ಇತ್ತೀಚಿನ ದಿನಗಳಲ್ಲಿ ಹೆತ್ತ ತಂದೆ ತಾಯಿಗಳನ್ನು ಮಕ್ಕಳು ಮನೆಯಿಂದ ಹೊರ ಕಳಿಸಿ ಅವರನ್ನು ಬೀದಿಪಾಲು ಮಾಡುವುದು ಎಲ್ಲ ಕಡೆಗಳಲ್ಲೂ ಕಂಡುಬರುತ್ತವೆ ಇಂತಹ ಅವಿವೇಕಿಗಳಿಗೆ ಹೈಕೋರ್ಟ್ ತಕ್ಕಶಾಸ್ತಿ ಮಾಡಿದ ಆ ಕುರಿತಾದ ಮಾಹಿತಿಯೊಂದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ನ ನಿವೃತ್ತ ಪ್ರಾಧ್ಯಾಪಕರಾದ ಮುನಿಸ್ವಾಮಿ ಅವರನ್ನ ಅವರ ಮಗ ಮನೆಯಿಂದ ಹೊರಹಾಕಿದ್ದ. ಮುನಿಸ್ವಾಮಿಯವರು ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದರು ಮಗ ಎಂ ಶುಭಾಷ್ ಹಾಗೂ ಸೊಸೆ ಮಂಜುಳಾ ಮೇಲೆ ಕೇಸ್ ಅನ್ನು ದಾಖಲಿಸಿದ್ದರು. ಇದೀಗ ಹೈಕೋರ್ಟ್ ಶುಭಾಷ್ ನನ್ನ ಮನೆಯಿಂದ ಹೊರ ಹಾಕುವಂತೆ ಪೊಲೀಸರಿಗೆ ಸೂಚನೆ ನೀಡಿದೆ.

ವಯಸ್ಸಾಗಿರುವ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ ಮಕ್ಕಳೇ ಅವರನ್ನು ಮನೆಯಿಂದ ಹೊರ ಹಾಕುವ ಪ್ರಕರಣಗಳು ನಮ್ಮ ರಾಜ್ಯದಲ್ಲಿ ಪದೇ ಪದೇ ಮರುಕಳಿಸುತ್ತಿರುತ್ತದೆ ಯುವ ಜನತೆ ಎಚ್ಚೆತ್ತು ಕೊಳ್ಳುವುದಿಲ್ಲ ವಯಸ್ಸಾದ ತಂದೆ ತಾಯಿಯನ್ನು ಬೇರೆಯ ಮೋಹಕ್ಕೆ ಒಳಗಾಗಿ ಅವರನ್ನು ಮನೆಯಿಂದ ಹೊರ ಹಾಕುತ್ತಾರೆ ಹಾಗಾಗಿ ಅಂತಹ ಮನಸ್ಸಿನ ವ್ಯಕ್ತಿಗಳಿಗೆ ಈಗ ತಕ್ಕ ಪಾಠವನ್ನು ಕೋರ್ಟ್ ಮೂಲಕ ನೀಡಿದೆ. ಮುನಿಯಪ್ಪ ಅವರು ಹೇಳುವ ಪ್ರಕಾರ ಒಂದು ವರ್ಷದ ಹಿಂದೆ ಅವರ ಮಗ ಹಾಗೂ ಸೊಸೆ ಅವರನ್ನು ಮನೆಯಿಂದ ಹೊರ ಹಾಕಿ ಅಕ್ರಮವಾಗಿ ತಾವು ಆ ಮನೆಯಲ್ಲಿ ಸೇರಿಕೊಂಡಿದ್ದರು. ಇವರಿಗೂ ಕೂಡ ಕಿರುಕುಳವನ್ನು ನೀಡಿದ್ದರು ಆದರೆ ಈಗ ಕೋರ್ಟ್ ನ ಆದೇಶದ ಮೇರೆಗೆ ಮಗ ಸೊಸೆ ಮನೆಯಿಂದ ಹೊರ ಹೋಗುವುದಕ್ಕೆ ತಕರಾರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಹೆತ್ತ ಮಕ್ಕಳು ಮನೆಯಿಂದ ಹೊರಹಾಕಿದ ವೃದ್ಧ ತಂದೆ ತಾಯಿಗಳು ನೊಂದುಕೊಂಡು ಸಾಮಾನ್ಯವಾಗಿ ವೃದ್ಧಾಶ್ರಮವನ್ನು ಸೇರಿಕೊಳ್ಳುತ್ತಾರೆ. ತಾವು ಕಷ್ಟಪಟ್ಟು ಬೆವರು ಹರಿಸಿ ಮಕ್ಕಳನ್ನು ಬೆಳೆಸಿ ವಯಸ್ಸಾದ ಮೇಲೆ ಅವರ ಕಾರಣದಿಂದ ತಂದೆ ತಾಯಿಗಳು ಬೀದಿಗೆ ಬೀಳುವಂತಹ ಪರಿಸ್ಥಿತಿ ಈಗ ಎಲ್ಲಾ ಕಡೆ ಕಂಡುಬರುತ್ತಿದೆ. ಹೆಚ್ಚಾಗಿ ಯಾವ ತಂದೆತಾಯಿಯು ತಮ್ಮ ಮಕ್ಕಳ ವಿರುದ್ಧ ಹೋರಾಡುವುದಕ್ಕೆ ಹೋಗುವುದಿಲ್ಲ ಆದರೆ ನಿವೃತ್ತ ಪ್ರಾಧ್ಯಾಪಕರಾದ ಮುನಿಸ್ವಾಮಿ ಅವರು ತಮ್ಮ ಮಗನ ವಿರುದ್ಧ ಹೋರಾಡುತ್ತಾರೆ. ಒಂದು ವರ್ಷದ ಹಿಂದೆ ಮಗ ಅವರನ್ನು ಮನೆಯಿಂದ ಹೊರ ಹಾಕುತ್ತಾರೆ ಆದರೆ ಆ ಮನೆ ಮುನಿಸ್ವಾಮಿ ಅವರ ಸ್ವಯಾರ್ಜಿತ ಆಸ್ತಿ ಯಾಗಿದೆ ಅದು ಅವರು ದುಡಿದು ಕಟ್ಟಿದಂತಹ ಮನೆಯಾಗಿದೆ. ಜೊತೆಗೆ ನಿವೃತ್ತಿ ಆದಂತಹ ಸಮಯದಲ್ಲಿ ಒಂದಿಷ್ಟು ದುಡ್ಡು ಅವರಿಗೆ ಬಂದಿರುತ್ತದೆ. ಆದರೆ ಮಗ ಯಾವುದೇ ರೀತಿಯಾದಂತಹ ಕೆಲಸ ಮಾಡುತ್ತಿರಲಿಲ್ಲ ಎಂಬ ಮಾಹಿತಿ ಇದೆ.

ತಂದೆ ದುಡಿದಂತಹ ಹಣವನ್ನು ಆತ ಹಾಳು ಮಾಡುತ್ತಿದ್ದ ಎಂದು ಮುನಿಸ್ವಾಮಿಯವರು ಹೇಳಿದ್ದಾರೆ. ಮುನಿಸ್ವಾಮಿ ಅವರನ್ನು ಹೊರ ಹಾಕಿದ ನಂತರ ಇವರು ಬೆಂಗಳೂರಿನಲ್ಲಿ ಸ್ವಲ್ಪ ದಿನಗಳವರೆಗೆ ತಮ್ಮ ಮಗಳ ಮನೆಯಲ್ಲಿ ಇರುತ್ತಾರೆ ಸಂಬಂಧಿಕರ ಮನೆಯಲ್ಲಿ ಸ್ವಲ್ಪ ದಿನ ಇರುತ್ತಾರೆ ನಂತರ ಹೋರಾಟವನ್ನು ಮಾಡಬೇಕು ಇದು ನಾನು ಕಷ್ಟಪಟ್ಟು ದುಡಿದು ಕಟ್ಟಿದಂತಹ ಮನೆ ಹಾಗಾಗಿ ನಾನು ಮನೆಯನ್ನು ಪಡೆದುಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಈ ಸಂಬಂಧ ಎಂಬತ್ತು ವರ್ಷದ ಮುನಿಸ್ವಾಮಿಯವರು ಕೋರ್ಟು ಕಚೇರಿಗಳಿಗೆ ಅಲೆದಾಡುತ್ತಾರೆ ಈ ಸಂದರ್ಭದಲ್ಲಿ ಅವರು ಜೈ ಕರ್ನಾಟಕ ಸಂಘಟನೆಯನ್ನು ಭೇಟಿ ಮಾಡುತ್ತಾರೆ ಅವರು ಇವರಿಗೆ ಕಾನೂನಾತ್ಮಕವಾಗಿ ಸಹಾಯವನ್ನು ಮಾಡುತ್ತಾರೆ. ಒಂದು ವರ್ಷಗಳ ಕಾಲ ಇವರ ಹೋರಾಟ ನಡೆದ ಬಳಿಕ ಹೈಕೋರ್ಟ್ ಮುನಿಸ್ವಾಮಿ ಅವರ ಸ್ವಯಾರ್ಜಿತ ಮನೆಯಲ್ಲಿ ಅವರೇ ಇರಬೇಕು.

