ಈ ಪ್ರಪಂಚದಲ್ಲಿ ಯಾವುದು ಶಾಶ್ವತವಲ್ಲ ತಂದೆ-ತಾಯಿ, ಸ್ನೇಹಿತರು, ಪತಿ-ಪತ್ನಿ, ಮಕ್ಕಳು ಎಲ್ಲ ಸಂಬಂಧಗಳು ಕ್ಷಣಿಕ ಮಾತ್ರ. ನಮ್ಮ ಸಮಯ ಬಂದಾಗ ನಾವು ಭೂಮಿಯನ್ನು ಬಿಟ್ಟು ಹೋಗಲೆಬೇಕು. ಕ್ಷಣಿಕ ಸಂಬಂಧಗಳೊಂದಿಗೆ ಹೆಚ್ಚು ನಂಟನ್ನು ಹೊಂದಿದ್ದೇವೆ ಎಂದು ನಾವು ಭಾವಿಸುತ್ತೇವೆ ಆದರೆ ಪರಮಾತ್ಮ ಶ್ರೀ ಕೃಷ್ಣನ ಪ್ರಕಾರ ಹೆಚ್ಚು ನಂಟು ಹೊಂದಿರುವುದು ಯಾವುದರೊಂದಿಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಈ ಪ್ರಪಂಚದಲ್ಲಿ ನಾವು ಯಾರ ಜೊತೆ ಹೆಚ್ಚು ನಂಟಿನಿಂದ ಇದ್ದೇವೆ ಎಂಬ ಪ್ರಶ್ನೆಗೆ ನಮ್ಮಲ್ಲಿ ಹಲವು ಉತ್ತರಗಳು ಬರುತ್ತವೆ. ಕೆಲವರು ಅಪ್ಪ ಅಮ್ಮನ ಜೊತೆ ಹೆಚ್ಚು ನಂಟಿನಿಂದ ಇರುತ್ತೇವೆ ಅವರನ್ನು ಬಿಡಲು ಸಾಧ್ಯವೆ ಇಲ್ಲ ಎಂದು ಹೇಳುತ್ತಾರೆ. ಕೆಲವರು ಗೆಳೆಯರೊಂದಿಗೆ ಬಹಳ ಸ್ನೇಹದಿಂದ ಪ್ರೀತಿಯಿಂದ ಇರುತ್ತೇವೆ ಅವರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಹಲವರು ಪತ್ನಿಯೊಂದಿಗೆ ಹೆಚ್ಚು ಪ್ರೀತಿಯಿಂದ ಇರುತ್ತೇವೆ, ಪತ್ನಿಯನ್ನು ಕಳೆದುಕೊಂಡರೆ ಜೀವನದಲ್ಲಿ ಸುಖ ಸಂತೋಷ ಉಳಿಯುವುದಿಲ್ಲ ಎಂದು ಹೇಳುತ್ತಾರೆ. ಹಲವರು ಮಕ್ಕಳೊಂದಿಗೆ ನಂಟಿನಿಂದ ಇರುತ್ತೇವೆ ಅವರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಪ್ರಪಂಚದಲ್ಲಿ ನಾವು ಹೆಚ್ಚು ನಂಟು ಇಟ್ಟುಕೊಂಡಿರುವುದು ಸಮಯದ ಜೊತೆ ಎಂದು ಶ್ರೀಕೃಷ್ಣಪರಮಾತ್ಮ ಹೇಳುತ್ತಾರೆ. ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಸಮಯಾನೆ ಭೂತ ಸಮಯಾನೆ ವರ್ತಮಾನ ಸಮಯಾನೆ ಭವಿಷ್ಯ ಆಗಿರುತ್ತದೆ. ನಾವು ಹೆಚ್ಚು ನಂಟು ಇಟ್ಟುಕೊಂಡಿರುವ ಸಮಯವನ್ನು, ಬಹುದೊಡ್ಡ ಸಂಪತ್ತನ್ನು ಸುಮ್ಮನೆ ಕಳೆಯುತ್ತೇವೆ. ಕೆಲವರು ತಮ್ಮ ಜೀವನದ ಭವಿಷ್ಯದಲ್ಲಿ ಹೀಗಾಗಬೇಕು ಹಾಗಾಗಬೇಕು ಎಂಬ ಕನಸು ಕಟ್ಟಿಕೊಂಡಿರುತ್ತಾರೆ. ಕೆಲವರು ಹಿಂದಿನ ಕಷ್ಟದ ಜೀವನದ ಬಗ್ಗೆ ಕೊರಗುತ್ತಿರುತ್ತಾರೆ. ನಾವೆಲ್ಲರೂ ಯೋಚನೆ ಮಾಡಬೇಕು ಕಳೆದುಹೋದ ನಿನ್ನೆಯ ಬಗ್ಗೆ ಯೋಚಿಸಿದ ಮಾತ್ರಕ್ಕೆ ಬದಲಾಗುವುದಿಲ್ಲ. ಭವಿಷ್ಯದ ಬಗ್ಗೆ ಅಧ್ಯಯನ ಮಾಡುತ್ತಾ ವರ್ತಮಾನವನ್ನು ನಷ್ಟ ಮಾಡಿಕೊಳ್ಳುತ್ತೇವೆ ಇದರಿಂದ ನಮ್ಮ ಮುಂದಿನ ಭವಿಷ್ಯ ಕಳೆದುಹೋದ ಭೂತಕಾಲದಂತೆ ಆಗುತ್ತದೆ.
ನಾವು ಇವತ್ತಿನ ಬಗ್ಗೆ ಮಾತ್ರ ಯೋಚನೆ ಮಾಡಬೇಕು ಈ ದಿನವನ್ನು ಸುಂದರವಾಗಿ ಮಾಡಿಕೊಳ್ಳಲು ಪ್ರಯತ್ನ ಮಾಡಬೇಕು ಆಗ ನಮ್ಮ ಭೂತಕಾಲ ಹಾಗೂ ಭವಿಷ್ಯ ಸುಂದರವಾಗಿರುತ್ತದೆ ಎಂದು ಶ್ರೀಕೃಷ್ಣ ಪರಮಾತ್ಮ ಹೇಳುತ್ತಾರೆ. ಕಳೆದುಹೋದ ಘಟನೆ, ವಿಷಯದ ಬಗ್ಗೆ ಚಿಂತಿಸಬಾರದು ಕಳೆದು ಹೋದ ಸಮಯ ಎಂದಿಗೂ ಮರಳಿ ಬರುವುದಿಲ್ಲ ಆದ್ದರಿಂದ ಸಮಯಕ್ಕೆ ನಾವು ಮಹತ್ವವನ್ನು ಕೊಡಬೇಕಾಗಿದೆ ಆದರೆ ನಾವು ಸಮಯವನ್ನು ನಿರ್ಲಕ್ಷಿಸಿ ಚಿಂತೆಯಲ್ಲಿ ಅಥವಾ ಜಗಳ, ದ್ವೇಷ ಪಡುವುದರಲ್ಲಿ ಕಳೆಯುತ್ತೇವೆ. ಇನ್ನು ಮುಂದೆಯಾದರೂ ಸಮಯಕ್ಕೆ ಮಹತ್ವ ಕೊಡೋಣ, ಸಮಯದೊಂದಿಗೆ ನಮ್ಮ ನಂಟನ್ನು ಮುಂದುವರಿಸೋಣ.