ಬಡವರ ಸೇಬು ಎಂದು ಕರೆಯುವ ಫಲವೇ ಸೀಬೆ ಹಣ್ಣು ಇದನ್ನು ಚೇಪೆಹಣ್ಣು, ಪೇರಲೆ ಹಣ್ಣು ಅಂತಲೂ ಕರೆಯುತ್ತಾರೆ ದಿನಕ್ಕೊಂದು ಸೇಬು ತಿನ್ನುವ ಬದಲು ಸೀಬೆ ಹಣ್ಣು ತಿಂದರೆ ಆದಷ್ಟು ವೈದ್ಯರಿಂದ ದೂರ ಇರಬಹುದು ಇದರಲ್ಲಿ ಕಿತ್ತಳೆ ಹಣ್ಣಿಗಿಂತ ವಿಟಮಿನ್ ಸಿ ಹೇರಳವಾಗಿದ್ದು ಕಣ್ಣಿನ ಪೊರೆ ಇರುಳುಕುರುಡು ತಡೆಯಬಹುದು ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸಬಹುದು. ಸೀಬೆಹಣ್ಣಿನ ಎಲೆಯನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯಿಂದ ಹೊಳೆಯುತ್ತದೆ ಈ ಹಣ್ಣನ್ನು ತಿನ್ನುವುದರಿಂದ ಅತಿಸಾರವನ್ನು ನಿಯಂತ್ರಿಸಬಹುದು ಗರ್ಭಿಣಿ ಸ್ತ್ರೀಯರು ಕೂಡ ಮಿತವಾಗಿ ತಿನ್ನಬಹುದು
ಈ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು ಹಾಗೆಯೇ ನೆಗಡಿ ಕೆಮ್ಮುಗೆ ಈ ಹಣ್ಣು ರಾಮಬಾಣವಾಗಿದೆ.ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಈ ಹಣ್ಣಿನ ವ್ಯಾಪಾರದ ಬಗ್ಗೆ ಅದೆಷ್ಟೋ ಜನರಿಗೆ ತಿಳಿದೇ ಇಲ್ಲ. ಸೀಬೆ ಹಣ್ಣನ್ನು ಬೆಳೆಯುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುವವರ ಮಾತನ್ನು ಇಲ್ಲಿ ಒಬ್ಬ ಉದ್ಯೋಗಿ ತಳ್ಳಿಹಾಕಿದ್ದಾರೆ. ಹಾಗಾದ್ರೆ ಅವರಾರು ಅವರು ಏನ್ ಹೇಳಿದ್ದಾರೆ ಅನ್ನೋದನ್ನ ನೋಡೋಣ ಬನ್ನಿ.
ಕೋಲಾರ ಜಿಲ್ಲೆಯ ಗಗನ್ ಎಂಬ ಸಾಫ್ಟ್ವೇರ್ ಉದ್ಯೋಗಿ ತಮ್ಮ 6 ಎಕರೆ ಜಮೀನಿನಲ್ಲಿ ತೈವಾನ್ ಸೀಬೆ ಹಣ್ಣಿನ ಕೃಷಿಯನ್ನು ತಮ್ಮ ಉದ್ಯೋಗದ ಜೊತೆಗೆ ಅಳವಡಿಸಿ ಕೊಂಡಿದ್ದಾರೆ ಹಾಗೂ ಆ ಹಣ್ಣಿನಿಂದ ಬರುವ ಲಾಭದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ ಸೀಬೆ ಹಣ್ಣು ಕಡಿಮೆ ಬಂಡವಾಳದಿಂದ ಅಧಿಕ ಲಾಭ ಪಡೆಯುವ ಬೆಳೆಯಾಗಿದೆ ದಿನವೂ ಹಣ್ಣು ಕಟಾವಿಗೆ ಸಿಕ್ಕಿ ವರ್ಷ ಪೂರ್ತಿ ಆದಾಯ ಪಡೆಯಬಹುದು ಈ ಬೆಳೆಯನ್ನು ಎಲ್ಲ ತರದ ಹವಾಮಾನದಲ್ಲೂ ಬೆಳೆಯಬಹುದು ಆದರೆ ಇದಕ್ಕೆ ಕೆಂಪು ಮತ್ತು ಕಪ್ಪು ಮಣ್ಣು ತುಂಬಾ ಸೂಕ್ತ ಕೆಂಪು ಮಣ್ಣಿನಲ್ಲೂ ಇಳುವರಿ ಜಾಸ್ತಿ ಒಂದು ಗಿಡದಲ್ಲಿ ಸುಮಾರು 50 ಹಣ್ಣು ಬಿಡುವುದು.
