ಸಾಮಾನ್ಯವಾಗಿ ಕರಿಬೇವಿನ ಹೆಸರನ್ನು ಎಲ್ಲರೂ ಕೇಳಿರುತ್ತಾರೆ ಅಡುಗೆಮನೆಯಲ್ಲಿ ಒಗ್ಗರಣೆಗೆ ಇದು ಬೇಕೇ ಬೇಕು ಹೆಚ್ಚಿನವರು ಇದನ್ನು ಪರಿಮಳಕ್ಕಾಗಿ ಬಳಸುವುದು ಎಂದು ತಿಳಿದುಕೊಂಡಿದ್ದಾರೆ. ಆದರೆ ಇದು ಅಡುಗೆಗೆ ರುಚಿ ಮತ್ತು ಪರಿಮಳವನ್ನು ನೀಡುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಇದನ್ನು ನಿತ್ಯ ಸೇವನೆ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ನಾವಿಂದು ಕರಿಬೇವನ್ನು ಬಳಸುವುದರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವೆಲ್ಲ ಪ್ರಯೋಜನಗಳು ಉಂಟಾಗುತ್ತವೆ ಎನ್ನುವುದರ ಕುರಿತಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ.
ಕರಿಬೇವಿನಲ್ಲಿ ಫಾಲಿಕ್ ಆಸಿಡ್ ಸಮೃದ್ಧವಾಗಿರುತ್ತದೆ ಹಾಗಾಗಿ ಇದು ದೇಹಕ್ಕೆ ಕಬ್ಬಿಣಾಂಶವನ್ನು ಹಿರಿಕೊಳ್ಳುವುದಕ್ಕೆ ಸಹಾಯಮಾಡುತ್ತದೆ. ಕರಿಬೇವಿನ ಸೇವನೆಯಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಪ್ರಮಾಣಗಳು ಹೆಚ್ಚಾಗುತ್ತವೆ. ಯಾರಿಗಾದರೂ ರಕ್ತಹೀನತೆ ನಿಮೋನಿಯ ತೊಂದರೆ ಇದ್ದರೆ ಅಂತವರು ಕರಿಬೇವನ್ನು ಸೇವಿಸುವುದರಿಂದ ಒಳ್ಳೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಗರ್ಭಿಣಿ ಮಹಿಳೆಯರು ಕರಿಬೇವಿನ ಸೊಪ್ಪನ್ನು ಸೇವಿಸುವುದರಿಂದ ಮಾರ್ನಿಂಗ್ ಸಿಕ್ನೆಸ್ ವಾಂತಿಯ ತೊಂದರೆ ಕಡಿಮೆಯಾಗುತ್ತದೆ. ಜೊತೆಗೆ ಇದರ ಸೇವನೆಯಿಂದ ಗರ್ಭಿಣಿ ಮಹಿಳೆಯರಲ್ಲಿ ಕಬ್ಬಿಣ ಅಂಶ ಹೆಚ್ಚಾಗುತ್ತದೆ. ನಿಯಮಿತವಾಗಿ ಕರಿಬೇವಿನ ಸೊಪ್ಪನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಡಯಾಬಿಟಿಸ್ ಬರದಂತೆ ತಡೆಯುತ್ತದೆ ಹಾಗೂ ಡಯಾಬಿಟಿಸ್ ಇರುವವರಲ್ಲಿ ಅದನ್ನು ನಿಯಂತ್ರಣಕ್ಕೆ ತರುತ್ತದೆ.
