ಸರಕಾರಿ ಸೇವೆಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸುಲಭವಾಗಿ ಪಡೆಯುವ ಒಂದು ಯೋಜನೆ ಗ್ರಾಮ ಒನ್ ಸೇವೆ. ಸಾಮಾನ್ಯ ಜನರು ಸರಕಾರ ಸೇವೆ, ಸೌಲಾಭ್ಯ , ಪ್ರಮಾಣ ಪತ್ರ ಪಡೆಯಲು ಜಿಲ್ಲಾ ಹಾಗೂ ತಾಲೂಕು ಕಚೇರಿ ಅಲೆದಾಡುವ ಕಡಿಮೆ ಮಾಡುವ ಸಲುವಾಗಿ ಸರ್ಕಾರ ಈ ಯೋಜನೆ ಜಾರಿಗೆ ಮಾಡಿದ್ದಾರೆ.ಸಾಮಾನ್ಯವಾಗಿ ಮಧ್ಯವರ್ತಿಗಳ ಮೂಲಕ ಜಾತಿ ಪ್ರಮಾಣಪತ್ರ ಆದಾಯ ಪ್ರಮಾಣ ಪತ್ರವನ್ನು ಪಡೆಯುವ ಪಡೆಯುತ್ತಿದ್ದ ಜನರಿಗೆ ಇದು ಒಂದು ಒಳ್ಳೆಯ ಅವಕಾಶವಾಗಿದ್ದು ಸಮಯವನ್ನು ಉಳಿಸಬಹುದಾದ ಅಂತಹ ಯೋಜನೆಯಾಗಿದೆ.
ಸದ್ಯ 12 ಜಿಲ್ಲೆಗಳ 3024 ಪಂಚಾಯಿತಿಗಳಲ್ಲಿ ಈ ಸೇವೆಗೆ ಏಕಕಾಲಕ್ಕೆ ಚಾಲನೆ ನೀಡಲಾಗಿದೆ. ಮಾರ್ಚ್ ಅಂತ್ಯದೊಳಗೆ ರಾಜ್ಯದ ಎಲ್ಲಗ್ರಾ.ಪಂಗಳಲ್ಲಿಈ ಕೇಂದ್ರ ತೆರೆಯಲು ಸರಕಾರ ಮುಂದಾಗಿದೆ. ಎರಡನೇ ಹಂತದಲ್ಲಿಜನ ಮನೆ ಬಾಗಿಲಲ್ಲೇ ಸೇವೆ ಪಡೆಯುವ ‘ಜನ ಸೇವಕ’ ಯೋಜನೆ ಜಾರಿಗೂ ಸರಕಾರ ಸಿದ್ಧತೆ ನಡೆಸಿದೆ. ಗ್ರಾಮೀಣ ಜನ ಆಯ್ದ ಸೇವೆಗಳಿಗಾಗಿ ಗ್ರಾಮ ಒನ್ ಕೇಂದ್ರಗಳಲ್ಲಿಅರ್ಜಿ ಸಲ್ಲಿಸಬೇಕು. ನಾನಾ ಪ್ರಕ್ರಿಯೆ ನಂತರ ಸೇವೆ ಒದಗಿಸಲಾಗುತ್ತದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ, ಹೆಚ್ಚುವರಿ ಹಣ ನೀಡದೆ, ನೇರವಾಗಿ ಅರ್ಜಿ ಸಲ್ಲಿಸಿ ಸುಲಭವಾಗಿ ಸೇವೆ ಪಡೆಯುವ ವ್ಯವಸ್ಥೆ ಇದಾಗಿದೆ.
ಈ ಗ್ರಾಮ ಕೇಂದ್ರಗಳಿಗೆ ಹೋಗಿ, ನಿರ್ದಿಷ್ಟ ಸೇವೆಗೆ ಅರ್ಜಿ ಸಲ್ಲಿಸಬಹುದು. ಅಲ್ಲಿರುವ ತರಬೇತಾದ ಸಿಬ್ಬಂದಿಗಳು ನೆರವಾಗುತ್ತಾರೆ. ಈ ಕೇಂದ್ರಗಳು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಕಾರ್ಯನಿರ್ವಹಿಸುತ್ತವೆ. ಇಂಟರ್‌ನೆಟ್ ಮೂಲಕ ವಿವಿಧ ಇಲಾಖೆಗಳನ್ನು ಸಂಪರ್ಕಿಸಿ, ಆಯಾ ಇಲಾಖೆಗಳ ಸೇವೆಗಳನ್ನು ಪಡೆಯಬಹುದು. ಅರ್ಜಿ ಸಲ್ಲಿಸಿದ ಬಳಿಕ ಅದರ ಸ್ಥಿತಿಗತಿ ಬಗ್ಗೆ ಮೊಬೈಲ್ ಸಂದೇಶದ ಮೂಲಕ ಮಾಹಿತಿ ದೊರೆಯುತ್ತದೆ. ಮತ್ತು ಸರಕಾರದಿಂದ ಲಭ್ಯವಾಗುವ ಪ್ರಮಾಣಪತ್ರ, ಆಸ್ತಿಯ ಹಕ್ಕುಪತ್ರದ ಪ್ರತಿಗಳು ಮುಂತಾದವುಗಳನ್ನು ಈ ಕೇಂದ್ರಕ್ಕೆ ಭೇಟಿ ನೀಡಿ ಪಡೆದುಕೊಳ್ಳಬಹುದು.
