ಇತ್ತೀಚಿಗೆ ಮನೆಯನ್ನು ಕಟ್ಟಿಸಿಕೊಳ್ಳಲು ಸರ್ಕಾರದಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ನಾವು ಜೀವನದಲ್ಲಿ ಒಮ್ಮೆ ಮನೆ ಕಟ್ಟುವುದು ಹೀಗಾಗಿ ಸುಂದರವಾಗಿ, ವಿಶಾಲವಾಗಿ, ಭವ್ಯವಾದ, ಗಟ್ಟಿಮುಟ್ಟಾದ ಮನೆಯನ್ನು ಕಟ್ಟಬೇಕು ಇಂತಹ ಮನೆಯನ್ನು ಕಟ್ಟಲು ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬೇಕು. ಸುಂದರವಾದ ಮನೆಯನ್ನು ಕಟ್ಟಬೇಕಾದರೆ ಕೆಲವು ಅಂಶಗಳನ್ನು ಪಾಲಿಸಬೇಕು ಅವುಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ಎಲ್ಲರಿಗೂ ಮನೆ ಕಟ್ಟುವ ಕನಸಿರುತ್ತದೆ. ಸುಂದರವಾದ ಮನೆಯನ್ನು ನಿರ್ಮಾಣ ಮಾಡಬೇಕಾದರೆ ಹೆಚ್ಚು ಯೋಚನೆ ಮಾಡಬೇಕಾಗುತ್ತದೆ. ಮನೆಗೆ ಯಾವ ಯಾವ ಸಿಮೆಂಟ್,ಮರಳು, ಮರದ ಸಾಮಾನುಗಳನ್ನು ಉಪಯೋಗಿಸಬೇಕು ಎಂದು ನೋಡಬೇಕು. ಮನೆಯ ಬಗ್ಗೆ ನೀಲಿ ನಕ್ಷೆಯನ್ನು ರೆಡಿ ಮಾಡಬೇಕು. ಒಂದು ಮನೆ ನಿರ್ಮಾಣ ಮಾಡಬೇಕಾದರೆ ಇಂಜಿನಿಯರ್, ಆಚಾರಿ, ಪೇಂಟರ್ ಹೀಗೆ ಅನೇಕರ ಪಾತ್ರ ಮುಖ್ಯವಾಗಿರುತ್ತದೆ. ಮನೆ ನಿರ್ಮಾಣ ಮಾಡಲು ಉತ್ತಮ ಕ್ವಾಲಿಟಿ ಸಿಮೆಂಟ್, ಮರಳನ್ನು ಬಳಸಬೇಕು.

ಸಿಮೆಂಟ್ ಬಳಸಿ ಗೋಡೆ ನಿರ್ಮಿಸಿದ ನಂತರ ನೀರಿನಿಂದ ಕ್ಯೂರಿಂಗ್ ಮಾಡಬೇಕು. ಸರಿಯಾಗಿ ಕ್ಯೂರಿಂಗ್ ಮಾಡಿದರೆ ಮಾತ್ರ ಗೋಡೆ ಗಟ್ಟಿಯಾಗಿ ನಿಲ್ಲುತ್ತದೆ. ಗೋಡೆಯ ಒಳಗೆ ಹೈಡ್ರೇಷನ್ ಎಂಬ ರಿಯಾಕ್ಷನ್ ನಡೆಯುತ್ತದೆ ಇದರಿಂದ ಗೋಡೆ ಗಟ್ಟಿಯಾಗುತ್ತದೆ. ಕಡಿಮೆ ಅಂದರೂ 7 ದಿನಗಳಿಂದ 28 ದಿನಗಳವರೆಗೆ ಕ್ಯೂರಿಂಗ್ ಮಾಡಬೇಕಾಗುತ್ತದೆ. ಮನೆಯನ್ನು ಇಟ್ಟಿಗೆ, ಕಲ್ಲನ್ನು ಬಳಸಿ ಸುಂದರವಾಗಿ ನಿರ್ಮಿಸಬಹುದು.

ಮನೆ ಕಟ್ಟಲು ಧೂಳಿಲ್ಲದ ಮರಳನ್ನು ಬಳಸಬೇಕು, ಸಿಮೆಂಟ್ ಮತ್ತು ಮರಳನ್ನು ಮಿಕ್ಸ್ ಮಾಡುವಾಗ ಕ್ಲೀನ್ ಆಗಿರುವ ನೀರನ್ನು ಬಳಸಬೇಕು ಹಾಗೂ 2 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಬೇಕು . ನೀರು ಕ್ಲೀನ್ ಆಗದೆ ಇದ್ದರೆ ಸಿಮೆಂಟ್ ನಲ್ಲಿರುವ ಶಕ್ತಿ ಕಡಿಮೆ ಆಗುವುದರ ಜೊತೆಗೆ ಕಟ್ಟಡದಲ್ಲಿ ಬಳಸುವ ಕಬ್ಬಿಣ ತುಕ್ಕು ಹಿಡಿಯುತ್ತದೆ. ಮಿಕ್ಸ್ ಮಾಡಿದ ಸಿಮೆಂಟ್ ಮತ್ತು ಮರಳಿನ ಮಿಶ್ರಣವನ್ನು ಅರ್ಧ ಗಂಟೆಯ ಒಳಗೆ ಬಳಸಬೇಕು. ಗೋಡೆ ಕಟ್ಟಿದ ನಂತರ ಒಂದು ವಾರದೊಳಗೆ ಪ್ಲಾಸ್ಟ್ರಿಂಗ್ ಮಾಡಬಾರದು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮನೆಯನ್ನು ನಿರ್ಮಿಸಬೇಕು ಆಗ ಮನೆ ಗಟ್ಟಿಯಾಗಿ ಬಾಳಿಕೆ ಬರುತ್ತದೆ. ಈಗಿನ ಮನೆಗಳಲ್ಲಿ ರೂಮ್, ಬಾಥರೂಮ್, ಬಾಲ್ಕನಿಗೆ ಬೇರೆ ಬೇರೆ ಬಣ್ಣದ ಟೈಲ್ಸ್ ಗಳನ್ನು ಹಾಕುವುದರಿಂದ ಲುಕ್ ಕಾಣಿಸುತ್ತದೆ. ಸುಂದರವಾದ ಹಾಗೂ ಭವ್ಯವಾದ ಮನೆಯನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!