ಕರಿಬೇವಿನ ಸೊಪ್ಪನ್ನು ಪ್ರತಿದಿನ ಜೀರಿಗೆಯೊಂದಿಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ದೇಹದಲ್ಲಿರುವ ಕೊಬ್ಬು ಕಡಿಮೆಯಾಗುತ್ತದೆ ಇದು ಸ್ಥೂಲಕಾಯ ಇರುವವರಿಗೆ ತುಂಬಾ ಒಳ್ಳೆಯದು ಇದು ದೇಹದಲ್ಲಿ ಕೊಬ್ಬು ಶೇಖರಣೆ ಆಗದಂತೆ ತಡೆಯುತ್ತದೆ. ಕರಿಬೇವಿನಸೊಪ್ಪು ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ. ಅಜೀರ್ಣ ಮಲಬದ್ಧತೆ ಹೊಟ್ಟೆಯುಬ್ಬರದಂತಹ ಸಮಸ್ಯೆಗಳನ್ನು ಇದು ನಿವಾರಣೆ ಮಾಡುತ್ತದೆ. ಇದು ಹೊಟ್ಟೆಯಲ್ಲಿರುವ ಹುಳುಗಳ ಸಮಸ್ಯೆಯ ನಿವಾರಣೆಗೂ ಕೂಡ ತುಂಬಾ ಒಳ್ಳೆಯದು. ಕರಿಬೇವಿನ ಸೊಪ್ಪಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಬಲಶಾಲಿಯಾಗುತ್ತದೆ ಮತ್ತು ಅಕಾಲದಲ್ಲಿ ತಲೆ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ. ಇದರಲ್ಲಿರುವ ವಿಟಮಿನ್ ಬಿ ಯು ಕೂದಲು ಕಪ್ಪಾಗಿರಲು ಸಹಾಯ ಮಾಡುತ್ತದೆ ಕರಿ ಬೇವಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ಕರಿಬೇವಿನ ಸೊಪ್ಪನ್ನು ಪುಡಿ ಮಾಡಿ ಒಂದು ಚಿಟಿಕೆ ಅರಿಶಿನದೊಂದಿಗೆ ಸೇರಿಸಿ ನಿತ್ಯ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳನ್ನು ನಿವಾರಿಸಬಹುದು ಜೊತೆಗೆ ಮೊಡವೆಗಳ ಕಲೆಗಳನ್ನು ಹೋಗಲಾಡಿಸಬಹುದು. ಇದರಲ್ಲಿ ವಿಟಮಿನ್ ಎ ಹೇರಳವಾಗಿದೆ ಇದರಿಂದಾಗಿ ಕಣ್ಣಿನ ದೃಷ್ಟಿಗೆ ಇದು ತುಂಬಾ ಒಳ್ಳೆಯದು. ಹಾಗೂ ಇದು ಕಣ್ಣಿನಲ್ಲಿ ಪೊರೆ ಬಾರದಂತೆ ತಡೆಯುತ್ತದೆ. ಕರಿಬೇವಿನ ಸೊಪ್ಪು ಆಂಟಿ ಫಂಗಲ್ ಹಾಗೂ ಆಂಟಿ-ಬ್ಯಾಕ್ಟಿರಿಯಾ ಆಗಿರುವುದರಿಂದ ಚರ್ಮಕ್ಕೆ ಸಂಬಂಧಿಸಿರುವ ಸಮಸ್ಯೆಗಳಿಗೆ ತುಂಬಾ ಉತ್ತಮ ಮನೆಮದ್ದಾಗಿದೆ.
ಇದರ ಎಲೆಗಳನ್ನು ರುಬ್ಬಿ ತೆಂಗಿನೆಣ್ಣೆ ಅಥವಾ ಅರಿಶಿನದೊಂದಿಗೆ ಗಾಯಕ್ಕೆ ಹಚ್ಚುವುದರಿಂದ ಗಾಯ ಬೇಗನೆ ವಾಸಿಯಾಗುತ್ತದೆ. ಕರಿಬೇವನ್ನು ನೀವು ಹಾಗೆ ನೇರವಾಗಿ ಸೇವಿಸಬಹುದು ಅಥವಾ ಚಟ್ನಿ ಮಾಡಿಕೊಂಡು ಸೇವಿಸಬಹುದು ಪ್ರತಿದಿನ ಹತ್ತರಿಂದ ಹನ್ನೆರಡು ಕರಿಬೇವಿನ ಸೊಪ್ಪನ್ನು ತಿನ್ನುವುದರಿಂದ ನಿಮ್ಮ ನಿಮ್ಮ ಆರೋಗ್ಯದಲ್ಲಿ ಉತ್ತಮ ಪರಿಣಾಮ ಕಂಡುಬರುತ್ತದೆ ಒಟ್ಟಾರೆಯಾಗಿ ಕರಿಬೇವಿನ ಸೇವನೆಯಿಂದ ಆರೋಗ್ಯದಲ್ಲಿ ಉತ್ತಮ ಪರಿಣಾಮ ಉಂಟಾಗುವುದಿಲ್ಲ ನಾವು ಕಾಣಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.