ನಾವಿಂದು ನಿಮಗೆ ಕಾಂಟ್ರಾಕ್ಟರ್ ಗಳು ಮನೆಯನ್ನು ಕಟ್ಟುವಾಗ ಯಾವ ರೀತಿಯಾದಂತಹ ಮೋಸಗಳನ್ನು ನಿಮಗೆ ಮಾಡುತ್ತಾರೆ ಎನ್ನುವುದರ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಇದರಿಂದಾಗಿ ನೀವು ನಿಮ್ಮ ಹಣವನ್ನು ಎಚ್ಚರಿಕೆಯಿಂದ ಉಳಿಸಿಕೊಳ್ಳಬಹುದು. ನೀವು ಕಷ್ಟಪಟ್ಟು ದುಡಿದಂತಹ ಹಣವನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿಕೊಳ್ಳಬೇಕು ಹಾಗಾಗಿ ಈ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿ ಕೊಡುತ್ತಿದ್ದೇವೆ. ಮೊದಲನೆಯದಾಗಿ ಪ್ಲಾನ್ ಮಾಡಿಫಿಕೇಷನ್ ಹೆಚ್ಚಿನ ಕಂಟ್ರಾಕ್ಟರುಗಳು ಪ್ಲಾನ್ ಮಾಡಿಫಿಕೇಷನ್ ನನ್ನು ನಿಮ್ಮಿಂದ ಬಯಸುತ್ತಾರೆ.
ಹೇಗೆಂದರೆ ಉದಾಹರಣೆಗೆ ನೀವು ನಿಮಗೆ ಇಷ್ಟವಾಗುವ ರೀತಿಯಲ್ಲಿ ಒಂದು ಯೋಜನೆಯನ್ನು ಹಾಕಿಕೊಂಡಿರುತ್ತಿರಿ. ಕೆಲವೊಂದು ಸಮಯದಲ್ಲಿ ಅಲ್ಲಿ ಖರ್ಚು ಆಗುವಂತಹ ವೆಚ್ಚವನ್ನು ನೋಡಿಕೊಂಡು ನಿಮ್ಮ ಕಾಂಟ್ರಾಕ್ಟರ್ ಗಳು ಉದಾಹರಣೆಗೆ ನೀವು 3ಪೀಟ್ 4ಪೀಟ್ ಒಂದು ಬಾತ್ ರೂಮ್ ಅಂದಾಜನ್ನು ಮಾಡಿರುತ್ತೀರಿ ಆಗ ಅವರು ಇಲ್ಲ ಅದನ್ನು ಅಡ್ಜಸ್ಟ್ಮೆಂಟ್ ಮಾಡಬೇಕು ಎಂದು ಹೇಳುತ್ತಾರೆ. ಇದು ಸಂಪೂರ್ಣವಾಗಿ ತಪ್ಪಾಗುತ್ತದೆ ನಾವು ಕಟ್ಟ ಸುವಂತಹ ಮನೆ ನಮ್ಮ ಇಷ್ಟದಂತೆ ಇರಬೇಕು ಕಾಂಟ್ರಾಕ್ಟರ್ ಇಷ್ಟದಂತೆ ಇರಬಾರದು. ಪ್ಲಾನ್ ಮಾಡಿಫಿಕೇಷನ್ ಎನ್ನುವಂಥದ್ದು ಮನೆ ಕಟ್ಟಿಸುವವರಿಂದ ಆಗಬೇಕೇ ಹೊರತು ಕಾಂಟ್ರಾಕ್ಟರ್ ಗಳ ಕಡೆಯಿಂದ ಆಗಬಾರದು. ಎರಡನೇದಾಗಿ ಸಿಮೆಂಟ್ ಗ್ರೇಡ್ ಸಿಮೆಂಟ್ ಗ್ರೇಡ್ ನಲ್ಲಿ ನೀವು ಫೌಂಡೇಶನ್ ಭೀಮ್ ಕಾಲಂಸ್ ಸ್ಲಾಬ್ ನಿರ್ಮಾಣ ಮಾಡುವುದಕ್ಕೆ ನೀವು 53 ಗ್ರೇಡ್ ಸಿಮೆಂಟ್ ಅನ್ನ ಬಳಸಬೇಕು.