ಸೂರ್ಯನ ಶಾಖದ ಕಿರಣಗಳಿಂದ ರಕ್ಷಣೆ ಪಡೆಯಲು ಪ್ರತಿಯೊಂದು ಕಾಯಿಗೆ ಪ್ಲಾಸ್ಟಿಕ್ ಕವರ್ ಕಟ್ಟುತ್ತಾರೆ ಇದರಿಂದ ಸನ್ ಬರ್ನ್ ಆಗುವುದನ್ನು ತಡೆಯ ಬಹುದು ಜೊತೆಗೆ ಕಾಯಿ ಚೆನ್ನಾಗಿ ಬೆಳೆಯಲು ಹಾಗೂ ಪಕ್ಷಿ ಕೋತಿ ಕಾಟದಿಂದಲು ಕೂಡ ತಪ್ಪಿಸಲು ಸಹಕಾರಿ. ಸೀಬೆ ಗಿಡದ ಬೆಳವಣಿಗೆಗೆ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ 5 ಅಡಿ ಅಂತರ ಹಾಗೂ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 10 ಅಡಿ ಅಂತರದಲ್ಲಿ ಇದ್ದು ಪಾತಿ ಮಾಡುವುದರಿಂದ ನೀರಿನ ಪೂರೈಕೆ ಮತ್ತು ಕಳೆ ಕೀಳಲು ಗೊಬ್ಬರ ಹಾಕಲು ತುಂಬಾ ಅನುಕೂಲ ಜೊತೆಗೆ ಗಿಡ ಬೆಳವಣಿಗೆಗೆ ಉತ್ತಮ.
ಗಗನ್ ಅವರು ತಮ್ಮ 6 ಎಕ್ರೆ ಜಮೀನಲ್ಲಿ 2 ಬೋರ್ ಇದ್ದು ಅದರಿಂದ ಬಂದ ನೀರನ್ನು ಕೃಷಿ ಹೊಂಡಕ್ಕೆ ಹಾಯಿಸಿ ನಂತರ ತೋಟಕ್ಕೆ ನೀರನ್ನು ಹಾಯಿಸುತ್ತಾರೆ ಯಾವುದೇ ರಾಸಾಯನಿಕ ಗೊಬ್ಬರವನ್ನು ಉಪಯೋಗಿಸದೆ ತಿಂಗಳಿಗೊಮ್ಮೆ ಕುರಿಯ ಗೊಬ್ಬರವನ್ನು ಗಿಡಗಳಿಗೆ ಹಾಕುವುದರಿಂದ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸುವುದಿಲ್ಲ. ಈ ಗಿಡದಲ್ಲಿ ಮಲ್ಲಿ ಬಗ್ ಎಂಬ ರೋಗವು ಕಾಣಿಸಿದಾಗ 3 ತಿಂಗಳಿಗೊಮ್ಮೆ ಔಷಧಿ ಸಿಂಪಡಿಸಿದರೆ ನಿವಾರಣೆಯಾಗುವುದು. ಒಂದು ಎಕರೆಗೆ 800 ಗಿಡವಿದ್ದು ದಿನಾಲೂ ಸುಮಾರು 500 ಕೆಜಿ ಕಾಯಿ ಕುಯ್ದು ಮಾರಾಟ ಮಾಡುತ್ತಾರೆ .
