ವರ್ಷದಿಂದ ವರ್ಷಕ್ಕೆ ಏರುತ್ತಿರುವ ಹಣಕಾಸಿನಲ್ಲಿ ಅತ್ಯಧಿಕ ಲಾಭ ಪಡೆಯುವ ಬಜಾಜ್ ಫೈನಾನ್ಸ್ ಕಂಪನಿಯು ಇಷ್ಟು ಮುಂದುವರೆಯಲು ತನ್ನದೆ ಆದ ಸ್ಟ್ಯಾಟರ್ಜಿ ಬಳಸುತ್ತದೆ. ಹಾಗಾದರೆ ಬಜಾಜ್ ಫೈನಾನ್ಸ್ ಕಂಪನಿಯ ಯಶಸ್ಸಿನ ಹಿಂದಿನ ರಹಸ್ಯಗಳನ್ನು ಈ ಲೇಖನದಲ್ಲಿ ನೋಡೋಣ.
ಬಜಾಜ್ ಫೈನಾನ್ಸ್ ಕಂಪನಿ 20 ವರ್ಷಗಳಲ್ಲಿ ಸಾಕಷ್ಟು ಬೆಳೆದಿದೆ. 10 ವರ್ಷದ ಹಿಂದೆ ಒಂದು ಲಕ್ಷ ಹೂಡಿಕೆ ಮಾಡಿದ್ದರೆ ಈಗ 1 ಕೋಟಿ 28 ಲಕ್ಷ ರೂಪಾಯಿ ಹಣ ಬರುತ್ತದೆ. ಬಜಾಜ್ ಫೈನಾನ್ಸ್ ಕಂಪನಿಗೆ ಎರಡು ಕಂಪನಿಗಳು ಸ್ಪರ್ಧಿಗಳಿವೆ ಅವೆಂದರೆ ಚೋಲ ಮಂಡಲಂ ಕಂಪನಿ 9,583 ಕೋಟಿ ರೂಪಾಯಿ ಜನರೇಟ್ ಮಾಡಿದೆ. ಮುತ್ತೂಟ್ ಫೈನಾನ್ಸ್ 1,156 ಕೋಟಿ ರೂಪಾಯಿ ಜನರೇಟ್ ಮಾಡಿದೆ. ಬಜಾಜ್ ಫೈನಾನ್ಸ್ 26,683 ಕೋಟಿ ರೂಪಾಯಿ ಹಣವನ್ನು ಜನರೇಟ್ ಮಾಡುತ್ತದೆ. ಚೋಲ ಮಂಡಲಂ ಕಂಪನಿಯ ನೆಟ್ ಇನಕಮ್ 1,520 ಕೋಟಿ ರೂಪಾಯಿ, ಮುತ್ತೂಟ್ ಫೈನಾನ್ಸ್ 3,804 ಕೋಟಿ ರೂಪಾಯಿ, ಬಜಾಜ್ ಫೈನಾನ್ಸ್ 4,419 ಕೋಟಿ ರೂಪಾಯಿ ಹಣ ನೆಟ್ ಇನಕಮ್ ಹೊಂದಿದೆ.
