ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದ್ದಕ್ಕಿದ್ದಂತೆ ನಮ್ಮನ್ನು ಬಿಟ್ಟು ಅಗಲಿರುವುದು ನಿಜಕ್ಕೂ ಬೇಸರದ ವಿಷಯ. ಪುನೀತ್ ಅವರ ಕೊನೆಯ ಸಿನಿಮಾ ಜೆಮ್ಸ್ ಬಿಡುಗಡೆಯಾಯಿತು ಆದರೆ ಇಂತಹ ಸುಸಂದರ್ಭದಲ್ಲಿ ಪುನೀತ್ ಅವರೆ ಇಲ್ಲದಿರುವುದು ಬೇಸರವಿದೆ. ಜೆಮ್ಸ್ ಸಿನಿಮಾ ಬಿಡುಗಡೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ.
ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಹು ನಿರೀಕ್ಷೆಯ ಸಿನಿಮಾ ಜೇಮ್ಸ್ ಕೊನೆಗೂ ನಿನ್ನೆ ಬಿಡುಗಡೆಯಾಗಿದ್ದು ದೇಶದೆಲ್ಲೆಡೆ ಬರೋಬ್ಬರಿ 4೦೦೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಎಲ್ಲಾ ಥಿಯೇಟರ್ ನಲ್ಲಿ ಜೇಮ್ಸ್ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಇನ್ನೂ ನಾಲಕ್ಕೂ ದಿನಗಳ ಕಾಲ ಎಲ್ಲಾ ಕಡೆ ಟಿಕೆಟ್ ಬುಕ್ ಆಗಿದೆ. ಇನ್ನೂ ಅಪ್ಪು ಅವರ ಕೊನೆಯ ಸಿನಿಮಾವನ್ನು ನೋಡಲು ಕನ್ನಡ ತಾರೆಯರಾದ ಅನುಶ್ರೀ, ನಟ ದಿಗಂತ್, ಸಾಧು ಕೋಕಿಲ, ರವಿಶಂಕರ್, ರಂಗಾಯಣರಘು, ಕಿಚ್ಚ ಸುದೀಪ್, ಯಶ್, ಗಣೇಶ್ ಸೇರಿದಂತೆ ಹಲವಾರು ತಾರೆಯರು ಮೊದಲನೆ ದಿನವೆ ಚಿತ್ರವನ್ನು ನೋಡಿದ್ದಾರೆ. ಇದರ ಜೊತೆಗೆ ತೆಲುಗು ಸ್ಟಾರ್ ಗಳು ಕೂಡ ಚಿತ್ರವನ್ನು ಅಭಿಮಾನಿಗಳ ಜೊತೆ ನೋಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೂ ಇದರ ಜೊತೆಗೆ ಅಪ್ಪು ಅವರ ಮತೊಬ್ಬ ಸ್ನೇಹಿತರಾದ ತೆಲುಗು ಸ್ಟಾರ್ ನಟ ಜ್ಯೂನಿಯರ್ ಎನ್ ಟಿಆರ್ ಅವರು ಅನಂತಪುರದಲ್ಲಿ ಜೇಮ್ಸ್ ಚಿತ್ರವನ್ನು ಅಭಿಮಾನಿಗಳ ಜೊತೆ ನೋಡಿದ್ದಾರೆ. ಬಹು ನಿರೀಕ್ಷೆಯ ಆರ್ ಆರ್ ಆರ್ ಸಿನಿಮಾದ ಪ್ರೊಮೋಷನ್ ಗಳಲ್ಲಿ ಬಹಳ ಬ್ಯೂಸಿ ಆಗಿರುವ ಎನ್ ಟಿ ಆರ್ ಅವರು ಸಮಯ ಮಾಡಿಕೊಂಡು ಅಪ್ಪು ಅವರ ಜೇಮ್ಸ್ ಸಿನಿಮಾವನ್ನು ನೋಡಿದ್ದಾರೆ. ಜೇಮ್ಸ್ ಸಿನಿಮಾವನ್ನು ಫ್ಯಾನ್ಸ್ ಜೊತೆ ನೋಡಿದ ಜ್ಯೂನಿಯರ್ ಎನ್ ಟಿಆರ್ ಅವರು ಚಿತ್ರದ ಬಗ್ಗೆ ಅಪ್ಪು ನನ್ನ ಬಹಳ ವರ್ಷಗಳ ಒಳ್ಳೆಯ ಗೆಳೆಯ, ಇದು ಅವರ ಕೊನೆಯ ಚಿತ್ರ ಎಂದು ಹೇಳಲಿಕ್ಕೆ ಬಹಳ ನೋವಾಗುತ್ತದೆ, ಜೇಮ್ಸ್ ಚಿತ್ರವನ್ನು ನೋಡಿದರೆ ಬಹಳ ಖುಷಿಯಾಗುತ್ತದೆ ಆದರೆ ಅವರು ನಮ್ಮ ಜೊತೆಯಲ್ಲಿ ಇಲ್ಲ ಎಂದು ನೆನೆದು ಮನಸ್ಸಿಗೆ ನೋವಾಗುತ್ತದೆ ಎಂದು ಹೇಳಿ ಭಾವುಕರಾಗಿದ್ದಾರೆ.
