ನೀವು ಕೃಷಿ ಮಾಡಿ ಲಾಭವನ್ನು ಗಳಿಸಬೇಕು ಅಂದುಕೊಂಡಿರುತ್ತೀರಿ. ಆದರೆ ನಿಮ್ಮ ಬಳಿ ಹೆಚ್ಚು ಕೃಷಿಭೂಮಿ ಇಲ್ಲ ಕೇವಲ ಒಂದು ಎಕರೆ ಮಾತ್ರ ಇದೆ ಎಂದು ಕೊರಗಬೇಡಿ. ಒಂದು ಎಕರೆ ಕೃಷಿಭೂಮಿಯಲ್ಲಿ ಲಕ್ಷಗಳಿಕೆ ಮಾಡಬಹುದು ತಮ್ಮ ಒಂದು ಎಕರೆ ಕೃಷಿಭೂಮಿಯಲ್ಲಿ ಲಕ್ಷಗಟ್ಟಲೆ ಹಣವನ್ನು ಸಾಧಿಸಿ ತೋರಿಸಿದ ಕೃಷಿಕರು ನೀಡುವ ಮಾರ್ಗದರ್ಶನದ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ನೀವು ಕೂಡ ಆ ಮಾರ್ಗವನ್ನು ಅನುಸರಿಸುವ ಮೂಲಕ ಚಿಕ್ಕ ಭೂಮಿಯಲ್ಲಿಯೇ ಅತಿ ಹೆಚ್ಚು ಲಾಭವನ್ನು ಗಳಿಸಬಹುದಾಗಿದೆ ಹಾಗಾದರೆ ಆ ಮಾಹಿತಿ ಯಾವುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ
ಚಿಕ್ಕದಾಗಿರುವ ಕೃಷಿ ಭೂಮಿಯಲ್ಲಿ ಪ್ರತಿತಿಂಗಳು ಲಾಭವನ್ನ ಪಡೆಯುವುದಕ್ಕೆ ಏನೆಲ್ಲಾ ಬೆಳೆಯಬೇಕು ಎನ್ನುವ ಕುರಿತು ನೋಡುವುದಾದರೆ ನಾವು ನಮ್ಮ ಬಳಿ ಇರುವ ಚಿಕ್ಕದಾದ ಭೂಮಿಯಲ್ಲಿ ಬಹುಬೆಳೆ ಪದ್ಧತಿಯನ್ನು ಅನುಸರಿಸುವುದರಿಂದ ಲಾಭವನ್ನು ಪಡೆಯಬಹುದು. ನಿಮ್ಮ ಕೃಷಿಭೂಮಿಯಲ್ಲಿ ಇಪ್ಪತ್ತರಿಂದ ಮೂವತ್ತು ರೀತಿಯ ಸೊಪ್ಪುಗಳನ್ನು ತರಕಾರಿಗಳನ್ನು ಬೆಳೆಸುವುದರಿಂದ ಉತ್ತಮ ಆದಾಯ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿಯ ಕಡೆ ಒಲವು ತೋರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಆದರೆ ಸಾವಯವ ಕೃಷಿಯನ್ನು ಅನುಸರಿಸುವ ಮೂಲಕ ಕೃಷಿಯಲ್ಲಿಯೂ ಕೂಡ ಪ್ರಗತಿಯನ್ನು ಸಾಧಿಸಬಹುದು.
ಕೃಷಿ ಭೂಮಿಯಲ್ಲಿ ತರಕಾರಿಯನ್ನು ಬೆಳೆಯುವುದಕ್ಕೆ ಬೆಡ್ ಸಿಸ್ಟಮ್ ಅನ್ನು ಅನುಸರಿಸಬೇಕು ನಾವು ಮಲಗುವುದಕ್ಕೆ ಹೇಗೆ ಹಾಸಿಗೆಯನ್ನ ತಯಾರಿಸುತ್ತೇವೆ ಅದೇ ರೀತಿ ತರಕಾರಿ ಬೆಳೆಯುವುದಕ್ಕೆ ಒಂದು ಒಂದುವರೆ ಅಡಿ ಎತ್ತರದ ಬೆಡ್ ನಿರ್ಮಿಸಬೇಕು. ಒಂದು ಸಾರಿ ಬೆಡ್ ನಿರ್ಮಿಸಿದ ಮೇಲೆ ಮತ್ತೆ ಅದನ್ನ ಪದೇಪದೇ ನಿರ್ಮಿಸುವ ಅವಶ್ಯಕತೆ ಇರುವುದಿಲ್ಲ. ಒಂದೊಂದು ಅಡಿಗೆ ಸೊಪ್ಪನ್ನು ನೆಡುತ್ತಾ ಬರಬೇಕು ಮಧ್ಯದಲ್ಲಿ ಗಿಡ ತರಕಾರಿ ಪಕ್ಕದಲ್ಲಿ ಗಡ್ಡೆ ತರಕಾರಿ ಇಪ್ಪತ್ತೈದು ಅಡಿಗೆ ಮೂರು ಸಾಲು ಬಳ್ಳಿ ತರಕಾರಿಯನ್ನು ಬೆಳೆಯುವಂತಹ ಪದ್ಧತಿಯನ್ನು ಅನುಸರಿಸಬೇಕು. ಈ ಬೆಡ್ ತರಕಾರಿಗಳಿಗೆ ಹಾಕುವ ರಸಗೊಬ್ಬರದ ಬೆಲೆ ಇಂದು ಗಗನಕ್ಕೆ ಏರಿದೆ ಹಾಗಾಗಿ ಅವುಗಳಿಗೆ ಸಾವಯವ ಗೊಬ್ಬರವನ್ನು ಹಾಕುವ ಮೂಲಕ ನಾವು ಹಣವನ್ನು ಕೂಡ ಉಳಿಸಬಹುದು.
ನೂರು ಅಡಿ ಬೆಡ್ ಮಾಡಿದರೆ ಅದರಲ್ಲಿ ಎರಡು ನೂರು ಕಂತೆ ಸೊಪ್ಪು ತರಕಾರಿ ಗಡ್ಡೆಗಳು ಸಿಕ್ಕೇಸಿಗುತ್ತದೆ ಇವುಗಳಿಂದ ಪ್ರತಿವಾರ ಆದಾಯವನ್ನು ಗಳಿಸಬಹುದು. ನಮ್ಮ ನಾಡಿನ ರೈತ ಮಿತ್ರರು ಈ ಪದ್ಧತಿಯನ್ನು ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯವನ್ನು ಗಳಿಸುವುದಕ್ಕೆ ಈ ಕೃಷಿ ಮಾದರಿ ಉಪಯುಕ್ತವಾಗಿದೆ. ಕಡಿಮೆ ಜಮೀನು ಇರುವಂತವರು ಈ ರೀತಿಯ ಮಾರ್ಗವನ್ನು ಅನುಸರಿಸುವ ಮೂಲಕ ಹೆಚ್ಚಿನ ಲಾಭವನ್ನು ಗಳಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ ಅವರು ಕೂಡ ಈ ಸುಲಭವಾದ ಕೃಷಿ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯಲ್ಲಿ ಪ್ರಗತಿಯನ್ನು ಕಾಣಬಹುದು. Video credit For Indianmoney.com