ಟಾಟಾ ಮೋಟರ್ಸ್ ಗ್ರಾಮೀಣ ಗ್ರಾಹಕರಿಗಾಗಿ ಮನೆಬಾಗಿಲಿನಲ್ಲಿ ಕಾರು ಖರೀದಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ಹೌದು ಟಾಟಾ ಮೋಟಾರ್ಸ್ ಕಂಪನಿಯ ಗ್ರಾಮೀಣ ಪ್ರದೇಶದ ಮಾರಾಟವನ್ನು ಸುಲಭಗೊಳಿಸುವ ಪ್ರಯತ್ನವನ್ನು ನಾವು ಪ್ರೋತ್ಸಾಹಿಸಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಅನುಭವ್ ಶೋ ರೂಂನಲ್ಲಿ ಟಾಟಾ ಮೋಟಾರ್ಸ್ ಹೊಸ ಪರಿಕಲ್ಪನೆಯನ್ನು ಆರಂಭಿಸಿದೆ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಕಾರು ಖರೀದಿಯನ್ನು ಟಾಟಾ ಮೋಟಾರ್ಸ್ ಮತ್ತಷ್ಟು ಸುಲಭವಾಗಿಸಿದೆ. ಗ್ರಾಮೀಣ ಭಾರತದಲ್ಲಿ ಟಾಟಾ ಮೋಟರ್ಸ್ ಬ್ರ್ಯಾಂಡ್ ಬಗ್ಗೆ ಜಾಗೃತಿ ಹೆಚ್ಚಿಸಲು, ದೇಶಾದ್ಯಂತ ಒಟ್ಟೂ 103 ಸಂಚಾರಿ ಶೋರೂಮ್‌ಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ಸಂಚಾರಿ ಶೋರೂಮ್‌ಗಳು ಗ್ರಾಹಕರಿಗೆ ಮನೆಬಾಗಿಲಿನ ಮಾರಾಟ ಅನುಭವ ಒದಗಿಸುವುದಕ್ಕಾಗಿ ಮತ್ತು ನ್ಯೂ ಫಾರೆವರ್ ಶ್ರೇಣಿಯ ಕಾರುಗಳು ಹಾಗೂ ಎಸ್‌ಯುವಿಗಳು, ಸಹಸಾಧನಗಳ ಬಗ್ಗೆ ಮಾಹಿತಿ ನೀಡಲು, ಹಣಕಾಸು ಯೋಜನೆಗಳ ಫಲಗಳನ್ನು ಪಡೆದುಕೊಳ್ಳಲು, ಟೆಸ್ಟ್ ಡ್ರೈವ್ ಬುಕ್ ಮಾಡಲು ಮತ್ತು ವಿನಿಮಯಕ್ಕಾಗಿ ಪ್ರಸ್ತುತ ಅವರ ಬಳಿ ಇರುವ ಕಾರುಗಳ ಮೌಲ್ಯಮಾಪನ ನಡೆಸಲು, ಪ್ರಸ್ತುತ ಅಲ್ಲಿರುವ ಡೀಲರ್‌ಶಿಪ್‌ಗಳಿಗೆ ನೆರವು ಒದಗಿಸಲಿವೆ.
ಅನುಭವ್ ಕಾರ್ಯಕ್ರಮ ಆರಂಭಿಸುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ. ಗ್ರಾಮೀಣಭಾಗಗಳಿಗೆ ನಮ್ಮ ಟಾಟಾ ಬ್ರ್ಯಾಂಡ್ ತಲುಪಲು ಇದು ನೆರವಾಗಲಿದೆ. ನ್ಯೂ ಫಾರೆವರ್ ಶ್ರೇಣಿಯ ಕಾರುಗಳು ಹಾಗೂ ಎಸ್‌ಯುವಿಗಳಿಗೆ ಇನ್ನೂ ಹೆಚ್ಚಿನ ಪ್ರವೇಶಾವಕಾಶ ಒದಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ತರವಾದ ಹೆಜ್ಜೆಯಾಗಿದೆ. ನಮ್ಮ ಕಾರುಗಳು, ಹಣಕಾಸು ಯೋಜನೆಗಳು, ವಿನಿಮಯ ಕೊಡುಗೆಗಳು ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿಚ್ಛಿಸುವ ಗ್ರಾಮೀಣ ಗ್ರಾಹಕರಿಗೆ ಈ ಸಂಚಾರಿ ಶೋರೂಮ್‌ಗಳು ಏಕನಿಲುಗಡೆ ಪರಿಹಾರವಾಗಲಿದೆ. ಅಲ್ಲದೆ ಗ್ರಾಹಕ ತಲುಪುವಿಕೆಯನ್ನು ಇನ್ನಷ್ಟು ಸುಧಾರಿಸಲು ಅವು ಮುಖ್ಯವಾದ ಗ್ರಾಹಕ ಅಭಿಪ್ರಾಯಗಳನ್ನು ಮತ್ತು ಮಾಹಿತಿಯನ್ನು ಕೂಡ ಸಂಗ್ರಹಿಸಲಿವೆ. ಭಾರತದಲ್ಲಿ ಮಾರಾಟವಾಗುವ ಒಟ್ಟೂ ಪ್ಯಾಸೆಂಜರ್ ವಾಹನಗಳ ಮಾರಾಟಕ್ಕೆ ಗ್ರಾಮೀಣ ಭಾರತವು ೪೦% ಕೊಡುಗೆ ಸಲ್ಲಿಸುತ್ತಿದೆ.
