ಸಾಮಾನ್ಯವಾಗಿ ಎಲ್ಲರೂ ಸ್ನಾನಕ್ಕೆ ಬಿಸಿ ನೀರನ್ನು ಬಳಸುತ್ತಾರೆ ತಣ್ಣೀರಿನಲ್ಲಿ ಸ್ನಾನ ಮಾಡುವುದಕ್ಕೆ ಯಾರೂ ಇಷ್ಟಪಡುವುದಿಲ್ಲ ಬಿಸಿ ನೀರಿನ ಸ್ನಾನ ಒಳ್ಳೆಯದು ಎಂದು ಬಿಸಿಯಾದ ನೀರನ್ನು ತಲೆಗೆ ಹಾಕಿ ಪ್ರತಿದಿನ ಸ್ನಾನವನ್ನು ಮಾಡುತ್ತೇವೆ. ನಾವಿಂದು ಬಿಸಿನೀರಿನ ಸ್ನಾನ ಮಾಡುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರು ಒಳ್ಳೆಯದು ಬಿಸಿನೀರನ್ನು ಪ್ರತಿದಿನ ಸ್ನಾನಕ್ಕೆ ಬಳಸುವುದರಿಂದ ಕೆಲವೊಂದು ತೊಂದರೆಗಳು ಉಂಟಾಗುತ್ತದೆ. ನಾವು ತುಂಬಾ ಸುಸ್ತಾದಾಗ ಮೈಕೈ ನೋವು ಕಾಣಿಸಿಕೊಂಡಾಗ ಕಠಿಣವಾದ ಕೆಲಸವನ್ನು ಮಾಡಿ ಬಂದಾಗ ಬಿಸಿನೀರಿಗೆ ಉಪ್ಪನ್ನು ಸೇರಿಸಿ ಸ್ನಾನ ಮಾಡುವುದರಿಂದ ಒಂದು ರೀತಿಯ ಆರಾಮದಾಯಕ ಅನುಭವ ಆಗುತ್ತದೆ.
ಆದರೆ ಪ್ರತಿದಿನ ಬಿಸಿ ಬಿಸಿ ನೀರನ್ನು ತಲೆ ಸ್ನಾನಕ್ಕೆ ಬಳಸುವುದರಿಂದ ಕೂದಲುಗಳ ಆರೋಗ್ಯ ಹಾಳಾಗುತ್ತದೆ. ನಿಮಗೆ ಒಂದು ವೇಳೆ ತುಂಬಾ ಸುಸ್ತಾದಾಗ ದೇಹಕ್ಕೆ ಬಿಸಿನೀರನ್ನು ಹಾಕಿ ಕೊಳ್ಳಬಹುದು ಆದರೆ ತಲೆಗೆ ಬಿಸಿನೀರನ್ನು ಹಾಕಿಕೊಳ್ಳುವುದು ಅಷ್ಟು ಒಳ್ಳೆಯದಲ್ಲ. ಬಿಸಿನೀರನ್ನು ಹಾಕಿಕೊಳ್ಳುವುದರಿಂದ ಮಾಂಸಖಂಡಗಳಿಗೆ ಸ್ವಲ್ಪ ಆರಾಮ ಎನಿಸುತ್ತದೆ ಆದರೆ ನೆತ್ತಿಗೆ ಅದರಿಂದ ಯಾವುದೇ ರೀತಿಯ ಆರಾಮ ಎನಿಸುವುದಿಲ್ಲ. ಬಿಸಿ ನೀರನ್ನು ತಲೆಗೆ ಹಾಕುವುದರಿಂದ ಕೂದಲ ಸಮಸ್ಯೆ ಉಂಟಾಗುತ್ತದೆ ಹೊರತು ಅದರಿಂದ ಯಾವುದೇ ರೀತಿಯಾದಂತಹ ಪ್ರಯೋಜನ ಉಂಟಾಗುವುದಿಲ್ಲ. ಚರ್ಮದ ಮೇಲ್ಭಾಗದಲ್ಲಿ ಕೆರಟಿನ್ ಎಂಬ ಅಂಶ ಇರುತ್ತದೆ ಇದರಿಂದ ಚರ್ಮಕ್ಕೆ ಕಾಂತಿ ಸಿಗುತ್ತದೆ. ಕೆಲವರು ಚರ್ಮ ತುಂಬಾ ಮೃದುವಾಗಿರುತ್ತದೆ ಇನ್ನು ಕೆಲವರು ಚರ್ಮ ಗಡುಸಾಗಿರುತ್ತದೆ ಕೆಲವರಿಗೆ ಚರ್ಮ ಬೇಗನೆ ಸುಕ್ಕು ಕಟ್ಟಿಕೊಳ್ಳುತ್ತದೆ ಇದಕ್ಕೆಲ್ಲ ಪರಿಹಾರ ಸಿಗುವುದು ಕೆರಟಿನ್ ಪ್ರೋಟೀನ್ ನಿಂದ.
