ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ( ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ) ಇಲ್ಲಿ ಅಗತ್ಯ ಇರುವ ಎಇ, ಜೆಇ, ಎಫ್ಡಿಎ, ಎಸ್ಡಿಎ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇರ ನೇಮಕಾತಿ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಿದೆ. ಈ ಹುದ್ದೆಗಳಿಗೆ ಬಿಇ, ಪದವಿ, ಪಿಯುಸಿ ಪಾಸಾದವರು ಆನ್ಲೈನ್ ಮೂಲಕ ಅರ್ಜಿ ಹಾಕಿ, ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಹುದ್ದೆಗಳ ವಿವರ, ಪ್ರಮುಖ ದಿನಾಂಕಗಳು, ವಯೋಮಿತಿ ಅರ್ಹತೆ, ಅರ್ಜಿ ಶುಲ್ಕ ಇತರೆ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
ಅರ್ಜಿ ಕರೆಯಲಾದ ಹುದ್ದೆಗಳ ವಿವರ ಇಂತಿದೆ.
ಸಹಾಯಕ ಅಭಿಯಂತರರು ಗ್ರೇಡ್ -1: 43 ಹುದ್ದೆಗಳು, ಕಿರಿಯ ಅಭಿಯಂತರರು(ಸಿವಿಲ್): 18 ಹುದ್ದೆಗಳು, ಪ್ರಥಮ ದರ್ಜೆ ಸಹಾಯಕರು: 5 ಹುದ್ದೆಗಳು ದ್ವಿತೀಯ ದರ್ಜೆ ಸಹಾಯಕರು: 10 ಹುದ್ದೆಗಳು ಒಟ್ಟು: 76 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅಭ್ಯರ್ಥಿ ಹೊಂದಿರಬೇಕಾದ ವಿದ್ಯಾರ್ಹತೆ ಇಂತಿದೆ. ಸಹಾಯಕ ಅಭಿಯಂತರರು ಗ್ರೇಡ್ -1(ಸಿವಿಲ್): ಸಿವಿಲ್ ಇಂಜಿನಿಯರ್ ಪದವಿ ಹೊಂದಿರಬೇಕು. ಕಿರಿಯ ಅಭಿಯಂತರರು(ಸಿವಿಲ್): ಸಿವಿಲ್ ಇಂಜಿನಿಯರ್ ಪದವಿ ಹೊಂದಿರಬೇಕು. ಪ್ರಥಮ ದರ್ಜೆ ಸಹಾಯಕರು: ಯಾವುದೇ ಪದವಿ ಹೊಂದಿರಬೇಕು. ದ್ವಿತೀಯ ದರ್ಜೆ ಸಹಾಯಕರು: ದ್ವಿತೀಯ ಪಿಯುಸಿಯಲ್ಲಿ ಪಾಸಾಗಿರಬೇಕು.
ಈ ಹುದ್ದೆಗಳಿಗೆ ನಿಗದಿಪಡಿಸಲಾದ ವೇತನ ಈ ರೀತಿ ಇದೆ.
ಸಹಾಯಕ ಅಭಿಯಂತರರು ಗ್ರೇಡ್ -1 (ಸಿವಿಲ್): 43100 ರಿಂದ 83900 ರೂ. ಕಿರಿಯ ಅಭಿಯಂತರರು (ಸಿವಿಲ್): 33450 ರಿಂದ 62600 ರೂ. ಪ್ರಥಮ ದರ್ಜೆ ಸಹಾಯಕರು: 27650 ರಿಂದ 52650 ರೂ. ದ್ವಿತೀಯ ದರ್ಜೆ ಸಹಾಯಕರು: 21400 ರಿಂದ 42000 ರೂ.
ವಯೋಮಿತಿ ಅರ್ಹತೆಗಳು ಮೇಲಿನ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ವರ್ಗಾವಾರು ಗರಿಷ್ಠ ವಯೋಮಿತಿ ಅರ್ಹತೆ ಕೆಳಗಿನಂತಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು: 35 ವರ್ಷ ಹಿಂದುಳಿದ ವರ್ಗದ ಅಭ್ಯರ್ಥಿಗಳು:38 ವರ್ಷ ಎಸ್ಸಿ / ಎಸ್ಟಿ / ಪ್ರವರ್ಗ -1 ಅಭ್ಯರ್ಥಿಗಳು: 40 ವರ್ಷ ಪಾವತಿಸಬೇಕಾದ ಅರ್ಜಿ/ ಪರೀಕ್ಷೆ ಶುಲ್ಕ ಸಾಮಾನ್ಯ ವರ್ಗದ ಅಭ್ಯರ್ಥಿಗಳು:ರೂ 750. ಹಿಂದುಳಿದ ವರ್ಗದ ಅಭ್ಯರ್ಥಿಗಳು: ರೂ.750. ಎಸ್ಸಿ/ ಎಸ್ಟಿ/ ಪ್ರವರ್ಗ -1 ಅಭ್ಯರ್ಥಿಗಳು: ರೂ.375. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಆದರೆ ಪ್ರೊಸೆಸಿಂಗ್ ಫೀಸ್ ಎಂದು ರೂ. 250 ಪಾವತಿಸಬೇಕು.
ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ http://kea.kar.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಪ್ರಮುಖ ದಿನಾಂಕಗಳು ಆನ್ಲೈನ್ ಅರ್ಜಿ ಸ್ವೀಕರಿಸುವ ಪ್ರಾರಂಭ ದಿನಾಂಕ: 28 03-2022 ರ ಬೆಳಿಗ್ಗೆ 11-00 ಗಂಟೆ ಇಂದ. ಆನ್ಲೈನ್ ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ: 20-04 2022 ರ ರಾತ್ರಿ 11-59 ರವರೆಗೆಇ – ಪೋಸ್ಟ್ ಆಫೀಸ್ನಲ್ಲಿ ಶುಲ್ಕವನ್ನು ಪಾವತಿ ಮಾಡಲು ಕೊನೆ ದಿನಾಂಕ: 22-04-2022 ರಂದು ಕಚೇರಿ ವೇಳೆಯ ವರೆಗೆ. ಆಯ್ಕೆ ಪ್ರಕ್ರಿಯೆಯು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.