ಜೊತೆಗೆ ಸ್ಥಳೀಯ ಪೊಲೀಸರು ಅಕ್ರಮವಾಗಿ ಮನೆಯ ಒಳಗೆ ವಾಸವಿರುವ ಅಂತಹ ಮಗ ಹಾಗೂ ಸೊಸೆಯ ಕುಟುಂಬವನ್ನ ಮನೆಯಿಂದ ಹೊರ ಹಾಕಬೇಕು ಎಂಬ ಸ್ಪಷ್ಟ ಆದೇಶವನ್ನು ನೀಡುತ್ತದೆ. ಈ ರೀತಿಯಾಗಿ ಇಳಿವಯಸ್ಸಿನಲ್ಲಿ ತಂದೆಯನ್ನು ಮನೆಯಿಂದ ಹೊರಹಾಕಿದ ಮಗನಿಗೆ ಹೈಕೋರ್ಟ್ ತಕ್ಕಶಾಸ್ತಿ ಮಾಡಿದೆ. ಹೈ ಕೋರ್ಟ್ ನ ಆದೇಶದ ಮೇರೆಗೆ ಪೊಲೀಸರು ಮನೆಯನ್ನು ಖಾಲಿ ಮಾಡಿಸುವ ಸಲುವಾಗಿ ಮನೆಯ ಬಳಿ ಹೋದಾಗ ಶುಭಾಷ್ ಹಾಗೂ ಸೊಸೆ ಮನೆಯ ಬಾಗಿಲು ತೆಗೆಯುವುದಿಲ್ಲ. ಕೆಲವು ಸಮಯಗಳ ಕಾಲ ವಾಗ್ವಾದವಾಗುತ್ತದೆ

ಪೊಲೀಸರು ಅವರಿಗೆ ಮನವರಿಕೆ ಮಾಡುತ್ತಾರೆ ನಂತರ ಅವರನ್ನು ಮನೆಯಿಂದ ಹೊರ ಕಳಿಸುತ್ತಾರೆ. ಆ ಸಮಯದಲ್ಲಿಯೂ ಕೂಡ ಪೊಲೀಸರ ಮುಂದೆ ಮುನಿಸ್ವಾಮಿ ಅವರ ಮೇಲೆ ಮಗ ಸೊಸೆ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ. ಅಂತಿಮವಾಗಿ ಪೊಲೀಸರು ಮುನಿಸ್ವಾಮಿಯವರು ತಾವು ಗಳಿಸಿದ ಮನೆಯನ್ನು ಅವರಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೀತಿಯಾಗಿ ತಂದೆತಾಯಿಯನ್ನು ಬೀದಿಪಾಲು ಮಾಡುವಂತಹ ಮಕ್ಕಳಿಗೆ ಹೈಕೋರ್ಟ್ ಎಚ್ಚರಿಕೆಯನ್ನು ನೀಡಿದೆ ಎಂದು ಹೇಳಬಹುದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರಿಗು ತಿಳಿಸಿರಿ.

Leave a Reply

Your email address will not be published. Required fields are marked *