ಆರೋಗ್ಯವೇ ಭಾಗ್ಯ ಎಂಬ ಮಾತು ಜೀವನದಲ್ಲಿ ಮುಖ್ಯವಾಗಿದೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಒಂದಿದ್ದರೆ ಏನು ಬೇಕಾದರೂ ಮಾಡಬಹುದು. ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಪದ್ಧತಿ ಅವಶ್ಯ ಹೀಗಿರುವಾಗ ಉತ್ತಮ ಆಹಾರದಲ್ಲಿ ಒಂದಾದ ರಾಗಿ ಮುದ್ದೆ ಸೇವನೆಯಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಅಡುಗೆ ಮನೆಯ ಕೆಲವು ಮುಖ್ಯ ತಿನಿಸುಗಳಲ್ಲಿ ರಾಗಿ ಮುದ್ದೆ ಒಂದು ಪ್ರಮುಖ ಹಾಗೂ ಆರೋಗ್ಯಯುತ ಆಹಾರವಾಗಿದೆ. ಮನೆಯಲ್ಲಿ ಹಿರಿಯರು ಇದ್ದರೆ ಅವರು ಆರೋಗ್ಯದ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಇಂದು ನಾವು ಅನಾರೋಗ್ಯಕರ ಆಹಾರವನ್ನು ಸೇವಿಸುತ್ತಾ ನಮ್ಮ ಆರೋಗ್ಯವನ್ನು ನಾವೆ ಹಾಳು ಮಾಡಿಕೊಳ್ಳುತ್ತಿದ್ದೇವೆ.
ಇಂದಿನ ಜನರ ಸರಾಸರಿ ಆಯಸ್ಸು ಕಡಿಮೆ ಆಗುತ್ತಿದೆ ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿ. ರಾಗಿ ಹಾಗೂ ರಾಗಿಯ ಉತ್ಪನ್ನವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ರಾಗಿ ಮುದ್ದೆಯನ್ನು ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳು ಇವೆ. ರಾಗಿ ಮುದ್ದೆಯನ್ನು ಸೇವಿಸುವುದರಿಂದ ಸೊಂಟದ ಭಾಗದಲ್ಲಿ ಕಂಡುಬರುವ ಬೊಜ್ಜು ಹಾಗೂ ರಕ್ತನಾಳಗಳಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಆಗುತ್ತದೆ.
ರಾಗಿ ಮುದ್ದೆಯಲ್ಲಿ ಅಮೈನೊ ಆಮ್ಲ ಹೆಚ್ಚಾಗಿ ಕಂಡುಬರುತ್ತಿದ್ದು ಹೊಟ್ಟೆ ಹಸಿವು ನಿವಾರಣೆಯಾಗುತ್ತದೆ. ರಾಗಿ ಮುದ್ದೆಯಲ್ಲಿ ಪ್ರೊಟೀನ್, ನಾರಿನಂಶ ಹಾಗೂ ಕಾರ್ಬೋಹೈಡ್ರೇಟ್ ಅಂಶ ಹೆಚ್ಚಾಗಿದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರಿಗೆ ರಾಗಿ ಮುದ್ದೆ ಉತ್ತಮ ಆಹಾರವಾಗಿದೆ. ರಾಗಿ ಅಪಾರ ಪ್ರಮಾಣದ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇದ್ದು ಮೂಳೆಗಳನ್ನು ಬಲಪಡಿಸುತ್ತದೆ. ರಾಗಿಮುದ್ದೆಯಲ್ಲಿ ಅಮೈನೊ ಆಮ್ಲ ಹಾಗೂ ವಿಟಮಿನ್ಸ್ ಹೆಚ್ಚಾಗಿದ್ದು ಮೇಟಬಾಲಿಸಂ ಪ್ರಕ್ರಿಯೆ ಉತ್ತಮಗೊಳ್ಳುತ್ತದೆ. ರಾಗಿಮುದ್ದೆ ಸೇವನೆಯಿಂದ ದೇಹದ ಬೆಳವಣಿಗೆಗೆ ಸಹಾಯಕವಾಗುವ ಹಾರ್ಮೋನ್ ಗಳ ಅಭಿವೃದ್ಧಿಯಾಗುತ್ತದೆ.
ರಾಗಿ ಮುದ್ದೆಯಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ರಾಗಿ ಮುದ್ದೆ ಸೇವನೆಯಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ. ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆ ಬಂದಾಗ ರಾಗಿ ಮುದ್ದೆಯನ್ನು ಸೇವನೆ ಮಾಡುವುದರಿಂದ ಕಡಿಮೆ ಆಗುತ್ತದೆ. ರಾಗಿಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿ ಕಂಡುಬರುತ್ತಿದ್ದು ಸಕಾರಾತ್ಮಕ ಬದಲಾವಣೆ ಹಾಗೂ ಮಾನಸಿಕವಾಗಿ ಒಳ್ಳೆಯ ಆಲೋಚನೆಗಳು ಪ್ರಾರಂಭವಾಗುತ್ತದೆ ಇದರಿಂದ ದೇಹಕ್ಕೆ ಒಳ್ಳೆಯ ವಿಶ್ರಾಂತಿ ಸಿಗುತ್ತದೆ.
ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ನಮ್ಮ ದೇಹದ ತಾಪಮಾನ ಹೆಚ್ಚಿರುತ್ತದೆ ದೇಹವನ್ನು ತಂಪು ಮಾಡಿಕೊಳ್ಳಲು ರಸ್ತೆ ಬದಿಯಲ್ಲಿರುವ ಪಾನೀಯಗಳನ್ನು ಕುಡಿಯುತ್ತೇವೆ ಇವು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಪ್ರತಿದಿನ ರಾತ್ರಿ ರಾಗಿ ಮುದ್ದೆಯನ್ನು ಸೇವಿಸಿ ಮಲಗುವುದರಿಂದ ದೇಹ ತಂಪಾಗಿರುತ್ತದೆ. ರಾಗಿಯಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವ ಇರುವುದರಿಂದ ದೇಹದ ಅಂಗಾಂಶಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ.
ದಿನಕ್ಕೆ ಒಂದು ಬಾರಿ ರಾಗಿ ಮುದ್ದೆ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚಾಗಿ ಒಣ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ. ಬೇಸಿಗೆ ಕಾಲದಲ್ಲಿ ರಾಗಿಯ ಉತ್ಪನ್ನ ಸೇವನೆ ಮಾಡುವುದರಿಂದ ಚರ್ಮದ ರಕ್ಷಕನಾಗಿ ದೇಹದಲ್ಲಿ ಕೆಲಸ ಮಾಡುತ್ತದೆ. ನಾವು ಇತ್ತೀಚೆಗೆ ಪ್ರತಿದಿನ ಬೇಕರಿ ಪದಾರ್ಥಗಳು, ಜಂಕ್ ಫುಡ್ ಹಾಗೂ ಸ್ನಾಕ್ಸ್ ಗಳನ್ನು ಹೆಚ್ಚಾಗಿ ತಿನ್ನುತ್ತಿದ್ದೇವೆ ಹೀಗಾಗಿ ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಇಂತಹ ಸಮಯದಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿಯಾದ ರಾಗಿ ಮುದ್ದೆಯನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಮಾಹಿತಿ ಉತ್ತಮ ಆರೋಗ್ಯಕ್ಕೆ ಉತ್ತಮ ಮಾಹಿತಿಯಾಗಿದ್ದು ತಪ್ಪದೆ ಎಲ್ಲರಿಗೂ ತಿಳಿಸಿ.