ನಾವು ದಿನನಿತ್ಯ ಪೂಜಿಸೋ ದೇವರುಗಳ ಬಗ್ಗೆ ತಿಳಿದಿದ್ದೇವೆ.ಆದರೆ ಆ ದೇವರುಗಳಿಗೆ ಇರುವ ವಾಹನಗಳನ್ನು ನೋಡಿದ್ದೇವೆ ವಿನಃ ಅವುಗಳ ಹಿನ್ನಲೆಯ ಬಗ್ಗೆ ತಿಳಿದಿರುವವರು ಬೆರಳೆಣಿಕೆ ಅಷ್ಟು ಜನ ಮಾತ್ರ. ನಮ್ಮ ಹಿಂದು ಸಂಪ್ರದಾಯಗಳಲ್ಲಿ ಕೋಟ್ಯಾಂತರ ದೇವರುಗಳಿದ್ದಾವೆ.ಹಾಗೆ ಒಂದೊಂದು ದೇವರುಗಳಿಗೂ ಒಂದೊಂದು ಪ್ರಾಣಿ ಅಥವಾ ಪಕ್ಷಿ ವಾಹನಗಳಾಗಿರುತ್ತವೆ ಮತ್ತು ಅವರು ಆ ವಾಹನಗಳ ಮೇಲೆ ಕುಳಿತು ಜಗತ್ತನ್ನು ಸುತ್ತುತ್ತಾರೆ ಎನ್ನುವ ನಂಬಿಕೆಯಿದೆ. ಆದರೆ ಒಮ್ಮೆ ಪರಮೇಶ್ವರನು ಇಡೀ ವಿಶ್ವವನ್ನು ಯಾವುದೇ ವಾಹನವಿಲ್ಲದೆ ಸುತ್ತಾಡುತ್ತಿದ್ದನು.

ಇದನ್ನು ನೋಡಿದ ಯಮನು ಪರಮೇಶ್ವರನು ಯಾವುದೇ ಪ್ರಾಣಿಯನ್ನು ತನ್ನ ವಾಹನ ಮಾಡಿಕೊಳ್ಳದೆ ಬರಿಗಾಲಿನಲ್ಲಿ ತಿರುಗಾಡುತ್ತಿದ್ದನ್ನು ಕಂಡು ಮರುಗಿ ಶಿವನಿಗೆ ವಾಹನವಾಗಬೇಕೆಂದು ಯೋಚಿಸುತ್ತಾನೆ. ಆದರೆ ಶಿವನಿಗೆ ವಾಹನವಾಗುದು ಅಷ್ಟು ಸುಲಭದ ಮಾತಾಗಿರಲಿಲ್ಲ.ಹಾಗಾದ್ರೆ ಯಮನು ಹೇಗೆ ಶಿವನ ವಾಹನವಾಗುತ್ತಾನೆ, ಶಿವನು ಅವನನ್ನು ಏಕೆ ಮತ್ತು ಹೇಗೆ ಸ್ವೀಕರಿಸಿದನು? ಎಂಬುದನ್ನು ನಮ್ಮ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಶಿವನ ವಾಹನ ಆಗೋದು ಅಂದ್ರೆ ಅಷ್ಟೊಂದು ಸುಲಭ ಆಗಿರ್ಲಿಲ್ಲ. ಅದುಕ್ಕೆ ಯಮನು ಕಠಿಣ ತಪ್ಪಸನ್ನು ಮಾಡಿ ಕೊನೆಗೂ ಯಮನ ತಪ್ಪಸಿಗೆ ಮೆಚ್ಚಿದ ಶಿವನು ನಂದಿಯ ರೂಪವಾಗಿ ಯಮನನ್ನು ತನ್ನ ವಾಹನ ಆಗಿ ಸ್ವೀಕರಿಸಿದನು.ಅದಕ್ಕೆ ಕಾರಣ ನಂದಿಯ ಮುಗ್ದತೆ ಮತ್ತೆ ಅವನು ಯಾವುದೇ ವಂಚನೆ ಮಾಡುವುದಿಲ್ಲ ಎಂಬ ನಂಬಿಕೆ .ನಂದಿಯು ಶಿವಾಂಗಣಗಳ ನಾಯಕನು ಆಗಿದ್ದಾನೆ. ನಂದಿಯ ಆಜ್ಞೆ ಮೇರೆಗೆ ಶಿವಾಂಗಣ ಕಾರ್ಯ ನಿರ್ವಹಿಸುತ್ತೇವೆ ಎಂಬ ಪ್ರತೀತಿ ಇದೆ.

