ದರ್ಶನ್ ಆದಿನ ಗೋಲ್ಡನ್ ಸ್ಟಾರ್ ಮಾಡಿದ ಸಹಾಯ ನೆನೆದದ್ದು ಯಾಕೆ ಗೊತ್ತಾ..

0 2

ಒಬ್ಬ ವ್ಯಕ್ತಿ ಸಾಧನೆಯನ್ನು ಮಾಡಿ ಉನ್ನತ ಹಂತದಲ್ಲಿದ್ದಾನೆ ಎಂದರೆ ಅವನು ಆ ಮಟ್ಟಕ್ಕೆ ಎರುವುದಕ್ಕೆ ತುಂಬಾ ಕಷ್ಟಪಟ್ಟು ಶ್ರಮವಹಿಸಿ ಬೆಳೆದಿರುತ್ತಾನೆ. ಅಂಥವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಒಬ್ಬರು ಅವರು ಇಂದು ಕನ್ನಡ ಚಿತ್ರರಂಗದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ ಅದಕ್ಕೆ ಅವರು ಪಟ್ಟಂತಹ ಶ್ರಮ ಕಾರಣವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇತ್ತೀಚೆಗೆ ಫೆಬ್ರುವರಿ 16ರಂದು ತಮ್ಮ 45ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವರ್ಷ ಪುನೀತ್ ರಾಜಕುಮಾರ್ ಅವರ ಅಗಲಿಕೆ ಹಾಗೂ ಕರೋನಾದಿಂದಾಗಿ ಅಷ್ಟೊಂದು ವಿಜ್ರಂಭಣೆಯಿಂದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿಲ್ಲ. ಆದರೂ ಕೂಡ ಈ ವರ್ಷ ಅವರ ಹುಟ್ಟುಹಬ್ಬ ಅವರಿಗೆ ತುಂಬಾ ವಿಶೇಷವಾಗಿತ್ತು ಏಕೆಂದರೆ ಅವರ ಅವರ ಹುಟ್ಟುಹಬ್ಬದ ದಿನ ಅವರ ಅಭಿನಯದ ಹೊಸ ಚಿತ್ರದ ಬಗ್ಗೆ ಘೋಷಣೆ ಮಾಡಲಾಗಿದೆ.

ಜೊತೆಗೆ ಅವರು ಮೊದಲ ಬಾರಿಗೆ ನಾಯಕನಟನಾಗಿ ನಟಿಸಿದಂತಹ ಮೆಜೆಸ್ಟಿಕ್ ಸಿನಿಮಾದ 20ನೇ ವರ್ಷದ ಕಾರ್ಯಕ್ರಮವನ್ನು ಚಿತ್ರತಂಡ ಅದ್ದೂರಿಯಾಗಿ ನೆರವೇರಿಸಿದೆ. ಆ ಸಮಯದಲ್ಲಿ ದರ್ಶನ್ ಅವರು ತಾವು ಚಿತ್ರರಂಗದಲ್ಲಿ ಬೆಳೆದು ಬಂದಂತಹ ಹಾದಿಯನ್ನು ನೇನೆಸಿಕೊಂಡಿದ್ದಾರೆ ಮತ್ತು ಈ ಸಮಯದಲ್ಲಿ ಅವರು ತಮ್ಮ ಗೆಳೆಯನಾದ ಗೋಲ್ಡನ್ ಸ್ಟಾರ್ ಗಣೇಶ್ ಅವರು ಅವರಿಗೆ ಮಾಡಿರುವ ಸಹಾಯವನ್ನು ಕೂಡ ನೆನಪು ಮಾಡಿಕೊಂಡಿದ್ದಾರೆ.

ಅದೇನು ಎಂಬುದರ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಲಕ್ಷಾಂತರ ಅಭಿಮಾನಿಗಳು ಆರಾಧಿಸುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆಸ್ಥಾನಕ್ಕೆ ಬರುವುದಕ್ಕೆ ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ತಂದೆಯಂತೆ ತಾನು ಕೂಡ ಒಬ್ಬ ಉತ್ತಮ ನಟನಾಗಬೇಕು ಎಂಬ ಆಸೆಯನ್ನು ಹೊತ್ತು ಚಿತ್ರರಂಗಕ್ಕೆ ಬಂದ ದರ್ಶನ್ ಅವರಿಗೆ ಅವಕಾಶಗಳು ದೊರೆಯುವುದಕ್ಕಿಂತ ಅವಮಾನಗಳು ಹೆಚ್ಚಿಗೆ ದೊರೆತವು.

