ಇತ್ತೀಚಿನ ದಿನಗಳಲ್ಲಿ ರೈತರಿಗೆ ಬೇಸಾಯ ಮಾಡುವುದಕ್ಕೆ ಉಪಯೋಗವಾಗುವಂತಹ ಅನೇಕ ಯಂತ್ರೋಪಕರಣಗಳು ಆವಿಷ್ಕಾರಗೊಂಡಿದೆ. ರೈತರು ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಬೇಸಾಯ ಕ್ರಮಗಳನ್ನು ಅನುಸರಿಸಬಹುದಾದಂತಹ ಯಂತ್ರೋಪಕರಣಗಳಲ್ಲಿ ಒಂದಾದ ಸ್ವರಾಜ್ ಕಂಪನಿಯವರು ತಂದಿರುವ ಯಂತ್ರದ ಕುರಿತಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಈ ಯಂತ್ರವನ್ನು ತಯಾರು ಮಾಡಲಾಗಿದೆ.
ಕಾಣುವುದಕ್ಕೆ ಇದು ವಾಹನದ ರೀತಿಯಲ್ಲಿ ಕಂಡರೂ ಇದು ಒಂದು ಯಂತ್ರವಾಗಿದೆ ಇದು ರೈತರಿಗೆ ಒಂದು ವರದಾನ ಎಂದು ಹೇಳಬಹುದು. ಸಾಮಾನ್ಯವಾಗಿ ಹೊಲದಲ್ಲಿ ಉಳುಮೆ ಮಾಡುವಾಗ ಎತ್ತುಗಳನ್ನು ಬಳಸುತ್ತಾರೆ. ಈ ಯಂತ್ರವು ಎರಡು ಎತ್ತುಗಳು ಒಂದು ಗಂಡಾಳು ಮಾಡುವ ಕೆಲಸಕ್ಕಿಂತ ಹೆಚ್ಚಿನ ಕೆಲಸವನ್ನು ಈ ಯಂತ್ರ ಮಾಡುತ್ತದೆ. ಕಂಪನಿಯವರು ಯಂತ್ರದ ಬೆಲೆಯನ್ನು ನಿಗದಿ ಮಾಡುವಾಗ ತುಂಬಾ ಆಲೋಚನೆಯನ್ನು ಮಾಡಿ ಹಲವಾರು ಕಡೆಗಳಲ್ಲಿ ರೈತರಿಗೆ ಇದರ ಡೆಮೋ ತೋರಿಸಿ ರೈತರಿಗೆ ಇದರ ಬೆಲೆ ಹೇಳುವಂತೆ ತಿಳಿಸಿ ರೈತರ ಸಲಹೆಯನ್ನು ಪಡೆದುಕೊಂಡು ಇದರ ಬೆಲೆಯನ್ನು ನಿರ್ಧರಿಸಿದ್ದಾರೆ. ನಿಮಗೆ ಎರಡು ವಿಧದ ಬೆಲೆಯಲ್ಲಿ ಸಿಗುತ್ತವೆ ಒಂದನೆಯದು ಒಂದು ಲಕ್ಷದ ಅರವತ್ತು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದ್ದಾರೆ. ಅದರ ಜೊತೆ ರೋಟಾವೀಡರ್ ಜಂತ್ ಅನ್ನು ಕೂಡ ನೀಡುತ್ತಾರೆ.
ಇನ್ನೊಂದು ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಎಂದರೆ ಅದರ ಜೊತೆ ಕಲ್ಟಿವೀಡರ್ ಕೂಡ ನೀಡುತ್ತಾರೆ. ಎಲ್ಲ ರೈತರಿಗೂ ಒದಗಿಸುವ ಸಲುವಾಗಿ ಇಷ್ಟು ಬೆಲೆ ನಿಗದಿಪಡಿಸಲಾಗಿದೆ. ಈ ಯಂತ್ರ ಪೆಟ್ರೋಲ್ ಇಂಜಿನ್ ಅನ್ನ ಹೊಂದಿದೆ. ನೀವು ಯಂತ್ರದ ಸಹಾಯದಿಂದ ಯಾವುದೇ ರೀತಿಯ ಬೇಸಾಯವನ್ನು ಕೂಡ ಮಾಡಬಹುದಾಗಿದೆ ಅಡಿಕೆ ಬೆಳೆಯಲ್ಲಿ ತರಕಾರಿ ಬೆಳೆಯಲ್ಲಿ ಯಾವುದೇ ಬೆಳೆ ಇರಲಿ ಎಲ್ಲಾ ತರಹದ ಬೇಸಾಯವನ್ನು ನೀವು ಮಾಡಬಹುದು. ಈ ಗಾಡಿ ಕೇವಲ ಮೂರು ಅಡಿ ಅಗಲ ಬರುವುದರಿಂದ ವ್ಯವಸಾಯವನ್ನು ಆರಾಮವಾಗಿ ಮಾಡಬಹುದು. ಇದರಲ್ಲಿ ಮೂರು ವಿಧಾನದಲ್ಲಿ ಕೆಲಸವನ್ನು ಮಾಡಬಹುದು ಮೊದಲನೆಯದು ರೋಟಾವೀಡರ್ ಎರಡನೇದು ಕಲ್ಟಿವೀಡರ್ ಮೂರನೆಯದಾಗಿ ಅತಿಮುಖ್ಯವಾಗಿ ಯಂತ್ರದ ಸಹಾಯದಿಂದ ಔಷಧಿಯನ್ನು ಹೊಡೆಯಬಹುದು.