ಇನ್ನೂ ಹಿಂದಿನ ಪುರಾಣಗಳ ಪ್ರಕಾರ ಶೀಲದ ಎಂಬ ಋಷಿ ಮುನಿ ದೇವರ ಆರಾಧನೆ ಅಲ್ಲಿ ತನ್ನನು ಸಂಪೂರ್ಣ ತೊಡಗಿಸಿಕೊಂಡರು. ಇದರಿಂದ ತಮ್ಮ ಸಾಂಸಾರಿಕ ಮತ್ತು ಸಾಮಾಜಿಕ ಜೀವನದಿಂದ ವಿಮುಕ್ತರಾಗಿದ್ದರು. ಹೀಗಾಗಿ ಅವ್ರ ವಂಶಾವಳಿಯ ಬಗ್ಗೆ ಅವರ ಬಂಧುಗಳು ಚಿಂತಿತರದರು ಕೊನೆಗೆ ಶೀಲತ ಯೋಚಿಸಿ ದೇವರಾಜ ಇಂದ್ರನ ಕುರಿತು ತಪ್ಪಸ್ಸು ಮಾಡಿದನು.

ಕೊನೆಗೂ ಮುನಿಯ ತಪ್ಪಸ್ಸಿಗೆ ಮೆಚ್ಚಿ ಇಂದ್ರನು ಪ್ರತ್ಯಕ್ಷ ಆಗಿ ವರವನ್ನು ಕೇಳು ಎಂದಾಗ ಮುನಿ ಯಾವುದೇ ಮದುವೆ ಶಾರೀರಿಕ ಸಂಭದ ಇಲ್ಲದೆ ಮಗು ನೀಡು ಎಂಬ ವರವನ್ನು ಕೇಳುತ್ತಾನೆ. ಇದು ನನ್ನಿಂದ ಸಾದ್ಯ ಇಲ್ಲ ಎಂದು ಇಂದ್ರನು ಹೇಳಿ ಶಿವನನ್ನು ಕುರಿತು ತಪ್ಪಸ್ಸು ಮಾಡು ಎಂದು ಹೇಳಿ ಹೊರಟು ಹೋಗುತ್ತಾನೆ. ಕೊನೆಗೆ ಋಷಿ ಮುನಿ ಶಿವನನ್ನು ಕುರಿತು ಕಠೋರ ತಪಸ್ಸು ಮಾಡುತ್ತಾನೆ . ಅವನ ತಪ್ಪಸ್ಸನ್ನು ಮೆಚ್ಚಿ ಶಿವನು ಅವನಿಗೆ ಮಗು ಆಗುವಂತೆ ವರ ನೀಡುತ್ತಾನೆ..

