ನಾನ ಕಣ್ಣಿನ ಶಕ್ತಿ ಹೆಚ್ಚುತ್ತದೆ ಹಾಗೆ ನಿದ್ರಾಹೀನತೆಯಿಂದ ಬಳಲುತ ಇರುವರಿಗೆ ಒಳ್ಳೆಯ ನಿದ್ರೆ ಬರುತ್ತದೆ ಹಾಗೂ ಚರ್ಮದ ಕಾಂತಿ ಹೆಚ್ಚಾಗಿ ಮುಪ್ಪು ದೂರಾಗುವುದು. ಆಯಸ್ಸು ಹೆಚ್ಚಾಗಿ ಆರೋಗ್ಯಕರ ಜೀವನಕ್ಕೆ ಅಡಿಪಾಯ ದೇಹದಲ್ಲಿ ಶಕ್ತಿ ಹೆಚ್ಚಿಸುವ ಲಾಭಕರ ಇನ್ನೂ ಪುರುಷರಲ್ಲಿ ಲೈಂಗಿ ಕ ಶಕ್ತಿ ಹೆಚ್ಚುತ್ತದೆ ಹಿಂದಿನ ಕಾಲದಲ್ಲಿ ಗರಡಿ ಮನೆಯಲ್ಲಿ ಜಟ್ಟಿಗಳು ಎಣ್ಣೆ ಮಾಜ್ಜನ ಮಾಡಿಕೊಳ್ಳತ ಇದ್ದರು. ಕಲಬೆರಕೆ ಎಣ್ಣೆಯನ್ನು ಆದಷ್ಟು ಕಡಿಮೆ ಉಪಯೋಗಿಸಿ ಮನೆಯಲ್ಲಿ ಇಲ್ಲ ಗಾಣದಲ್ಲಿ ತಯಾರಿಸಿದ ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಿ ಇಲ್ಲವಾದಲ್ಲಿ ಎಳ್ಳೆಣ್ಣೆ ಉಪಯೋಗ ತುಂಬಾ ಒಳ್ಳೆಯದು ಇನ್ನೂ ಸಂದಿವಾತ ಮತ್ತು ಕಫ ಶೀತ ಸಮಸ್ಯೆ ಇರುವವರು ಸಾಸಿವೆ ಎಣ್ಣೆ ಮಸಾಜ್ ಮಾಡಿಕೊಳ್ಳಬೇಕು.

ಕೆಲವೊಬ್ಬರು ಕಫ ವಾಂತಿ ಜ್ವರ ಭೇದಿ ಅಜೀರ್ಣ ಈ ತರಹ ಸಮಸ್ಯೆ ಇರುವರು ಎಣ್ಣೆ ಸ್ನಾನ ಮಾಡಿಕೊಳ್ಳಬಾರದು ಬೆಚ್ಚಗಿನ ಎಣ್ಣೆಯನ್ನು ದೇಹಕ್ಕೆ ಮಸಾಜ್ ಮಾಡಿಕೊಳ್ಳಬೇಕು ಇದರಿಂದ ದೇಹದ ಉಲ್ಲಸಿತವಾಗಿರುತದೆ. ಇನ್ನು ಚಳಿಗಾಲದಲ್ಲಿ ಎಣ್ಣೆಯನ್ನು ಪಾದ ಹಾಗೂ ನೆತ್ತಿಗೆ ಹಾಕಬೇಕು ಇದರಿಂದ ಲಭವೇನೆಂದರೆ ನೆತ್ತಿಗೆ ಹಚ್ಚುವುದರಿಂದ ಮೆದುಳು ಉತ್ತಮ ಕಾರ್ಯ ನಿರ್ವಹಿಸಿ ಮಾನಸಿಕ ಒತ್ತಡ ಕಮ್ಮಿ ಹಾಗೂ ಕೂದಲು ಬೆಳವಣಿಗೆ ಸಹಕಾರಿ ಇನ್ನು ಪಾದಕ್ಕೆ ಹಚ್ಚುವುದರಿಂದ ಪಾದ ಒಡೆಯುವುದು ಹಾಗೂ ನಿದ್ರಾಹೀನತೆ ಕಡಿಮೆ ಆಗುವುದು ಎಂದು ಆಯುರ್ವೇದಿಕ್ ಅಲ್ಲಿ ಉಲ್ಲೇಖ . ಇಷ್ಟೆಲ್ಲಾ ಅಭ್ಯಂಗ ಸ್ನಾನ ಉಪಯೋಗ ಇದೆ ಇನ್ನಾದ್ದರು ತಿಂಗಳಿಗೊಮ್ಮೆ ಎಣ್ಣೆ ಸ್ನಾನ ಮಾಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!