ಈ ಬಾರಿಯ SSLC ಪರೀಕ್ಷಾ ವೇಳಾಪಟ್ಟಿ ಬಿಡುಗಡೆ, ಪರೀಕ್ಷಾ ದಿನಾಂಕ ಯಾವಾಗ ತಿಳಿದುಕೊಳ್ಳಿ

0 2

ಜಗತ್ತಿನಲ್ಲೆಡೆ ಕೊರೋನ ವೈರಸ್ ಎರಡು ವರ್ಷದಿಂದ ಹರಡುತ್ತಿದ್ದು ಶಿಕ್ಷಣ ವ್ಯವಸ್ಥೆಯಲ್ಲಿ ಏರು ಪೇರು ಕಂಡುಬರುತ್ತಿದೆ. ಇದೀಗ ಮತ್ತೆ ಕೊರೋನ ವೈರಸ್ ಹೆಚ್ಚಾಗುತ್ತಿದ್ದು ಫೆಬ್ರುವರಿ ತಿಂಗಳಿನಲ್ಲಿ ಕಡಿಮೆ ಆಗುವ ಸಾಧ್ಯತೆಗಳಿದ್ದು ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಶಿಕ್ಷಣ ಕೊರೋನ ಹಾವಳಿಯ ನಡುವೆ ಸಿಕ್ಕಿಹಾಕಿ ಕೊಳ್ಳುತ್ತಿರುವುದನ್ನು ನಾವು 2 ವರ್ಷದಿಂದ ನೋಡುತ್ತಿದ್ದೇವೆ. ಎರಡು ವರ್ಷದಿಂದ ಸರಿಯಾಗಿ ಶಾಲೆ ನಡೆಯದೆ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪರೀಕ್ಷೆ ನಡೆಸಲು ಆಗುತ್ತಿಲ್ಲ. ಆನಲೈನ್ ಪಾಠ ಎಲ್ಲ ಕಡೆ ನಡೆಯುತ್ತಿದೆ ಕೆಲವು ಹಳ್ಳಿಯ ಮಕ್ಕಳು ಆನಲೈನ್ ಪಾಠದಿಂದ ವಂಚಿತರಾಗಿದ್ದಾರೆ ಏಕೆಂದರೆ ನಮ್ಮ ದೇಶದ ಹಲವು ಹಳ್ಳಿಗಳಲ್ಲಿ ನೆಟ್ವರ್ಕ್ ಸಮಸ್ಯೆ. ಇನ್ನು ಈ ವರ್ಷದ ಇನ್ನೇನು ಮಾರ್ಚ್ ತಿಂಗಳು ಬರುತ್ತಿದೆ ಮಕ್ಕಳಿಗೆ ಸಾಲು ಸಾಲು ಪರೀಕ್ಷೆ ಮಾಡಬೇಕಿದೆ. ಇದೀಗ ಮತ್ತೆ ಕೊರೋನ ಭೀತಿ ಹೆಚ್ಚುತ್ತಿರುವ ಭಯದ ವಾತಾವರಣ ಸೃಷ್ಟಿಯಾಗಿದೆ. ಇದರ ಮಧ್ಯೆ ಎಸ್ಎಸ್ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ.

