ಜಮೀನಿಗೆ ಸಂಬಂಧಿಸಿದಂತೆ ಹಳೆಯ ದಾಖಲೆಗಳು ಬೇಕಾಗುತ್ತವೆ. ಜಮೀನಿನ ಹಳೆಯ ದಾಖಲೆಗಳು ಯಾವುವು, ಅವುಗಳಿಂದ ಏನೆಲ್ಲಾ ಪ್ರಯೋಜನಗಳಿವೆ ಹಾಗೂ ಜಮೀನಿನ ಹಳೆಯ ದಾಖಲೆಗಳನ್ನು ಎಲ್ಲಿ ಮತ್ತು ಹೇಗೆ ಪಡೆಯಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಜಮೀನಿಗೆ ಸಂಬಂಧ ಪಟ್ಟಂತೆ ಹಳೆಯ ದಾಖಲೆಗಳು ಪ್ರಯೋಜನಕ್ಕೆ ಬರುತ್ತದೆ. ಪ್ರತಿಯೊಬ್ಬರ ಜಮೀನಿಗೆ ಪ್ರತ್ಯೇಕವಾದ ಹೆಸರು ಮತ್ತು ಹಿನ್ನಲೆ ಇರುತ್ತದೆ. ಜಮೀನು ಈ ಹಿಂದೆ ಯಾರ ಹೆಸರಿನಲ್ಲಿ ಇತ್ತು ಆ ಜಮೀನಿನ ಪೂರ್ವಾಪರ ಇತಿಹಾಸ ದಾಖಲಿಸಿ ಇರುವ ಪದ್ಧತಿ ಮೊದಲಿನಿಂದಲೂ ಜಾರಿಯಲ್ಲಿದೆ ಇಂತಹ ದಾಖಲೆಗಳನ್ನು ಹಳೆಯ ದಾಖಲೆಗಳು ಎನ್ನುತ್ತೇವೆ. ಮೂಲ ಸರ್ವೆ ಬುಕ್ ಅಂದರೆ 1934/1935 ರಲ್ಲಿ ಮಾಡಲಾದ ಮೊಟ್ಟ ಮೊದಲ ಸರ್ವೆ ಆಗಿರುತ್ತದೆ. ಇದು ಭೂಮಿಯನ್ನು ಗುರುತಿಸುವ ಹಳೆಯ ದಾಖಲೆ ಆಗಿದೆ ಇದನ್ನು ಬೇಸ್ಡ್ ರಿಕಾರ್ಡ್ ಎಂದು ಕರೆಯಬಹುದು.

ಟಿಪ್ಪಣಿ ದಾಖಲೆ ಇದು ಒಂದು ಜಮೀನಿಗೆ ಮುಖ್ಯವಾಗಿ ಬೇಕಾಗುವ ದಾಖಲೆಯಾಗಿದೆ. ಹಿಸ್ಸಾ ಸರ್ವೆ ಬುಕ್ ಜನಸಂಖ್ಯೆ ಬೆಳೆದಂತೆ ಸಣ್ಣ ಸಣ್ಣ ಹಿಡುವಳಿಯನ್ನು ರೈತರು ಹೊಂದುತ್ತಿದ್ದರು ಆದರೆ ಅವರ ಹಿಸ್ಸಾಕೆ ಅನುಗುಣವಾಗಿ ನಕ್ಷೆ ಇಲ್ಲದೆ ತೊಂದರೆ ಆಗುತ್ತಿತ್ತು ಈ ಹಿನ್ನೆಲೆ ಹಿಸ್ಸಾ ಸರ್ವೆಯನ್ನು ರಾಜ್ಯಾದ್ಯಂತ ಮಾಡಲಾಗುತಿತ್ತು. ರೈತರ ಪಾಲಿನ ಜಮೀನಿಗೆ ನಕ್ಷೆ ಮಾಡಿ ಹಿಸ್ಸಾ ಸಂಖ್ಯೆ ಕೊಡಲಾಯಿತು.

