ಎಲ್ಲರಿಗೂ ತಿಳಿದಿರುವ ಹಾಗೆ ಯುಕ್ರೇನ್ ರಷ್ಯಾ ಯುದ್ಧ ನಡೆಯುತ್ತಿದೆ ಈ ಸಮಯದಲ್ಲಿ ಭಾರತದಲ್ಲಿ ಒಂದು ವಿಷಯ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದು ಯುಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಕಥೆ ಏನಾಗುತ್ತದೆ ಎಂದು. ಸುಮಾರು ಹದಿನೆಂಟು ಸಾವಿರದಷ್ಟು ಭಾರತೀಯರು ಯುಕ್ರೇನ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಅಷ್ಟೊಂದು ಸಂಖ್ಯೆಯಲ್ಲಿ ಭಾರತೀಯರು ದೂರದ ಯುದ್ದ ಪೀಡಿತ ದೇಶದಲ್ಲಿ ಏನು ಮಾಡುತ್ತಿದ್ದಾರೆ ಎಂದು ಆಶ್ಚರ್ಯ ಆಗಬಹುದು. ಆಸಕ್ತಿದಾಯಕ ವಿಷಯ ಏನೆಂದರೆ ಅದರಲ್ಲಿ ಬಹುತೇಕರು ವೈದ್ಯಕೀಯ ವಿದ್ಯಾರ್ಥಿಗಳು. ಯಾಕೆ ಅಷ್ಟು ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಅಷ್ಟು ದೂರದ ಯುರೋಪಿಯನ್ ದೇಶ ಯುಕ್ರೇನ್ ಗೆ ಹೋಗಿ ಓದುತ್ತಿದ್ದಾರೆ.

ಯುರೋಪ್ನಲ್ಲಿ ಇನ್ನೂ ಅನೇಕ ಶ್ರೀಮಂತ ರಾಷ್ಟ್ರಗಳಿಗೆ ಸುರಕ್ಷಿತ ದೇಶಗಳಿವೆ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿರುವಂತಹ ದೇಶಗಳಿವೆ ಅವೆಲ್ಲವುಗಳನ್ನು ಬಿಟ್ಟು ಯುಕ್ರೇನ್ ಗೆ ಹೋಗಿ ಯಾಕೆ ಓದುತ್ತಿದ್ದಾರೆ ಎನ್ನುವ ವಿಷಯದ ಕುರಿತು ನಾವು ನಿಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಯುಕ್ರೇನ್ ನಲ್ಲಿ ಇರುವ ಒಟ್ಟು ವಿದೇಶಿ ವಿದ್ಯಾರ್ಥಿಗಳ ಪೈಕಿ ಅತಿ ಹೆಚ್ಚು ಇರುವುದು ಭಾರತೀಯ ವಿದ್ಯಾರ್ಥಿಗಳು. ಹುಟ್ಟು ಸುಮಾರು ಎಪ್ಪತ್ತೈದು ಸಾವಿರ ವಿದೇಶಿ ವಿದ್ಯಾರ್ಥಿಗಳಿದ್ದರೆ ಅದರಲ್ಲಿ ಹದಿನೆಂಟು ಸಾವಿರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಭಾರತೀಯ ವಿದ್ಯಾರ್ಥಿಗಳಾಗಿದ್ದಾರೆ. ಯುಕ್ರೇನ್ ನ ಶಿಕ್ಷಣ ಭಾರತೀಯರಿಗೆ ಪ್ರಿಯವಾದ ತಾಣ ಅದರಲ್ಲಿಯೂ ಎರಡು ಸಾವಿರದ ಹಾದಿನಾರರಿಂದ ಯುಕ್ರೇನ್ ಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿರುವ ಭಾರತೀಯರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