ಈ ಪರಿಕಲ್ಪನೆಯೊಂದಿಗೆ ಮಾರುಕಟ್ಟೆಗಳಲ್ಲಿರುವ ಗ್ರಾಹಕ ಬೇಸ್‌ಅನ್ನು ಹೆಚ್ಚಿಸಿಕೊಳ್ಳುವ ಮತ್ತು ಗ್ರಾಹಕ ತಲುಪುವಿಕೆಯನ್ನು ವಿಸ್ತರಿಸಿಕೊಳ್ಳುವ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದೇವೆ ಎಂದು ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಜನ್ ಅಂಬ ಅವರು ಹೇಳಿದ್ದಾರೆ. ಟಾಟಾ ಮೋಟರ್ಸ್ ವಾಣಿಜ್ಯ ವಾಹನಗಳ ಪೂರ್ಣ ನಿರ್ಮಾಣದ ವಾಹನಗಳು ಅನುಭವ್ ಶೋರೂಮ್ ಮೂಲಕ ನೇರವಾಗಿ ಗ್ರಾಹಕರಿಗೆ ತಲುಪಲಿದೆ. ಈ ಪರಿಕಲ್ಪನೆಯನ್ನು ಅತ್ಯಂತ ವಿಶ್ವಾಸನೀಯವಾದ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಟಾಟಾ ಮೋಟರ್ಸ್ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಡಿ ಡೀಲರ್‌ಶಿಪ್‌ಗಳು ಈ ಸಂಚಾರಿ ಶೋರೂಮ್‌ಗಳ ಕಾರ್ಯಾಚರಣೆ ನಡೆಸುತ್ತವೆ. ಎಲ್ಲಾ ಡೀಲರ್‌ಶಿಪ್‌ಗಳು ಈ ವ್ಯಾನುಗಳು ಸಂಚರಿಸುವ ಮತ್ತು ಗುರಿಯಿರಿಸಲಾದ ಗ್ರಾಮ ಪೂರೈಸುವ ಮಾಸಿಕ ಮಾರ್ಗವನ್ನು ವಿವರಿಸಬೇಕು.
ಟಾಟಾದ ಕಾಜಿರಂಗ ಎಡಿಶನ್ ಎಸ್‌ಯುವಿ ವನ್ಯಜೀವಿ ವೈವಿಧ್ಯತೆಗೆ ಹೆಸರಾದ ಕಾಜಿರಂಗದ ಹೆಸರಿನಲ್ಲಿ ತನ್ನ ಎಸ್‌ಯುವಿಗಳನ್ನು ಟಾಟಾ ಹೊರತರುತ್ತಿದೆ. ಭಾರತದ ವನ್ಯಜೀವಿ ಜಗತ್ತಿನಿಂದ ಪ್ರೇರಣೆ ಪಡೆದು ಈ ಕಾರಿನ ಹೊರ ಮೈ ವಿನ್ಯಾಸ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಹುಲ್ಲುಗಾವಲಿನ ವಿಶಿಷ್ಟಬಣ್ಣದಲ್ಲಿ ಈ ಕಾರುಗಳ ಹೊರಮೈ ವಿನ್ಯಾಸವಿದೆ. ಹೆಚ್ಚಿನ ಮಾಹಿತಿಗೆ ಕಂಪನಿ ವೆಬ್‌ಸೈಟ್ ನೋಡಿ. ಇದರ ಬೆಲೆ 8,58,900 ರೂಪಾಯಿಯಿಂದ ಆರಂಭ. ರತನ್ ಟಾಟಾಗೆ ನ್ಯಾನೊ ಎಲೆಕ್ಟ್ರಿಕ್ ಕಾರು ಹಸ್ತಾಂತರವಾಗಿದೆ. ಎಲೆಕ್ಟ್ರಿಕ್ ವಾಹನಗಳಿಗೆ ವಿವಿಧ ರೀತಿಯ ಸೇವೆ ನೀಡುವ ಟಾಟಾ ಸಮೂಹದ ಎಲೆಕ್ಟ್ರಾ ಇವಿ ವಿಶೇಷವಾಗಿ ನಿರ್ಮಿಸಿದ ಎಲೆಕ್ಟ್ರಿಕ್ ಮಾದರಿ ಟಾಟಾ ನ್ಯಾನೋ ಕಾರನ್ನು ಗುರುವಾರ ಟಾಟಾ ಸನ್ಸ್‌ನ ಮಾಜಿ ಮುಖ್ಯಸ್ಥ ರತನ್ ಟಾಟಾ ಅವರಿಗೆ ಹಸ್ತಾಂತರಿಸಿದೆ.
ಇದು ಈಗಾಗಲೆ ಉತ್ಪಾದನೆ ಸ್ಥಗಿತಗೊಂಡಿರುವ ನ್ಯಾನೊ ಕಾರು ಎಲೆಕ್ಟ್ರಿಕ್ ಮಾದರಿಯಲ್ಲಿ ಮತ್ತೆ ಮಾರುಕಟ್ಟೆಗೆ ಬಿಡುಗಡೆಯಾಗಬಹುದಾ ಎಂಬ ಕುತೂಹಲಕ್ಕೆ ಕಾರಣವಾಗಿದೆ. ಈ ಕಾರು ನಾಲ್ಕು ಸೀಟುಗಳನ್ನು ಒಳಗೊಂಡಿದ್ದು, 160 ಕಿ.ಮೀ ವೇಗದವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಸೂಪರ್ ಪಾಲಿಮರ್ ಲಿಥಿಯಂ-ಅಯಾನ್ ಬ್ಯಾಟರಿಯ ಕಾರಾಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಟಾಟಾ ಮೋಟಾರ್ಸ್ ಕಂಪನಿಯು ಪ್ರಾರಂಭಿಸಿದ ಈ ಆಫರ್ ಅನ್ನು ಸರಿಯಾಗಿ ಬಳಸಿಕೊಳ್ಳಿ.