ಇನ್ನೂ ಇಂಟರ್ನೆಟ್ ಅಲ್ಲಿ ಗ್ರಾಮ ಒನ್ ವೆಬ್ಸೈಟ್. ಓಪನ್ ಮಾಡಿದ ಹಲವಾರು ಇಲಾಖೆಗಳ ಸೇವೆಗಳು ಓಪನ್ ಆಗುತ್ತೆ . 3 ಪೇಜ್ ಇದ್ದು ಅದರಲ್ಲಿ ನಮ್ಮಗೆ ಸಂಭಂದ ಪಟ್ಟ ಪೇಜ್ ಓಪನ್ ಮಾಡಿ ಅಲ್ಲಿನ ಮಾಹಿತಿಯನ್ನು ಪಡೆಯ ಬಹುದು.. ಆಮೇಲೆ ಅಲ್ಲಿನ ವಿಷಯ ಸೋಚನೆ ಮೇರೆಗೆ ಇಂಟರ್ನೆಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಗ್ರಾಮ ಒನ್ ವೆಬ್ಸೈಟನ್ನು ಓಪನ್ ಮಾಡಿದಾಗ ಮೊದಲಿಗೆ ಹಲವಾರು ಇಲಾಖೆಗಳ ಪಟ್ಟಿ ಓಪನ್ ಆಗಿರುತ್ತದೆ .
ಪಶು ಸಂಗೋಪನೆ ಇಲಾಖೆ, ಗಣಿಗಾರಿಕೆ ಇಲಾಖೆ, ಕಂದಾಯ ಇಲಾಖೆ, ರೇಷ್ಮೆ ಕೈಗಾರಿಕೆ ಇಲಾಖೆ, ಹೀಗೆ ಪ್ರತಿಯೊಂದು ಸರಕಾರಿ ಸೇವೆಗಳ ಮಾಹಿತಿ ಲಭ್ಯವಿರುತ್ತದೆ. ನಮಗೆ ಅಗತ್ಯವಿರುವ ಇಲಾಖೆಯ ಮೇಲೆ ಕ್ಲಿಕ್ ಮಾಡಿದಾಗ ಮಾಡಿದಾಗ ಆಯ ಇಲಾಖೆಯಲ್ಲಿರುವ ಜನಸಾಮಾನ್ಯರಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳು ಲಭ್ಯವಾಗಿರುತ್ತದೆ ಉದಾಹರಣೆಗೆ ಕಂದಾಯ ಇಲಾಖೆಯ ಮೇಲೆ ಕ್ಲಿಕ್ ಮಾಡಿದಾಗ ಅದರಲ್ಲಿ ಭೂಹಿಡುವಳಿ ಜಾತಿ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಹೀಗೆ ಲೀಸ್ಟ್ ಓಪನ್ ಆಗುತ್ತದೆ.. ಹಾಗೆಯೇ ಇನ್ನುಳಿದ ಪೊಲೀಸ್ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬುಡಕಟ್ಟು ಜನಾಂಗ ಕಲ್ಯಾಣ, ಕಾಲೇಜು ಪರಿಹಾರ ನಿಧಿ ಹೀಗೆ ಹಲವಾರು ಯೋಜನೆಗಳನ್ನು ಒಳಗೊಂಡಿರುತ್ತದೆ.
ಹೀಗೆ ಪ್ರತಿಯೊಂದು ಇಲಾಖೆಗಳಲ್ಲಿ ಯೋಜನೆಗಳನ್ನು ಓಪನ್ ಮಾಡಿದ ನಮಗೆ ಅಲ್ಲಿ ಸಿಗಬೇಕಾದ ಸೇವೆಗಳು ಲಭ್ಯವಾಗಿರುತ್ತದೆ. ಇಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯ ಗೋಡೆಗಳ ಮೇಲೆ ಚಿತ್ರಗಳನ್ನು ಅಂಟಿಸಲಾಗುತ್ತದೆ ಇಲ್ಲ ಅಂದರೆ ಗ್ರಾಮಕ್ಕೆ ಭೇಟಿ ನೀಡಿ ಈ ಸೇವೆಯ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.