ಅದರಲ್ಲಿ ಹೆಚ್ಚಿನವರು ವೈದ್ಯಕೀಯ ಶಿಕ್ಷಣಕ್ಕಾಗಿ ಹೋಗುತ್ತಾರೆ ಭಾರತದಲ್ಲಿ ವೈದ್ಯಕೀಯಕ್ಕೆ ಬಹಳ ಹೆಚ್ಚಿನ ಬೇಡಿಕೆಯಿದೆ ಕನಿಷ್ಠ ಆರು ಲಕ್ಷ ವೈದ್ಯರ ಕೊರತೆಯನ್ನು ಭಾರತ ಎದುರಿಸುತ್ತಿದೆ. ಆದರೆ ಭಾರತೀಯ ವಿಶ್ವವಿದ್ಯಾಲಯಗಳು ಈ ಬೇಡಿಕೆಯನ್ನು ಪೂರೈಸುವಷ್ಟು ಅರ್ಹತೆಯನ್ನು ಹೊಂದಿಲ್ಲ. ಏಕೆಂದರೆ ಇಲ್ಲಿರುವುದು ಕೇವಲ ಒಟ್ಟು ಎಪ್ಪತ್ತಾರು ಸಾವಿರ ಸೀಟುಗಳು ಮಾತ್ರ. ಅದಕ್ಕಾಗಿ ಹದಿನೈದು ಲಕ್ಷಕ್ಕೂ ಹೆಚ್ಚಿನ ಕ್ಯಾಂಡಿಡೇಟ್ಸ್ ಅಕ್ಷರಸಹ ನೀಟ್ ಯುದ್ಧವನ್ನು ಮಾಡುತ್ತಾರೆ. ಯಾರಿಗೆ ಸರ್ಕಾರದ ಸೀಟ್ ಸಿಗುವುದಿಲ್ಲ ಪ್ರೈವೇಟ್ ಸೀಟಿಗೆ ಸಾಕಾಗುವಷ್ಟು ದುಡ್ಡು ಸಿಗುವುದಿಲ್ಲ ಅಂತವರು ವಿದೇಶದಲ್ಲಿ ಕಡಿಮೆ ಬೆಲೆಗೆ ಎಲ್ಲಿ ಸೀಟ್ ಸಿಗುತ್ತದೆ ಎಂದು ಹುಡುಕುತ್ತಾರೆ ಆಗ ಹೆಚ್ಚಿನವರ ಕಣ್ಣಿಗೆ ಆಕರ್ಷಕವಾಗಿ ಕಾಣುವುದು ಯುಕ್ರೇನ್. ಯಾಕೆಂದರೆ ಅಲ್ಲಿ ಕಡಿಮೆ ಫೀಸ್ ಮತ್ತು ಅದ್ಭುತ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ.

ಭಾರತದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ಶಿಕ್ಷಣವನ್ನ ಮುಗಿಸುವುದಕ್ಕೆ ಕಡಿಮೆಯೆಂದರೂ ಇಪ್ಪತ್ತೈದು ಲಕ್ಷಕ್ಕೂ ಅಧಿಕ ಹಣ ಬೇಕಾಗುತ್ತದೆ. ಯುಕ್ರೇನ್ ನೆರೆಯ ದೇಶವಾದ ಪೋಲೆಂಡಿನಲ್ಲಿ ಹತ್ತು ಲಕ್ಷ ಖರ್ಚಾಗುತ್ತದೆ ಆದರೆ ಯುಕ್ರೇನ್ ನಲ್ಲಿ ಎರಡೂವರೆ ಲಕ್ಷದಿಂದ ಮೂರು ಲಕ್ಷ ರೂಪಾಯಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ಓದಬಹುದು. ಜೊತೆಗೆ ಇಲ್ಲಿ ಪಡೆಯುವಂತಹ ಪದವಿಯನ್ನು ವರ್ಲ್ಡ್ ಹೆಲ್ತ್ ಕೌನ್ಸಿಲ್ ಗುರುತಿಸುತ್ತದೆ. ಅದೇ ರೀತಿ ಭಾರತೀಯ ಮೆಡಿಕಲ್ ಕೌನ್ಸಿಲ್ ಕೂಡ ಮಾನ್ಯಮಾಡುತ್ತದೆ ಯುರೋಪಿಯನ್ ಮೆಡಿಕಲ್ ಕೌನ್ಸಿಲ್ ಹಾಗೂ ಜನರಲ್ ಮೆಡಿಕಲ್ ಕೌನ್ಸಿಲ್ ಆಫ್ ದ ಯುನೈಟೆಡ್ ಕಿಂಗ್ಡಮ್ ಕೂಡ ಯುಕ್ರೇನ್ ವೈದ್ಯಕೀಯ ಪದವಿಗೆ ಮಾನ್ಯತೆ ನೀಡುತ್ತವೆ. ಜೊತೆಗೆ ಯುಕ್ರೇನ್ ನಲ್ಲಿ ಇರುವಂತಹ ಕೆಲವು ಯೂನಿವರ್ಸಿಟಿಗಳು ಎರಡುನೂರು ಎರಡು ನೂರಾ ಐವತ್ತು ವರ್ಷ ಹಳೆಯವು ಅತ್ಯಾಧುನಿಕ ಮೂಲಸೌಕರ್ಯಗಳಿಂದ ಕೂಡಿವೆ.

ಮೊದಲು ಯುಕ್ರೇನ್ ಸೋವಿಯತ್ ರಷ್ಯಾದ ಭಾಗವಾಗಿತ್ತು ಇತ್ತೀಚಿನ ದಿನಗಳಲ್ಲಿ ಯೂರೋಪಿಯನ್ ಯೂನಿಯನ್ ಹಾಗೂ ಅಮೇರಿಕಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ ಹೀಗಾಗಿ ಮೊದಲಿನಿಂದಲೂ ಇಲ್ಲಿನ ಶಿಕ್ಷಣ ಮತ್ತು ಹ್ಯೂಮನ್ ರಿಸೋರ್ಸ್ ಗುಣಮಟ್ಟ ಉತ್ತಮವಾಗಿದೆ ಹಾಗಾಗಿ ಯುಕ್ರೇನ್ ಮಧ್ಯಮ ಆದಾಯ ಗಳಿಸುವ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರಿಯವಾದ ತಾಣವಾಗಿದೆ ಆದರೆ ಇಲ್ಲಿ ಮೆಡಿಕಲ್ ಮುಗಿಸಿ ಬಂದ ಮೇಲೆ ಭಾರತದಲ್ಲಿ ನೇರವಾಗಿ ಪ್ರಾಕ್ಟೀಸ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ನ್ಯಾಷನಲ್ ಮೆಡಿಕಲ್ ಕಮಿಷನ್ ನಡೆಸುವ ಸ್ಕ್ರೀನಿಂಗ್ ಪರೀಕ್ಷೆಯನ್ನು ಪಾಸ್ ಮಾಡಬೇಕು ಅದಾದ ಮೇಲಷ್ಟೇ ಭಾರತದಲ್ಲಿ ಪ್ರಾಕ್ಟಿಸ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಮೆಡಿಕಲ್ ಜೊತೆ ಎಕನಾಮಿಕ್ಸ್ ಇಂಜಿನಿಯರಿಂಗ್ ಆರ್ಕಿಟೆಕ್ಚರ್ ಕಲಿಯುವುದಕ್ಕೂ ಭಾರತೀಯ ವಿದ್ಯಾರ್ಥಿಗಳು ಯುಕ್ರೇನ್ ಗೆ ಹೋಗುತ್ತಾರೆ. ಇದಿಷ್ಟು ಯಾಕೆ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯುಕ್ರೇನ್ ನಲ್ಲಿ ಅಭ್ಯಾಸವನ್ನು ಮಾಡುವುದಕ್ಕೆ ಹೋಗುತ್ತಾರೆ ಎಂಬುದರ ಕುರಿತಾದ ಮಾಹಿತಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!