ಬಜಾಜ್ ಫೈನಾನ್ಸ್ ಕಂಪನಿ 2007 ಮೇ ರಿಂದ ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲಿ ಇದು ಮೂರು ವಿಭಾಗಗಳಲ್ಲಿ ಪ್ರಾರಂಭವಾಗುತ್ತದೆ ಬಜಾಜ್ ಆಟೋ, ಬಜಾಜ್ ಹೋಲ್ಡಿಂಗ್ಸ್ ಅಂಡ್ ಇನವೆಸ್ಟ್ ಮೇಂಟ್ ಲಿಮಿಟೆಡ್, ಬಜಾಜ್ ಫಿನ್ಸರ್ವ್ ಹೀಗೆ ಮೂರು ವಿಭಾಗಗಳಲ್ಲಿ ಪ್ರಾರಂಭವಾಯಿತು. ಬಜಾಜ್ ಫಿನ್ಸರ್ವ್ ಜೊತೆಗೆ ಬಜಾಜ್ ಫೈನಾನ್ಸ್ ಕೂಡ ಹುಟ್ಟಿಕೊಂಡಿತು. ಯಾವುದೆ ಒಂದು ಕಂಪನಿ ಸಕ್ಸೆಸ್ ಆಗಬೇಕಾದರೆ ಹೆಚ್ಚು ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಮೊದಲು ಬ್ಯಾಂಕ್ ಕೆಲವು ಉದ್ದೇಶಗಳಿಗೆ ಮಾತ್ರ ಸಾಲ ನೀಡುತ್ತಿತ್ತು ಆದರೆ ಜನರಿಗೆ ಮನೆಗೆ ಬೇಕಾಗುವ ಸಣ್ಣಪುಟ್ಟ ಸಾಮಗ್ರಿಗಳನ್ನು ಕೊಂಡು ಕೊಳ್ಳಲು ಹಣ ಬೇಕಾಗಿತ್ತು ಈ ಸಮಸ್ಯೆಯನ್ನು ಬಜಾಜ್ ಫೈನಾನ್ಸ್ ಗುರುತಿಸುತ್ತದೆ ಜೊತೆಗೆ ಮಧ್ಯಮ ವರ್ಗದವರ ವೆಚ್ಚ ಹೆಚ್ಚಾಗುವುದನ್ನು ಗಮನಿಸುತ್ತದೆ. ಅವರು ಈ ಸಮಸ್ಯೆಯನ್ನು ಗುರುತಿಸಿದರು ಜೊತೆಗೆ ಬಿಸಿನೆಸ್ ಬೆಳವಣಿಗೆ ಆಗಲು ಅವಕಾಶವಿದೆಯೆ ಎಂದು ನೋಡಿಕೊಂಡರು.
ನಂತರ ಬಜಾಜ್ ಫೈನಾನ್ಸ್ ಕೆಲವು ಟೆಕ್ನಾಲಜಿಯನ್ನು ಬೆಳವಣಿಗೆ ಮಾಡಿದರು. ಡೆಟಾಗಳನ್ನು ಕಲೆಕ್ಟ್ ಮಾಡುವ ಮೂಲಕ ಜನರಿಗೆ ಪರಿಹಾರ ಕೊಡುತ್ತಾರೆ. ಸಾಮಾನ್ಯವಾಗಿ ಸಂಬಳ ಬರುವ ಜನರಿಗೆ ಬ್ಯಾಂಕ್ ಸಾಲ ಕೊಡುತ್ತದೆ ಆದರೆ ಬಿಸಿನೆಸ್ ಪ್ರಾರಂಭಿಸುವ ಅಥವಾ ಸಂಬಳ ಬರದೆ ಇರುವವನಿಗೆ ಬ್ಯಾಂಕ್ ಸಾಲ ಕೊಡುವುದಿಲ್ಲ. ಬಿಸಿನೆಸ್ ಪ್ರಾರಂಭಿಸಲು ಹಣ ಕೇಳುವವನು ಯಾವ ಬಿಸಿನೆಸ್ ಪ್ರಾರಂಭಿಸುತ್ತಾನೆ, ಅವನು ಪ್ರಾರಂಭಿಸಿದ ಬಿಸಿನೆಸ್ ರನ್ ಆಗುತ್ತೆದೆಯೆ, ಲೋನ್ ಹಣ ಪಾವತಿಸಲು ಸಾಧ್ಯವೆ ಎಂದು ಪರಿಶೀಲಿಸುತ್ತಾರೆ 3 ತಿಂಗಳು ತೆಗೆದುಕೊಳ್ಳುವ ಕೆಲಸಕ್ಕೆ ಮೂರು ನಿಮಿಷ ತೆಗೆದುಕೊಳ್ಳುವಷ್ಟು ಟೆಕ್ನಾಲಜಿಯನ್ನು ಬೆಳವಣಿಗೆ ಮಾಡಿದರು.