ಇನ್ನಿತರ ದಾಖಲೆಗಳು ಎಂದರೆ ಪಕ್ಕಾ ಪುಸ್ತಕ, ಆಕಾರಬಂದ, ಹಿಸ್ಸಾ ಸರ್ವೆ ನಕ್ಷೆ. ಜಮೀನಿನ ಹಳೆಯ ದಾಖಲೆಗಳಿಂದ ಕೆಲವು ಪ್ರಯೋಜನಗಳಿವೆ. ಜಮೀನಿನ ಹದ್ದುಬಸ್ತು ಗುರುತಿಸಲು, ಗಡಿಗಳನ್ನು ಗುರುತಿಸಲು ಹಳೆಯ ದಾಖಲಾತಿಗಳು ಸಹಾಯಕವಾಗಿದೆ. ಸರ್ಕಾರದ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ಖಾಸಗಿಯವರಿಗೆ ಜಮೀನು ಬೇಕಾಗುತ್ತದೆ ಅದರಂತೆ ರೈತರು ಜಮೀನನ್ನು ವಶಪಡಿಸಿಕೊಂಡು ಅವರಿಗೆ ಪರಿಹಾರ ಕೊಡಲು ಹಳೆಯ ದಾಖಲಾತಿಗಳು ಬೇಕಾಗುತ್ತದೆ. ಜಮೀನಿನ ಹಕ್ಕು ವರ್ಗಾವಣೆ ಹೇಗಾಯಿತು, ಹಳೆ ಮಾಲೀಕನ ಹೆಸರು ಮೊದಲಾದ ಪ್ರಶ್ನೆಗಳಿಗೆ ಜಮೀನಿನ ಹಳೆಯ ದಾಖಲಾತಿಗಳು ಉತ್ತರ ಕೊಡುತ್ತದೆ.

ಜಮೀನಿನ ಪೂರ್ವಜರ ಬಗ್ಗೆ ಹಳೆಯ ದಾಖಲೆಗಳಿಂದ ತಿಳಿಯುತ್ತದೆ. ಜಮೀನಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ತಕರಾರು ಇದ್ದರೆ ಹಳೆಯ ದಾಖಲಾತಿಗಳನ್ನು ಕೇಳುತ್ತಾರೆ. ಭೂ ಪರಿವರ್ತನೆ ಮಾಡಲು ಕೆಲವೊಮ್ಮೆ ಕಡ್ಡಾಯವಾಗಿ ಹಳೆಯ ದಾಖಲಾತಿಗಳನ್ನು ಕೇಳಲಾಗುತ್ತದೆ. ಜಮೀನಿಗೆ ಸಂಬಂಧಿಸಿದ ಹಳೆಯ ದಾಖಲೆಗಳನ್ನು ತಾಲೂಕಿನ ಸರ್ವೆ ಇಲಾಖೆಯ ತಾಲೂಕು ಕಚೇರಿಯಲ್ಲಿ ಸಿಗುತ್ತದೆ. ನಮೂನೆ ಅರ್ಜಿಯನ್ನು ತೆಗೆದುಕೊಂಡು ಜಮೀನಿನ ಯಾವ ದಾಖಲೆಗಳು ಬೇಕು ಎಂಬುದನ್ನು ಸ್ಪಷ್ಟವಾಗಿ ಬರೆಯಬೇಕು.

ಅರ್ಜಿಯನ್ನು ಭರ್ತಿ ಮಾಡಬೇಕು. ನಮೂನೆ ಅರ್ಜಿ ಆಧಾರ್ ಕಾರ್ಡ್, ಪಹಣಿ ಕಾರ್ಡ್ ಲಗತ್ತಿಸಿ ಸರ್ವೆ ಕಚೇರಿಯಲ್ಲಿ ಕೊಡಬೇಕು. ಸರ್ವೆ ಸುಪ್ರವೈಸರ್ ಸಕಾಲದಲ್ಲಿ ಅರ್ಜಿ ಸ್ವೀಕರಿಸಿ ಅಕನೊಲೆಜ್ ಮೆಂಟ್ ಕೊಡುತ್ತಾರೆ. ಇದಕ್ಕೆ ನಿಗದಿತ ಶುಲ್ಕ ಇರುತ್ತದೆ ಶುಲ್ಕವನ್ನು ಪಾವತಿಸಬೇಕು. ಜಮೀನಿನ ಹಳೆಯ ದಾಖಲೆಗಳಿಗೆ ಅಪ್ಲೈ ಮಾಡಿ 7 ದಿನಗಳಲ್ಲಿ ಸರ್ವೆ ಆಫೀಸ್ ಗೆ ಹೋಗಿ ಜಮೀನಿನ ಹಳೆಯ ದಾಖಲೆಗಳನ್ನು ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತರಿಗೆ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!