ಪ್ರಾರಂಭದಲ್ಲಿ ಇವರು ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ಪೋಷಕ ನಟನಾಗಿ ಕೆಲವು ಪಾತ್ರಗಳನ್ನು ಮಾಡಿದರು. ಅವರಿಗೆ ನಟನಾಗಬೇಕು ಎಂಬ ಕನಸನ್ನು ನನಸು ಮಾಡಿದ್ದು ಅವರ ಮೆಜೆಸ್ಟಿಕ್ ಚಿತ್ರ ಇದಾದ ನಂತರ ದರ್ಶನ್ ಅವರು ಹಿಂತಿರುಗಿ ನೋಡಲಿಲ್ಲ ಒಂದಾದ ನಂತರ ಒಂದರಂತೆ ಸಿನಿಮಾಗಳನ್ನು ನೀಡುತ್ತಿದ್ದಾರೆ ತಮ್ಮ ವೃತ್ತಿಜೀವನದಲ್ಲಿ ತಾವು ಕಂಡಂತಹ ಏಳುಬೀಳುಗಳನ್ನು ದರ್ಶನ್ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಅದೇ ರೀತಿ ಮೆಜೆಸ್ಟಿಕ್ ಚಿತ್ರದ ಇಪ್ಪತ್ತನೇ ವರ್ಷದ ಸಂಭ್ರಮಾಚರಣೆಯಲ್ಲಿ ಕೂಡ ತನಗೆ ಸಹಾಯ ಮಾಡಿದಂತಹ ಪ್ರತಿಯೊಬ್ಬರನ್ನು ಕೂಡ ದರ್ಶನ್ ಅವರು ನೆನಪು ಮಾಡಿಕೊಂಡಿದ್ದಾರೆ. ಮೆಜೆಸ್ಟಿಕ್ ಸಿನಿಮಾವನ್ನು ನಿರ್ಮಿಸಿದ್ದ ರಮೇಶ್ ರಾಮಮೂರ್ತಿ ಚಿತ್ರದ ನಿರ್ದೇಶಕರಾದ ಪಿಎನ್ ಸತ್ಯ ಅವರ ಗೆಳೆಯ ಅಣಜಿ ನಾಗರಾಜ್ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಎಲ್ಲರನ್ನು ಕೂಡ ನೆನೆಸಿಕೊಂದಿದ್ದಾರೆ.

ದರ್ಶನ್ ಅವರು ಚಿತ್ರೀಕರಣದಲ್ಲಿ ಇದ್ದಾಗ ಆ ಸಮಯದಲ್ಲಿ ಇವರ ಗೆಳೆಯ ಅಣಜಿ ನಾಗರಾಜ್ ಅವರು ಇವರಿಗೆ ಕರೆಯನ್ನು ಮಾಡಿ ಮೆಜೆಸ್ಟಿಕ್ ಚಿತ್ರಕ್ಕಾಗಿ ನಾಯಕನನ್ನು ಹುಡುಕುತ್ತಿದ್ದಾರೆ ನೀನು ಒಮ್ಮೆ ಪ್ರಕೃತಿ ಲಾಡ್ಜ್ ಗೆ ಹೋಗಿ ನಿರ್ಮಾಪಕರನ್ನು ಭೇಟಿ ಮಾಡು ಎಂದು ಹೇಳುತ್ತಾರೆ. ಆಗ ದರ್ಶನ್ ಅವರು ತನಗೆ ಬೆಂಗಳೂರು ಹೊಸತು ಸರಿಯಾಗಿ ಗೊತ್ತಿಲ್ಲ ಆದರೂ ಕೂಡ ಹೇಗೋ ಮಾಡಿ ಹುಡುಕಿಕೊಂಡು ಹೋಗುತ್ತೇನೆ ಎಂದು ಹೇಳುತ್ತಾರೆ.