ತೈವಾನ್ ಸೀಬೆ ಹಣ್ಣಿನಲ್ಲಿ ಎರಡು ವಿಧ ಬಿಳಿ ಮತ್ತು ಪಿಂಕ್ ಹಣ್ಣು ಬಿಳಿ ಹಣ್ಣಿನಲ್ಲಿ ಅಷ್ಟೊಂದು ರುಚಿ ಇರುವುದಿಲ್ಲ ಮತ್ತು ಇಳುವರಿ ಕೂಡ ಕಡಿಮೆ ಇದೂ ತೈವನ್ ಪಿಂಕ್ ಸೀಬೆ ಹಣ್ಣಿನಲ್ಲಿ ಉತ್ತಮ ಇಳುವರಿ ಇದ್ದು ತಿನ್ನಲು ಕೂಡ ಒಳ್ಳೆ ರುಚಿಕರ .ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಸಿಗುತ್ತದೆ ತೋಟಗಾರಿಕೆ ಇಲಾಖೆಯವರು ಒಂದು ಗಿಡಕ್ಕೆ 80 ರೂ ಸಬ್ಸಿಡಿಯನ್ನು ನೀಡುತ್ತಾರೆ. ಸಾಮಾನ್ಯವಾಗಿ ಜನ ಸಾಮಾನ್ಯರಲ್ಲಿ ಒಂದು ತಿಳುವಳಿಕೆಯಿದೆ ಸೀಬೆ ಗಿಡದಲ್ಲಿ ಯಾವುದೇ ಪ್ರಾಫಿಟ್ ಸಿಗುವುದಿಲ್ಲ ಎಂದು ನಿಜವಾಗಿಯೂ ಅದು ಮೂಡನಂಬಿಕೆ ಎಂದು ಹೇಳಬಹುದು ಸೀಬೆ ಸಸಿಯನ್ನು ಹಾಕಿದ 9 ತಿಂಗಳಿಗೆ ಫಲ ಬಿಟ್ಟು , ಅತ್ಯಂತ ಕಡಿಮೆ ಖರ್ಚಿನಲ್ಲಿ ವರ್ಷಕ್ಕೆ ಎಲ್ಲ ಖರ್ಚು ವೆಚ್ಚವನ್ನು ಕಳೆದು 1 ಎಕರೆಗೆ ಸುಮಾರು 20 ಲಕ್ಷದಷ್ಟು ಲಾಭ ಗಳಿಸಬಹುದು.
ಸೀಬೆ ಹಣ್ಣನ್ನು ನಮ್ಮ ಸುತ್ತಮುತ್ತಲಿನ ಮೋರ್ ಅಪ್ಕಾಂಸ್, ರಿಲಯನ್ಸ್, ಬಿಗ್ ಬಾಸ್ಕೆಟ್ ಮತ್ತು ಬ್ಯಾಂಗಲೋರ್ ಮಾರ್ಕೆಟಿಗೆ ಸರಬರಾಜು ಮಾಡಬಹುದು. ಇನ್ನೂ ಆದುನಿಕ ಯುಗದಲ್ಲಿ ಇಂದಿನ ಯುವಕರು ಕೃಷಿ ಕಡೆಗೆ ಗಮನ ಕಡಿಮೆ ಮಾಡಿದ್ದು ಅವರಿಗೆ ತಮ್ಮ ಸ್ವಂತ ಉದ್ಯೋಗದ ಜೊತೆಗೆ ಈ ಕೃಷಿ ಅತ್ಯಂತ ಆರಾಮದಾಯಕವಾಗಿ ಮಾಡಬಹುದು ಎಂದು ಕಿವಿಮಾತನ್ನು ಗಗನ್ ಅವರು ಹೇಳಿದ್ದಾರೆ.