ಬಜಾಜ್ ಫೈನಾನ್ಸ್ ಕಂಪನಿಯವರು ಮನೆ ಬಳಕೆ ವಸ್ತುಗಳನ್ನು ಖರೀದಿಸಲು ಲೋನ್ ಕೊಡುತ್ತಾರೆ. ಬಜಾಜ್ ಫೈನಾನ್ಸ್ ಕಂಪನಿಯ ಇನ್ನೊಂದು ಪ್ರಮುಖ ಸ್ಟ್ಯಾಟರ್ಜಿ 0 ಪರ್ಸೆಂಟೇಜ್ ಇಂಟ್ರೆಸ್ಟ್ ಇಎಂಐ. ಮನೆಗೆ ಬೇಕಾದ ಸಲಕರಣೆಗೆ ಅದರ ಬೆಲೆಯನ್ನು ಮೂರು ಭಾಗ ಮಾಡಿ ಬಡ್ಡಿ ಇಲ್ಲದೆ ಕಂತುಗಳ ಮೂಲಕ ಪಾವತಿಸಿ ಎಂದು ಹೇಳುತ್ತಾರೆ. ಹಲವು ಜನರು ಬಜಾಜ್ ಫೈನಾನ್ಸ್ ಕಂಪನಿಯಿಂದ ಲೋನ್ ಪಡೆಯುತ್ತಾರೆ. ತಯಾರಕರ ಹತ್ತಿರವೆ ಬಜಾಜ್ ಫೈನಾನ್ಸ್ ನವರು ಡೀಲ್ ಮಾಡಿಕೊಳ್ಳುತ್ತಾರೆ. ಬಜಾಜ್ ಫೈನಾನ್ಸ್ ಕಂಪನಿಯವರು ಲಾಭ ಇಟ್ಟುಕೊಂಡು ಸಾಮಗ್ರಿ ಹೆಚ್ಚು ಮಾರಾಟವಾಗುವಂತೆ ನೋಡಿಕೊಳ್ಳುತ್ತಾರೆ ಇದರಿಂದ ದೊಡ್ಡ ದೊಡ್ಡ ಕಂಪನಿಗಳು ಬಜಾಜ್ ಫೈನಾನ್ಸ್ ಜೊತೆ ಕೈ ಜೋಡಿಸಿದರು.
ಕಂಪನಿಯಿಂದ ಸಾಲ ಪಡೆದು ವಾಪಸ್ ಕೊಡದೆ ಇರುವವರ ಗುಂಪನ್ನು ನಾನ್ ಪರ್ಫಾರ್ಮಿಂಗ್ ಅಸೆಟ್ ಎಂದು ಹೇಳುತ್ತಾರೆ. ಯಾವುದೆ ಕಂಪನಿಯ ಎನ್ ಪಿಎ ಕಡಿಮೆ ಇದ್ದಷ್ಟು ಒಳ್ಳೆಯದು. ಬಜಾಜ್ ಫೈನಾನ್ಸ್ ಕಂಪನಿಯ ಎನ್ ಪಿಎ 10 ವರ್ಷದಿಂದ 1.7% ಇದೆ. ಬಜಾಜ್ ಫೈನಾನ್ಸ್ ಕಂಪನಿಯು ಕಳೆದ 10 ವರ್ಷಗಳಲ್ಲಿ 33% ನಷ್ಟು ಬೆಳವಣಿಗೆ ಹೊಂದಿದೆ, 32% ನಷ್ಟು ಲಾಭ ಗಳಿಸುತ್ತಿದೆ. ಒಂದು ಸಮಸ್ಯೆಯನ್ನು ನಿವಾರಣೆ ಮಾಡುವುದರಿಂದ ಆ ಬಿಸಿನೆಸ್ ಬೆಳವಣಿಗೆಯನ್ನು ಹೊಂದುತ್ತದೆ ಆದರೆ ಬಿಸಿನೆಸ್ ಪ್ರಾರಂಭಿಸುವಾಗ ಆ ಸಮಸ್ಯೆ ಇದೆಯಾ ಎಂದು ನೋಡಿಕೊಳ್ಳಬೇಕು.
ಸಮಸ್ಯೆಯನ್ನು ಪರಿಹರಿಸಿದರೆ ಬಿಸಿನೆಸ್ ಬೆಳವಣಿಗೆಗೆ ಅವಕಾಶ ಇದೆಯಾ ಎಂದು ನೋಡಬೇಕು. ಬಿಸಿನೆಸ್ ನಲ್ಲಿ ಟೆಕ್ನಾಲಜಿಯನ್ನು ಬಳಸಲು ಅವಕಾಶ ಇದೆಯಾ ಎಂದು ನೋಡಿಕೊಳ್ಳಬೇಕು. ಈ ಮಾಹಿತಿ ಬಿಸಿನೆಸ್ ಪ್ರಾರಂಭಿಸುವವರಿಗೆ ಉಪಯುಕ್ತವಾಗಿದೆ ಹೀಗಾಗಿ ಯುವಕ ಯುವತಿಯರಿಗೆ ತಪ್ಪದೆ ಮಾಹಿತಿಯನ್ನು ತಿಳಿಸಿ.