ಚಿತ್ರೀಕರಣದಲ್ಲಿ ಮಧ್ಯ ಬ್ರೇಕ್ ಸಿಕ್ಕಾಗ ದರ್ಶನ್ ಅವರು ಗಣೇಶ್ ಅವರಿಗೆ ವಿಚಾರವನ್ನು ತಿಳಿಸುತ್ತಾರೆ ಆಗ ಗಣೇಶ್ ತಮ್ಮ ಗಾಡಿಯನ್ನು ತೆಗೆದುಕೊಂಡು ಎನ್ ಸತ್ಯ ಅವರನ್ನು ಭೇಟಿಯಾಗುತ್ತಾರೆ. ಅವರ ಜೊತೆ ಮಾತನಾಡುತ್ತಾರೆ ಅವರು ಪ್ರೊಡ್ಯೂಸರ್ ಸಾಯಂಕಾಲ ಬರುತ್ತಾರೆ ನಿಮಗೆ ಬರುವುದಕ್ಕೆ ಆಗುತ್ತದೆಯೆ ಎಂದು ಕೇಳುತ್ತಾರೆ ದರ್ಶನ್ ಅವರು ಅಡ್ಡಿಲ್ಲ ಬರುತ್ತೇನೆ ಎಂದು ಹೇಳುತ್ತಾರೆ.

ಇವರು ಸಂಜೆ ಪ್ರೊಡ್ಯೂಸರ್ ಅನ್ನು ಭೇಟಿ ಮಾಡಿದಾಗ ಅವರಿಗೆ ಇವರ ಎತ್ತರ ಮೈಕಟ್ಟು ಎಲ್ಲವೂ ಕೂಡ ಇಷ್ಟ ಆಗುತ್ತದೆ. ನಂತರ ಇವರು ತೂಗುದೀಪ್ ಶ್ರೀನಿವಾಸ್ ಅವರ ಮಗ ಎಂಬ ವಿಷಯ ಕೂಡ ತಿಳಿಯುತ್ತದೆ. ಇವರನ್ನು ಸಿನಿಮಾಕ್ಕೆ ನಾಯಕನನ್ನಾಗಿ ಮಾಡಿಕೊಳ್ಳುವುದಕ್ಕೆ ಒಪ್ಪುತ್ತಾರೆ ದರ್ಶನ್ ಅವರು ನಾಯಕನಾಗಬೇಕು ಎಂದು ಮೊದಲು ಹೇಳಿದವರು ರಮೇಶ್ ಅವರು. ಮೆಜೆಸ್ಟಿಕ್ ಚಿತ್ರ ಇವರಿಗೆ ಯಶಸ್ಸನ್ನು ತಂದುಕೊಡುತ್ತದೆ ಅಲ್ಲಿಂದ ಸಾಲುಸಾಲು ಸಿನಿಮಾಗಳು ಇವರನ್ನು ಹುಡುಕಿಕೊಂಡು ಬರುತ್ತವೆ.ಅಲ್ಲಿಂದ ನಾಯಕನಟನಾಗಿ ದರ್ಶನ್ ಅವರ ಸಿನಿ ಜೀವನ ಪ್ರಾರಂಭವಾಗುತ್ತದೆ ಇಂದು ಇಡೀ ಕರ್ನಾಟಕವೇ ಅವರನ್ನು ಡಿ ಬಾಸ್ ಎಂದು ಗುರುತಿಸುತ್ತದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಉತ್ತಮ ಸ್ಥಾನ ಗಳಿಸಿದ್ದು ಅವರ ಕೀರ್ತಿ ಸದಾ ಹೀಗೆ ಇರಲಿ ಅವರ ಸಿನಿಮಾಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬಂದು ಅವರ ಅಭಿಮಾನಿಗಳಿಗೆ ಖುಷಿ ನೀಡಲಿ ಎಂದು ನಾವು ಕೇಳಿಕೊಳ್ಳೋಣ.

Leave A Reply

Your email address will not be published.