2022 ಮಾರ್ಚ್ 28 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗಲಿದೆ ಹಾಗೂ 2022 ಏಪ್ರಿಲ್ 11 ರವರೆಗೆ ಪರೀಕ್ಷೆ ನಡೆಯಲಿದೆ. ಮಾರ್ಚ್ 28 ರಂದು ಮೊದಲ ಭಾಷಾ ಪರೀಕ್ಷೆ ಸಾಮಾನ್ಯವಾಗಿ ಮೊದಲ ಭಾಷೆ ಕನ್ನಡ ಇರುತ್ತದೆ, ಇಂಗ್ಲಿಷ್ ಕೂಡ ಇರಬಹುದು. ಮಾರ್ಚ್ 30 ರಂದು ದ್ವಿತೀಯ ಭಾಷೆಯ ಪರೀಕ್ಷೆ ನಡೆಯುತ್ತದೆ. ಏಪ್ರಿಲ್ 4 ರಂದು ಗಣಿತ ಪರೀಕ್ಷೆ ನಡೆಯಲಿದೆ. ಏಪ್ರಿಲ್ 6 ರಂದು ಸಮಾಜವಿಜ್ಞಾನ ಪರೀಕ್ಷೆ, ಏಪ್ರಿಲ್ 8 ರಂದು ತೃತೀಯ ಭಾಷೆ ಪರೀಕ್ಷೆ ನಡೆಸಲಾಗುತ್ತದೆ, ಸಾಮಾನ್ಯವಾಗಿ ತೃತೀಯ ಭಾಷೆ ಹಿಂದಿ ಭಾಷೆಯಾಗಿರುತ್ತದೆ. ಏಪ್ರಿಲ್ 11 ರಂದು ವಿಜ್ಞಾನ ಪರೀಕ್ಷೆ ನಡೆಸಲಾಗುತ್ತದೆ. ಏಪ್ರಿಲ್ 11 ರಂದು ಪರೀಕ್ಷೆ ಮುಕ್ತಾಯವಾಗಲಿದೆ.

ಪ್ರತಿವರ್ಷದಂತೆ ಈ ವರ್ಷದ ಪರೀಕ್ಷೆಯಲ್ಲೂ ಸಹ ಒಂದು ವಿಷಯದ ಪರೀಕ್ಷೆಯಿಂದ ಒಂದು ವಿಷಯದ ಪರೀಕ್ಷೆಗೆ 1-2 ದಿನಗಳ ಅಂತರವಿದೆ. ತಜ್ಞರ ಪ್ರಕಾರ ಕೊರೋನ ಭೀತಿ ಫೆಬ್ರುವರಿ ಮೊದಲ ಅಥವಾ ಎರಡನೆ ವಾರದಲ್ಲಿ ಅಂತ್ಯವಾಗಲಿದೆ ಎಂಬ ಸೂಚನೆ ನೀಡಿರುವುದರಿಂದ ಮಾರ್ಚ್ ಅಂತ್ಯಕ್ಕೆ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಯಿತು. ಈ ಮೊದಲು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು ಸಮಸ್ಯೆ ಇದ್ದಲ್ಲಿ ತಿಳಿಸುವ ಅವಕಾಶವನ್ನು ಬೋರ್ಡ್ ನೀಡಿತ್ತು. ಇದೀಗ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕಳೆದ ಎರಡು ವರ್ಷದಲ್ಲಿ ಕೊರೋನ ಕಾರಣದಿಂದ ಎರಡು ಪತ್ರಿಕೆಯಲ್ಲಿ ಎಲ್ಲ ವಿಷಯಗಳ ಪ್ರಶ್ನೆಗಳನ್ನು ನೀಡಲಾಗಿತ್ತು ಆದರೆ ಈ ಬಾರಿ ಮೊದಲು ಯಾವ ರೀತಿ ಪರೀಕ್ಷೆ ನಡೆಸಲಾಗುತ್ತಿತ್ತು ಅದೆ ಮಾದರಿಯಲ್ಲಿ ಪರೀಕ್ಷೆ ನಡೆಯುತ್ತದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮೊದಲೆ ವೇಳಾಪಟ್ಟಿಯನ್ನು ಪ್ರಕಟಗೊಳಿಸಲಾಯಿತು. ಈ ಮಾಹಿತಿಯನ್ನು ಎಸ್ಎಸ್ಎಲ್ ಸಿ ಓದುತ್ತಿರುವ ಎಲ್ಲ ಮಕ್ಕಳಿಗೂ ತಿಳಿಸಿ, ಯಾವುದೆ ಸಮಸ್ಯೆಯಿಲ್ಲದೆ ಪರೀಕ್ಷೆ ನಡೆಯಲಿ ಎಂದು ಆಶಿಸೋಣ.

Leave A Reply

Your email address will not be published.