ಜ್ಯೋತಿಷ್ಯ ಶಾಸ್ತ್ರ, ಸಾಮುದ್ರಿಕ ಶಾಸ್ತ್ರ ಸಮುದ್ರದಂತೆ ಅನೇಕ ವಿಷಯಗಳನ್ನು ಒಳಗೊಂಡಿರುತ್ತದೆ. ಅದೃಷ್ಟ ಎನ್ನುವುದು ಹಲವು ರೀತಿಯಲ್ಲಿ ಬರುತ್ತದೆ ಅಂತಹ ಅದೃಷ್ಟದ ಬಗ್ಗೆ ನಾವು ಮೊದಲೆ ತಿಳಿಯಬಹುದು. ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಮುಖದ, ದೇಹದ ಅಂಗಗಳು, ಲಕ್ಷಣಗಳ ಮೂಲಕ ಅದೃಷ್ಟದ ಬಗ್ಗೆ ತಿಳಿಯಬಹುದು. ಅದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.
ಸಾಮುದ್ರಿಕ ಶಾಸ್ತ್ರದಲ್ಲಿ ಅಂಗಗಳ ರಚನೆ ಮತ್ತು ದೇಹದ ಕೆಲವು ಚಿಹ್ನೆಗಳು ಮನುಷ್ಯನ ವ್ಯಕ್ತಿತ್ವ ಮತ್ತು ಅದೃಷ್ಟದ ಬಗ್ಗೆ ಹೇಳುತ್ತವೆ. ಸಾಮುದ್ರಿಕ ಶಾಸ್ತ್ರದಲ್ಲಿ ಮಹಿಳೆಯರ ಕೆಲವು ಗುಣಗಳ ಬಗ್ಗೆ ಹೇಳಲಾಗಿದೆ. ಕೆಲವು ವಿಶೇಷತೆ ಹೊಂದಿರುವ ಮಹಿಳೆಯರನ್ನು ಅದೃಷ್ಟವಂತರೆಂದು ಉಲ್ಲೇಖಿಸಲಾಗಿದೆ. ಮುಖ, ದೇಹದ ಅಂಗಗಳ ರಚನೆ ಆಧಾರದಲ್ಲಿ ಮಹಿಳೆಯರ ಅದೃಷ್ಟ ಅಡಗಿರುತ್ತದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾರ ತಲೆಯು 3 ಬೆರಳುಗಳಿಗಿಂತ ಹೆಚ್ಚು ಅಗಲವಾಗಿರುತ್ತದೆ ಹಾಗೆಯೆ ಹಣೆಯು ಅರ್ಧ ಚಂದ್ರನಂತೆ ಕಾಣುತ್ತದೆ ಅಂತಹ ಮಹಿಳೆಯರು ಅದೃಷ್ಟವಂತರು.
ಇಂತಹ ಹುಡುಗಿಯರು ಅತ್ತೆಗೆ ಅದೃಷ್ಟವಂತರಾಗಿರುತ್ತಾರೆ ಎಂದು ನಂಬಲಾಗಿದೆ. ಹಣೆಯ ಮೇಲೆ ತ್ರಿಶೂಲದ ಗುರುತು ಹೊಂದಿರುವಂತಹ ಮಹಿಳೆಯರನ್ನು ಬಹಳ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ವಧುಗಳಾಗುವ ಇಂತಹ ಹುಡುಗಿಯರ ಅದೃಷ್ಟವೂ ಹೆಚ್ಚಾಗುತ್ತದೆ. ಇದಲ್ಲದೆ ಕೆಂಪಾಗಿರುವ ಕಣ್ಣು ಮತ್ತು ಕಡು ಕಪ್ಪಾಗಿರುವ ರೆಪ್ಪೆಗಳನ್ನು ಹೊಂದಿರುವ ಮಹಿಳೆಯರನ್ನು ಸಹ ಅದೃಷ್ಟವಂತರು ಎಂದು ಹೇಳಲಾಗಿದೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾರ ನಡಿಗೆ ರಾಜಹಂಸದಂತೆ ಇರುತ್ತದೆ ಅಂತಹ ಮಹಿಳೆಯರು ಎಲ್ಲಾ ರೀತಿಯ ಸಂತೋಷ ಪಡೆಯುತ್ತಾರೆ.
ಮೂಗಿನ ಮೇಲೆ ಮಚ್ಚೆ ಇರುವ ಮಹಿಳೆಯರು ಬಹಳ ಅದೃಷ್ಟವಂತರು. ಇವರ ಜೀವನದಲ್ಲಿ ಸುಖ-ಸಂಪತ್ತಿಗೆ ಯಾವುದೆ ರೀತಿ ಕೊರತೆಯಿರುವುದಿಲ್ಲ. ಕಾಲಬೆರಳು ದುಂಡಗಿನ ಮತ್ತು ಕೆಂಪು ಬಣ್ಣದಲ್ಲಿರುವ ಮಹಿಳೆಯರು ಬಹಳ ಅದೃಷ್ಟವಂತರು ಅಂತಹ ಮಹಿಳೆಯರು ಗಂಡನಿಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ ಅಂದರೆ ಅವರಿಂದ ಅವರ ಗಂಡನಿಗೆ ಅದೃಷ್ಟ ಸಿಗಲಿದೆ ಇದಲ್ಲದೆ ದೇಹದ ಎಡಭಾಗದಲ್ಲಿ ಮಚ್ಚೆ ಇರುವ ಮಹಿಳೆಯರನ್ನು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಮಹಿಳೆಯರು ತಮ್ಮ ಕೆಲವು ವಿಶೇಷ ಗುಣಗಳಿಂದ ಅದೃಷ್ಟ ಪಡೆಯುತ್ತಾರೆ, ಅವರ ಮುಖದ ಲಕ್ಷಣಗಳಿಂದ ಅವರ ಅದೃಷ್ಟವನ್ನು ಸಾಮುದ್ರಿಕಾ ಶಾಸ್ತ್ರದ ಮೂಲಕ ತಿಳಿಯಬಹುದು.