ನೀವು ಬಿಸಿ ನೀರಿನಿಂದ ಸ್ನಾನ ಮಾಡುವಾಗ ಕೆರಟಿನ್ ಸೆಲ್ಸ್ ಗಳಿಗೆ ಹಾನಿ ಉಂಟಾಗುತ್ತದೆ. ಇದರಿಂದ ಚರ್ಮಕ್ಕೆ ಕೂಡ ತೊಂದರೆ ಆಗುತ್ತದೆ ತುಂಬಾ ಬೇಗನೆ ಚರ್ಮ ಸುಕ್ಕುಕಟ್ಟಿಕೊಳ್ಳುತ್ತದೆ ಚರ್ಮದಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತವೆ. ಮುಂದಿನದಾಗಿ ಚರ್ಮದಲ್ಲಿ ನೈಸರ್ಗಿಕವಾಗಿ ಒಂದುರೀತಿಯ ಎಣ್ಣೆ ಉತ್ಪತ್ತಿಯಾಗುತ್ತದೆ ನೀವು ಬಿಸಿ ನೀರಿನಿಂದ ಸ್ನಾನ ಮಾಡಿದಾಗ ಎಣ್ಣೆಯ ಅಂಶ ಹೋಗುತ್ತದೆ ಚರ್ಮ ಒಣಗುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದಂತಹ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಹಾಗಾಗಿ ಚರ್ಮಕ್ಕೆ ಸಂಬಂಧಿಸಿದಂತೆ ತೊಂದರೆಗಳು ಇರುವವರು ಬಿಸಿನೀರಿನ ಸ್ನಾನವನ್ನು ಬಿಟ್ಟು ಉಗುರುಬೆಚ್ಚಗಿನ ಅಥವಾ ತಣ್ಣೀರಿನ ಸ್ನಾನವನ್ನು ರೂಡಿಸಿಕೊಂಡರೆ ಖಂಡಿತವಾಗಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಮುಂದಿನದಾಗಿ ಚರ್ಮದ ಮೇಲೆ ಚಿಕ್ಕ ಚಿಕ್ಕ ಕೂದಲುಗಳು ಇರುತ್ತವೆ ಅಲ್ಲಿ ಕಿರುಚೀಲಗಳು ಇರುತ್ತವೆ ಅದನ್ನು ಫೋರ್ಸ್ ಎಂದು ಕರೆಯುತ್ತಾರೆ ಬಿಸಿ ನೀರನ್ನು ಹಾಕಿದಾಗ ಅದು ತೆರೆದುಕೊಳ್ಳುತ್ತದೆ. ಅಂತಹ ಸಮಯದಲ್ಲಿ ಕೊಳಕು ಹೋಗಿ ಅಲ್ಲಿ ತುಂಬಿಕೊಳ್ಳುತ್ತದೆ ಅಥವಾ ಹೊರಗಡೆ ಹೋದಾಗ ದೂಳು ತುಂಬಿಕೊಳ್ಳುತ್ತದೆ ಇದರಿಂದ ಚರ್ಮದಲ್ಲಿ ಮೊಡವೆಗಳು ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ರಕ್ತ ಸಂಚಲನ ಕೂಡ ಅಧಿಕವಾಗುತ್ತದೆ ರಕ್ತಸಂಚಾರ ಅಧಿಕವಾದಾಗ ಬಿಪಿ ಹೆಚ್ಚಾಗುತ್ತದೆ ಹಾಗಾಗಿ ಬಿಪಿ ಇರುವವರು ಯಾವಾಗಲೂ ಬಿಸಿನೀರಿನಿಂದ ಸ್ನಾನ ಮಾಡಬಾರದು ಉಗುರುಬೆಚ್ಚಗಿನ ಅಥವಾ ತಣ್ಣೀರಿನ ಸ್ನಾನ ರೂಡಿಸಿಕೊಳ್ಳಬೇಕು. ಮೊದಲಿಗೆ ಬಿಸಿನೀರನ್ನು ಬಳಸಿದರು ನಂತರದಲ್ಲಿ ತಣ್ಣೀರನ್ನು ಬಳಸಬೇಕು.ತಣ್ಣೀರಿನಿಂದ ಸ್ನಾನ ಮಾಡುವುದರಿಂದ ರಕ್ತ ಸಂಚಾರದಲ್ಲಿ ಉಂಟಾಗುವಂತಹ ವ್ಯತ್ಯಯ ಕಡಿಮೆಯಾಗುತ್ತದೆ.
ವಾತಾವರಣ ತುಂಬಾ ತಂಪಾಗಿದ್ದಾಗ ಉಗುರು ಬೆಚ್ಚಗಿನ ನೀರನ್ನು ಬಳಸುವುದು ತುಂಬಾ ಒಳ್ಳೆಯದು. ಮಂಡಿ ನೋವು ಅಥವಾ ಸೊಂಟನೋವು ಇರುವವರು ಆ ಜಾಗದಲ್ಲಿ ಬಿಸಿನೀರನ್ನು ಹಾಕಿದಾಗ ಅವರಿಗೆ ಸ್ವಲ್ಪ ಆರಾಮ ವೆನಿಸುತ್ತದೆ. ಮಂಡಿ ನೋವು ಇದ್ದವರು ಆ ಜಾಗಕ್ಕೆ ಮೊದಲು ಬಿಸಿನೀರನ್ನು ಹಾಕಿ ನಂತರದಲ್ಲಿ ತಣ್ಣೀರನ್ನು ಬಳಕೆ ಮಾಡಬೇಕು. ಈ ರೀತಿಯಾಗಿ ನಾವು ಸ್ನಾನದಲ್ಲಿ ಬಿಸಿನೀರಿನ್ನು ಬಳಸುವುದಕ್ಕಿಂತ ಉಗುರುಬೆಚ್ಚಗಿನ ಅಥವಾ ತಣ್ಣೀರನ್ನು ಬಳಸಿ ಸ್ನಾನವನ್ನು ಮಾಡುವುದರಿಂದ ಉತ್ತಮವಾದಂತಹ ಪರಿಣಾಮವನ್ನು ಕಂಡುಕೊಳ್ಳಬಹುದಾಗಿದೆ. ನೀವು ಕೂಡ ಬಿಸಿನೀರಿನ ಸ್ನಾನವನ್ನು ಕಡಿಮೆ ಮಾಡಿ ಅದರ ಬದಲಿಗೆ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನ ಸ್ಥಾನವನ್ನು ರೂಢಿಸಿಕೊಳ್ಳುವುದು ಉತ್ತಮ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.