ಔಷಧಿ ಹೊಡೆಯುವುದು ಒಂದು ದೊಡ್ಡ ಕೆಲಸವಾಗಿದೆ ಈ ಯಂತ್ರದಲ್ಲಿ ರೆಡಿ ಫಿಟ್ಟೆಡ್ ಟ್ಯಾಂಕ್ ಬರುತ್ತದೆ. ಯಂತ್ರವನ್ನು ಸುಲಭವಾಗಿ ಕೂಡ ಉಪಯೋಗಿಸಬಹುದು ರೈತರಿಗೆ ಕಡಿಮೆ ಬೆಲೆಯಲ್ಲಿ ಸಿಗುವ ಈ ಯಂತ್ರವನ್ನು ತೆಗೆದುಕೊಂಡರೆ ಕೃಷಿಕಾರ್ಯಕ್ಕೆ ತುಂಬಾ ಸಹಾಯವಾಗುತ್ತದೆ. ಎರಡು ಮೂರು ಎಕರೆ ಹೊಲವನ್ನು ಹೊಂದಿರುವಂತಹ ರೈತರು ಬೇರೆಯವರ ಮೇಲೆ ಅವಲಂಬನೆ ಆಗುವಂತಹ ಸಂದರ್ಭ ಬರುವುದಿಲ್ಲ ಅವರೇ ಖುಷಿಯಿಂದ ತಮ್ಮ ಜಮೀನಿನ ಸಂಪೂರ್ಣ ಕೆಲಸವನ್ನು ಮಾಡಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಕಲಿತಿರುವಂತಹ ಯುವಕರು ಮನೆಯಲ್ಲಿಯೇ ವರ್ಕ್ ಫಾರ್ಮ್ ಹೋಂ ಮಾಡುತ್ತಿರುವುದರಿಂದ ಅವರು ಕುತುಕುತು ಆರೋಗ್ಯ ಹಾಳಾಗುತ್ತದೆ ಎಂಬ ಕಾರಣದಿಂದ ವ್ಯವಸಾಯವನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ.
ಜೊತೆಗೆ ಹೊಸ ಕ್ರಮಗಳನ್ನು ಅನುಸರಿಸಿ ಒಂದು ಎರಡು ಎಕರೆ ಭೂಮಿಯಲ್ಲಿ ಹೊಸ ಬೆಳೆಗಳನ್ನು ಬೆಳೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಹಾಗಾಗಿ ತರಕಾರಿಯನ್ನು ಬೆಳೆಯುವುದಕ್ಕೆ ಕೂಡ ಯಂತ್ರ ಸಹಾಯಕವಾಗಿದೆ. ಯಂತ್ರವನ್ನು ಚಾಲನೆ ಮಾಡುವುದು ನಡೆಸುವುದು ಕೂಡ ತುಂಬಾ ಸರಳವಾಗಿದೆ ಸ್ವರಾಜ್ ಕಂಪನಿಯವರು ರೈತರಿಗೆ ಸಹಾಯವಾಗುವ ಉದ್ದೇಶದಿಂದ ಜಾರಿಗೆ ತಂದಿರುವ ಕೇಂದ್ರಕ್ಕೆ ಈಗ ಎಲ್ಲೆಡೆಗಳಲ್ಲಿ ಪ್ರಶಂಸೆ ಬರುತ್ತಿದೆ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ ತಂತ್ರವನ್ನು ಬಳಸಿಕೊಂಡು ರೈತರು ಅತ್ಯಂತ ಕಡಿಮೆ ಖರ್ಚಿನಲ್ಲಿ ಕೃಷಿ ಚಟುವಟಿಕೆಗಳನ್ನು ನಿರ್ವಹಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರಿಗೂ ತಿಳಿಸಿರಿ.