ಲಘು ಪಾನೀಯಗಳಲ್ಲಿ ಈ ಹುಣಸೆ ಹಣ್ಣಿನ ನೀರನ್ನು ಬಳಸಲಾಗುತ್ತದೆ. ಇದರಲ್ಲಿ ಆರೋಗ್ಯಕ್ಕೆ ಬೇಕಾದಂತಹ ತುಂಬಾ ಅಂಶಗಳು ಇವೆ. ಆದ್ದರಿಂದ ಹುಣಸೆ ಹಣ್ಣಿನ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಸಿಗುವ ಉತ್ತಮ ಲಾಭಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಹುಣಸೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ಮತ್ತು ಕರಗಿರುವ ನಾರಿನಿಂದಾಗಿ ಹುಳಿಯ ಎಸ್ ವನೆಯಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗಿ, ಕೊಲೆಸ್ಟ್ರಾಲ್ ಮಟ್ಟ ಸಾಧಾರಣ ಮಟ್ಟಕ್ಕೆ ಬರಲು ಸಹಾಯ ಮಾಡುತ್ತದೆ. ಈ ಮೂಲಕ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ. ಹುಣಸೆ ಹುಳಿಯಲ್ಲಿ ಹೈದ್ರಿಸಿಟಿಕ್ ಆಮ್ಲ ಎಂಬ ಪೋಷಕಾಂಶ ಇದೆ ಇದು ದೇಹದಲ್ಲಿ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ ಈ ಹುಣಸೆ ಹುಳಿಯ ಸೇವನೆಯ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವನೆಯನ್ನು ತಪ್ಪಿಸಬಹುದು. ಈ ಮೂಲಕ ಹೆಚ್ಚುವರಿ ತೂಕ ಹೆಚ್ಚುವುದನ್ನು ತಪ್ಪಿಸಿಕೊಳ್ಳಲು ಸಹಾಯ ಆಗುತ್ತದೆ. ಈ ಹುಣಸೆ ಹಣ್ಣಿನಲ್ಲಿ ಕಬ್ಬಿಣ ಮತ್ತು ಪೊಟ್ಯಾಷಿಯಂ ಅಂಶ ಹೆಚ್ಚಾಗಿ ಇರುವುದರಿಂದ ರಕ್ತದ ಒತ್ತಡ ಸರಿಯಾದ ಪ್ರಮಾಣದಲ್ಲಿ ಸಾಗುವಂತೆ ನೋಡಿಕೊಳ್ಳುತ್ತದೆ. ಮತ್ತು ಉತ್ತಮ ಪ್ರಮಾಣದ ಕೆಂಪು ರಕ್ತ ಹೆಚ್ಚಾಗಲು ಸಹ ಇದು ಕಾರಣ ಆಗುತ್ತದೆ. ಈ ಹುಣಸೆ ಹುಳಿಯ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣಕ್ಕೆ ತರಬಹುದು. ಇದಲ್ಲದೆ ಅಗತ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾ ಹೈಡ್ರೇಟ್ ಗಳನ್ನು ಹೀರಿಕೊಳ್ಳುವದನ್ನು ಕೂಡ ತಪ್ಪಿಸುತ್ತದೆ. ಈ ಮೂಲಕ ಏರು ಪೇರು ಆಗುವ ಸಕ್ಕರೆ ಅಂಶವನ್ನು ತಪ್ಪಿಸುತ್ತದೆ.
ನಿಯಮಿತವಾಗಿ ಹುಣಸೆ ಹುಳಿಯ ನೀರನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯ ಆಗುತ್ತದೆ. ಹುಣಸೆ ಹುಳಿಯಲ್ಲಿ ಉತ್ತಮ ಪ್ರಮಾಣದ ಪೆಗ್ವಿನ್ ಮತ್ತು ಡೆನಿನ್ ಎಂಬ ಕರಗದ ನಾರುಗಳು ಇರುತ್ತವೆ. ಇವು ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ ಮಲಬದ್ಧತೆಯನ್ನು ಸಹ ಕಡಿಮೆ ಮಾಡುತ್ತದೆ. ಹುಣಸೆ ಹಣ್ಣು ರಕ್ತದ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಪೊಟ್ಯಾಷಿಯಂ ಸಹಾಯಕಾರಿ ಆಗಿದೆ. ಹುಣಸೆ ಹಣ್ಣಿನಲ್ಲಿ ಇರುವ ನಾರಿನ ಅಂಶವು ನಮ್ಮ ದೇಹದ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ನಮ್ಮ ದೇಹದಲ್ಲಿ ಇರುವ ಪ್ರೀ ಆರ್ಟಿಕಲ್ಸ್ ಅನ್ನು ನಿಯಂತ್ರಿಸುತ್ತದೆ. ಇವು ನಮ್ಮ ಹೃದಯವನ್ನು ಆರೋಗ್ಯದಿಂದ ನೋಡಿಕೊಳ್ಳುತ್ತದೆ. ಪ್ರತೀ ದಿನ ಅರ್ಧ ಸ್ಪೂನ್ ಹುಣಸೆ ಹಣ್ಣಿನ ರಸ ಅಥವಾ ಹುಣಸೆ ಹಣ್ಣನ್ನು ಸೇವಿಸುವುದರಿಂದ ನಾವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಮಧುಮೇಹವನ್ನು ಸಹ ನಿಯಂತ್ರಿಸುತ್ತದೆ.