ತೆಲುಗು ಸೂಪರ್ ಸ್ಟಾರ್ ಆದ ಅಲ್ಲೂ ಅರ್ಜುನ್ ಅವರು ಮೊದಲನೆ ದಿನವೆ ಹೈದರಾಬಾದ್ ನಲ್ಲಿ ಬಿಡುಗಡೆಯಾಗಿದ್ದ ಜೇಮ್ಸ್ ಚಿತ್ರವನ್ನು ಆಂಧ್ರಪ್ರದೇಶದ ಅಪ್ಪು ಅವರ ಅಭಿಮಾನಿಗಳ ಜೊತೆ ಕುಳಿತುಕೊಂಡು ಚಿತ್ರವನ್ನು ನೋಡಿದ್ದಾರೆ. ಅಲ್ಲೂ ಅರ್ಜುನ್ ಹಾಗೂ ಅಪ್ಪು ಅವರು ಬಹಳ ವರ್ಷಗಳಿಂದ ಒಳ್ಳೆಯ ಸ್ನೇಹಿತರು, ಇವರಿಬ್ಬರ ಕುಟುಂಬದವರು ಕೂಡ ಬಹಳ ಆಪ್ತರು. ಇನ್ನೂ ಮೊದಲನೆ ದಿನ ಆಂಧ್ರದಲ್ಲಿ ಚಿತ್ರವನ್ನು ನೋಡಿದ ಅಲ್ಲೂ ಅರ್ಜುನ್ ಅವರು ಚಿತ್ರದ ಬಗ್ಗೆ ಅಪ್ಪು ಸರ್ ಇಸ್ ದಿ ಬೆಸ್ಟ್ ಡ್ಯಾನ್ಸರ್, ಅವರ ಡಾನ್ಸ್, ಅವರ ಸ್ಟೈಲ್ ಯಾರಿಗೂ ಬರಲ್ಲ,
ಅವರ ರೀತಿಯ ಆಕ್ಷನ್ ಮಾಡಲು ನಾನು ಬಹಳ ಪ್ರಯತ್ನ ಪಟ್ಟೀದಿನಿ, ಅಪ್ಪು ನನ್ನ ಒಳ್ಳೆಯ ಗೆಳೆಯ, ವೀ ಮಿಸ್ ಯು ಅಪ್ಪು ಸರ್ ಎಂದು ಹೇಳಿ ಅಲ್ಲೂ ಅರ್ಜುನ್ ಭಾವುಕರಾಗಿದ್ದಾರೆ. ಇನ್ನೂ ಜೇಮ್ಸ್ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಭಾಷೆಯ ದೊಡ್ಡ ದೊಡ್ಡ ನಟರು ಮೊದಲನೆ ದಿನವೆ ಚಿತ್ರವನ್ನು ತಮ್ಮ ತಮ್ಮ ಅಭಿಮಾನಿಗಳ ಜೊತೆ ಕುಳಿತುಕೊಂಡು ನೋಡಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಹುಟ್ಟು ಹಬ್ಬಕ್ಕೆ ಜೇಮ್ಸ್ ಚಿತ್ರವನ್ನು ನೋಡಿ ಎಲ್ಲರೂ ಅಪ್ಪು ಅವರ ಕುಟುಂಬಕ್ಕೆ ಶುಭಕೋರಿದ್ದಾರೆ.
ಜೇಮ್ಸ್ ಚಿತ್ರ ಎಲ್ಲೆಡೆ ಭರ್ಜರಿಯಾಗಿ ಪ್ರದರ್ಶನ ಕಾಣುತಿದ್ದು, ಮೊದಲನೆ ದಿನವೆ ಬರೋಬ್ಬರಿ 60 ಕೋಟಿ ಕಲೆಕ್ಷನ್ ಮಾಡಿದ್ದು, ಕನ್ನಡದ ಈ ಹಿಂದೆ ಇರುವ ಎಲ್ಲಾ ರೆಕಾರ್ಡ್ ಗಳನ್ನು ಜೇಮ್ಸ್ ಚಿತ್ರವು ಉಡೀಸ್ ಮಾಡಿದೆ. ಜೇಮ್ಸ್ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರಮಂದಿರಗಳಲ್ಲಿ ಹೋಗಿ ನೋಡಲೆಬೇಕು ಎಂದು ತಮ್ಮಲ್ಲಿ ವಿನಂತಿ ಮಾಡಲಾಗುತ್ತಿದೆ. ಪುನೀತ್ ರಾಜಕುಮಾರ್ ಅವರು ಮತ್ತೆ ಕನ್ನಡ ನಾಡಿನಲ್ಲಿ ಹುಟ್ಟಿ ಬರಲಿ ಎಂದು ಆಶಿಸೋಣ.