ಶಿವನ ಮಾತಿನಂತೆ ಹಲವು ವರುಷದ ನಂತ್ರ ತನ್ನ ಜಮೀನಲ್ಲಿ ಕೆಲ್ಸ ಮಾಡುವಾಗ ಒಂದು ಮಗು ಸಿಗುತ್ತದೆ ಅದುನ್ನೆ ಶೀಲತ ಶಿವನ ವರಪ್ರಸಾದಿಂದ ಸಿಕ್ಕಿತೆಂದು ಮನೆಗೆ ಕರೆ ತಂದು ನಂದಿ ಎಂದು ನಾಮಕರಣ ಮಾಡಿ ಅವನ ಪೋಷಣೆ ಮಾಡಿದರು. ಪರಮೇಶ್ವರನು ಒಮ್ಮೆ ಮಿತ್ರ ಮತ್ತು ವರುಣ ಎಂಬ ಇಬ್ಬರು ಋಷಿ ಮುನಿಗಳನ್ನು ನಂದಿ ಬಳಿಗೆ ಕಳುಹಿಸುತ್ತಾನೆ. ನಂದಿಯ ಹತ್ತಿರ ಬಂದು ನಿನಗೆ ಅಲ್ಪಾಯುಷಿ ಇದ್ದು ನೀನು ಪರಮೇಶ್ವರನನು ಕುರಿತು ತಪ್ಪಸ್ಸು ಮಾಡ್ಬೇಕು ಎಂದು ಹೇಳುತ್ತಾರೆ.. ಋಷಿ ಮುನಿಗಳ ಮಾತಿಗೆ ಒಪ್ಪಿ ನಂದಿ ಕಾಡಿಗೆ ಹೋಗಿ ಕಠಿಣ ತಪ್ಪಸು ಮಾಡುತ್ತಾನೆ ಕೊನೆಗೆ ಅವನ ತಪ್ಪಸಿಗೆ ಮೆಚ್ಚಿ ಶಿವನು ಅವನಿಗೆ ದೀರ್ಘ ಆಯಸ್ಸನ್ನು ಕರುಣಿಸಿ ನಂದಿಯನ್ನು ತನ್ನ ಸೇನೆಯ ಮುಖ್ಯಸ್ಥನನ್ನಾಗಿ ಮಾಡುತ್ತಾನೆ.

ಸಮುದ್ರ ಮಂಥನದ ಸಮಯದಲ್ಲಿ ವಿಷ ಹೊರ ಬಂದಾಗ ಅದುನ್ನ ಲೋಕ ಕಲ್ಯಾಣಕ್ಕೆ ಶಿವನು ಆ ವಿಷವನ್ನು ಕುಡಿದು ವಿಷಕಂಠ ಎಂದೆನ್ನಿಸಿಕೊಳ್ಳುತ್ತಾನೆ ಅವಾಗ ನೆಲದಮೇಲೆ ಬಿದ್ದ ಹನಿಯನ್ನು ನಂದಿ ತನ್ನ ನಾಲಿಗೆ ಯಿಂದ ವಿಷ ನಿಕ್ಕಿದನು ನಂದಿಯ ಈ ಕಾರ್ಯದಿಂದ ಶಿವನು ಹಾಗೂ ದೇವತೆಗಳು ಸಂತೋಷವಾದರು. ಇದರಿಂದ ಶಿವನು ನಂದಿಗೆ ತನ್ನ ಶ್ರೇಷ್ಟ ಭಕ್ತ ಎಂಬ ಬಿರುದು ನೀಡಿದನು. ಜೊತೆಗೆ ತನಗೆ ಸೇರಬೇಕಾದ ಎಲ್ಲಾ ಗೌರವ ನಂದಿಗೂ ಕೊಡ್ಬೇಕು ಎಂದು ಹೇಳಿದನು. ಇದಕ್ಕೆ ನಾವು ಶಿವನ ಲಿಂಗದ ಎದುರು ನಂದಿಯನ್ನು ಕಾಣುತ್ತೇವೆ. ಶೃದ್ದೆ,ಭಕ್ತಿ, ನಿಷ್ಕಲ್ಮಶ ಮನಸ್ಸಿನಿಂದ ನಂದಿಯ ಕಿವಿಯಲ್ಲಿ ನಾವು ನಮ್ಮ ಕೋರಿಕೆ ಹೇಳಿಕೊಂಡರೆ ಅದನ್ನ ನಂದಿಯು ಶಿವನಿಗೆ ತಲುಪಿಸಿ ನಮ್ಮ ಕಷ್ಟ ಪರಿಹಾರ ಮಾಡುತ್ತಾರೆ ಎಂಬ ನಂಬಿಕೆ ಇಂದಿಗೂ ಚಾಲ್ತಿಯಲ್ಲಿವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!