ಹೊಸ ಚುನಾವಣಾ ಗುರುತಿನ ಚೀಟಿಯನ್ನು ಪಡೆಯುವುದಕ್ಕೆ ಆನ್ಲೈನ್ ಮೂಲಕ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ನೀವು ಹೊಸ ಚುನಾವಣೆ ಗುರುತಿನ ಚೀಟಿಯನ್ನು ಪಡೆದುಕೊಳ್ಳಬೇಕು ಎಂದರೆ ನೀವು ಯಾವುದೇ ಸಿಎಸ್ಸಿ ಸೆಂಟರಿಗೆ ಹೋಗುವ ಅವಶ್ಯಕತೆ ಇಲ್ಲ ಅಥವಾ ಯಾವುದೇ ಅಧಿಕಾರಿಗಳನ್ನು ಕಾಣುವಂತಹ ಅವಶ್ಯಕತೆಯಿಲ್ಲ ಅಥವಾ ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ. ನೀವು ಮನೆಯಲ್ಲಿಯೇ ಸುಲಭವಾಗಿ ಆನ್ಲೈನ್ ಮೂಲಕ ಚುನಾವಣಾ ಗುರುತಿನ ಚೀಟಿಯನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಮೊದಲಿಗೆ ಚುನಾವಣಾ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಎನ್ ವಿ ಎಸ್ ಪಿ ಅಫೀಷಿಯಲ್ ವೆಬ್ಸೈಟ್ ಅನ್ನು ತೆರೆಯಬೇಕು. ನೀವು ಮೊದಲ ಬಾರಿಗೆ ಇದನ್ನು ಬಳಕೆ ಮಾಡುತ್ತಿದ್ದರೆ ಮೊದಲಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು ಈಗಾಗಲೇ ಈ ವೆಬ್ಸೈಟ್ ಅನ್ನು ಬಳಸಿದವರು ನೇರವಾಗಿ ಲಾಗಿನ ಆಗಬಹುದು ಅಲ್ಲಿ ಕೆಳಗಡೆ ಲಾಗಿನ್ ರಿಜಿಸ್ಟರ್ ಎಂಬುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ನಿಮ್ಮ ಯೂಸರ್ ಐಡಿ ಪಾಸ್ವರ್ಡ್ ಹಾಕಿ ಲಾಗಿನ್ ಆಗಬೇಕು. ನಂತರ ನಿಮ್ಮ ಮುಂದೆ ಒಂದು ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ ಫ್ರೆಶ್ ಇನ್ ಕ್ಲುಸಿಂಗ್ ಎನ್ರೊಯ್ಮೆಂಟ್ ಎನ್ನುವ ಆಯ್ಕೆ ಕಂಡುಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ನಂತರ ನೀವು ಭಾರತದಲ್ಲಿ ವಾಸವಾಗಿದ್ದಿರಾ ಅಥವಾ ಹೊರದೇಶದಲ್ಲಿ ವಾಸವಾಗಿದ್ದಿರಾ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
ನಂತರ ನಿಮ್ಮ ರಾಜ್ಯವನ್ನು ಆಯ್ಕೆಮಾಡಿಕೊಂಡು ನೆಕ್ಸ್ಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಅಸೆಂಬ್ಲಿ ಯಾವುದು ಬರುತ್ತದೆ ಎನ್ನುವುದನ್ನು ಆಯ್ಕೆಮಾಡಿಕೊಳ್ಳಬೇಕು. ನಂತರ ಅಲ್ಲಿ ನಿಮ್ಮ ವಿಳಾಸದ ಮಾಹಿತಿಯನ್ನು ತುಂಬಬೇಕು ನಿಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಬೇಕು. ನಂತರ ನಿಮ್ಮ ವಿಳಾಸ ಇರುವ ಯಾವುದಾದರೂ ಒಂದು ದಾಖಲೆಯನ್ನು ಅಪ್ಲೋಡ್ ಮಾಡಬೇಕು. ನಂತರ ಈಗಾಗಲೇ ನಿಮ್ಮ ಕುಟುಂಬದಲ್ಲಿ ನಿಮ್ಮ ತಂದೆ ಅಥವಾ ತಾಯಿ ಚುನಾವಣಾ ಗುರುತಿನ ಚೀಟಿಯನ್ನು ಮಾಡಿಸಿಕೊಂಡಿದ್ದರೆ ಅದರ ನಂಬರನ್ನ ದಾಖಲಿಸಬೇಕು. ನಿಮ್ಮ ವಯಸ್ಸಿಗೆ ಸಂಬಂಧಿಸಿದ ಯಾವುದಾದರೂ ಒಂದು ದಾಖಲೆಯನ್ನು ಅಪ್ಲೋಡ್ ಮಾಡಬೇಕು ಕೆಳಗಡೆ ಡಿಕ್ಲರೇಷನ್ ಫಾರ್ಮ್ ಎನ್ನುವುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು.