ಹಾಗೂ ಪ್ಲಾಸ್ಟರಿಂಗ್ ಮಾಡುವುದಕ್ಕೆ 43 ಗ್ರೇಡ್ ಸಿಮೆಂಟ್ ಬಳಸಬೇಕು. ನೀವು ಸಿಮೆಂಟ್ ಗ್ರೇಡ್ ಅನ್ನ ನಿರ್ಧಾರ ಮಾಡುವುದಕ್ಕೆ ಕಾಂಟ್ರಾಕ್ಟ್ ಗಳಿಗೆ ಬಿಟ್ಟರೆ ಅವರು ಇಡೀ ಮನೆಯನ್ನು 43 ಗ್ರೇಡ್ ಸಿಮೆಂಟ್ ನಲ್ಲಿ ಕಟ್ಟಿ ಮುಗಿಸುತ್ತಾರೆ. ಇದರಿಂದ ಮನೆಯಲ್ಲಿ ದೊಡ್ಡ ದೊಡ್ಡ ಬಿರುಕುಗಳು ಕಾಣಿಸಿಕೊಳ್ಳುವ ಸಂಭವ ಇರುತ್ತದೆ. ಹಾಗಾಗಿ ಫೌಂಡೇಶನ್ ಭೀಮ್ ಕಾಲಂಸ್ ಸ್ಲಾಬ್ ನಿರ್ಮಾಣಕ್ಕೆ 53 ಗ್ರೇಡ್ ಸಿಮೆಂಟ್ ಅನ್ನ ಬಳಸಬೇಕು ಪ್ಲಾಸ್ಟರಿಂಗ್ ಮಾಡುವುದಕ್ಕೆ 43 ಗ್ರೇಡ್ ಸಿಮೆಂಟ್ ಬಳಸಬೇಕು. ಮುಂದಿನದಾಗಿ ಟಿಎಂಟಿ ರಾಡ್ ಗಳ ಬಳಕೆ ಅನೇಕ ಜನರಿಗೆ ಮನೆ ನಿರ್ಮಾಣ ಮಾಡುವಾಗ ಯಾವ ರೀತಿಯಾದಂತಹ ರಾಡ್ ಗಳ ಬಳಕೆಯನ್ನು ಮಾಡಬೇಕು ಎಂಬುದರ ಕುರಿತಾದ ಗೊಂದಲವಿರುತ್ತದೆ. ಫೌಂಡೇಶನ್ ಆಗಿರಬಹುದು ಭೀಮ್ ಆಗಿರಬಹುದು ಅಥವಾ ಕಾಲಮ್ ಆಗಿರಬಹುದು ಅಥವಾ ಸ್ಲಾಬ್ ಇರಲಿ ಇದಕ್ಕೆ 16ಎಂಎಂ ರೋಡ್ ಗಳ ಬಳಕೆ ಕಡ್ಡಾಯವಾಗಿದೆ.
ನೀವು ಕಡಿಮೆ ಎಂಎಂ ರಾಡುಗಳನ್ನು ಬಳಸಿ ಕಟ್ಟಡ ನಿರ್ಮಾಣ ಮಾಡಿದಾಗ ಮುಂದೊಂದು ದಿನ ಮನೆಯ ಮೇಲುಗಡೆ ಮತ್ತೊಂದಿಷ್ಟು ಮನೆಗಳನ್ನು ಕಟ್ಟಿ ಬಾಡಿಗೆ ಕೊಡಬೇಕು ಎಂಬ ಯೋಚನೆ ಬಂದರೆ ನೀವು ಕೆಳಗಡೆ 16ಎಂಎಂ ರಾಡ್ ಗಳನ್ನು ಬಳಸಿದರೆ ಚಿಂತೆಯಿಲ್ಲದೆ ಮೇಲುಗಡೆ ಮಹಡಿಗಳನ್ನು ಆರಾಮವಾಗಿ ಕಟ್ಟಬಹುದು. ಮುಂದಿನದಾಗಿ ನಿರ್ಮಾಣಕಾರ್ಯದಲ್ಲಿ ಮಾಡಬೇಕಾದಂತಹ ಗ್ಯಾಪ್ ಗಳ ಬಗ್ಗೆ ಫೌಂಡೇಶನ್ ಹಾಕಿದಮೇಲೆ ಪ್ಲಿಂತ್ ಭೀಮ್ ವರೆಗೆ ಒಂದು ಲೆಕ್ಕ ಅದರ ನಂತರ ಸ್ಲಾಬ್ ವರೆಗೆ ಒಂದು ಲೆಕ್ಕ ಅಲ್ಲಿ ನೀವು ವೈಜ್ಞಾನಿಕವಾಗಿ 28 ದಿನಗಳ ವಿರಾಮವನ್ನು ನೀಡಬೇಕಾಗುತ್ತದೆ. ಆದರೆ ಕಾಂಟ್ರಾಕ್ಟರ್ ಗಳು ಕೆಲಸವನ್ನು ಬೇಗ ಮುಗಿಸುವ ಉದ್ದೇಶದಿಂದ ಒಂದು ವಾರದವರೆಗೆ ವಿರಾಮ ನೀಡಿ ಮತ್ತೆ ನಿರ್ಮಾಣಕಾರ್ಯವನ್ನು ಪ್ರಾರಂಭಿಸುತ್ತಾರೆ. ಮುಂದಿನದಾಗಿ ವಸ್ತುಗಳ ಆಯ್ಕೆ ಇಲ್ಲಿ ತುಂಬಾ ಮೋಸ ವಾಗುವಂತಹ ಸಾಧ್ಯತೆ ಇರುತ್ತದೆ.