ಅದರ ಪ್ರಿಂಟನ್ನು ತೆಗೆದುಕೊಳ್ಳಬೇಕು ಯಾರು 21 ವರ್ಷಕ್ಕಿಂತ ಮೇಲ್ಪಟ್ಟು ಚುನಾವಣೆ ಗುರುತಿನ ಚೀಟಿಗೆ ಅರ್ಜಿಯನ್ನು ಸಲ್ಲಿಸುತ್ತಾರೆ ಅವರು ಏಜ್ ಡಿಕ್ಲರೇಷನ್ ಫಾರ್ಮನ್ನು ಅಪ್ಲೋಡ್ ಮಾಡಬೇಕು. ಹದಿನೆಂಟು ಹತ್ತೊಂಬತ್ತು ಇಪ್ಪತ್ತು ವಯಸ್ಸಿನವರು ಅಪ್ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ. ಪ್ರಿಂಟ್ ತೆಗೆದುಕೊಂಡಿರುವ ಅರ್ಜಿಯ ಮೇಲೆ ನಿಮ್ಮ ತಂದೆಯ ಹೆಸರು ನಿಮ್ಮ ಹೆಸರು ನಿಮ್ಮ ಅಸೆಂಬ್ಲಿ ಇವುಗಳನ್ನು ಭರ್ತಿ ಮಾಡಿ ದಿನಾಂಕ ಮತ್ತು ಸ್ಥಳವನ್ನು ನಮೂದಿಸಿ ನಿಮ್ಮ ಸಹಿಯನ್ನು ಹಾಕಬೇಕು.
ನಂತರ ಇದನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು. ನಂತರ ನೆಕ್ಸ್ಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಅಲ್ಲಿ ಕೇಳುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕು ಮತ್ತು ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕು ನಂತರ ಮುಂದಿನ ಪುಟಕ್ಕೆ ಹೋಗಬೇಕು ಅಲ್ಲಿ ನೀವು ಅಂಗವಿಕಲರಾಗಿದ್ದಲ್ಲಿ ಮಾಹಿತಿಯನ್ನು ಭರ್ತಿ ಮಾಡಬೇಕು.
ನಂತರ ನಿಮ್ಮ ಮೊಬೈಲ್ ನಂಬರನ್ನು ಹಾಕಬೇಕು ನಂತರ ಮುಂದಿನ ಪುಟದಲ್ಲಿ ಡಿಕ್ಲರೇಷನ್ ಎನ್ನುವುದು ಕಾಣಿಸುತ್ತದೆ ಅಲ್ಲಿ ನಿಮ್ಮ ಊರಿನ ಹೆಸರನ್ನು ಹಾಕಬೇಕು. ನಂತರ ಕೊನೆಯ ಪುಟದಲ್ಲಿ ನೀವು ಭರ್ತಿ ಮಾಡಿರುವ ಮಾಹಿತಿ ಸರಿಯಾಗಿ ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ನಂತರ ಸಬ್ಮಿಟ್ ಮಾಡಬೇಕು. ನಂತರ ನಿಮಗೆ ರೆಫರೆನ್ಸ್ ಐಡಿ ಸಿಗುತ್ತದೆ ಅದನ್ನು ನೀವು ಬರೆದಿಟ್ಟುಕೊಳ್ಳಬೇಕು ಮುಂದಿನ ದಿನಗಳಲ್ಲಿ ನಿಮ್ಮ ಚುನಾವಣಾ ಗುರುತಿನ ಚೀಟಿಯ ಸ್ಟೇಟಸ್ ಅನ್ನು ಪರಿಶೀಲಿಸಲು ಅದು ಬೇಕಾಗುತ್ತದೆ. ಈ ರೀತಿಯಾಗಿ ನೀವು ಸುಲಭವಾಗಿ ನಿಮ್ಮ ಮನೆಯಲ್ಲಿಯೇ ಗುರುತಿನ ಚೀಟಿಯನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.