ಕಾಂಟ್ರಾಕ್ಟರ್ ಗಳು ಸಹಿ ಮಾಡುವಾಗ ತಮ್ಮ ಕಡೆಯಿಂದಲೇ ವಸ್ತುಗಳನ್ನು ತೆಗೆದುಕೊಂಡು ಬರುತ್ತೇವೆ ಎಂದು ಹೇಳುತ್ತಾರೆ. ಅವರು ತಮ್ಮ ಬಜೆಟ್ ಗೆ ತಕ್ಕ ಹಾಗೆ ಸಿಗುವ ಗುಣಮಟ್ಟದ ವಸ್ತುವನ್ನು ತಂದು ಕೊಡುತ್ತಾರೆ. ಈ ರೀತಿ ಮಾಡುವುದರಿಂದ ಕಳಪೆ ಗುಣಮಟ್ಟದ ವಸ್ತುಗಳು ನಿಮ್ಮ ಮನೆಗೆ ಬರುತ್ತದೆ ಹಾಗಾಗಿ ನೀವೇ ಸ್ವತಹ ಅಂಗಡಿಗಳಿಗೆ ಭೇಟಿ ನೀಡಿ ನಿಮಗೆ ಯಾವ ಗುಣಮಟ್ಟದ ವಸ್ತುಗಳು ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು.
ಮುಂದಿನದಾಗಿ ಲಿಂಟ್ಲ್ ಅಂದರೆ ಬಾಗಿಲು ಮತ್ತು ಕಿಟಕಿಗಳ ಮೇಲೆ ಆಧಾರಕ್ಕಾಗಿ ಕೊಟ್ಟಿರುವಅಂತದ್ದು. ಇದನ್ನ ಬಾಗಿಲು ಅಥವಾ ಕಿಟಕಿಯ ಸುತ್ತ ಹಾಕಬೇಕು ಆದರೆ ಕಂಟ್ರಾಕ್ಟರುಗಳು ಖರ್ಚನ್ನು ಉಳಿಸುವುದಕ್ಕೋಸ್ಕರ ಮೇಲೆ ಅಷ್ಟೇ ಆಧಾರವಾಗಿ ಲಿಂಟ್ಲ್ ನ್ನು ಹಾಕುತ್ತಾರೆ. ಮುಂದಿನ ದಾಗಿ ಇಟ್ಟಿಗೆಗಳ ಆಯ್ಕೆ ಮನೆ ನಿರ್ಮಾಣ ಮಾಡುವಾಗ ಹೈಡ್ರೌಲಿಕ್ ಪ್ರೆಸ್ ಇಟ್ಟಿಗೆಗಳನ್ನು ನೀವು ಹೊರಗಿನ ಗೋಡೆಗಳ ನಿರ್ಮಾಣಕ್ಕೆ ಬಳಸುವುದು ತುಂಬಾ ಒಳ್ಳೆಯದು.
ಒಳಗಿನ ಗೋಡೆಗಳಿಗೆ ಕೈಯಿಂದ ನಿರ್ಮಿಸಿದಂತಹ ಇಟ್ಟಿಗೆಗಳನ್ನು ಬಳಸಬಹುದು. ಇಟ್ಟಿಗೆಗಳ ಆಯ್ಕೆನ್ನು ನೀವು ಕಾಂಟ್ರಾಕ್ಟರ್ ಗಳಿಗೆ ನೀಡಿದರೆ ಅವರು ಕೈಯಿಂದ ನಿರ್ಮಿಸಿರುವಂತಹ ಇಟ್ಟಿಗೆಗಳನ್ನು ಎಲ್ಲ ಗೋಡೆಗಳಿಗೂ ಬಳಸುತ್ತಾರೆ. ಹಾಗಾಗಿ ನೀವು ಮನೆಗಳನ್ನು ನಿರ್ಮಾಣ ಮಾಡುವಾಗ ಆ ಕುರಿತು ಜಾಗ್ರತೆಯನ್ನು ವಹಿಸಬೇಕು. ನಿಮಗೆ ಯಾವ ರೀತಿಯ ನಿರ್ಮಾಣ ಬೇಕು ನಿಮಗೆ ಯಾವ ಗುಣಮಟ್ಟದ ವಸ್ತುಗಳು ಬೇಕು ಎಂಬುದನ್ನು ಸ್ವತಃ ನೀವೇ ಆಯ್ಕೆಮಾಡಿಕೊಳ್ಳಬೇಕು. ಆ ರೀತಿ ಮಾಡುವುದರಿಂದ ನಿಮ್ಮ ಕನಸಿನ ಮನೆಯನ್ನು ಸುಂದರವಾಗಿ ಸದೃಢವಾಗಿ ನಿರ್ಮಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.